ಹುನಗುಂದದ ಮಾತೃ ದೇವಾಲಯಗಳು

 

ಕರುನಾಡಿನ ಚರಿತ್ರೆಯಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೊಡುಗೆ ಜಗತ್ತಿನ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಅಳಿಯದಂತೆ ಇಂದಿಗೂ ಉಳಿದುಕೊಂಡು ಬಂದಿದೆ. ಬದಾಮಿಯ ಚಾಲುಕ್ಯರು, ನಂದರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರೂ, ಕಳಚುರಿಗಳು, ಯಾದವರು, ವಿಜಯನಗರ ಅರಸು ಮಾತ್ರವಲ್ಲದೇ ಬ್ರಿಟಿಷರ ದಬ್ಬಾಳಿಕೆಯಿಂದ ಬೇಸತ್ತು ದೇಶದಿಂದ ಅವರನ್ನು ಹೊಡೆದುಡಿಸಲೂ ಗಾಂಧಿಜಿಯವರ ತತ್ವಾದರ್ಶಗಳಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ನೂರಾರು ವೀರ ಹುಲಿಗಳಿಗೆ ಜನ್ಮ ನೀಡಿದ ತಾಲೂಕು ಹುನಗುಂದದ ಐಹೊಳೆ ಕಲಾತ್ಮಕ ದೃಷ್ಠಿಯಿಂದ, ಕೂಡಲಸಂಗಮ ಜಗಜ್ಯೋತಿ ಬಸವೇಶ್ವರವರಂತಹ ಶರಣರ ತತ್ವೋದ್ದೇಶದಿಂದ ವಿಶ್ವಕ್ಕೆ ಪರಿಚಿತವಾದ ತಾಲೂಕಾಗಿದೆ. ಬಸವೇಶ್ವರರು ಹಚ್ಚಿದ ಧರ್ಮ ಸಹಿಷ್ಣುತೆಯ ನಂದಾದೀಪ ಮತ್ತಷ್ಟು ಪ್ರಜ್ವಲವಾಗಿ ಬಾಳುಗುವಂತೆ ಮಾಡುತ್ತಾ ಜನರಲ್ಲಿರುವ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಳ್ಳುತ್ತಾ ಸಾಗುತ್ತಿರುವ ಪರಮ ಪೂಜ್ಯ ಡಾ|| ಮಹಾಂತ ಶ್ರೀಗಳು ನೆಲೆಸಿರುವ ಪೂಣ್ಯ ಭೂಮಿ ಹುನಗುಂದ ತಾಲೂಕು.
ಸ್ಥಳೀಯವಾಗಿ ಹುನಗುಂದ ನಗರ ತಾಲೂಕು ಕೇಂದ್ರವಾಗಿದ್ದು, ಹಲವಾರು ಧಾರ್ಮಿಕ ಕೇಂದ್ರಗಳಿಗೆ ಆಶ್ರಯ ತಾಣವಾಗಿವೆ. ನಗರದ ಹಲವಾರು ಬಡಾವಣೆಗಳು ಜಾಗೃತ ದೇವತೆಗಳು ನೆಲೆಸಿ ಆರಾಧಿಸಲ್ಪಡುತ್ತವೆ. ಅಂತಹ ನಗರದ ಮಾತೃದೇವತೆಗಳ ದೇವಾಲಯಗಳು, ದೇವತೆಗಳ ಪೂಜಾ ವಿಧಿ-ವಿಧಾನಗಳು ಕುರಿತು ಅಧ್ಯಯನ ಮಾಡಲು ಈ ಮೂಲಕ ಪ್ರಯತ್ನಿಸಲಾಗುತ್ತಿದೆ.
ಅಧ್ಯಯನದ ಉದ್ದೇಶಗಳು:-
1. ಹುನಗುಂದ ನಗರದಲ್ಲಿರುವ ಮಾತೃ ದೇವತೆಗಳ ದೇವಾಲಯಗಳ ಪಟ್ಟಿ ಮಾಡುವುದು.
2. ಮಾತೃ ದೇವತೆಗಳ ಪೂಜಾ ವಿಧಿ-ವಿಧಾನಗಳ ಕುರಿತು ನಾಡಿನ ಜನತೆಗೆ ಪರಿಚಯಿಸುವುದು.
3. ದೇವಾಲಯಗಳ ನಿರ್ಮಾಣದ ಶೈಲಿ ಬರೆಯುವುದು.
4. ಮಾತೃ ದೇವತೆಗಳ ಜಾತ್ರೆ ಉತ್ಸವಗಳ ಕುರಿತು ತಿಳಿಯುವುದು.
ವ್ಯಾಪ್ತಿ:-
ಪ್ರಸ್ತುತ ಸಂಶೋಧನಾ ಕಾರ್ಯವು ಹುನಗುಂದ ನಗರಕ್ಕೆ ಸಿಮಿತವಾಗಿಸಕ್ಕೋಳ್ಳಲಾಗದು ನಗರದ ಮಾತೃ ದೇವತೆಗಳ ಕುರಿತಾಗಿ ಸಮಗ್ರ ಅಧ್ಯಯನ ಮಾಡಲು ಪ್ರಯತ್ನಿಸಲಾಗುತ್ತಿದ್ದು ಆಧುನಿಕ ಮಾದರಿಯ ಮಾತೃ ದೇವತಾ ದೇವಾಲಯಗಳಿಗೆ ಮಾತ್ರ ಸಿಮಿತವಾಗಿಟ್ಟುಕೊಂಡು ಅಧ್ಯಯನ ಮಾಡಲಾಗುತ್ತಿದೆ.
ಅಧ್ಯಯನದ ವಿಧಾನ:-
ಪ್ರಸ್ತುತ ಅಧ್ಯಯನವು ವಿಭಿನ್ನ ವಿಧಾನಗಳ ಮೂಲಕ ಕೈಗೋಳ್ಳಲಾಗುತ್ತಿದೆ. ಅಧ್ಯಯನಕ್ಕೆ ಅಗತ್ಯವಾಗಿರುವ ಆಕರಗಳ ಸಂಗ್ರಹಣೆ ರಾಶಿ ಈಗಾಗಲೇ ಪ್ರಕಟವಾಗಿರುವ ಮಾತೃದೇವತೆಗಳಿಗೆ ಸಂಭಧಿಸಿದ ಮತ್ತು ಹುನಗುಂದ ತಾಲೂಕಿಗೆ ಸಂಭಧಿಸಿದಂತೆ ಆಗಿರುವ ಅಧ್ಯಯನದ ಕುರಿತು ಗ್ರಂಥ ವೀಕ್ಷಿಸಲೂ ಸ್ಥಳೀಯ ಗ್ರಂಥಾಲಯಗಳೆಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವುದು.
ತಾಲೂಕಿನ ಕುರಿತಾಗಿ ಅಧ್ಯಯನ ಕೈಗೊಂಡಿರುವ ಸಂಶೋಧಕರನ್ನು ಮತ್ತು ಸ್ಥಳೀಯ ಹಿರಿಯರನ್ನು ಭೇಟಿಯಾಗಿ ಮಾತೃ ದೇವತೆಗಳ ಕುರಿತಾಗಿ ಚರ್ಚಿಸುವುದು.
ನಗರದ ಪ್ರತಿಯೊಂದು ಬಡಾವಣೆಗೂ ಖುದ್ದಾಗಿ ಭೇಟಿ ನೀಡಿ ಅಲ್ಲಿರುವ ಮಾತೃ ದೇವತೆಗಳಿಗೆ ಭೇಟಿ ನೀಡಿ ದೇವಾಲಯಗಳ ನಿರ್ಮಾಣ, ವಿನ್ಯಾಸ, ವಾಸ್ತುಶಿಲ್ಪ, ಮುಂತಾದ ಮಾಹಿತಿ ಕಳಚಿಹಾಕುವುದು ಮತ್ತು ದೇವಾಲಯಗಳ ಅರ್ಚಕರೋಂದಿಗೆ ಚರ್ಚಿಸಿ ಪೂಜಾ ವಿಧಿ-ವಿಧಾನಗಳ ಕುರಿತು ಮಾಹಿತಿ ಕ್ರೂಢಿಕರಣಕೊಂಡು ನಂತರ ಮಾಹಿತಿ ವಿವರಿಸಿ, ವಿಶ್ಲೇಪಿಸುವತ್ತ ಕಾರ್ಯೋನ್ಮುಖವಾಗುವುದು.
ಹುನಗುಂದ ನಗರದÀಲ್ಲಿ ಮಾತೃ ದೇವತೆಗಳು ಹಲವಾರು ಇದ್ದು ಒಂದೊಂದು ನಗರದಲ್ಲಿ ಚಿಕ್ಕ ಚಿಕ್ಕ ಮಾತೃದೇವತೆಗಳು ಕೇಲವು ನೆಲೆಸಿವೆ ಅವುಗಳಲ್ಲಿ ಹುನುಗುಂದ ನಗರದಲ್ಲಿ ಹೆಚ್ಚಾಗಿ ಹೆಸರುವಾಸಿಯಾಗಿರುವ ದೇವತೆಗಳೆಂದರೆ ದ್ಯಾಮವ್ವ, ಹುಲಿಗೆಮ್ಮ, ಬನ್ನಿ ಮಹಾಂಕಾಳಿ ಮುಂತಾದವುಗಳು.
ಹುನಗುಂದ ನಗರದಲ್ಲಿ ನಾವು ಹೆಚ್ಚಾಗಿ ಲಕ್ಷ್ಮೀ ದೇವತೆಗಳನ್ನು ನೋಡಬಹುದಾಗಿದೆ. ಇಲ್ಲಿ ಚಿಕ್ಕ ಚಿಕ್ಕ ಲಕ್ಷ್ಮೀ ದೇವತೆಗಳು ನೆಲೆಸಿವೆ. ಇಲ್ಲಿ ಸುಮಾರು 7 ಲಕ್ಷ್ಮೀ ದೇವತೆಗಳನ್ನು ಕಾಣಬಹುದಾಗಿದೆ.
ಕೆಲ ದೇವಸ್ಥಾನಗಳಲ್ಲಿ ಪ್ರಾಣಿ ಹಿಂಸೆಗಳನ್ನು ತ್ಯಜಿಸಲಾಗಿದೆ. ನಾವು ಮುಂದೆ ಉಲ್ಲೇಖ ಮಾಡಿರುವ ಪ್ರಕಾರ ಮೂರು ಕಡೆಗಳಲ್ಲಿ ಮಾತೃ ದೇವಿಗೆ ಮಾಂಸಹಾರ ನೈವೇದ್ಯ ಮಾಡುತ್ತಾರೆ ಮತ್ತು ಉಳಿದೆಲ್ಲಾ ಕಡೆ ಸಸ್ಯಹಾರವನ್ನು, ಸಿಹಿ ಪದಾರ್ಥಗಳನ್ನು ಮಾಡಿ ದೇವಿಗೆ ನೈವೇದ್ಯ ಇಟ್ಟು ಅನ್ನದಾನ ಮಾಡುತ್ತಾರೆ.
ಕೆಲ ದೇವಸ್ಥಾನಗಳಲ್ಲಿ ಜಾತಿಯ ಭೇಧ-ಭಾವ ಪೊಜೆ ಮಾಡುವುದರಲ್ಲಿ ಕಂಡುಬಂದರೂ ಜಾತ್ರೆಯ ಸಮಯದಲ್ಲಿ ಎಲ್ಲರನ್ನೂ ಕೂಡಿಕೊಂಡು ಪೊಜೆ ಸಲ್ಲಿಸುತ್ತಾರೆ.
ಹೆಚ್ಚಾಗಿ ಪವಾಡಗಳ ಮೇಲೆ ಇಲ್ಲಿ ಯಾರು ನಂಬಿಕೆ ಇಟ್ಟಿಲ್ಲ. ಹೆಚ್ಚಾಗಿ ದೇವಿಯ ಮೇಲೆ ನಂಬಿಕೆ ಇಟ್ಟು, ದೇವಿ ನಮ್ಮನ್ನು ಎಂದಿಗೂ ಕಾಪಾಡುತ್ತಾಳೆ ಎಂದೂ ನಂಬಿದ್ದಾರೆ.
ಇನ್ನೂ ಕೆಲವು ದೇವಸ್ಥಾನಗಳಲ್ಲಿ ನಾವು ದೇವಿಯ ಮೂರ್ತಿಯನ್ನು ಕಾಣುವುದಿಲ್ಲ. ಅಲ್ಲಿ ಹೆಚ್ಚಾಗಿ ಮರಗಳಿಗೆ ಪೊಜೆ ಸಲ್ಲಿಸುತ್ತಾ ಬಂದಿದ್ದಾರೆ.
ಹುನಗುಂದದ ಭೌಗೋಳಿಕತೆ:-
ಹುನಗುಂದ ನಗರವೂ ಹಲವಾರು ವಿಶೇಷತೆಯಿಂದ ಕೂಡಿದೆ ಇಲ್ಲಿ ಹೆಚ್ಚಿನ ಜನರು ಶೇಕಡಾವಾರು ತಮ್ಮ ಜೀವನವನ್ನು ನಡೆಸಲೂ ಕೃಷಿಯನ್ನೇ ಅವಲಂಬಿಸಿದ್ದಾರೆ. ಹುನಗುಂದದ ಭೌಗೋಳಿಕ ಅಂಶದ ಬಗೆಗೆ ನೋಡುವುದಾದರೆ ಸಮುದ್ರಮಟ್ಟದಿಂದ 450 ರಿಂದ 800 ಮೀಟರ್ ಎತ್ತರವಾಗಿರುವ ಹುನಗುಂದ ತಾಲೂಕು ಉತ್ತರ ಅಕ್ಷಾಂಶ 750.50 ನಿಮಿಷದಿಂದ 760.22 ನಿಮಿಷದಲ್ಲಿ ಹಬ್ಬಿಕೊಂಡಿದೆ. ಅವಿಭಜಿತ ವಿಜಾಪೂರ ಜಿಲ್ಲೆಯ 7 ಭೌಗೋಳಿಕ ವಲಯಗಳಲ್ಲಿ ಒಂದಾದ ಇದು ಒಂದು ‘ಹುನಗುಂದದ ಗುಡ್ಡ’ ಎಂದು ಮೊದಲಿನಿಂದಲೂ ಹೆಸರು ಪ್ರಚಲಿತದಲ್ಲಿದೆ. ಮತ್ತು ಪ್ರಸಿದ್ದಿಯನ್ನು ಪಡೆದಿದೆ. ಇದಕ್ಕೆ ಕಾರಣವೆನೆಂದರೆ ಮಲಪ್ರಭಾ ವಲಯದ ಪೂರ್ವಕ್ಕೆ 20 ಮೈಲು ಹಬ್ಬಿಕೊಂಡಿರುವ ಹುನಗುಂದ ನಗರದ ಗುಡ್ಡವು ಹಾಗೂ ಆಗ್ನೇಯ ಭಾಗಕ್ಕೆ ಸಮಾನಾಂತರವಾಗಿ ಹಬ್ಬಿಕೊಂಡಿರುವ ಗಜೇಂದ್ರಗಡ ಗುಡ್ಡಗಳ ಸಾಲು ಇದರ ಸಂಪೂರ್ಣ ಕ್ಷೇತ್ರ ಈ ಗುಡ್ಡಗಳು ಮರಳುಕಲ್ಲಿನ ಆವರಣದಿಂದ ಕೂಡಿಕೊಂಡಿದೆ. ಮತ್ತು ಇದರ ಒಳಭಾಗ ನೀಸ್ ಮತ್ತು ಗ್ರಾನೈಟ್ ಹೆಸರಿನ ಅಭ್ರಕ ಮತ್ತು ಬೆಣಚುಕಲ್ಲು ಮಿಶ್ರಿತ ಶಿಲೆಯನ್ನು ಒಳಗೊಂಡಿದೆ. ಅಲ್ಲದೇ ಹುನಗುಂದ ಪಕ್ಕದ ಬಲಕುಂದಿ ಭಾಗ ಜಗತ್ಪ್ರಸಿದ್ದ ಗ್ರಾನೈಟ್ ಶಿಲೆಗೆ ಪ್ರಸಿದ್ದಿಯಾಗಿದೆ. ಎಂದೂ ಹೇಳಬಹುದಾಗಿದೆ.
ಪೊನ್ನಗುಂದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುನಗುಂದ ತಾಲೂಕು ಜಿಲ್ಲೆಯ ಆಡಳಿತ ಕೇಂದ್ರ ಬಾಗಲಕೋಟೆಯ ನೈರುತ್ಯ ಭಾಗದಲ್ಲಿದೆ. ಹುನಗುಂದವನ್ನು ಆಡಳಿತ ಕೇಂದ್ರವಾಗಿಸಿಕೊಂಡಿರುವ ತಾಲೂಕು ನಾಲ್ಕು ಹೋಬಳಿ, 30 ಗ್ರಾಮ ಪಂಚಾಯಿತಿಗಳು ಜನವಸತಿ ಹೊಂದಿರುವ 161 ಗ್ರಾಮಗಳು ಜನವಸತಿಯಿಲ್ಲದ ಒಂದು ಗ್ರಾಮ ಎರಡು ಪಟ್ಟಣಗಳು ಹಾಗೂ ಎರಡು ಪುರಸಭೆಗಳನ್ನು ಒಳಗೊಂಡಿದೆ.
ವಾಸ್ತುಶಿಲ್ಪದ ನೆಲೆಗಳು:-
‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ, ಶಿಲೆಯಲ್ಲವೀ ಗುಡಿಯ ಕಲೆಯ ಒಲೆಯು!’
ಕೈ ಮುಗಿದು ಒಳಗೆ ಬಾ ಶಿಲೆಯಲ್ಲವಿದು ಕಲೆಯ ಬೀಡಿದು’- ಎಂಬ ಕವಿವಾಣಿ ಈ ನಮ್ಮ ಹುನಗುಂದದ ತಾಲೂಕಿಗೆ ಸರಿಯಾಗಿ ಹೊಂದುತ್ತದೆ. ಏಕೆಂದರೆ ಈ ನಮ್ಮ ಹುನಗುಂದ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲಾತ್ಮಕವಾದ ಸುಂದರವಾದ ಮತ್ತು ಪ್ರಾಚೀನ ಯುಗದ ಬಗೆಗೆ ತಿಳಿಸಿಕೊಡುವ ಹಲವಾರು ರೀತಿಯ ಸುಂದರ ದೇವಸ್ಥಾನಗಳು ಇಲ್ಲಿ ನೆಲೆಸಿವೆ. ಇದರಿಂದ ವಾಸ್ತುಶಿಲ್ಪದ ಲೋಕದಲ್ಲಿ ನಮ್ಮ ಹುನಗುಂದ ನಗರಕ್ಕೆ ವಿಶೇಷವಾದ ಸ್ಥಾನಮಾನವಿದೆ. ನಮ್ಮ ಕನ್ನಡ ನಾಡಿನ ಸಾಂಸ್ಕ್ರತಿಕ ಆಚರಣೆ ಮತ್ತು ಸಂಪ್ರದಾಯಗಳ ಆಗರವಾಗಿದೆ. ನಮ್ಮ ಹುನಗುಂದ ತಾಲೂಕವೂ ವಾಸ್ತುಶಿಲ್ಪ ಹಾಗೂ ಶಿಲ್ಪಕಲೆಯ ಉಗಮ ಸ್ಥಾನವಾಗಿದೆ ಅಥವಾ ತವರೂರಾಗಿದೆ ಎನ್ನಬಹುದು. ಈ ಭಾಗವೂ ದೇಗುಲಗಳ ಹುಟ್ಟು ಬೆಳವಣಿಗೆಯ ಕೇಂದ್ರವಾಗಿಯೂ ಪ್ರಸಿದ್ದಿ ಹಾಗೂ ನಗರ ದ್ರಾವಿಡ್ ಮತ್ತು ವೇಸರ ಎಂಬ ವಾಸ್ತು ಶೈಲಿಗಳ ಪ್ರಯೋಗಗಳ ಪ್ರಯೋಗಾಲಯವಾಗಿ ಹೆಸರುವಾಸಿಯಾಗಿದೆ.
ಈ ತಾಲೂಕಿನ ಸುತ್ತಮುತ್ತ ಹಲವಾರು ದೇವಾಲಯಗಳು ಇವೆ. ಕ್ರಿ.ಶ 6 ರಿಂದ 8 ನೇ ಶತಮಾನದಲ್ಲೂ ಆಳ್ವಿಕೆ ಮಾಡಿದ ಬದಾಮಿ ಚಾಲುಕ್ಯರು, ಐಹೊಳೆ, ಪಟ್ಟದಕಲ್ಲು ಮತ್ತು ಇನ್ನಿತರ ಪ್ರದೇಶಗಳಲ್ಲಿ ನೂರಕ್ಕು ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಹಾಗಾಗೀ ಈ ಪ್ರದೇಶವನ್ನು ‘ದೇವಾಲಯಗಳ ಸ್ವರ್ಗ’ ಎನ್ನಬಹುದಾಗಿದೆ. ದೇಗುಲಗಳ ಹುಟ್ಟು ಹಾಗೂ ಬೆಳವಣಿಗೆಯ ವಿವಿಧ ಸ್ತರಗಳನ್ನು ಇಲ್ಲಿನ ಸ್ಮಾರಕಗಳಲ್ಲಿ ಕಾಣಬಹುದಾಗಿದೆ. ಹಾಗಾಗೀ ಪರ್ಸಿಚ್ರಾನರು ಈ ಸ್ಥಳವನ್ನು ದೇಗುಲಗಳ ತೊಟ್ಟಿಲು ಎಂದು ಕರೆದಿದ್ದಾರೆ.

ಹುನಗುಂದದ ಚಾರಿತ್ರಿಕ ಹಿನ್ನೆಲೆ:-
ಈ ನಮ್ಮ ಹುನಗುಂದ ತಾಲೂಕು ರಾಮಾಯಣ ಮತ್ತು ಮಹಾಭಾರತದಷ್ಟು ಅತ್ಯಂತ ಪ್ರಾಚೀನತೆಯ ಇತಿಹಾಸವನ್ನು ಹೊಂದಿದೆ. ಹಿಂದೆ ರಾಮಾಯಣದಲ್ಲಿ ಆಗಿಹೋದ ಕೆಲವು ಘಟಣೆಗಳು ನಮ್ಮ ಹುನಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಬರುತ್ತವೆ. ಅದರಲ್ಲಿ ಒಂದು ರಾಮಾಯಣದ ಪ್ರಸಂಗವೂ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಐಹೊಳೆಯ ರಾವಣಪಡಿ ಗುಹೆಯ ಸ್ಥಳದಲ್ಲಿ ವಿಶ್ರಾಂತಿ ಪಡೆದುಕೊಂಡನೆಂಬ ಪ್ರತೀತಿ ಇದೆ. ಹೀಗಾಗಿ ರಾಮಾಯಣದ ಕೆಲವು ಭಾಗಗಳಿಗೂ ಈ ನಮ್ಮ ಹುನಗುಂದ ತಾಲೂಕು ಸಾಕ್ಷಿಯಾಗಿದೆ. ಎಂದೂ ಹೇಳಬಹುದು.
ಪೊನ್ನ(ಹೊನ್ನ)+ಕುಂದ(ಗುಂದ)>ಹೊನ್ನಗುಂದ>ಹೊನಗುಂದ>ಹುನಗುಂದ ಅಂದರೆ ಹೊನ್ನ=ಬಂಗಾರ, ಗುಂದ/ಕುಂದ=ಗುಡ್ಡ/ಬೆಟ್ಟ ಹುನಗುಂದದಲ್ಲಿ ಯಾವುದೇ ರೀತಿಯ ಬಂಗಾರದ ಬೆಟ್ಟವೂ ಇಲ್ಲ. ಆದರೆ ಉತ್ತರ ದಿಕ್ಕಿನಲ್ಲಿರುವ ಗುಡ್ಡದಲ್ಲಿ ಬಂಗಾರದಂತೆ ಹೊಳೆಯುವ ಅಭ್ರಕದ ಹರಳು ಕಂಡು ಬರುವುದರಿಂದ ಈ ನಗರವನ್ನು ಹೊನ್ನಗುಂದ>ಹುನಗುಂದ ಎಂದು ಕರೆಯಬಹುದಾಗಿದೆ. ಆದರೆ ಹುನಗುಂದದಲ್ಲಿ ಬೆಳೆಯುವ ಬೆಳೆಯನ್ನು ಬೆಳೆಯುವುದರಲ್ಲಿ ಭೂಮಿಯೇ ಬಂಗಾರದ ಕಣಜ ಎನ್ನಬಹುದಾಗಿದೆ.
ಅಖಂಡ ಕರ್ನಾಟಕ ಅಷ್ಟೇ ಅಲ್ಲ ದೇಶದಲ್ಲಿಯೇ ಹುನಗುಂದ ನಗರವೂ ಜವಾರಿ ಜೋಳವನ್ನು ಮತ್ತು ಕಡಲೆ ಬೆಳೆಯುವುದರಲ್ಲಿ ಹೆಚ್ಚು ಪ್ರಸಿದ್ದಿಯನ್ನು ಹೊಂದಿತ್ತು. ಆದರೆ ಇಂದಿನ ದಿನಮಾನಗಳಲ್ಲಿ ಹೆಚ್ಚಿನ ಜನತೆ ವಾಣಿಜ್ಯ ಬೆಳೆಗಳ ಕಡೆ ಒಲವು ಜಾಸ್ತಿ ಆಗಿರುವುದರಿಂದ ಜೋಳ ಕಣ್ಮರೆಯಾಗುವ ಕಳವಳ ಹೆಚ್ಚಾಗಿದೆ ಎನ್ನಬಹುದು.
ಜೋಳ ತಿಂದವ ತೋಳ
ಅಕ್ಕಿ ತಿಂದವ ಹಕ್ಕಿ
ಎನ್ನುವಂತೆ ಇಂದಿನ ದಿನಮಾನಗಳಲ್ಲಿ ಎಲ್ಲರೂ ಹಕ್ಕಿಯಾಗಲೂ ಬಯಸುತ್ತಿದ್ದಾರೆ.
ವಿವಿಧತೆಯಲ್ಲಿ ಹುನಗುಂದ:-
ನಮ್ಮ ಹುನಗುಂದ ನಗರವೂ ಹಲವಾರು ಕ್ಷೇತ್ರಗಳಲ್ಲಿ ತನ್ನ ನೆಲೆಯನ್ನು ಕಂಡು ಕೊಂಡಿದೆ. ಕಲೆ, ಸಂಸ್ಕ್ರತಿ, ಕ್ರೀಡೆ, ಶಿಕ್ಷಣ, ಸಾಹಸ, ಶ್ರಮತನಕ್ಕೆ ಎತ್ತಿದ ಕೈ ಎಂದೇ ಹೇಳಬಹುದು. ಇಲ್ಲಿ ನಡೆಸುವ ಹಲವು ವಿವಿಧ ಸ್ಪರ್ಧಗಳಲ್ಲಿ ಕೆಲವು ಇಂತಿವೆ. ಇಲ್ಲಿನ ಕರಡು ಮಜಲು ತುಂಬಾ ಉತ್ಸಾಹ ಬರಿಸುವಂತಹದ್ದಾಗಿದೆ. ಆದರೆ ಇಂದು ಇಲ್ಲಿನ ಪ್ರದೇಶದಲ್ಲಿ ಕಣ್ಮರೆಯಾಗುತ್ತಿದೆ. ಹೋಳಿ ಹುಣ್ಣಿಮೆಯಲ್ಲಿ ನಡೆಸುವ ವಿವಿಧ ರೀತಿಯ ಕಾರ್ಯಕ್ರಮಗಳಲ್ಲಿ ಅಣುಕು ಹೆಣದ ಮೆರವಣಿಗೆ ತೊರ್ಪಡಿಸುತ್ತಾರೆ. ಮತ್ತು ಹುನಗುಂದ ಜನತೆಯ ಆರಾಧ್ಯಧೈವ ಸಂಗಮೇಶ್ವರನ ಜಾತ್ರೆ ಅನನ್ಯವಾದದು. ತೇರನ್ನು ಅಲಂಕರಿಸುವ ಪರಿ ವಿಶಿಷ್ಠ ರೀತಿಯದ್ದು, ಪ್ರತಿಯೊಬ್ಬ ಹುನಗುಂದ ಜನತೆಯೂ ಈ ದೇವರಿಗೆ ಆಭಾರಿಯಾಗಿದ್ದಾರೆ.
ಹಾಗೇಯೇ ಮುಂದುವರಿದು ನೋಡುವುದಾದರೆ, ಕೇವಲ ಧಾರ್ಮಿಕ ಜೀವನದಲ್ಲಿ ಮಾತ್ರವಲ್ಲದೇ ಕ್ರೀಡಾ ವಿಷಯದಲ್ಲಿಯೂ ಕೂಡ ಹುನಗುಂದ ನಗರವೂ ಮುಂಚೂಣಿಯಲ್ಲಿದೆ. ಎಂದು ಹೇಳಬಹುದು. ಅವುಗಳಲ್ಲಿ ಕಬ್ಬಡಿಯ ಆಟದಲ್ಲಿ ಹೆಸರು ಮಾಡಿದಂತಹ ಮತ್ತು ಮಾಡುತ್ತಿರುವ ಬದಾಮಿ, ಕಂದಗಲ್ಲ, ಮುಕ್ಕಣ್ಣವರ, ಅಂಬೀಗೇರ್ ಇನ್ನಿತರ ಹೆಸರುಗಳು ಕೇಳು ಬರುತ್ತವೆ. ಇವರು ನಮ್ಮ ಹುನಗುಂದ ನಗರದ ನಿವಾಸಿಗಳೆಂದ ಹೆಮ್ಮೆ ಪಡುತ್ತೆವೆ.
ನಂತರದಲ್ಲಿ ದೇಶದಲ್ಲಿಯೇ ಪ್ರಖ್ಯಾತಿಯಾದ ಆಟ, ಕುಸ್ತಿ ಅದರಲ್ಲೂ ಕುಸ್ತಿ ಎಂಬ ಪದ ಕಿವಿಗೆ ಬಿದ್ದ ತಕ್ಷಣ ಮೊದಲು ನೆನಪಿಗೆ ಬರುವ ಕೆಲವು ಊರುಗಳೆಂದರೆ ಮುಧೋಳ, ಜಮಖಂಡಿ, ಮತ್ತು ಬೆಳಗಾವಿ, ಇಲ್ಲಿನ ಕುಸ್ತಿಪಟುಗಳ ಬಾಯಿಯಲ್ಲಿ ನಮ್ಮ ಊರಿನ ಫೌಲ್ವಾನರ್ ಹೆಸರನ್ನು ಈಗಲೂ ಕೇಳುತ್ತೆವೆ. ಎಂದರೆ, ನಮ್ಮ ಊರಿನ ಹಿರಿಯ ಕುಸ್ತಿಪಟುಗಳಿಗೆ ಗೌರವ ಸಲ್ಲಿಸಲೇಬೇಕು. ಇದು ನಮ್ಮ ಊರಿನಲ್ಲಿ ಇದ್ದ ಹಲವಾರು ರೀತಿಯ ಗರಡಿ ಮನೆಗಳು ಇಂದೂ ಬಿದ್ದಮನೆಯಾಗಿವೆ. ನಮ್ಮ ಊರು ತುಂಬಾ ಅನನ್ಯ ಇಲ್ಲಿನ ಟಗರಿನ ಕಾಳಗ ಇತ್ಯಾದಿ ಇಂದು ಕಣ್ಮರೆಯಾಗುತ್ತಿವೆ. ಅವು ಉಳಿಯಲಿ, ಬೆಳೆಯಲಿ ಎಂದೂ ಆಶಿಸೋಣ.
ಹುನಗುಂದದ ಭೌಗೋಳೀಕತೆ
ಆಡಳಿತದ ಅನುಕೂಲಕ್ಕಾಗಿ ತಾಲ್ಲೂಕಿನ ಇಳಕಲ್ಲಿನಲ್ಲಿ ವಿಶೇಷ ತಹಶೀಲ್ದಾರ ಹಾಗೂ ಉಪನೋದಣಿ ಕಾರ್ಯಾಲಯಗಳನ್ನು ತೆರೆಯಲಾಗಿದೆ. ಹುನಗುಂದದ ತಾಲುಕು ಬದಾಮಿ, ಬಾಗಲಕೋಟ, ಮುದ್ದೇಬೀಹಾಳ, ಲಿಂಗಸೂಗುರು, ಕುಷ್ಟಗಿ ತಾಲೂಕು ಪ್ರದೇಶಗಳಿಂದ ಸುತ್ತುವರಿಯಲ್ಪಟ್ಟಿದೆ. ಬಾಗಲಕೋಟ ಉಪವಿಭಾಗದ ಆಡಳಿತಕ್ಕೆ ಒಳಪಡುವ ಹುನಗುಂದ ತಾಲೂಕಿನಲ್ಲಿ ಹುನಗುಂದ, ಅಮೀನಗಡ, ಕರಡಿ, ಇಳಕಲ್ ಗಳಿಂದ ಕೂಡಿದ ನಾಲ್ಕು ಹೋಬಳಿಗಳನ್ನು ರಚಿಸಿಕೊಳ್ಳಲಾಗಿದೆ.
ಹವಾಗುಣ – ಮಳೆ
ಬಯಲು ಸೀಮೆಯನ್ನು ಹೊಂದಿರುವ ಹುನಗುಂದ ತಾಲೂಕವೂ ಹೆಚ್ಚು ಉಷ್ಣಾಂಶವನ್ನು ಹೊಂದಿದ ಪ್ರದೇಶವಾಗಿದೆ. ಇಲ್ಲಿಯ ಪ್ರದೇಶದಲ್ಲಿ ಸಮಶೀತೋಷ್ಣ ಹವೆ ತುಂಬಾ ವಿರಳವಾಗಿದೆ. ಅದರಲ್ಲೂ ಫೇಬ್ರುವರಿ ಕೊನೆಯ ವಾರದಿಂದ ಜೂನ್ ಮೊದಲ ವಾರದವರೆಗೂ ಬಿರು ಬಿಸುಲಿನ ಬೇಸಿಗೆಯ ತಾಪದಿಂದ ಇಲ್ಲಿನ ಜನ ತೋಳಲಾಡ ಬೇಕಾಗುತ್ತದೆ. ವಿಶೇಷವಾಗಿ ಎಪ್ರೀಲ್ ಮತ್ತು ಮೇ ತಿಂಗಳುಗಳಲ್ಲಿ ಗರಿಷ್ಠ ಉಷ್ಣಾಂಶ ಪ್ರಮಾಣವಿರುತ್ತದೆ. ವರ್ಷದ ಮುಂಗಾರು ಮಳೆಯ ಆರಂಭದೊಂದಿಗೆ ಇಲ್ಲಿ ಹೆಚ್ಚಿನ ಬಿಸಿಲಿನ ಧಗೆಯೂ ಕಡಿಮೆ ಆಗುತ್ತಾ ಬರುತ್ತದೆ. ಮುಂಗಾರು ಮಳೆಯ ನಂತರ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳು ಹಾಗೂ ಡಿಸೆಂಬರ್ ಜನವರಿ ತಿಂಗಳುಗಳು ಹಿತಕರವಾದ ಹವಾಗುಣವನ್ನು ಹೊಂದಿರುತ್ತವೆ. ಎಂದೂ ಹೇಳಬಹುದು. ಮತ್ತು ಇಲ್ಲಿ ಚಳಿಗಾಲದ ಮುದವನ್ನು ಆಗೋಮ್ಮೆ ಇಗೊಮ್ಮೆ ನೆನಪಿಸುತ್ತದೆ. ಮತ್ತು ಇಲ್ಲಿನ ಸುರಿವ ಮಳೆಯೂ ಕೂಡ ಚೇತೋಹಾರಿಯಾಗಿಲ್ಲ. ಇಲ್ಲಿ ಸುರಿವ ವಾಡಿಕೆ ಮಳೆ ಪ್ರಮಾಣ(1901-70)2005 ರ ಅಂಕಿ-ಅಂಶದ ಪ್ರಕಾರ 597 ಮಿ.ಮೀ ಇದೆ. ಆದರೆ ವಾಸ್ತವದಲ್ಲಿ 503ಮಿ.ಮೀ ಮಳೆ ಸುರಿಯುತ್ತದೆ. ಇಲ್ಲಿಯ ಪ್ರದೇಶದ ವಾಡಿಕೆಯಂತೆ (1901-70) 39 ದಿವಸಗಳ ಕಾಲ ಮಳೆ ಸುರಿಯಬೇಕು. ಎಂಬುದಿದೆ. ಆದರೆ 2005 ರ ಮಾಹಿತಿ ಪ್ರಕಾರ 35 ದಿವಸಗಳು ಮಾತ್ರ ಮಳೆ ಸುರಿಯುತ್ತವೆ. ಈ ಪ್ರದೇಶದಲ್ಲಿ ಒಟ್ಟು 8 ವೃಷ್ಠಿಮಾಪನ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.

ಜನವರ್ಗ
ಹುನಗುಂದ ನಗರದಲ್ಲಿ ಹಲವಾರು ರೀತಿಯ ಜನಾಂಗದವರೂ ತಮ್ಮ ನೆಲೆಯನ್ನು ಇಲ್ಲಿಯೇ ಕಂಡು ಕೊಂಡಿದ್ದಾರೆ. ಆದರೆ ಜನರ ಮಾತಿನ ಪ್ರಕಾರ ಇಲ್ಲಿ ಹೆಚ್ಚಾಗಿ ಈ ಪ್ರದೇಶದಲ್ಲಿ ಕಂಡು ಬರುವ ಜನಾಂಗಗಳೆಂದರೆ ಲಿಂಗಾಯತ, ಕುರಬ, ದೇವಾಂಗ, ಬ್ರಾಹ್ಮಣ, ರೆಡ್ಡಿ, ವಡ್ಡರ್, ಪಂಜಾಳ, ಜೈನ್, ಪಟೇಗಾರ, ತಳವಾರ, ಸುಣಗಾರ, ಕುರುವಿನ ಶೆಟ್ಟಿ, ಮುಸಲ್ಮಾನ್, ಕೊರವ, ಹರಿಜನ, ಮುಂತಾದ ಜನಾಂಗದವರು ಇಲ್ಲಿ ನೆಲೆಸಿದ್ದಾರೆ.
ತಾಲೂಕು ಆಡಳಿತ ಕೇಂದ್ರವಾಗಿರುವ ಹುನಗುಂದವನ್ನು ಪೊನ್ನಗುಂದ ಎಂದು ಕರೆಯಲಾಗುತತಿತ್ತು. ಪೊನ್ನಗುಂದ ಹುನಗುಂದ ಆದುದರ ಬಗೆಗೆ ಹಲವಾರು ರೀತಿಯ ಕಾರಣಗಳನ್ನು ಹೇಳುತ್ತಾರೆ. ಜನರು ತಮ್ಮದೇ ಆದ ನಂಬಿಕೆಯಲ್ಲಿ ಹಿರಿಯರು ತಿಳಿಸಿರುವ ಬಗೆಗೆ ತಿಳಿಸಿರುತ್ತಾರೆ. ಕಥೆಯ ರೂಪದಲ್ಲಿ ತಿಳಿಸುತ್ತಾರೆ. ಸದಾ ಕಾಲ ಜನಕಲ್ಯಾಣವನ್ನೇ ಬಯಸುತ್ತಿದ್ದ. ಇಲ್ಲಿನ ಮೂವರು ಜನ ಸಹೋದರರಲ್ಲಿ ಒಬ್ಬ ಅಪ್ರತಿಮ ವೀರನಾಗಿದ್ದನೆಂದೂ ಅವರ ಹೆಸರು ‘ಪೊನ್ನ’ನೆಂದು ತಿಳಿಸುತ್ತಾರೆ. ಗ್ರಾಮದ ಜನರೆಲ್ಲರೂ ಆತನ ನೆನಪಿನ ಕುರುಹಾಗಿ ಈ ಗ್ರಾಮಕ್ಕೆ ಪೊನ್ನಗುಂದ ಎಂದು ನಾಮಕರಣ ಮಾಡಿದರು ಎಂದು ಹೇಳುತ್ತಾರೆ. ‘ಪ’ ಕಾರಗಳು, ‘ಹ’ಕಾರವಾಗಿ ಪರಿವರ್ತನೆಯಾಗುವಂತೆ ಪೊನ್ನಗುಂದವೂ ಹೊನ್ನಗುಂದವೆಂದೂ ಕಾಲಾಂತರದಲ್ಲಿ ಬದಲಾವಣೆಯಾಯಿತೆಂದು ಮತ್ತು ನಂತರದಲ್ಲಿ ಹುನಗುಂದ ಎಂದೂ ರೂಢಿಯಲ್ಲಿ ಬಂದಿತೆಂದು ಎನ್ನಲಾಗಿದೆ. ಪೊನ್ನಗುಂದ ಎಂಬ ಪದದ ಅರ್ಥ. ‘ಬಂಗಾರದ ಬೆಟ್ಟ’ ಇದನ್ನು ಆಧರಿಸಿಯೇ ಒಂದು ಕಥೆಯು ಹುಟ್ಟಿಕೊಂಡಿದೆ. ಇಲ್ಲಿನ ಬೆಟ್ಟದ ಮೇಲೆ ಒಬ್ಬ ಋಷಿಮುನಿಯೊಬ್ಬ ವಾಸವಾಗಿದ್ದ ದಿನನಿತ್ಯದಂತೆ ಅವನು ತನಗೆ ಅಡುಗೆ ಮಕ್ಕೊಳ್ಳುವಾಗ ಒಂದು ದಿನ ಅವನು ಮಾಡಿ ಇಟ್ಟ ಅಡಿಗೆ ಎಲ್ಲವೂ ಬಂಗಾರವಾಯಿತೆನ್ನಲಾಗಿದೆ. ಅಂದಿನಿಂದ ಇದನ್ನು ಸುತ್ತುವರಿದ ಭಾಗಕ್ಕೆ ಪೊನ್ನಗುಂದ ಎನ್ನಲಾಯಿತು.
ಆದರೆ ಇದನ್ನು ನಂಬದೆ ಇರಲು ಆಗಬಹುದು ಆದರೆ ಇದಕ್ಕೆ ನಿದರ್ಶನ ತೋರುವಂತೆ ಹುನಗುಂದದ ಬೆಟ್ಟದ ಮೇಲ್ಭಾಗದಲ್ಲಿ ಬಂಗಾರದ ಬಣ್ಣವನ್ನು ಹೋಲುವ ಕಲ್ಲು-ಮಣ್ಣುನಿಂದ ಕೂಡಿದ ಭೂ ಪ್ರದೇಶವಿದೆ. ಇದರಿಂದಾಗಿ ಇದಕ್ಕೆ ಹೊನ್ನಗುಂದ ಎಂದೂ ಹೆಸರು ಬಂದಿದೆ. ಕಾಲಾಂತರದಲ್ಲಿ ‘ಹುನಗುಂದ’ ಎಂದೂ ರೂಢಿಯಲ್ಲಿ ಬಂದಿರಬೇಕು. ಎಂದೂ ಅಭಿಪ್ರಾಯ ಪಡುತ್ತಾರೆ.
ಹುನಗುಂದದಲ್ಲಿ ರಾಜಕೀಯ ಚರಿತ್ರೆ
ಹುನಗುಂದದ ತಾಲೂಕು ಹಲವು ಅರಸರ ಆಡಳಿತಕ್ಕೆ ಒಳಪಟ್ಟಿದ್ದರ ಬಗೆಗೆ ಮಾಹಿತಿ ದೊರೆಯುತ್ತದೆ. ಬದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಳಚೂರಿಗಳು, ವಿಜಯನಗರದ ಅರಸರು, ವಿಜಾಪೂರದ ಸುಲ್ತಾನರು, ಮರಾಠಾ ಪೇಶ್ವೇಗಳು, ಬ್ರೀಟೀಷರು ಹುನಗುಂದ ತಾಲೂಕು ಪ್ರದೇಶದಲ್ಲಿ ಆಡಳಿತ ನಡೆಸಿದರ ಬಗೆಗೆ ಮಾಹಿತಿ ದೊರೆಯುತ್ತದೆ. ಇದಕ್ಕೆ ಹಲವಾರು ಶಾಸನಗಳು ಪೂರಕ ಮಾಹಿತಿ ಒದಗಿಸುತ್ತವೆ.
ಹುನಗುಂದದಲ್ಲಿ ಇಂದಿರುವ ಓಣಿಗಳು
ಹುನಗುಂದ ನಗರದಲ್ಲಿ ಇಂದು ನಾವು ಹಲವಾರು ರೀತಿಯ ಓಣಿಗಳನ್ನು ಕಾಣಬಹುದಾಗಿದೆ. ಅವು ಇಂತಿವೆ. ಸಂಗಮೇಶ್ವರ ಓಣಿ, ಅಜಾದ ನಗರ, ನಾಗಲಿಂಗ ನಗರ, ಭಜಂತ್ರಿ ಓಣಿ, ಮಲ್ಲಿಕಾರ್ಜುನ ನಗರ, ಮೇಗಲಪೇಟೆ, ಬೆಣ್ಣೆ ಮಾರ್ಕೆಟ್, ಬಜಾರ್, ವಿದ್ಯಾನಗರ, ಮಹಾಂತ ನಗರ, ಓಂ ಶಾಂತಿ ನಗರ, ಬಾರಕೇರ್ ಓಣಿ, ಕುಂಬಾರ ಓಣಿ, ಅಂಬೇಡ್ಕರ್ ನಗರ, ಬಾಬು ಜಗಜೀವನ್‍ರಾವ್ ನಗರ, ಪೋಲಿಸ್ ಕ್ವಾಟಸ, ಬಾಗಲಕೋಟ ರೋಡ, ಚಿತ್ತವಾಡಗಿ ರೋಡ ಇವು ಹುನಗುಂದ ನಗರದಲ್ಲಿರುವ ಪ್ರಮುಖ ಓಣಿಗಳು ಎಂದೂ ಹೇಳಬಹುದಾಗಿದೆ.
ಹುನಗುಂದದಲ್ಲಿ ಜಾತಿವಾರು ಜನಸಂಖ್ಯೆ
ಹುನಗುಂದ ತಾಲೂಕಿನ ವಿಸ್ತೀರ್ಣವೂ 2011 ರಲ್ಲಿ ಸಿದ್ದಪಡಿಸಿದ ಅಂಕಿ-ಅಂಶಗಳ ಪ್ರಕಾರ 1354.04 ಚ ಕೀ.ಮೀ ಇದ್ದು, ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿನ ಜನಸಂಖ್ಯೆ 3,21,338 ಇದೆ. ಅದರಲ್ಲಿ 161741 ಜನ ಪುರುಷರು ಹಾಗೂ 159597 ಮಹಿಳೆಯರು ಇದ್ದಾರೆ. ತಾಲೂಕಿನ ಗ್ರಾಮೀಣ ಪ್ರದೇಶದ ಜನಸಂಖ್ಯೆ 197557 ಇದ್ದು, ನಗರ ಪ್ರದೇಶದ ಜನಸಂಖ್ಯೆ 123781 ಇದೆ. ಈ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ 39924 ಜನ ಪರಿಷಿಷ್ಠ ಜಾತಿಗೆ ಸೇರಿದವರಾಗಿದ್ದಾರೆ. ಇದೇ ರೀತಿಯಾಗಿ ಪಟ್ಟಣದ ಪ್ರದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ 14780 ಜನರು ಪರಿಷಿಷ್ಠ ಜಾತಿಗೆ ಸೇರಿದವರಾಗಿದ್ದಾರೆ. ಇದರಲ್ಲಿ ಗ್ರಾಮೀಣ ಪ್ರದೇಶದ ಪರಿಷಿಷ್ಠ ಪಂಗಡಕ್ಕೆ ಸೇರಿದ 7838 ಜನರಿದ್ದು ಅದರಲ್ಲಿ ಪಟ್ಟಣ ಪ್ರದೇಶದ ಪರಿಷಿಷ್ಠ ಪಂಗಡಕ್ಕೆ 3839 ಜನರಿದ್ದಾರೆ.
ಹುನಗುಂದದಲ್ಲಿ ಸಾಕ್ಷರತಾ ಪ್ರಮಾಣ
ತಾಲೂಕಿನಲ್ಲಿ 193667 ಜನರಿದ್ದು, ಅದರಲ್ಲಿ 114336 ಜನ ಪುರುಷರು ಹಾಗೂ 79331 ಜನ ಮಹಿಳಾ ಸಾಕ್ಷರರಿದ್ದಾರೆ. ನಗರ ಪ್ರದೇಶದ 82886 ಜನ ಸಾಕ್ಷರರಲ್ಲಿ 46708 ಜನ ಪುರುಷರು ಹಾಗೂ 36178 ಜನ ಮಹಿಳೆಯರು ಸೇರಿದ್ದಾರೆ. ತಾಲೂಕಿನ ಒಟ್ಟು ಸಾಕ್ಷರತೆಯ ಪ್ರಮಾಣ ಪ್ರತಿಶತ 70.11 ಇದ್ದು, ಗ್ರಾಮೀಣ ಪ್ರದೇಶದ ಸಾಕ್ಷರತೆಯ ಪ್ರಮಾಣ ಪ್ರತಿಶತ 65.64 ರಷ್ಟು ಇದೆ. ಇದರಲ್ಲಿ ಪ್ರತಿಶತ 79.93 ರಷ್ಟು ಗಂಡಸರೂ ಹಾಗೂ ಪ್ರತಿಶತ 51.28 ರಷ್ಟು ಸ್ತ್ರೀಯರೂ ಸಾಕ್ಷರರಾಗಿದ್ದಾರೆ. ನಗರ ಪ್ರದೇಶದ ಪ್ರತಿಶತ 77.13 ರಷ್ಟು ಜನ ಸಾಕ್ಷರರಲ್ಲಿ ಪ್ರತಿಶತ 86.68 ಜನ ಪುರುಷರು ಹಾಗೂ ಪ್ರತಿಶತ 67.53 ಜನ ಮಹಿಳಾ ಸಾಕ್ಷರರೂ ಇದ್ದಾರೆ. ತಾಲೂಕಿನ 162 ಗ್ರಾಮಗಳಲ್ಲಿ ಜನವಸತಿಯನ್ನು ಹೊಂದಿದೆ.
ಗ್ರಾಮದೇವತೆ ಎಂದರೇನು……..?
ಪ್ರಪ್ರಥಮವಾಗಿ ಮಾನವನೂ ತನ್ನ ಆರಂಭಿಕ ಜೀವನದಲ್ಲಿ ಕಾಡು ಪ್ರಾಣಿಯಾಗಿ ಜೀವನ ನಡೆಸುತ್ತಾ ಬೆಳೆದು ಬಂದಿದ್ದಾನೆ. ಎಂಬುದನ್ನು ತಿಳಿಯಬಹುದಾಗಿದೆ ತನಗೆ ಬೇಕಾದಾಗ ಮಾನವನು ತನ್ನ ಬುದ್ದಿಯ ಪಕ್ವತೆಯನ್ನು ಪಡೆದಂತೆ ದಿನೇ ದಿನೇ ಹೆಚ್ಚಾಗಿ ತನ್ನ ಆಸೆ ಅಭಿರುಚಿಗಳಿಗೆ ಅನಕೂಲಕರವಾಗುವಂತೆ ಮೊದಲಿಗೆ ಗೆಡ್ಡೆ, ಗೆಣಸು, ನಂತರದಲ್ಲಿ ಹಸಿ ಮಾಂಸಗಳನ್ನು ತಿನ್ನಲೂ ಪ್ರಾರಂಭಿಸಿದನು. ಹಸಿದ ಮಾಂಸಕ್ಕಿಂತ ಬೇಯಿಸಿದ ಮಾಂಸದ ಬಗೆಗೆ ತಿಳಿದುಕೊಂಡು ಅದರ ರುಚಿಯ ಅನುಭವವನ್ನು ಪಡೆದುಕೊಂಡನು. ನಂತರದಲ್ಲಿ ಮಾನವನು ಪ್ರಕೃತಿಯ ಸಾಮಾನ್ಯ ವಿಕೋಪಗಳಾದ ಜ್ವಾಲಾಮುಖಿ, ಭೂಕಂಪ, ಸುನಾಮಿ, ಇನ್ನಿತರಗಳಿಗೆ ಹೆದರಿ ಈ ಶಕ್ತಿಯ ಪ್ರತಿಕಗಳನ್ನು ಪೂರೈಸಲೂ ಪ್ರಾರಂಭಿಸಿದನು. ಇವುಗಳೆ ದೇವರ ಸ್ವರೂಪವೆಂದು ತಿಳಿದನು. ವೈಯಕ್ತಿಕ ಜೀವನದಲ್ಲಿ ಮೂಡಿಬಂದ ಭಯವನ್ನು ಹೊಗಲಾಡಿಸಿಕ್ಕೊಳ್ಳಲೂ ಭಕ್ತಿ ನೆಲೆಯೂರಿತು. ಹೀಗೆ ದೇವರ ಕಲ್ಪನೆಯಾಯಿತು.
ಹೀಗೆ ಮುಂದುವರೆದಂತೆ ತನ್ನ ವಿಚಾರಣಾ ಶಕ್ತಿಯಿಂದ ಜಗತ್ತಿನಲ್ಲಿ ಇತರ ಪ್ರಾಣಿಗಳಿಗಿಂತಲೂ ಭಿನ್ನವಾಗಿ ಉನ್ನತ ಮಟ್ಟದಲ್ಲಿರುವವನು ಮೊದಲಿನ ಕಾಲದಿಂದಲೂ ಮಾನವನೂ ತಾಯಿಗೆ ದೇವತೆಯ ಸ್ಥಾನವನ್ನು ಕೊಟ್ಟಿರುವವನು ಮಾತೇಯೇ ಮಾನವನ ಪ್ರಗತಿಯಲ್ಲಿ ಪ್ರಮುಖ ಸ್ಥಾನವನ್ನು ವಹಿಸಿರುವವಳು ಆದರಿಂದ ಮಾತೃ ದೇವತೆಯ ಆರಾಧನಾ ಎಲ್ಲ ಜನಾಂಗಗಳಲ್ಲಿಯೂ ನಾವು ಕಾಣಬಹುದಾಗಿದೆ. ಮೊದಲಿನಿಂದಲೂ ದೇವಿಯ ಆರಾಧನಾ ಪದ್ದತಿಯನ್ನು ನಾವು ಕಾಣಬಹುದಾಗಿದೆ.(ಪುಟ-8 ಗ್ರಾಮದೇವತೆಗಳು ಬಿ,ಸಿ,ಪಾಟೀಲ್)
ಪ್ರಾಚೀನ ಕಾಲದ ಜನರು ಮಾನವರ ಮರಣಾನಂತರ ಅವನ ಮೆದುಳನ್ನು ಹೊರ ತೆಗೆದು ಧಾರ್ಮಿಕ ವಿಧಾನ ನಡೆಸುತ್ತಿದ್ದರು. ಹೀಗೆ ಧಾರ್ಮಿಕ ಕಲ್ಪನೆ ಬೆಳೆದು ಬಂದಿತು.(ಎಸ್,ಕೆ,ರಾಮಚಂದ್ರರಾವ್-ಮೂರ್ತಿ ಶಿಲ್ಪಿ ನೆಲೆ ಹಿನ್ನೆಲೆ-ಪುಟ 228)
ಕ್ರಮೇಣ ಮಾನವನ ಜ್ಞಾನ ವಿಕಾಸವಾದಂತೆ ಮೂರ್ತಿಗಳನ್ನು ಸ್ಥಾಪಿಸುವುದರರೊಂದಿಗೆ ದೇವಾಲಯಗಳು ನಿರ್ಮಾಣಗೊಂಡವು. ಸತ್ತವರ ಸಮಾಧಿಗಳೇ ದೇವಾಲಯಗಳಾಗಿ ಮಾರ್ಪಟ್ಟವೆಂಬ ನಂಬಿಕೆಯೂ ಇದೆ. ನಿಸರ್ಗದಲ್ಲಿರುವ ಶಿಧ ಮರಗಳೂ ಸಹ ದೇವಾಲಯಗಳ ದೇವತೆಗಳೆಂದು ಭಾವನೆ ಮೂಡಲಾರಂಭಿಸಿತು. ಒರಟಾದ ಕಲ್ಲುಗಳ ದೇವತೆಗಳ ಸ್ವರೂಪವಾಗಿ ಬೆಳೆದು ಬಂದವು. (ಗ್ರಾಮದೇವತೆಗಳು-ಪುಟ-6)
ಗ್ರಾಮದೇವತೆಗಳ ಉಗಮ – ವಿಕಾಸ
ಕೂಡಿಕೊಂಡು ಬಾಳುವ ಯೋಚನೆಗಳು ಮನುಷ್ಯನಿಗೆ ಒಂದಾಗಿನಿಂದ ವಾಸಿಸಲೂ ನದಿಯ ದಂಡೆಯ ಮೇಲೆ ವಿಶಾಲವಾದ ಪ್ರದೇಶವನ್ನು ಆಯ್ಕೆಮಾಡಿಕೊಂಡು ಹೀಗೆ ನಂತರದಲ್ಲಿ ಮಾನವನ ವಿಚಾರಧಾರೆಗಳು ಬೆಳೆದಂತೆ ಅವನು ಹಲವರೊಂದಿಗೆ ಒಡನಾಟವನ್ನು ಹೊಂದಿದನು. ಮತ್ತು ಸಂಭಂಧಗಳನ್ನು ವೃಧ್ಧಿಸಿಕೊಂಡನು. ಇದರ ಪರಿಣಾಮವಾಗಿ ಅವನಲ್ಲಿ ಅನೇಕ ಬಗೆಯ ಸಂಸ್ಕಾರಗಳು ಬೆಳೆಯತೊಡಗಿದವು. ಹೀಗೆ ಧ್ಯಾನ ಪಕ್ವವಾದಂತೆ ದೇವತೆಗಳ ಪೂಜೆಯನ್ನು ಮಾಡಲು ಪ್ರಾರಂಭಿಸಿದನು. ಅವರು ವಾಸಿಸುವ ಪ್ರದೇಶದಲ್ಲಿ ಕಟ್ಟಿಕೊಂಡಂತಹ ಗ್ರಾಮ ದೇವತೆಗಳ ಸಂಖ್ಯೆಯು ಅಧಿಕವಾಗಿ ಬೆಳೆಯತೊಡಗಿತು. ಇದು ‘ಗ್ರಾಮ ದೇವತೆಗಳು’ ಎಂಬ ಕಲ್ಪನೆಯೂ ಮಾಡಿಕೊಂಡು ಬಂದಿರಲೂ ಸಾಧ್ಯವಿದೆ. ತಾಯಿಯೇ ಮಾನವ ದೇವತೆಯ ಸ್ಥಾನ ನೀಡಿದನು. ಶಿಲಾಯುಗದ ಕಾಲದಿಂದಲೂ ಮಾತೃದೇವತೆಯ ಆರಾಧನೆ ಕಂಡು ಬಂದಿತ್ತು. ಸಿಂಧೂ ಸಂಸ್ಕ್ರತಿಯ ಕಾಲದಲ್ಲೂ ಮಾತ್ರದೇವತೆಯ ಆರಾಧನೆ ಇತ್ತೆಂಬುದು ಹರಪ್ಪಾ ಮೆಹೆಂಜೋದಾರ್ ನಗರಗಳಲ್ಲಿ ದೊರೆತ ಮುದ್ರೆಗಳಲ್ಲಿರುವ ಚಿತ್ರಗಳಿಂದ ತಿಳಿಯುವುದು.
ಗ್ರಾಮ ದೇವತೆಯ ಪೂಜೆಗೆ ಕಾರಣ
ಹಲವಾರು ರೀತಿಯಲ್ಲಿ ಗ್ರಾಮಗಳಲ್ಲಿ ಮಾತೃ ದೇವತೆಗಳು ನೆಲೆಸಿರುವುದನ್ನು ನಾವು ಕಾಣುತ್ತೆವೆ. ಹಲವಾರು ರೀತಿಯ ಜನರು ಹಲವು ದೇವಿಯರನ್ನು ಪೂಜಿಸುತ್ತಾರೆ. ಇನ್ನೂ ಕೆಲವರು ತಮ್ಮ ಮನೆಯಲ್ಲಿಯೇ ಹಲವಾರು ದೇವಿಯ ಛಾಯಾಚಿತ್ರವನ್ನು ಇಟ್ಟು ಮನೆಮುಂದೆ ಇರುವ ಬೇವಿನಮರ ಹುಣಸಿಗಿಡ ಇನ್ನಿತರ ಗಿಡಗಳನ್ನು ನೆರಳಿಗೆ ಇರುವ ಕಡೆಗೆ ದೇವಿಯನ್ನು ಸ್ಥಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಇಲ್ಲಿಯ ಜನರು ತಮ್ಮ ನಂಬಿಕೆಯ ಆಧಾರಗಳ ಮೇಲೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಎಂದೂ ಹೇಳಬಹುದು. ಈ ಎಲ್ಲಾ ಅಂಶಗಳಿಂದ ಮಾತೃ ದೇವತೆಯ ಕಲ್ಪನೆ ಬೆಳೆದು ಬಂದಿರುವುದನ್ನು ಗಮನಿಸಬಹುದು.
ಪೂಜಾ-ವಿಧಾನಗಳೇನು……?
ಇಲ್ಲಿ ಪ್ರತಿ ದೇವಿಗೂ ಹಲವಾರು ರೀತಿಯಲ್ಲಿ ಪೂಜಾ ಕ್ರಮಗಳನ್ನು ಮಾಡಲಾಗುತ್ತದೆ. ಆದರೆ ಎಲ್ಲ ದೇವಿಗೂ ನೀಡುವಂತೆ ಪ್ರತಿ ಗ್ರಾಮದೇವತೆಗೂ ಮುಖ್ಯವಾಗಿ ಪೂಜಾ ವಿಧಾನದಲ್ಲಿ ಹಡಲಗಿ ತುಂಬುವುದು ಮತ್ತು ಬಾಗಿನವನ್ನು ಅರ್ಪಿಸುತ್ತಾರೆ ಎಂದು ಹೇಳಬಹುದು.
ಪ್ರತಿಯೊಬ್ಬರು ದೇವಿಯ ಪ್ರತಿವರ್ಷದ ಜಾತ್ರೆಯಲ್ಲಿ ಪಾಲ್ಗೋಂಡ ಸದ್ಭಕ್ತರಿಗೆ ದೇವಿಯ ಪ್ರಸಾದವನ್ನು ನೀಡಲಾಗುತ್ತದೆ. ಪ್ರಮುಖವಾಗಿ ದೇವತೆಗಳಿಗೆ ನೈವೈದೈವನ್ನು ನೀಡುತ್ತಾರೆ. ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಹಲವಾರು ರೀತಿಯಲ್ಲಿ ಪ್ರಾಚೀನ ಪೂಜಾ ವಿಧಿ-ವಿಧಾನಗಳನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ ಎಂದೂ ಹೇಳಬಹುದು.
ಮನುಷ್ಯನಿಗೆ ರೋಗ ರುಜಿನಗಳು ಉಂಟಾದಾಗ ಅಂತಹವುಗಳ ಹೋಗಲಾಡಿಸುವ ದೇವತೆಗಳು ಜನ್ಮತಾಳಿದರು. ದೇವತೆಗಳನ್ನು ಭಕ್ತಿಯಿಂದ ಭಜಿಸಿ, ಪೂಜಿಸಿ ಅಭೀಷೇಕ ಮಾಡಿಸಿ ಪ್ರಸಾದ ತಿಂದರೆ ರೋಗ ಗುಣವಾಗುವುದು ಎಂಬ ನಂಬಿಕೆಯಲ್ಲಿ ಮಾತೃದೇವತೆಗಳ ಉಗಮ-(ಕರ್ನಾಟಕದ ಗ್ರಾಮದೇವತೆಗಳು.ಡಿ. ಲಿಂಗಯ್ಯ -ಪುಟ-7)
ಗ್ರಾಮ ಸಮುದಾಯದವರು ತಮ್ಮ ಸಂಪ್ರದಾಯಕ್ಕೆ ಪೂರಕವಾಗಿ ಮತ್ತು ಗ್ರಾಮದ ಪರಂಪರೆಗೆ ಅನುಸಾರವಾಗಿ ಪ್ರತಿಯೊಂದು ಗ್ರಾಮದವರು ತಮ್ಮದೇ ಆದ ದೇವತೆಗಳನ್ನು ಸೃಷ್ಠಿಸಿಕೊಂಡು ಅಂತಹ ದೇವತೆಗಳನ್ನು ಗ್ರಾಮ ದೇವತೆಗಳೆಂದು ಕರೆದರು. ಆ ದೇವತೆಗಳಿಗಾಗಿ ಸುಂದರವಾದ ದೇವಾಲಯಗಳನ್ನು ನಿರ್ಮಿಸಿದರೇ ಆ ದೇವತೆಗಳನ್ನು ಮಾರಿ, ಕಾಳಿ, ದುರ್ಗೆ, ಲಕ್ಷ್ಮೀ ಮುಂತಾದ ಹೆಸರುಗಳಿಂದ ಕರೆದು ಕಲ್ಲಿನಲ್ಲಿ ವಿಭಿನ್ನ ದೇವತೆಗಳ ಮೂರ್ತಿ ತಯಾರಾಗಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಆರಾಧಿಸಲಾರಂಭಿಸಿದರು.
ಅಲ್ಲದೇ ಕೆಲವು ಕಡೆಗಳಲ್ಲಿ ಬನ್ನಿ, ತುಳಸಿ ಗಿಡಗಳಿಗೂ ಸೀರೆ ಸುತ್ತಿ, ಕುಂಕುಮ, ವಿಭೂತಿ, ಅರಸಿನ ಹಚ್ಚಿ ದೇವತೆಗಳೇಂದೇ ಆರಾಧಿಸಲಾರಂಭಿಸಿದರು. ಅಂತಹ ದೇವತೆಗಳೇ ಗ್ರಾಮ ದೇವತೆಗಳಾದರು.
ಇಂತಹ ದೇವತೆಗಳು ದೇವಾಲಯಗಳು ಹುನಗುಂದದಲ್ಲೂ ಪ್ರತಿಯೊಂದು ಬಡಾವಣೆಗಳಲ್ಲೂ ನಿರ್ಮಾಣಗೊಂಡಿವೆ. ಆ ದೇವತೆಗಳು, ದೇವಾಲಯಗಳು ಹೇಗಿವೆ. ಪೂಜಾವಿಧಾನಗಳು ಹೇಗಿವೆ. ಎಂಬುದನ್ನು ಗುರುತಿಸುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಲಾಗಿದೆ.

ದೇವಸ್ಥಾನಗಳ ವಿವರ………

ಲಕ್ಷ್ಮೀ ದೇವಸ್ಥಾನ (ಮಲ್ಲಿಕಾರ್ಜುನ ನಗರ)
ಪಿಠೀಕೆ
ಈ ದೇವಸ್ಥಾನವು ಹುನಗುಂದ ನಗರದಲ್ಲಿಯ ಮಲ್ಲಿಕಾರ್ಜುನ ಓಣಿಯಲ್ಲಿ ಇದೆ. ಇದು ನಿರ್ಮಾಣವಾಗಿ 80 ವರ್ಷವಾಯಿತೆಂದು ತಿಳಿದುಬರುತ್ತದೆ. ಇದು ಚಲವಾದಿ ಮನೆತನದವರ ಮಾಲಿಕತ್ವದಲ್ಲಿ ಇದೆ. ಈ ವಂಶದವರೇ ಮೊದಲಿನಿಂದಲೂ ಪೊಜೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಈಗಲೂ ಅವರೇ ಪೂಜಿಸುತ್ತಾರೆ. ಇವರು ಕೊರವ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಈ ದೇವಸ್ಥಾನದ ಕಾಲಮಾನ ಸುಮಾರು 1937 ರಲ್ಲಿ ನಿರ್ಮಾಣವಾದಂತೆ ತೋರುತ್ತದೆ. ಈ ದೇವಸ್ಥಾನವನ್ನು ಈ ಕೊರವಾರ ಜನಾಂಗದವರಾದ ಚಲವಾದಿ ಎಂಬುವವರು ಇಲ್ಲಿ ಲಕ್ಷ್ಮೀ ದೇವರನ್ನು ದಿನನಿತ್ಯ ಪೂಜಿಸುತ್ತಾ ಬಂದಿದ್ದರು. ಇದನ್ನೆ ಇವರ ಪೀಳಿಗೆಯವರು ಮುಂದುವರೆಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.
ದೇವಾಲಯದ ಲಕ್ಷಣಗಳು……
ಆಕಾರ:- ಈ ದೇವಸ್ಥಾನವೂ ಕಲ್ಲಿನಿಂದ ನಿರ್ಮಿಸಲಾಗಿದೆ. ಇಲ್ಲಿ ಈ ಚಿಕ್ಕ ದೇವಸ್ಥಾನವನ್ನು ನಿರ್ಮಾಣ ಮಾಡಲು ಕೇವಲ ನಾಲ್ಕು ಕಲ್ಲುಗಳ ಸಹಾಯವನ್ನು ಪಡೆದಿದ್ದಾರೆ. ಯಾವುದೇ ರೀತಿಯ ಗುಡಿಯು ಕಂಡುಬರುವುದಿಲ್ಲ. ಈ ದೇವಸ್ಥಾನವೂ ಚಲವಾದಿ ಎಂಬುವರ ಮನೆಯವರ ಆಡಳಿತದಲ್ಲಿ ಇದೆ. ಈ ದೇವಸ್ಥಾನವೂ ಅತಿ ಚಿಕ್ಕ ದೇವಸ್ಥಾನವಾಗಿದೆ. ಇದು ಅಲ್ಲಿರುವ ಬೇವಿನ ಮರದ ಕೆಳಗಿದೆ. ಇದು ಹುನಗುಂದ ನಗರದಲ್ಲಿಯೇ ಅತಿ ಚಿಕ್ಕ ದೇವಸ್ಥಾನವಾಗಿದೆ.
ದೇವಾಲಯದ ಗರ್ಭಗುಡಿ:- ಇಲ್ಲಿ ನಾಲ್ಕು ಕಲ್ಲುಗಳ ಮಧ್ಯದಲ್ಲಿ ದೇವಿಯ ಛಾಯಾಚಿತ್ರವನ್ನಿಟ್ಟು, ಪೊಜೆ ಸಲ್ಲಿಸುತ್ತಾರೆ.
ಮೂರ್ತಿ:-ಇಲ್ಲಿ ಯಾವುದೇ ರೀತಿಯ ಕಲ್ಲುಗಳ ಮೂರ್ತಿಗಳು ಕಾಣಬರುವುದಿಲ್ಲ. ಇಲ್ಲಿ ಲಕ್ಷ್ಮೀ ದೇವಿಯ ಛಾಯಾಚಿತ್ರಕ್ಕೆ ಪೊಜೆ ಸಲ್ಲಿಸುತ್ತಾ ಬಂದಿದ್ದಾರೆ. ಲಕ್ಷ್ಮೀ ದೇವಿಯ ಛಾಯಾಚಿತ್ರದ ಎದುರಗಡೆ ಪಾದಗಟ್ಟೆ ಇದ್ದು, ದಿನಾಲೂ ಇಲ್ಲಿ ಪೊಜೆ ಸಲ್ಲಿಸುತ್ತಾರೆ. ದೇವಿಯ ಛಾಯಾಚಿತ್ರದಲ್ಲಿ 2 ಆನೆಗಳು ತಮ್ಮ ಸೊಂಡಿಲನ್ನು ಎತ್ತಿ ತಾಯಿಗೆ ನಮಸ್ಕರಿಸುವ ಭಂಗಿ ತೊರ್ಪಡಿಸುತ್ತವೆ. ದೇವಿಯ ಕಮಲದ ಮೇಲೆ ಪದ್ಮಾಸನದಲ್ಲಿ ಕುಳಿತಿರುವ ಭಂಗಿ ಕಾಣುತ್ತದೆ.
ದೇವಸ್ಥಾನದ ಹೋರನೋಟ ದೇವಿಯ ಪಾದಕಟ್ಟೆ

ಜಾತ್ರೆ:- ದೀಪಾವಳಿಯ ದಿನದಂದು ಪೊಜೆ ಮಾಡಿ ಜಾತ್ರೆ ಮಾಡುತ್ತಾರೆ. ಹೋಳಿಗೆ, ಕರಿಗಡಬು, ಅನ್ನ, ಸಾರು ಮುಂತಾದ ಖಾಧ್ಯಗಳನ್ನು ಮಾಡಿಸುತ್ತಾರೆ. ಅನ್ನ ಪ್ರಸಾದ ಇರುತ್ತದೆ. ಈ ಜಾತ್ರೆಯನ್ನು ಚಲವಾದಿ ವಂಶಜರೇ ಮಾಡಬೇಕೆಂಬ ನಿಯಮವಿದೆ. ಓಣಿಯ ಎಲ್ಲಾ ಜನತೆ ಸೇರಿ ಜಾತ್ರೇಯನ್ನು ಆಚರಿಸುತ್ತಾರೆ.
ನಂಬಿಕೆಗಳು:- ದೇವಿಯ ಮೇಲೆ ಇಲ್ಲಿಯ ಜನ ನಂಬಿಕೆ ಇಟ್ಟಿದ್ದಾರೆ. ಇದು ಚಲವಾದಿ ಎಂಬುವವರ ಮನೆಯವರ ಆರಾಧ್ಯ ಧೈವ. ಈ ಮನೆಯವರಿಗೆ ತಮ್ಮ ಆರಾಧ್ಯ ಧೈವದ ಮೇಲೆ ನಂಬಿಕೆ ಇಟ್ಟು ಪೂಜಿಸುತ್ತಾರೆ.

ಲಕ್ಷ್ಮೀ ದೇವಸ್ಥಾನ (ಮಲ್ಲಿಕಾರ್ಜುನ ನಗರ)
ಪೀಠಿಕೆ
ಈ ದೇವಸ್ಥಾನವು ಹುನುಗುಂದ ನಗರದ ಮಲ್ಲಿಕಾರ್ಜುನ ಓಣಿಯಲ್ಲಿದೆ. ಈ ದೇವಸ್ಥಾನವು ಚಿಕ್ಕದಾಗಿದೆ. ಮಂಗಟಗಿ ವಂಶಜರೇ ಈ ದೇವಿಯ ಪೊಜೆಯನ್ನು ಮಾಡುತಿದ್ದು, ಮೊದಲಿನಿಂದಲೂ ದೇವರಿಗೆ ಅವರೇ ನಂಬಿಕಸ್ಥರಾಗಿದ್ದಾರೆ. ಮೊದಲಿನಿಂದಲೂ ಈ ವಂಶಜರೇ ಈ ದೇವಿಯ ಪೂಜ್ಯಾಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಈ ದೇವಸ್ಥಾನದ ಬಗೆಗೆ ಯಾವುದೇ ರೀತಿಯ ದಾಖಲೆಗಳು ದೊರೆಯುವುದಿಲ್ಲ. ಇದೇ ವಂಶಜರೇ ಹೇಳಿದ ಮಾತಿನ ಮೇಲೆ ರೂಪಿಸಲಾಗಿದೆ.
ದೇವಾಲಯದ ಲಕ್ಷಣಗಳು……..
ದೇವಾಲಯದ ಉಗಮ:- 30-40 ವರ್ಷಗಳ ಹಿಂದೆ ಯುಗಾದಿಯ ದಿನ ಈ ದೇವಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಅಂದಿನಿಂದ ಇಂದಿನವರೆಗೂ ಮಂಗಟಗಿ ವಂಶಜರೇ ಪೂಜಿಸುತ್ತಾ ಬಂದಿದ್ದಾರೆ.
ಆಕಾರ:- ಈ ದೇವಸ್ಥಾನವು ಚೌಕಾಕಾರದಲ್ಲಿದ್ದು, ದೇವಸ್ಥಾನದ ಮೇಲ್ಭಾಗದಲ್ಲಿ ಚೌಕಾಕಾರದ ಐದು ಮೆಟ್ಟಿಲುಗಳ ಗೋಪುರ ಹೊಂದಿದೆ. ದೇವಸ್ಥಾನವನ್ನು ಇಟ್ಟಿಗೆಯಿಂದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಈ ದೇವಸ್ಥಾನವನ್ನು ಕೆಲ ವರ್ಷಗಳ ಹಿಂದಿಯೇ ಕಟ್ಟಿಸಲಾಗಿದೆ. ಇದನ್ನು ಈಗ ಯಾವುದೇ ರೀತಿಯಲ್ಲೂ ಜೀರ್ಣೋದ್ದಾರ ಮಾಡಿರುವುದು ಕಂಡುಬರುವುದಿಲ್ಲ.
ದೇವಾಲಯದ ಗರ್ಭಗುಡಿ:- ದೇವಾಲಯದ ಗರ್ಭಗುಡಿ ಅತಿ ಚಿಕ್ಕದಾಗಿದ್ದು, ಕಟ್ಟಿಗೆಯಿಂದ ಚೌಕ ಹಾಕಲಾಗಿದೆ, ಆದರೆ ಬಾಗಿಲುಗಳು ಇರುವುದಿಲ್ಲ. ದೇವಾಲಯದ ಹಿಂದೆ ಬೇವಿನ ಮರ ಇದ್ದು, ಮರಕ್ಕೆ ಪೊಜೆ ಸಲ್ಲಿಸಿ ಕೆಂಪು ಬಣ್ಣದ ಸೀರೆಯನ್ನು ಉಡಿಸುತ್ತಾರೆ.
ಮೂರ್ತಿ:- ಗರ್ಭಗುಡಿಯೊಳಗೆ ಯಾವುದೇ ರೀತಿಯ ಮೂರ್ತಿಗಳು ಇಲ್ಲ. ಆದರೆ ಒಂದು ಕಲ್ಲಿನಲ್ಲಿ ಜೋಡಿ ಹಾವಿನ ಕೆತ್ತನೆಯನ್ನು ಹೊಂದಿದೆ. ಮೂರ್ತಿಗೆ ಬೆಳ್ಳಿಯ ಕಣ್ಣುಬಟ್ಟುಗಳನ್ನು ಹಚ್ಚಿದ್ದಾರೆ. ಇಲ್ಲಿ ಯಾವುದೇ ರೀತಿಯ ದೇವಿಯ ವಿಗೃಹವಾಗಲಿ ದೇವಿಯ ಛಾಯಾಚಿತ್ರವಾಗಲಿ ಇಲ್ಲ. ಕಲ್ಲಿನಲ್ಲಿ ನಾಗಶಿಲ್ಪಕ್ಕೆ ದಿನ ನಿತ್ಯವೂ ಪೂಜೆಯನ್ನು ಸಲ್ಲಿಸುತ್ತಾರೆ. ಬೇವಿನ ಮರಕ್ಕೆ ಕೆಂಪು ಸೀರೆಯನ್ನುಡಿಸಿ ಪೂಜೆಯನ್ನು ಸಲ್ಲಿಸುತ್ತಿರುವುದರಿಂದ ಇದನ್ನು ಲಕ್ಷ್ಮೀ ಎಂದೂ ಕರೆದಿರುವ ಸಾಧ್ಯವೇ ಇದೆ.

 

ದೇವಸ್ಥಾನದ ಹೋರನೋಟ ದೇವಾಲಯದ ಗರ್ಭಗುಡಿ
ಜಾತ್ರೆ:- ದೇವಿಗೆ ದಿನಾಲೂ ನೀಲಮ್ಮ , ಮಂಗಟಗಿ ಎಂಬುವವರು ಪೊಜೆ ಸಲ್ಲಿಸುತ್ತಾ ಬಂದಿದ್ದು, ಪ್ರತಿವರ್ಷವೂ ದೇವಿಯ ಜಾತ್ರೆಯನ್ನು ದೀಪಾವಳಿ ಅಮವಾಸ್ಯೆಯ ದಿನದಂದು ಮಾಡುತ್ತಾರೆ. ಸಿಹಿ ಅಡುಗೆಯನ್ನು ಮಾಡಿಸಿ ಅನ್ನ ಪ್ರಸಾದವನ್ನು ಏರ್ಪಡಿಸುತ್ತಾರೆ.
ನಂಬಿಕೆಗಳು:- ದೇವಿಯ ಮೇಲೆ ಇವರು ಅಪಾರವಾದ ನಂಬಿಕೆ ಇಟ್ಟಿದ್ದಾರೆ, ಪವಾಡಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ದೇವಿಯೂ ಈಗಲೂ ಪವಾಡಗಳನ್ನು ಮಾಡುತ್ತಾಳೆ ಎಂದು ನಂಬಿದ್ದಾರೆ. ಅಲ್ಲದೇ ಹುನಗುಂದ ಪಟ್ಟಣದ ಅನೇಕರು ಬಂದು ನಿಷ್ಠೆಯಿಂದ ಪೂಜೆಯನ್ನು ಸಲ್ಲಿಸುತ್ತಾರೆ. ಅಲ್ಲದೇ ನಂಬಿದವರೇ ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆಂದು ಜನರು ನಂಬಿಕೆಯನ್ನಿಟ್ಟಿದ್ದಾರೆ.
ಸಮಾರೋಪ:- ಈ ದೇವಿಯ ಮೇಲೆ ಮಂಗಟಗಿ ಮನೆತನದವರು ಅಪಾರವಾದ ನಂಬಿಕೆ ಇಟ್ಟಿದ್ದಾರೆ. ದೇವಿಯು ಇಂದಿಗೂ ಪವಾಡಗಳನ್ನೂ ಮಾಡುತ್ತಾಳೆ ಎಂದೂ ನಂಬಿದ್ದಾರೆ. ಈ ದೇವಸ್ಥಾನಕ್ಕೆ ಸಾಮಾನ್ಯವಾಗಿ ಆ ಓಣಿಯಲ್ಲಿರುವ ಎಲ್ಲ ಸಮುದಾಯದವರೂ ನಿಷ್ಠೆಯಿಂದ ಪೂಜೆಯನ್ನು ಸಲ್ಲಿಸುತ್ತಾರೆ. ಯಾವುದೇ ರೀತಿಯ ಭೇಧ-ಭಾವ ಇರುವುದಿಲ್ಲ.
ಲಕ್ಷ್ಮೀ ದೇವಸ್ಥಾನ ( ಬಾರಕೇರ್ ಓಣಿ)
ಪೀಠಿಕೆ
ಇದು ಹುನಗುಂದ ನಗರದ ಬಾರಕೇರ ಓಣಿಯಲ್ಲಿ ಇನ್ನೋಂದು ಲಕ್ಷ್ಮೀಯ ದೇವಸ್ಥಾನವಿದ್ದು, ಈ ಓಣಿಯಲ್ಲಿರುವ ಎಲ್ಲ ಸಮುದಾಯದವರು ಭೇಧ-ಭಾವವಿಲ್ಲದೇ ಎಲರೂ ಪೂಜಿಸುತ್ತಾರೆ.
ದೇವಾಲಯದ ಲಕ್ಷಣಗಳು………
ಆಕಾರ:- ಈ ದೇವಾಲಯದ ವಾಸ್ತುವನ್ನು ಅವಲೋಕಿಸದರೆ ಇತ್ತಿಚೆಗೆ ನಿರ್ಮಾಣವಾದಂತೆ ತೋರುತ್ತದೆ. ಇದು ಚಿಕ್ಕದಾದ ಕಟ್ಟಡವನ್ನು ಹೊಂದಿದ್ದು, ಇದರ ಹಿಂದೆ ಅರಳಿ ಮರವಿದೆ. ದೇವಸ್ಥಾನದ ಆಕಾರವೂ ಆಯತಾಕಾರವಾಗಿದ್ದು ದೇವಸ್ಥಾನದ ಮುಂದುಗಡೆ ಪತರಾಸಿನಿಂದ ನೆರಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ದೇವಸ್ಥಾನವನ್ನು ಇಲ್ಲಿಯ ಸ್ಥಳೀಯ ಜನರು ಒಂದುಗೂಡಿ ಕಟ್ಟಿಸಿದ್ದಾರೆ ಎನ್ನಲಾಗಿದೆ. ದೇವಸ್ಥಾನವೂ ಚಿಕ್ಕದಾಗಿದ್ದು, ದೇವಸ್ಥಾನದ ಆಕಾರವೂ ಆಯತಾಕಾರವಾಗಿದ್ದು, ಮೇಲ್ಭಾಗದಲ್ಲಿ ಮೆಟ್ಟಿಲುಗಳ ಗೋಪುರ ಹೊಂದಿದೆ.
ದೇವಸ್ಥಾನದ ಗರ್ಭಗುಡಿ:- ದೇವಸ್ಥಾನದ ಗರ್ಭಗುಡಿಯೂ ಅತ್ಯಂತ ಚಿಕ್ಕದಾಗಿದ್ದು, ಗರ್ಭಗುಡಿಯೂ ಚೌಕಾಕಾರದಲ್ಲಿದೆ. ಗರ್ಭಗುಡಿಗೆ ಚಿಕ್ಕದಾದ ಕಬ್ಬಿಣ ಸಲಾಕೆಗಳ ಬಾಗಿಲುಗಳು ಇದ್ದು, ಅದರ ಸುತ್ತ ಚಿಕ್ಕದಾದ ದೀಪಗಳ ಕಂಬಿಗಳನ್ನು ಮಾಡಿಸಿದ್ದಾರೆ. ಗರ್ಭಗುಡಿಯ ಒಳಗೆ ಲಕ್ಷ್ಮೀ ದೇವಿಯ ಛಾಯಾಚಿತ್ರ ಇಟ್ಟು ಪೊಜೆ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ರೀತಿಯಾದ ಕಲ್ಲಿನ ವಿಗ್ರಹಗಳು ಕಂಡು ಬರುವುದಿಲ್ಲ. ಇಲ್ಲಿ ದೇವಿಗೆ ದಿನ ನಿತ್ಯವೂ ಪೊಜೆ ಸಲ್ಲಿಸುತ್ತಾರೆ. ಈ ಮನೆತನದವರೇ ಪೊಜೆ ಸಲ್ಲಿಸಬೇಕೆಂಬ ನಿಯಮವಿಲ್ಲ ಓಣಿಯ ಜನತೆ ದಿನಾಲೂ ಬಂದು ದೀಪ ಬೇಳಗಿಸುತ್ತಾರೆ. ದೇವಸ್ಥಾನದ ಗರ್ಭಗುಡಿಯ ಮೇಲೆ ನಾಲ್ಕು ಮೆಟ್ಟಿಲುಗಳನ್ನು ಮಾಡಿದ್ದಾರೆ. ದೇವಸ್ಥಾನವನ್ನು ಇಟ್ಟಿಗೆಯಿಂದ ಕಟ್ಟಲಾಗಿದೆ. ಬಣ್ಣದಿಂದ ಅಲಂಕರಿಸಿದ್ದಾರೆ. ಗರ್ಭಗುಡಿಯ ಸುತ್ತಲೂ ಮುಂದೆ ದೀಪಗಳನ್ನು ಇಡಲು ಕಬ್ಬಿಣ ಸಲಾಕೆಗಳ ಸಹಾಯ ಪಡೆದಿದ್ದಾರೆ.

ದೇವಸ್ಥಾನದ ಹೋರನೋಟ ದೇವಾಲಯದ ಗರ್ಭಗುಡಿ
ಜಾತ್ರೆ:- ಈ ದೇವಸ್ಥಾನವನ್ನು ಯಾರೂ ಸ್ಥಾಪನೆ ಮಾಡಿದರು ಎಂಬ ಮಾಹಿತಿ ದೊರೆಯುವುದಿಲ್ಲ. ಮತ್ತು ಲಕ್ಷ್ಮೀಯ ಜಾತ್ರೆಯನ್ನು ಶ್ರಾವಣ ಮಾಸದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾಡುತ್ತಾರೆ. ಅದರ ವೆಚ್ಚವನ್ನು ಓಣಿಯ ಜನತೆಯೇ ಭರಿಸುತ್ತಾರೆ. ಜಾತ್ರೆಯ ದಿನದಂದು ಇಲ್ಲಿ ಸಿಹಿ ಅಡುಗೆ ಮಾಡಿಸುತ್ತಾರೆ. ಅನ್ನದಾನ ಮಾಡುತ್ತಾರೆ. ಎಲ್ಲಾ ಓಣಿಯ ಜನತೆ ಸೇರಿ ವಿಜೃಂಭನೆಯಿಂದ ಜಾತ್ರೆ ಆಚರಿಸುತ್ತಾರೆ.
ನಂಬಿಕೆಗಳು:- ಜನರಿಗೆ ಈ ದೇವರ ಮೇಲೆ ಅಚಲವಾದ ನಂಬಿಕೆ ಇದೆ ಮತ್ತು ದೇವಿ ತಮ್ಮನ್ನು ಇಂದಿಗೂ ಕಾಯುತ್ತಾ ಕಾಪಾಡುತ್ತಿದ್ದಾಳೆ ಎಂಬುವುದು ಇಲ್ಲಿಯ ಸ್ಥಳೀಯ ಜನರ ನಂಬಿಕೆ.
ಸಮಾರೋಪ:- ಈ ದೇವಸ್ಥಾನವೂ ಹುನುಗುಂದದಲ್ಲಿ ನೆಲೆಸಿದ ಒಂದು ವಿಷಿಷ್ಠವಾದ ದೇವಿಯ ದೇವಸ್ಥಾನವು ಎಲ್ಲಾ ಜನರ ಒಂದೂಗೂಡಿ ದೇವಿಯನ್ನು ಆರಾಧಿಸುತ್ತಾರೆ. ಇಲ್ಲಿ ಪ್ರತಿಯೊಬ್ಬರು ಓಣಿಯವರು ಪೂಜೆಯನ್ನು ಸಲ್ಲಿಸುತ್ತಾರೆ. ದೇವಿಯ ಆರಾಧಕರಾಗಿದ್ದಾರೆ.

ನೀಲಗಂಗಾ ದೇವಸ್ಥಾನ (ಕುಂಬಾರ ಓಣಿ)
ಪೀಠಿಕೆ
ಇದು ಹುನಗುಂದ ನಗರದ ಕುಂಬಾರ (ಕೆಳಗಿನ ಪೇಟೆ) ಓಣಿಯಲ್ಲಿದೆ. ಇದನ್ನು ಶಕ 1902 ಅಂದರೆ ದಿನಾಂಕ 8/9/1980 ರಲ್ಲಿ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ ದಾಖಲೆ ಇದೆ. ಈ ದೇವಸ್ಥಾನದ ಹಿಂದೆ ಕಳಸದ ಬಾವಿ ಇದ್ದು, ಬಾವಿಗೂ ದೇವಸ್ಥಾನಕ್ಕೂ ಯಾವುದೇ ರೀತಿಯ ಸಂಭಂಧ ಇಲ್ಲ ಎನ್ನುತ್ತಾರೆ. ಈ ದೇವಿಯನ್ನು ಲಿಂಗಾಯತ ಜನಾಂಗದವರು ಪೂಜಿಸುತ್ತಾರೆ.
ದೇವಸ್ಥಾನ ಸ್ಥಾಪನೆ:- ಈ ದೇವಸ್ಥಾನವೂ ಪ್ರಾಚೀನ ಕಾಲದಿಂದಲೂ ಇಲ್ಲಿಯೆ ನೆಲೆಸಿದೆ, ದೇವಿಯ ಸ್ಥಾಪನೆ ಇಸ್ವಿ 8/9/1980 ಶಕೆ 1902 ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇವಿಯನ್ನು ಲಿಂಗಾಯತ ಜನಾಂಗದವರೇ ಪೊಜೆ ಸಲ್ಲಿಸಬೇಕೆಂಬ ನಿಯಮವಿದೆ.
ದೇವಸ್ಥಾನದ ಲಕ್ಷಣಗಳು………
ಆಕಾರ:- ಈ ದೇವಸ್ಥಾನವೂ ಚೌಕಾಕಾರದಲ್ಲಿದ್ದು, ಕಲ್ಲಿನಿಂದ ಕಟ್ಟಲಾಗಿದೆ. ದೇವಸ್ಥಾನದ ಮೇಲ್ಭಾಗದಲ್ಲಿ ಆನೆಯ ಸೊಂಡಿಲಿನ ಚಿತ್ತಾರವನ್ನು ಬಿಡಿಸಿದ್ದಾರೆ. ಮತ್ತು ತಾವರೆ ಹೂವಿನ ಆಕಾರದ ಕಿಂಡಿಗಳನ್ನು ಬಿಟ್ಟಿದ್ದಾರೆ. ದೇವಸ್ಥಾನದ ಬಾಗಿಲಿನ ಮೇಲೆ ಕಪ್ಪು ಕಲ್ಲಿನ ಮೇಲೆ ದೇವಸ್ಥಾನದ ಸ್ಥಾಪನೆ ಮತ್ತು ಶಕೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ದೇವಸ್ಥಾನಕ್ಕೆ ಹೊರಗಡೆ ಚಿಕ್ಕದಾದ ಗೇಟಗಳನ್ನು ಮಾಡಿದ್ದು, ದೇವಸ್ಥಾನದ ಬಲಗಡೆ ಭಾಗದ ಸುತ್ತ ಕಬ್ಬಿಣ ಸಲಾಕೆಗಳಿಂದ ಬಂದೋಬಸ್ತ ಮಾಡಿದ್ದಾರೆ.
ದೇವಸ್ಥಾನದ ಗರ್ಭಗುಡಿ:- ದೇವಸ್ಥಾನದ ಗರ್ಭಗುಡಿಯೂ ಚಿಕ್ಕದಾಗಿದೆ. ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿ ಕಲಾ ಚಿತ್ರವನ್ನು ಬಿಡಿಸಿದ್ದಾರೆ. ಬಾಗಿಲಿನ ಮೇಲೆ ಬಲ ಭಾಗದಲ್ಲಿ ಅರ್ಧಚಂದ್ರನ ಚಿತ್ರ ಬಿಡಿಸಿದ್ದು, ಎಡ ಭಾಗದಲ್ಲಿ ಸೂರ್ಯನ ಚಿತ್ರವನ್ನು ಬಿಡಿಸಿದ್ದಾರೆ. ಮದ್ಯದಲ್ಲಿ ತಾವರೆ ಹೂವಿನ ಚಿತ್ರವನ್ನು ಕೆತ್ತಲಾಗಿದೆ. ಬಾಗಿಲಿನ ಮೇಲೆ ವಿವಿಧ ರೀತಿಯ ಕಲಾಕೃತಿಗಳನ್ನು ಕೆತ್ತಲಾಗಿದೆ.

ದೇವಸ್ಥಾನದ ಹೋರನೋಟ
ಮೂರ್ತಿ:- ದೇವಿಯ ಮೂರ್ತಿಯನ್ನು ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿದೆ. ದೇವಿಯ ವಿಗ್ರಹದ ಮೇಲೆ ನರಸಿಂಹನ ಮೂರ್ತಿಯನ್ನು ಕೆತ್ತಲಾಗಿದೆ. ದೇವಿಗೆ ಶಿಲ್ಪದ ಸುತ್ತ ದೇವಿಗೆ ಕಮಾನನನ್ನು ಶಿಲ್ಪದಲ್ಲಿ ಕೆತ್ತಲಾಗಿದೆ. ದೇವಿಗೆ ಹಸಿರು ಬಣ್ಣದ ಸೀರೆಯನ್ನು ತೊಡಿಸಿದ್ದಾರೆ. ದೇವಿಗೆ ಹೂವಿನಿಂದ ಅಲಂಕಾರ ಮಾಡಿದ್ದಾರೆ.

ದೇವಿ ಮೂರ್ತಿ:
ಜಾತ್ರೆ:- ಈ ದೇವಸ್ಥಾನದ ಪೊಜೆಯನ್ನು ಕೆಲೂರು ವಂಶಜರೇ ಮಾಡಿಕೊಂಡು ಬರುತ್ತಿದ್ದಾರೆ ಈಗ ಮಲ್ಲಯ್ಯ ಕೆಲೂರು ಎಂಬುವರು ಈ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಈ ದೇವಸ್ಥಾನಕ್ಕೆ ಲಿಂಗಾಯತ ಜಾತಿಯವರೇ ಪೊಜೆ ಸಲ್ಲಿಸಬೇಕೆಂಬ ಸಂಪ್ರದಾಯವಿದೆ. ಓಣಿಯ ಎಲ್ಲಾ ಜನತೆಯೂ ಸೇರಿ ಗೌರಿ ಹುಣ್ಣಿಮೆಯ ದಿನದಂದು ಜಾತ್ರೆಯನ್ನು ಮಾಡುತ್ತಾರೆ. ಜಾತ್ರೆಯ ದಿನ ಸಿಹಿ ಊಟವನ್ನೂ ಮಾಡಿಸಲಾಗಿರುತ್ತದೆ. ಮುಖ್ಯವಾಗಿ ಹೋಳಿಗೆ, ಅನ್ನ, ಸಾರು ಮುಂತಾದ ಖಾದ್ಯಗಳನ್ನು ದೇವರಿಗೆ ನೈವೇದ್ಯ ನೀಡುತ್ತಾರೆ. ಜಾತ್ರೆಯ ದಿನದಂದು ಅನ್ನ ಪ್ರಸಾದವನ್ನು ಮಾಡಿರುತ್ತಾರೆ. ಯಾವುದೇ ರೀತಿಯ ಭೇಧ-ಭಾವವಿಲ್ಲದೆ ಎಲ್ಲ ಜನರೂ ಒಂದು ಗೂಡಿ ಜಾತ್ರೆಯನ್ನು ಮಾಡುತ್ತಾರೆ.
ಲಕ್ಷ್ಮೀ ದೇವಸ್ಥಾನ (ಮೇಗಲಪೇಟೆ)
ಪೀಠಿಕೆ
ಈ ದೇವಸ್ಥಾನವು ಹುನಗುಂದ ನಗರದ ಮೇಗಲಪೇಟಯ ವಡ್ಡರ ಓಣಿಯಲ್ಲಿದೆ. ಇದರಲ್ಲಿ ಯಾವುದೇ ವಿಗ್ರಹÀವಿರುವುದಿಲ್ಲ. ದೇವಸ್ಥಾನದ ಕಟ್ಟಡವು ಚಿಕ್ಕದಾಗಿ ಕೆಲ ವರ್ಷಗಳ ಹಿಂದೆ ಕಟ್ಟಲಾಗಿದ್ದು, ದೇವಿಯ ದೇವಸ್ಥಾನ ದೊಡ್ಡದಾಗಿ ಕಟ್ಟಲೆಂದು ದೇವಸ್ಥಾನದ ಹಿಂದೆ ವಡ್ಡರ ಜನಾಂಗದವರು ತಮ್ಮ ಜಾಗ ಬಿಟ್ಟಿದ್ದಾರೆ. ದೇವಸ್ಥಾನವೂ ಚೌಕಾಕಾರದಲ್ಲಿದ್ದು, ದೇವಸ್ಥಾನಕ್ಕೆ ಬಣ್ಣಗಳಿಂದ ಅಲಂಕಾರ ಮಾಡಿದ್ದಾರೆ. ದೇವಸ್ಥಾನದ ಮೇಲೆ 8 ದಳಗಳ ಹೂವಿನ ಅಲಂಕಾರವನ್ನು ಮಾಡಲಾಗಿದೆ.
ದೇವಸ್ಥಾನದ ಲಕ್ಷಣಗಳು………
ದೇವಾಲಯದ ಆಕಾರ:- ದೇವಸ್ಥಾನವೂ ಚೌಕಾಕಾರದಲ್ಲಿದ್ದು ಚಿಕ್ಕದಾದ ಕಟ್ಟಡವನ್ನೂ ಹೊಂದಿದೆ. ದೇವಸ್ಥಾನದ ,ಮೇಲ್ಭಾದಲ್ಲಿ ತಾವರೆ ಹೂವಿನ ಆಕಾರದಲ್ಲಿ ಅರಳಿರುವ ಹೂವಿನ ಗೋಪುರವನ್ನು ಮಾಡಿದ್ದಾರೆ.
ದೇವಾಲಯದ ಗರ್ಭಗುಡಿ:- ದೇವಸ್ಥಾನದ ಬಾಗಿಲು ಚೌಕಾಕಾರದಲ್ಲಿದ್ದು ಕಟ್ಟಿಗೆಯಿಂದ ಮಧ್ಯ ಕಬ್ಬಿಣದ ಸಲಾಕೆಗಳನ್ನು ಕೂಡಿ ಬಾಗಿಲನ್ನು ನಿರ್ಮಿಸಲಾಗಿದೆ.
ಮೂರ್ತಿ:- ದೇವಸ್ಥಾನದ ಗರ್ಭಗುಡಿಯೊಳಗೆ ಕಪ್ಪುಕಲ್ಲಿನ ಐದು ಗುಂಡು ಕಲ್ಲುಗಳಿಗೆ ಪೊಜೆ ಸಲ್ಲಿಸುತ್ತಿದ್ದು ಅದಕ್ಕೆ ದಿನಾಲೂ ಹೂವಿನಿಂದ ಅಲಂಕಾರ ಮಾಡಿ ಪೂಜೆಯನ್ನು ಸಲ್ಲಿಸುತ್ತಾರೆ. ದೀಪವನ್ನು ಬೆಳಗಿಸುತ್ತಾರೆ.
ದೇವಸ್ಥಾನದ ಹೋರನೋಟ ದೇವಾಲಯದ ಗರ್ಭಗುಡಿ
ಜಾತ್ರೆ:- ದೇವಿಯ ಪೊಜೆಯನ್ನು ಓಣಿಯಲ್ಲಿ ಇರುವ ಜನತೆ ಮಾಡುತ್ತಾರೆ. ಇದೇ ಜಾತಿಯವರೇ ಪೊಜೆ ಸಲ್ಲಿಸಬೇಕೆಂಬ ನಿಯಮವಿಲ್ಲ. ಇಲ್ಲಿ ಯಾವುದೇ ರೀತಿಯ ದೇವಿಯ ಜಾತ್ರೆ ನಡೆಯುವುದಿಲ್ಲ. ಮುಂದೆ ಜಾತ್ರೆಯನ್ನು ಮಾಡಲು ಪ್ರಯತ್ನಿಸುವುದಾಗಿ ಇಲ್ಲಿನ ಸ್ಥಳೀಯರು ಹೇಳಿದ್ದಾರೆ.
ಇಲ್ಲಿ ಮುಖ್ಯವಾಗಿ ಅಮವಾಸ್ಯೆ ಮತ್ತು ಹುಣ್ಣಿಮೆ ದಿನದಂದು ವಿಷೇಶ ಪೊಜೆ ಮಾಡಿ ದೇವರಿಗೆ ಸಿಹಿ ಊಟದ ನೈವೇದ್ಯ ಇಡುತ್ತಾರೆ.
ನಂಬಿಕೆಗಳು:- ಇಲ್ಲಿಯ ಜನರು ಲಕ್ಷ್ಮೀ ದೇವಿಯ ಮೇಲೆ ಅಪಾರ ನಂಬಿಕೆ ಇದೆ.
ಸಮಾರೋಪ:- ಈ ಓಣಿಯ ಜನರು ಈ ದೇವಿಯ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ಮತ್ತು ದೇವಿಗೆ ಇಲ್ಲಿಯ ಓಣಿಯ ಸರ್ವಸಮುದಾಯದವರು ಪೂಜೆಯನ್ನು ಸಲ್ಲಿಸುತ್ತಾರೆ.
ಲಕ್ಷ್ಮೀ ದೇವಸ್ಥಾನ (ಮೇಗಲ ಪೇಟೆ)
ಪೀಠೀಕೆ
ಇದು ಹುನಗುಂದ ನಗರದಲ್ಲಿ ಇರುವ ಮೆಗಲಪೇಟೆ ಓಣಿಯಲ್ಲಿದೆ. ಈ ದೇವಸ್ಥಾನವೂ ಬಹು ದಿನಗಳ ಹಿಂದೆ ನಿರ್ಮಿಸಿದ್ದಾರೆಂದು ಇಲ್ಲಿಯ ಸ್ಥಳಿಯರು ಹೆಳುತ್ತಾರೆ. ಈ ದೇವಸ್ಥಾನದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ. ಇಲ್ಲಿಯ ಓಣಿಯ ಜನರು ಈ ದೇವರ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ಇಲ್ಲಿ ಪ್ರತಿ ನಿತ್ಯವೂ ದೇವರಿಗೆ ಜಾತಿಯ ಭೇಧ-ಭಾವ ಇಲ್ಲದೇ ಎಲ್ಲ ಜಾತಿಯವರು ಸೇರಿ ಪೊಜೆ ಸಲ್ಲಿಸುತ್ತಾರೆ.
ದೇವಾಲಯದ ಲಕ್ಷಣಗಳು…….
ಆಕಾರ:- ಅತಿ ಚಿಕ್ಕದಾದ ದೇವಸ್ಥಾನ ಚೌಕಾಕಾರದಲ್ಲಿದೆ. ಕೆಲ ವರ್ಷಗಳ ಹಿಂದೆ ನಿರ್ಮಾಣವಾದ ದೇವಸ್ಥಾನವಾಗಿದೆ. ದೇವಸ್ಥಾನದ ಹೊರಗೋಡೆಯ ಮೇಲ್ಮೈಯ ಮೇಲೆ ದೀಪಗಳ ಅಲಂಕಾರದ ಗಣೇಶನ ಮೂರ್ತಿಯ ಛಾಯಾಚಿತ್ರವನ್ನು ಅಂಟಿಸಿದ್ದಾರೆ. ಬಲಭಾಗದಲ್ಲಿಯೂ ಇದೇ ರೀತಿ ಅಂಟಿಸಿದ್ದಾರೆ.
ದೇವಸ್ಥಾನದ ಗರ್ಭಗುಡಿ:- ದೇವಸ್ಥಾನದ ಬಾಗಿಲು ದೊಡ್ಡದಾಗಿದ್ದು, ಕಟ್ಟಿಗೆಯ ಮೇಲೆ ಕಲಾಕಾರರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಬಾಗಿಲಿನ ಮೇಲೆ ಹೂವಿನ ಚಿತ್ರವನ್ನು ಬಿಡಿಸಿದ್ದಾರೆ. ಬಾಗಿಲುಗಳು ಕಬ್ಬಿಣದ ಸಲಾಕೆಗಳನ್ನು ಒಳಗೊಂಡು ನಿರ್ಮಾಣವಾಗಿವೆ.
ಮೂರ್ತಿ:- ದೇವಿಯ ಮೂರ್ತಿಯನ್ನು ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿದೆ. ದೇವಿಯು ಪದ್ಮಾಸನದಲ್ಲಿ ಕಮಲದ ಮೇಲೆ ಕುಳತ್ತಿದ್ದು ದ್ವಿಭುಜದವಳಾಗಿದ್ದಾಳೆ. ಎರಡು ಹಸ್ತಗಳಿದ್ದು ಒಂದು ಹಸ್ತ ಆಕಾಶದೆಡೆಗೆ ಇನ್ನೋದು ಹಸ್ತ ಭೂಮಿಯ ಕಡೆಗೆ ತೋರಿಸುತ್ತವೆ. ದೇವಿಯ ಕೊರಳಲ್ಲಿ ಆಭರಣಗಳಾಗಿ ಹಲವಾರು ರೀತಿಯ ಸರಗಳನ್ನು ಕೆತ್ತಲಾಗಿದೆ. ದೇವಿಗೆ ಬೆಳ್ಳಿಯ ಕಿರೀಟ ಧಾರಣೆಯನ್ನು ಮಾಡಿದ್ದಾರೆ. ಮತ್ತು ಕಣ್ಣುಗಳಿಗೆ ಬೆಳ್ಳಿಯ ಕಣ್ಣುಗಳನ್ನು ತೋಡಿಸಿದ್ದಾರೆ. ದೇವಿಯ ಮೂರ್ತಿಯೂ ನೋಡಲು ಬಹಳ ಆಕರ್ಷಿಣಿಯವಾಗಿದೆ.
ದೇವಿಯ ಮೂರ್ತಿಯ ಮುಂದೆ ಕಪ್ಪು ಚಿಕ್ಕ ಚಿಕ್ಕ ಕಲ್ಲುಗಳನ್ನು ಇಟ್ಟಿದ್ದು, ಅವುಗಳನ್ನು ಪೂಜಿಸಿತ್ತಿದ್ದಾರೆ. ದೇವಿಗೆ ಹಸಿರು ಬಣ್ಣದ ಸೀರೆಯನ್ನು ಉಡಿಸಿರುತ್ತಾರೆ.

ದೇವಸ್ಥಾನದ ಹೋರನೋಟ ದೇವಾಲಯದ ಗರ್ಭಗುಡಿ
ಜಾತ್ರೆ:- ಲಕ್ಷ್ಮೀ ದೇವಿಯ ಪೊಜೆಯನ್ನು ರಾಮಪ್ಪ ಕುರಿ ಎಂಬುವರು ಮಾಡುತ್ತಿದ್ದಾರೆ. ಮೊದಲು ಓಣಿಯಲ್ಲಿಯ ಜನರು ಪೊಜೆಯನ್ನು ಮಾಡುತ್ತಿದ್ದರು ಇಲ್ಲಿ ದೇವಿಯ ಜಾತ್ರೆಯನ್ನು ದೀಪಾವಳಿ ದಿನದಂದು ಸಂಪ್ರದಾಯದಂತೆ ದೇವಿಯ ಪೊಜೆಯನ್ನು ಮಾಡುತ್ತಾರೆ. ಜಾತ್ರೆಯ ದಿನದಂದು ಸಿಹಿ ಅಡುಗೆ ಮಾಡಿಸುತ್ತಾರೆ. ಮುಖ್ಯವಾಗಿ ಹೋಳೀಗೆ, ಹುಗ್ಗಿ, ಅನ್ನ, ಸಾರು ಮುಂತಾದ ಖಾದ್ಯಗಳನ್ನು ಮಾಡುತ್ತಾರೆ. ಮತ್ತು ಇಲ್ಲಿ ಅನ್ನದಾನವನ್ನೂ ಸಹ ಮಾಡುತ್ತಾರೆ. ಇಲ್ಲಿ ಯಾವ ರೀತಿಯ ಜಾತಿ ಭೇಧ-ಭಾವ ಇಲ್ಲದೇ ಎಲ್ಲರೂ ಸಮಾನ ರೀತಿಯಲ್ಲಿ ಪೊಜೆ ಸಲ್ಲಿಸುತ್ತಾರೆ.
ನಂಬಿಕೆಗಳು:- ಜನರಿಗೆ ಈ ದೇವರ ಮೇಲೆ ಅಪಾರ ನಂಬಿಕೆ ಇದೆ. ಎಲ್ಲ ಸಮುದಾಯದ ಜನರೂ ಒಂದುಗೂಡಿ ಜಾತಿ ಭೇಧ-ಭಾವವಿಲ್ಲದೇ ದೇವಿಯ ಆರಾಧನೆಯನ್ನು ಮಾಡುತ್ತಾರೆ.

ದ್ಯಾಮವ್ವ ( ಸಂಗಮೇಶ್ವರ ಓಣಿ)
ಪಿಠೀಕೆ
ಇದು ಹುನಗುಂದ ನಗರದ ಸಂಗಮೇಶ್ವರ ಓಣಿಯಲ್ಲಿದೆ. ಇದು ಹೆಚ್ಚು ಪ್ರಶಸ್ತವಾದ ಸ್ಥಾನವನ್ನು ಹೊಂದಿದ ದೇವಿಯ ದೇವಸ್ಥಾನವಾಗಿದೆ. ಒಂದು ಐತಿಹ್ಯದ ಪ್ರಕಾರ ತಿಮ್ಮಾಪೂರದಿಂದ ಬಂದು ಇಲ್ಲಿ ನೆಲೆಸಿದ್ದಾಳೆ ಎಂದೂ ಸ್ಥಳೀಯರು ಹೇಳುತ್ತಾರೆ. ಈ ದೇವಸ್ಥಾನವೂ ಹುನಗುಂದ ನಗರದಲ್ಲಿಯೇ ಮಾತೃ ದೇವತೆಗಳ ದೇವಾಲಯಗಳಲ್ಲಿ ಅತಿ ದೊಡ್ಡದಾದ ದೇವಸ್ಥಾನವಾಗಿದೆ. ಈ ದೇವಸ್ಥಾನವೂ ಸಂಗಮೇಶ್ವರ ಗುಡಿಗೆ ಪಶ್ಚಿಮ ಮುಖ್ಯದ್ವಾರವನ್ನು ಹೊಂದಿದೆ.
ದೇವಾಲಯದ ಲಕ್ಷಣಗಳು……..
ಆಕಾರ:- ಈ ದೇವಸ್ಥಾನವೂ ಹುನಗುಂದ ನಗರದಲ್ಲಿಯೇ ಅತಿ ಹೆಚ್ಚು ಹೆಸರುವಾಸಿಯಾದ ದೇವಸ್ಥಾನವಾಗಿದೆ. ದೇವಸ್ಥಾನವೂ ದೊಡ್ಡದಾದ ಜಾಗವನ್ನು ಹೊಂದಿದೆ. ದೇವಸ್ಥಾನಕ್ಕೆ ಹೋಗಲು ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ದೇವಸ್ಥಾನದ ಎದುರುಗಡೆ ದೇವಿಯ ಪಾದುಕೆಗಳನ್ನು ಕಲ್ಲುಗಳಿಂದ ಕೆತ್ತಿದ್ದಾರೆ. ಈ ದೇವಸ್ಥಾನವೂ ಗ್ರಾಮದ ಒಳಗಡೆ ಇದೆ. ಈ ದೇವಸ್ಥಾನವನ್ನು ಕಲ್ಲಿನಿಂದ ಕಟ್ಟಲಾಗಿದೆ. ಕೆಲ ವರ್ಷಗಳ ಹಿಂದೆ ಕಟ್ಟಿಸಿದ ದೇವಸ್ಥಾನವಾಗಿದೆ. ಇಲ್ಲಿಯ ಸ್ಥಳೀಯರು ದೇವಿಯ ಪವಾಡಗಳನ್ನು ನಂಬುತ್ತಾರೆ. ದೇವಾಲಯದ ಆಕಾರವೂ ಚೌಕಾಕಾರವಾಗಿದ್ದು ದೇವಾಲಯಕ್ಕೆ ದೊಡ್ಡ ಘಂಟೆಗಳನ್ನು ಜೋಡಿಸಿದ್ದಾರೆ.
ದೇವಸ್ಥಾನದ ಗರ್ಭಗುಡಿ:- ದೇವಸ್ಥಾನದ ಗರ್ಭಗುಡಿ ದೊಡ್ಡದಾಗಿದ್ದು, ದೇವಿಯ ಮೂರ್ತಿಯೂ ದೊಡ್ಡದಾಗಿದೆ. ದೇವಸ್ಥಾನದ ಗರ್ಭಗುಡಿಯ ಬಾಗಿಲು ದೊಡ್ಡದಾಗಿದೆ. ಜನರು ದೇವಿಯ ವಿಕ್ಷಣೆಯನ್ನು ಮಾಡಲೂ ಅನುಕೂಲಕರವಾಗಿದೆ.
ಮೂರ್ತಿ:- ದೇವಿಯ ವಿಗ್ರಹವನ್ನೂ ಕಟ್ಟಿಗೆಯಿಂದ ಮಾಡಲಾದ ಮೂರ್ತಿಯಾಗಿದೆ. ಇದು ಆರು ಕೈಗಳನ್ನು ಹೊಂದಿದ ವಿಗ್ರಹವಾಗಿದೆ. ದೇವಿಯು ಸಿಂಹದ ಮೇಲೆ ಕುಳಿತಿರುವ ಭಂಗಿಯಲ್ಲಿದೆ. ಬಲಗೈಗಳಲ್ಲಿ ಶಂಕು, ಹಾವು ಮತ್ತು ಎಡಗೈಗಳಲ್ಲಿ ತ್ರಿಶೂಲ ಕತ್ತಿಯನ್ನು ಹಿಡಿದಿದ್ದಾಳೆ. ದೇವಿಗೆ ಕಡು ಕೇಸರಿಯ ಬಣ್ಣವನ್ನು ಲೇಪಿಸಿದ್ದಾರೆ. ದೇವಿಗೆ ಕಡು ಹಸಿರು ಬಣ್ಣದ ಸೀರೆಯನ್ನು ಉಡಿಸಿರುತ್ತಾರೆ.

ದೇವಿ ಮೂರ್ತಿ:
ಮೂರ್ತಿಯ ಬಲ ಎಡ ಬದಿಗಳಳಲ್ಲಿ ಎರಡು ಚಿಕ್ಕ ಮೂರ್ತಿಗಳಿದ್ದು , ಅವು ಕೂಡ ಕಟ್ಟಿಗೆಯಿಂದ ಮಾಡಲ್ಪಟ್ಟ ಮೂರ್ತಿಗಳಾಗಿವೆ. ಕುದುರೆಯ ಮೇಲೆ ಕುಳಿತಿರುವ ಭಂಗಿಯಲ್ಲಿದೆ.
ಜಾತ್ರೆ:- ಮಾನಪ್ಪ , ಭೀಮಪ್ಪ, ಬಡೀಗೇರ್ ಎಂಬುವವರು ಈ ದೇವಿಗೆ ಪೊಜೆ ಸಲ್ಲಿಸುತ್ತಿದ್ದಾರೆ. ಇವರ ವಂಶಜರೇ ಮೊದಲಿನಿಂದಲೂ ಪೊಜೆ ಸಲ್ಲಿಸುತ್ತಾ ಬಂದಿದ್ದಾರೆ. ಇಲ್ಲಿ ಪೊಜೆಯನ್ನು ದಿನಾಲೂ ಮಾಡುತ್ತಿದ್ದಾರೆ. ಜಾತ್ರೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದು, ಇಲ್ಲಿ ಸಿಹಿ ಪದಾರ್ಥಗಳ ಅಡುಗೆಯನ್ನು ಮಾಡುತ್ತಾರೆ ಮುಖ್ಯವಾಗಿ ಹೋಳಿಗೆ, ಅನ್ನ, ಸಾರು, ಮುಂತಾದ ಸಿಹಿ ಖಾದ್ಯಗಳನ್ನು ಮಾಡುತ್ತಾರೆ, ದೇವಿಗೆ ಅಪಾರ ಭಕ್ತ ಸಮೂಹವಿದ್ದು ನೆರೆ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕೆ ಭಕ್ತರ ದಂಡು ಬರುತ್ತದೆ.
ಸಮಾರೋಪ:- ಈ ದೇವಸ್ಥಾನವೂ ಹುನಗುಂದ ನಗರದಲ್ಲಿಯೇ ಅತಿ ಹೆಚ್ಚು ಹೆಸರುವಾಸಿಯಾದ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ 300 ವರ್ಷ ಇತಿಹಾಸವಿದೆ. ಎಂದೂ ಸ್ಥಳೀಯರು ಹೇಳುತ್ತಾರೆ. ಆದರೆ ನಿರ್ದಿಷ್ಟ ಮಾಹಿತಿ ದೊರೆಯುವುದಿಲ್ಲ. ದೇವಿಯ ಮೂಲಸ್ಥಾನ ತಿಮ್ಮಾಪೂರ ಎಂದು ಇಲ್ಲಿಯ ಸ್ಥಳೀಯರು ಹೇಳುತ್ತಾರೆ. ಬಡಿಗೇರ್ ವಂಶಜರಿಗೇ ದೇವಿಯೂ ಸಿಕ್ಕಿದ್ದು ಇವರ ವಂಶಜರೇ ಇಂದಿಗೂ ದೇವಿಗೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆ.

ಹುಲಿಗೆಮ್ಮ ದೇವಸ್ಥಾನ
ಪಿಠೀಕೆ
ಈ ದೇವಸ್ಥಾನವೂ ಹುನಗುಂದ ನಗರದ ವಡ್ಡರ ಓಣಿಯಲ್ಲಿದೆ. ಇಲ್ಲಿ ಓಣಿಯ ಪ್ರತಿಯೊಬ್ಬರು ಜನರು ಈ ದೇವಿಗೆ ನಂಬಿಕಸ್ಥರಾಗಿದ್ದಾರೆ. ಈ ದೇವಸ್ಥಾನದ ಸುತ್ತಲೂ ಹಲವಾರು ವಡ್ಡರ ಜನಾಂಗದವರ ಮನೆಗಳಿವೆ. ಒಂದು ಚಿಕ್ಕ ದಾರಿಯಿಂದ ಈ ದೇವಸ್ಥಾನವನ್ನು ತಲುಪಬಹುದಾಗಿದೆ.
ದೇವಾಲಯದ ಲಕ್ಷಣಗಳು…….
ಆಕಾರ:- ಈ ದೇವಸ್ಥಾನವೂ ದೊಡ್ಡದಾದ ಕಟ್ಟಡವನ್ನೂ ಹೊಂದಿದ್ದು, ಅಷ್ಟಕೋನಾಕೃತಿ ಮೇಲ್ಭಾಗವನ್ನು ಹೊಂದಿದೆ. ಮುಂಭಾಗದಲ್ಲಿ ನಾಲ್ಕು ಕಂಬಗಳನ್ನು ಹೊಂದಿದೆ. ಮತ್ತು ಏರಿ ಹೋಗಲು ನಾಲ್ಕು ಮೆಟ್ಟಿಲುಗಳನ್ನು ಹೊಂದಿದೆ. ದೇವಸ್ಥಾನಕ್ಕೆ ಹೋರಬಾಗಿಲಿನಲ್ಲಿ ಕಬ್ಬಿಣದ ಸಲಾಕೆಗಳಿಂದ ಗೇಟುಗಳನ್ನು ಮಾಡಿಸಿದ್ದಾರೆ.
ದೇವಸ್ಥಾನದ ಗರ್ಭಗುಡಿಯ ಬಲಭಾಗದ ಗೋಡೆಯ ಮೇಲೆ ಸಿದ್ದೇಶ್ವರವರ ದೇವರ ಭಾವಚಿತ್ರವನ್ನು ಚಿತ್ರಿಸಿದ್ದಾರೆ. ಮತ್ತು ಎಡ ಗೋಡೆಯ ಮೇಲೆ ಶ್ರೀ ಹನುಮಾನ ದೇವರ ಭಾವಚಿತ್ರವನ್ನು ಬಿಡಿಸಿದ್ದಾರೆ. ಗರ್ಭಗುಡಿಯ ಬಾಗಿಲ ಮೇಲೆ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಎಂದೂ ಕಪ್ಪು ಬಣ್ಣದಿಂದ ದಪ್ಪ ಅಕ್ಷರದಲ್ಲಿ ಬರೆಸಿದ್ದಾರೆ. ಈ ದೇವಸ್ಥಾನವನ್ನು ಕಲ್ಲಿನಿಂದ ಕಟ್ಟಿಸಲಾಗಿದೆ. ಈಗ ಕೆಲವು ವರ್ಷಗಳ ಹಿಂದಷ್ಟೆ ಕಟ್ಟಿದ ದೇವಸ್ಥಾನವಾಗಿದೆ. ಇಲ್ಲಿ ಯಾವುದೇ ರೀತಿಯ ಶಾಸನಗಳು ದೊರೆಯುವುದಿಲ್ಲ.
ದೇವಸ್ಥಾನದ ಹೋರನೋಟ
ದೇವಸ್ಥಾನದ ಗರ್ಭಗುಡಿ:- ದೇವಸ್ಥಾನದ ಗರ್ಭಗುಡಿಯು ಅತ್ಯಂತ ಚಿಕ್ಕದಾಗಿದೆ. ಗೋಡೆಯು ಕಲ್ಲಿನದಾಗಿದೆ. ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಮೇಲೆ ಚಿತ್ರವನ್ನು ಬರೆಸಿದ್ದಾರೆ. ಬಾಗಿಲುಗಳು ಕಟ್ಟಿಗೆಯಿಂದ ಮಾಡಲ್ಪಟ್ಟಿವೆ. ಬಾಗಿಲಿನ ಮೇಲೆ ಚಿತ್ತಾರವನ್ನು ಬಿಡಿಸಿದ್ದಾರೆ. ಬಾಗಿಲುಗಳ ಮದ್ಯೆ ಕಬ್ಬಿಣದ ಸಲಾಕೆಗಳು ಇವೆ. ಗರ್ಭಗುಡಿಯ ನೇರದಲ್ಲಿ ಆಮೆಯ ಚಿತ್ರವನ್ನು ಕೆತ್ತಲಾಗಿದೆ. ಕಪ್ಪು ಕಲ್ಲಿನದಾಗಿದೆ. ದೇವಸ್ಥಾನದ ಮುಖ್ಯ ದ್ವಾರದ ಗೋಡೆಯ ಮೇಲೆ ದೇವರ ಚಿತ್ರವನ್ನು ಬಿಡಿಸಿದ್ದಾರೆ.
ಮೂರ್ತಿ:- ಇಲ್ಲಿ ದೇವಿಯ ಯಾವುದೇ ಮೂರ್ತಿಯೂ ಕಂಡುಬರುವುದಿಲ್ಲ. ತಾಮ್ರದ ಬಿಂದಿಗೆಯ ಮೇಲೆ ದೇವಿಯ ಬೆಳ್ಳಿಯ ಮುಖವನ್ನು ಇಟ್ಟು ಪೊಜೆ ಸಲ್ಲಿಸುತ್ತಿದ್ದಾರೆ. ಕಳಸದ ಬಲ ಮತ್ತು ಎಡ ಭಾಗದಲ್ಲಿ ಎರಡು ದೇವಿಯ ವಿಗ್ರಹಗಳಿದ್ದು, ಎರಡು ಮುರ್ತಿಗಳು ಒಂದೇ ತೆರನಾಗಿವೆ. ದೇವಿಯು ಹಸಿರು ಸೀರೆಯನ್ನಿಟ್ಟು ಸಿಂಹದ ಮೇಲೆ ಕುಳಿತಿರುವ ಭಂಗಿಯಲ್ಲಿದೆ.
ಜಾತ್ರೆ:- ಇಲ್ಲಿ ದಿನನಿತ್ಯವೂ ಪೊಜೆಯನ್ನೂ ಮಾಡುತ್ತಿದ್ದು, ಅಮವಾಸ್ಯೆ ಮತ್ತು ಹುಣ್ಣಿಮೆ ದಿನದಂದು ವಿಷೇಶ ಪೊಜೆ ಮಾಡಿ ನೈವೇದ್ಯ ಮಾಡುತ್ತಾರೆ.
ಜಾತ್ರೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಾರೆ. ಸಿಹಿ ಅಡುಗೆ ಮಾಡಿಸುತ್ತಾರೆ. ಅನ್ನದಾನವನ್ನೂ ಸಹ ಏರ್ಪಡಿಸುತ್ತಾರೆ.
ಬೇಡಿಕೊಂಡವರು ಬಂದು ಮಾಂಸಹಾರ ಮಾಡಿಕೊಂಡು ಹೋಗುತ್ತಾರೆ. ಜಾತ್ರೆಯ ದಿನ ಎಲ್ಲ ಓಣಿಯ ಜನರು ಸೇರಿ ಹಬ್ಬ ಆಚರಿಸುತ್ತಾರೆ. ಈಗ ಪ್ರತಿ ನಿತ್ಯ ಈ ದೇವಿಯ ಪೊಜೆಯನ್ನು ದ್ಯಾಮವ್ವ ಹಾದಿಮನಿ(ಶರಣಪ್ಪ ಹಾದಿಮನಿ) ಎಂಬುವವರು ಮಾಡುತ್ತಾರೆ. ಜಾತ್ರೆಯ ದಿನ ದೇವಿಗೆ ವಿಷೇಶ ಅಲಂಕಾರ ಮಾಡಿ ಪೊಜೆ ಸಲ್ಲಿಸುತ್ತಾರೆ. ದೀಪಾವಳೀಯ ಅಮವಾಸ್ಯೆಯ ದಿನದಂದು ಪ್ರತಿವರ್ಷದಂದು ದೇವಿಯ ಪೊಜೆ ಮಾಡುತ್ತಾರೆ.
ನಂಬಿಕೆಗಳು:- ಇಲ್ಲಿ ಯಾವುದೇ ರೀತಿಯ ಪವಾಡಗಳು ನಡೆದಿರುವುದಿಲ್ಲ ಆದರೆ ಇಲ್ಲಿಯ ಜನರು ನಂಬಿಕಸ್ಥರಾಗಿದ್ದು ದೇವಿಗೆ ಆಭಾರಿಯಾಗಿದ್ದಾರೆ.
ಸಮಾರೋಪ:- ಹುಲಿಗೆಮ್ಮ ದೇವಿ ವಡ್ಡರ ಜನಾಂಗದವರ ಆರಾಧಕರಾಗಿದ್ದು, ಈ ಜಾತಿಯವರೇ ಪೊಜೆ ಸಲ್ಲಿಸಬೇಕೆಂಬ ನಿಯಮವಿದೆ ಎನ್ನಾಲಾಗಿದೆ.

ಲಕ್ಷ್ಮೀ ದೇವಸ್ಥಾನ ( ಅಜಾದ ನಗರ/ವಡ್ಡರ ಓಣಿ)
ಪಿಠಿಕೆ
ಈ ದೇವಸ್ಥಾನವು ಹುನಗುಂದ ನಗರದ ವಡ್ಡರ ಓಣಿಯಲ್ಲಿ ಒಂದು ಕಟ್ಟೆಯ ಕೆಳಗೆ ಇದೆ. ಇಲ್ಲಿ ಬೇವಿನ ಮರ ಇದ್ದು, ಲಕ್ಷ್ಮೀ ದೇವಿಗೆ ನೇರಳಾಗಿದೆ ಎಂದು ಹೇಳುತ್ತಾರೆ.
ದೇವಾಲಯದ ಲಕ್ಷಣಗಳು
ಆಕಾರ:- ಅತಿ ಚಿಕ್ಕ ದೇವಸ್ಥಾನವಾಗಿದೆ ಬೇವಿನ ಮರ ಇದೆ. ದೇವಸ್ಥಾನವೂ ಚೌಕಾಕಾರದಲ್ಲಿದೆ. ವೃತ್ತಾಕಾರದ ಐದು ಮೆಟ್ಟಿಲುಗಳನ್ನು ಮಾಡಲಾಗಿದೆ. ಮತ್ತು ಶಿಕರದ ಮೇಲೆ ಕಳಸವನ್ನು ಇಡಲಾಗಿದೆ. ಸುತ್ತಲೂ ಚೌಕಾಕಾರದ ಕಟ್ಟೆಯಿದ್ದು, ದಕ್ಷಿಣದ ದಿಕ್ಕಿಗೆ ಮುಖ ಮಾಡಿರುವ ದೇವಸ್ಥಾನದ ಬಾಗಿಲು ಕಟ್ಟೆಯ ಮಧ್ಯದಲ್ಲಿ ಬೇವಿನ ಮರ ಇದೆ ಮತ್ತು ಹಲವಾರು ಜನ ಸಮಯ ಕಳೆಯಲು ಮತ್ತು ವಿಶ್ರಾಂತಿಗಾಗಿ ಈ ಕಟ್ಟೆಯನ್ನು ಅವಲಂಬಿಸಿದ್ದಾರೆ.
ದೇವಾಲಯದ ಗರ್ಭಗುಡಿ:- ದೇವಸ್ಥಾನದ ಗರ್ಭಗುಡಿ ಅತ್ಯಂತ ಚಿಕ್ಕದಾಗಿದ್ದು, ಕಟ್ಟಿಗೆಯಿಂದ ಮಾಡಿಸಿದ್ದಾರೆ ಮದ್ಯದಲ್ಲಿ ಜಾಳಿಗೆಯನ್ನು ಮಾಡಿಸಿದ್ದಾರೆ. ಗರ್ಭಗುಡಿಯ ಒಳಗೆ ಯಾವುದೇ ರೀತಿಯ ಕಲ್ಲು ವಿಗ್ರಹಗಳು ಕಂಡು ಬರುವುದಿಲ್ಲವಾದರೂ ಒಂದು ಚಿಕ್ಕದಾದ ದೇವಿಯ ಬೆಳ್ಳಿಯ ಮೂರ್ತಿ ಇದೆ. ಬೇವಿನಮರಕ್ಕೆ ಕುಂಕುಮವನ್ನು ಹಚ್ಚಿ ಪೊಜೆ ಸಲ್ಲಿಸುತ್ತಾರೆ.
ಮೂರ್ತಿ:- ಇಲ್ಲಿ ಯಾವುದೇ ರೀತಿಯ ವಿಗ್ರಹಗಳು ಕಲ್ಲುಗಳು ಕಂಡುಬರುವುದಿಲ್ಲ. ದೇವಿಯು ಒಂದು ಚಿಕ್ಕದಾದ ಬೆಳ್ಳಿಯ ಮೂರ್ತಿ ಇದೆ. ಇಲ್ಲಿ ಬೇವಿನ ಮರಕ್ಕೆ ಪೊಜೆ ಸಲ್ಲಿಸುತ್ತಾರೆ. ಈ ಬೇಳ್ಳಿ ಮೂರ್ತಿಯೂ ದೇವಿಯೂ ನಿಂತಿರುವ ಆಕಾರದಲ್ಲಿದೆ. ನಾಲ್ಕು ಕೈಗಳನ್ನು ಹೊಂದಿರುವ ಮೂರ್ತಿ ಇದಾಗಿದೆ. ಕೀರಿಟವನ್ನು ಹೊಂದಿದ್ದು, ಅತಿ ಚಿಕ್ಕದಾದ ಮೂರ್ತಿ ಇದಾಗಿದೆ.

ದೇವಾಲಯದ ಗರ್ಭಗುಡಿ ದೇವಸ್ಥಾನದ ಹೋರನೋಟ
ಜಾತ್ರೆ:- ದಿನನಿತ್ಯವೂ ಇಲ್ಲಿ ಪೊಜೆಯನ್ನು ಸಲ್ಲಿಸುತ್ತಾರೆ. ವಿಷೇಶವಾಗಿ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ದೇವಿಗೆ ನೈವೇದ್ಯ ಮಾಡಿಸುತ್ತಾರೆ. ಈ ದೇವಿಗೆ ಮೊದಲಿನಿಂದಲೂ ಮೂಲಿಮನಿ ಕುಟುಂಬಸ್ಥರು ಪೊಜೆ ಸಲ್ಲಿಸುತ್ತಾ ಬಂದಿದ್ದಾರೆ. ಜಾತ್ರೆಯನ್ನು ದೀಪಾವಳೀ ದಿನದಂದು ಮಾಡುತ್ತಾರೆ ದೊಡ್ಡ ಪ್ರಮಾಣದಲ್ಲಿ ಓಣಿಯ ಜನತೆ ಎಲ್ಲ ಸೇರಿ ದೇವರಿಗೆ ವಿಷೇಶ ಪೊಜೆ ಮಾಡುತ್ತಾರೆ. ದೇವರಿಗೆ ಸಿಹಿ ಅಡುಗೆ ಮಾಡುತ್ತಾರೆ. ಇಲ್ಲಿ ಅನ್ನ ಪ್ರಸಾದವನ್ನು ಸಹ ಏರ್ಪಡಿಸುತ್ತಾರೆ. ಇಲ್ಲಿ ಜಾತಿ ಭೇಧ-ಭಾವವಿಲ್ಲದೆ ಎಲ್ಲರೂ ಓಂದುಗೂಡಿ ದೇವಿಯನ್ನು ಆರಾಧಿಸುತ್ತಾರೆ.
ಸಮಾರೋಪ:- ಇಲ್ಲಿ ಜಾತಿಯ ಭೇಧ-ಭಾವವಿಲ್ಲದೇ ಎಲ್ಲ ಓಣಿಯ ಜನತೆಯೂ ಒಂದುಗೂಡಿ ಪೊಜೆಯನ್ನು ಸಲ್ಲಿಸುತ್ತಾರೆ. ಪ್ರತಿವರ್ಷವೂ ದೇವಿಯ ಜಾತ್ರೆಯನ್ನು ವಿಜೃಂಭಣೆಯಿಂದ ಮಾಡುತ್ತಾರೆ.
ಲಕ್ಷ್ಮೀ ದೇವಸ್ಥಾನ ( ಭಜಂತ್ರಿ ಓಣಿ)
ಪಿಠೀಕೆ
ಈ ದೇವಸ್ಥಾನವೂ ಹುನಗುಂದ ನಗರದ ಭಜಂತ್ರಿ ಓಣಿಯಲ್ಲಿದೆ. ಇದು ಒಂದು ದೊಡ್ಡ ಕಟ್ಟಡ ಹೊಂದಿದ ಸುಂದರವಾದ ದೇವಸ್ಥಾನವಾಗಿದೆ. ಇದು ಭಜಂತ್ರಿ ಜನಾಂಗದವರ ಆರಾಧಕ ದೇವತೆಯಾಗಿದೆ. ಈ ಜನರು ಈ ದೇವಿಯ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದು, ದೇವಿಯ ಪರಿಪಾಲಕರಾಗಿದ್ದಾರೆ.

ದೇವಸ್ಥಾನದ ಲಕ್ಷಣಗಳು…….
ದೇವಸ್ಥಾನದ ಉಗಮ:- ಈ ದೇವಸ್ಥಾನವೂ ಇಸ್ವಿ 1984 ಮತ್ತು ಶಕೆ 1905 ರಂದು ಕಟ್ಟಿಸಿದ್ದಾರೆ. ಇದನ್ನು ಭಜಂತ್ರಿ ವಂಶಜರೇ ಮೊದಲಿನಿಂದಲೂ ದೇವಿಗೆ ಪೊಜೆ ಸಲ್ಲಿಸುತ್ತಾ ಬಂದಿದ್ದು, ಈಗ ರಾಮಣ್ಣ ಭಜಂತ್ರಿ ಎಂಬುವವರೂ ಪೊಜೆ ಮಾಡುತ್ತಿದ್ದಾರೆ.
ಆಕಾರ:- ಲಕ್ಷ್ಮೀ ದೇವಿಯ ದೇವಸ್ಥಾನವೂ ಚೌಕಾಕಾರದಲ್ಲಿದ್ದು, ಕೆಲ ವರ್ಷಗಳ ಹಿಂದೆ ಕಟ್ಟಡವನ್ನು ಕಟ್ಟಿಸಿದ್ದಾರೆ. ದೇವಸ್ಥಾನದ ಮುಂಭಾಗದಲ್ಲಿ ಹೂವಿನ ಕಲಾಕೃತಿಗಳನ್ನು ಕೆತ್ತಲಾಗಿದೆ. ಮತ್ತು ದೇವಸ್ಥಾನದ ಮಧ್ಯಭಾಗದಲ್ಲಿ ಎರಡು ಕಟ್ಟಿಗೆಯ ಕಂಬಗಳಿವೆ. ದೇವಸ್ಥಾನವೂ ವಿಶಾಲವಾದ ಜಾಗವನ್ನೂ ಹೊಂದಿದೆ.
ದೇವಸ್ಥಾನದ ಗರ್ಭಗುಡಿ:- ದೇವಸ್ಥಾನದ ಗರ್ಭಗುಡಿಯು ಚಿಕ್ಕದಾಗಿದ್ದು, ಮುಂಭಾಗದ ಬಾಗಿಲು ಕಲ್ಲುಗಳಿಂದ ನಿರ್ಮಿಸಲಾಗಿದೆ. ಮತ್ತು ಬಾಗಿಲುಗಳನ್ನು ಕಟ್ಟಿಗೆಯ ಸಹಾಯದಿಂದ ನಿರ್ಮಿಸಿದ್ದು ಮದ್ಯದಲ್ಲಿ ಕಬ್ಬಿಣದ ಸಲಾಕೆಗಳನ್ನು ಇರಿಸಲಾಗಿದೆ.
ಮೂರ್ತಿ:- ಲಕ್ಷ್ಮೀ ದೇವಿಯ ಮೂರ್ತಿಯೂ ಕಪ್ಪು ಕಲ್ಲಿನಿಂದ ನಿರ್ಮಿತವಾಗಿದೆ. ಮೂರ್ತಿಯೂ ನಾಲ್ಕು ಕೈಗಳನ್ನು ಹೊಂದಿದೆ. ಸಮಭಂಗಿಯಲ್ಲಿದ್ದ ಮೂರ್ತಿಯಾಗಿದೆ.
ದೇವಾಲಯದ ಗರ್ಭಗುಡಿ
ಎರಡು ಆನೆಗಳನ್ನು ಕೆತ್ತಲಾಗಿದೆ. ಲಕ್ಷ್ಮೀ ದೇವಿಯ ಮೂರ್ತಿಗೆ ಬೆಳ್ಳಿಯ ಕಣ್ಣುಗಳನ್ನು ಹಾಕಲಾಗಿದೆ. ದೇವಿಗೆ ಹೂವಿನಿಂದ ಅಲಂಕಾರ ಮಾಡಿದ್ದಾರೆ. ದೇವಿಯ ಮೂರ್ತಿಯ ಬಲಭಾಗದ ಪಕ್ಕದಲ್ಲಿ ಜೋಡಿ ಹಾವಿನ ಚಿತ್ರವನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಮೂರ್ತಿಯ ಹಿಂಭಾಗದಲ್ಲಿ ಗೋಡೆಯ ಮೇಲೆ ಗಣೇಶನ ಚಿತ್ರವನ್ನು ಹಾಕಿದ್ದಾರೆÉ.
ಜಾತ್ರೆ:- ದೇವಿಗೆ ದಿನಾಲೂ ದೀಪ ಬೇಳಗಿ ಪೊಜೆ ಸಲ್ಲಿಸುತ್ತಾರೆ. ಮತ್ತು ಜಾತ್ರೆಯನ್ನು ಕರಣಗಿ ಹುಣ್ಣಿಮೆಯ ದಿನದಂದು ಉಡಿತುಂಬಿ ಭಾಜಾ ಭಜಂತ್ರಿಯೋಂದಿಗೆ ಬಹಳ ವಿಜೃಂಭನೆಯಿಂದ ಸೇವೆ ಸಲ್ಲಿಸುತ್ತಾರೆ. ಇಲ್ಲಿ ಸಿಹಿ ಅಡುಗೆಯನ್ನು ಮಾಡಿಸುತ್ತಾರೆ ಮತ್ತು ಅಂದಿನ ದಿನ ಅನ್ನಪ್ರಸಾದವನ್ನು ಮಾಡುತ್ತಾರೆ. ಆದರೆ ಜಾತ್ರೆಯ ಸಮಯದಲ್ಲಿ ಎಲ್ಲರೂ ಒಂದುಗೂಡಿ ಪೊಜೆ ಸಲ್ಲಿಸುತ್ತಾರೆ.
ಸಮಾರೋಪ:- ಭಜಂತ್ರಿ ಜನಾಂಗದವರೇ ದೇವಿಗೆ ಪೊಜೆ ಸಲ್ಲಿಸುತ್ತಿದ್ದಾರೆ. ಜಾತ್ರೆಯ ಸಮಯದಲ್ಲಿ ಎಲ್ಲರೂ ಒಂದುಗೂಡಿ ಪೊಜೆಯನ್ನು ಮಾಡುತ್ತಾರೆ.

ದುರ್ಗಮ್ಮ ದೇವಸ್ಥಾನ ( ಬಾಬು ಜಗಜೀವನರಾವ್ ನಗರ)
ಪೀಠೀಕೆ
ಈ ದೇವಸ್ಥಾನವೂ ಹುನಗುಂದ ನಗರದ ಬಾಬುಜಗಜೀವನರಾವ್ ನಗರದಲ್ಲಿದೆ. ಇಲ್ಲಿ ಈ ದೇವತೆ ಪೂರ್ವ ಕಾಲದಿಂದಲೂ ನೆಲೆಸಿದ್ದಾಳೆ ಎಂದೂ ಸ್ಥಳಿಯರು ತಿಳಿಸುತ್ತಾರೆ. ಈ ದೇವಸ್ಥಾನದ ಉಗಮದ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರೆಯುವುದಿಲ್ಲ.
ದೇವಸ್ಥಾನದ ಲಕ್ಷಣಗಳು…….
ಆಕಾರ:- ಹಳೆಯ ದೇವಸ್ಥಾನವನ್ನೂ ಕೆಡವಿ ಈಗ ಹೊಸದಾಗಿ ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ.
ದೇವಸ್ಥಾನದ ಗರ್ಭಗುಡಿ:- ದೇವಸ್ಥಾನದ ಗರ್ಭಗುಡಿಯು ಕಾರ್ಯಹಂತದಲ್ಲಿದೆ.
ಮೂರ್ತಿ:- ಈ ಮೂರ್ತಿಯು ಕಪ್ಪು ಕಲ್ಲಿನದಾಗಿದೆ. ಮೂರ್ತಿಗೆ ಬೆಳ್ಳಿಯ ಕಣ್ಣುಗಳನ್ನು ಹಾಕಿದ್ದಾರೆ. ಈ ಮೂರ್ತಿಯು ಬಲಭಾಗದಲ್ಲಿ ಒಂದು ಕಳಸದ ಮೂರ್ತಿ ಇದ್ದು, ಇದಕ್ಕೂ ಪೊಜೆ ಸಲ್ಲಿಸುತ್ತಾ ಬಂದಿದ್ದಾರೆ. ದೇವಿಗೆ ಹಸಿರು ಬಣ್ಣದ ಸೀರೆಯನ್ನು ತೊಡಿಸಿದ್ದಾರೆ. ಹೂವಿನಿಂದ ಅಲಂಕಾರ ಮಾಡಿದ್ದಾರೆ.
ದೇವಾಲಯದ ಗರ್ಭಗುಡಿ

ಜಾತ್ರೆ:- ದೇವಿಗೆ ಪ್ರತಿನಿತ್ಯವೂ ಪೊಜೆಯನ್ನು ಸ್ಥಳೀಯರು ಸಲ್ಲಿಸುತ್ತಾರೆ. ಜಾತ್ರೆಯನ್ನು ಮಹಾನವಮಿಯ ದಿನದಂದು ತುಂಬಾ ವಿಶೇಷವಾಗಿ ಮಾಡುತ್ತಾರೆ. ಇಲ್ಲಿ ಸಿಹಿ ಪದಾರ್ಥದ ಅಡುಗೆಯನ್ನು ಮಾಡಿಸುತ್ತಾರೆ. ಮತ್ತು ಯಾವುದೇ ರೀತಿಯ ಪ್ರಾಣಿ ಹಿಂಸೆ ಮಾಡುವದಿಲ್ಲ ಎಂದು ತಿಳಿಸುತ್ತಾರೆ. ಅನ್ನಪ್ರಸಾದವನ್ನು ಏರ್ಪಡಿಸುತ್ತಾರೆ. ದೇವಿಗೆ ಇವರೆ ಪೊಜೆ ಸಲ್ಲಿಸಬೇಕೆಂಬ ನಿಯಮವಿಲ್ಲ ಜಾತಿಯ ನಿರ್ಭಂಧತೆ ಇಲ್ಲ ಎನ್ನುತ್ತಾರೆ.
ಅನುದಾನ:- ದೇವಿಯ ಕಟ್ಟಡವನ್ನು ಈಗ ಕಟ್ಟಲು ಪ್ರಾರಂಭಿಸಿದ್ದು, ಶಾಸಕರಾದÀ ಶ್ರೀ ವಿಜಯಾನಂದ ಕಾಶಪ್ಪನವರ ಅನುದಾನದಲ್ಲಿ ಮೂರು ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಓಣಿಯ ಜನತೆಗೂಡಿ ಈಗ ದೇವಸ್ಥಾನವನ್ನು ನಿರ್ಮಿಸಿದ್ದಾರೆ.
ಸಮಾರೋಪ:- ಹುನಗುಂದ ನಗರದ ಹೆಸರುವಾಸಿಯಾದ ದೇವಸ್ಥಾನಗಳಲ್ಲಿ ಈ ದೇವಸ್ಥಾನವೂ ಒಂದಾಗಿದೆ ಎನ್ನಬಹುದು, ಈ ದೇವರ ಮೇಲೆ ಅಪಾರವಾದ, ನಂಬಿಕೆ ಇಲ್ಲಿಯ ಜನರು ಇಟ್ಟಿದ್ದಾರೆ.
ಕೆಂಚಮ್ಮ (ಬಾಬುಜಗಜೀವನ್‍ರಾವ್ ನಗರ)
ಪಿಠೀಕೆ
ಈ ದೇವಸ್ಥಾನವೂ ಹುನಗುಂದ ನಗರದ ಬಾಬು ಜಗಜೀವನರಾವ ನಗರದಲ್ಲಿದೆ. ಇದು ಚಿಕ್ಕ ದೇವಸ್ಥಾನವಾಗಿದೆ. ಇದು ಮೊದಲಿನ ಕಾಲದಿಂದಲೂ ಇದೆ ಎಂದೂ ಸ್ಥಳೀಯರು ಹೇಳುತ್ತಾರೆ.
ದೇವಾಲಯದ ಲಕ್ಷಣಗಳು………
ಆಕಾರ:- ಈ ದೇವಾಸ್ಥನವು ಚೌಕಾಕಾರದಲ್ಲಿದೆ. ಚಿಕ್ಕ ದೇವಸ್ಥಾನವಾಗಿದೆ. ದೇವಸ್ಥಾನವನ್ನು ಇಟ್ಟಿಗೆಯಿಂದ ಕಟ್ಟಿದ್ದಾರೆ. ದೆವಸ್ಥಾನದ ಹೊರಗಡೆ ವಿಶಾಲವಾದ ಜಾಗವಿದ್ದು, ಹೊರಗಡೆ ಪತರಾಸು ಹಾಕುವುದರ ಮೂಲಕ ನೆರಳಿಗೆ ಅನುಕೂಲ ಮಾಡಿದ್ದಾರೆ.
ದೇವಾಲಯದ ಗರ್ಭಗುಡಿ:- ದೇವಾಲಯದ ಬಾಗಿಲು ಚಿಕ್ಕದಾಗಿದ್ದು ಯಾವುದೆ ರೀತಿಯ ಕಲಾಕೃತಿಯ ಕೆತ್ತನೆಗಳು ಕಾಣುವುದಿಲ್ಲ.
ಮೂರ್ತಿ:- ಗರ್ಭಗುಡಿಯೊಳಗೆ ದೇವಿಯ ಮೂರ್ತಿ ಇದ್ದು, ದೇವಿಯ ಮೂರ್ತಿಯು ಕಪ್ಪು ಕಲ್ಲಿನದಾಗಿದೆ. ದೇವಿಗೆ ಹಸಿರು ಬಣ್ಣದ ಸೀರೆಯನ್ನು ಉಡಿಸಿದ್ದಾರೆ. ದೇವಿಯ ಎಡ-ಬಲದಲ್ಲಿ ಬೆಳ್ಳಿಯ ಮೊಗವುಳ್ಳ ಎರಡು ದೇವಿಗಳ ಮೂರ್ತಿ ಇದೆ. ಗರ್ಭಗುಡಿಯಲ್ಲಿ ದೇವಿಗೆ ನವಿಲುಗರಿಯನ್ನು ಇಟ್ಟಿದ್ದಾರೆ. ದೇವಿಗೆ ಹೂವುಗಳ ಮೂಲಕ ಅಲಂಕಾರ ಮಾಡಿದ್ದಾರೆ.
ದೇವಾಲಯದ ಗರ್ಭಗುಡಿ ದೇವಸ್ಥಾನದ ಹೋರನೋಟ
ಜಾತ್ರೆ:- ಈ ದೇವಸ್ಥಾನದಲ್ಲಿ ಪ್ರತಿನಿತ್ಯವೂ ಪೊಜೆ ಸಲ್ಲಿಸುತ್ತಾರೆ. ಮತ್ತು ಮಹಾನವಮಿ ದಿನದಂದು ಜಾತ್ರೆ ಮಾಡುತ್ತಾರೆ. ದೊಡ್ಡ ಪ್ರಮಾಣದಲ್ಲಿ ದೇವಿಗೆ ಮಾಂಸಹಾರ ನೈವೇದೈ ಮಾಡುತ್ತಾರೆ. ಮುಖ್ಯವಾಗಿ ಆಡು-ಕುರಿಗಳನ್ನು ಬ್ಯಾಟಿ ಮಾಡುತ್ತಾರೆ. ಅನ್ನಪ್ರಸಾದವನ್ನು ಏರ್ಪಡಿಸಿರುತ್ತಾರೆ.
ಇಲ್ಲಿ ಪ್ರತಿ ನಿತ್ಯವೂ ಮಾದರ ಎಂಬ ಕುಟುಂಬಸ್ಥರೂ ಪೊಜೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ದೇವಿಯ ಜಾತ್ರೆಯ ದಿನದಂದು ಎಲ್ಲರೂ ಸೇರಿ ಹಣಗೂಡಿಸಿ ಜಾತ್ರೆಯನ್ನು ವಿಜೃಂಭಣೆಯಿಂದ ಮಾಡುತ್ತಾರೆ. ಪೊಜೆಯನ್ನು ಮಾದರ ಜಾತಿಯವರೇ ಮಾಡಬೇಕೇಂಬ ನಿಯಮವಿದ್ದು, ಅನ್ನ ಪ್ರಸಾದದಲ್ಲಿ ಎಲ್ಲ ಜಾತಿಯವರೂ ಒಂದುಗೂಡಿ ಜಾತ್ರೆಯನ್ನು ಮಾಡುತ್ತಾರೆ.
ಸಮಾರೋಪ:- ಈ ದೇವಸ್ಥಾನವೂ ಕೇಲ ವರ್ಷಗಳ ಹಿಂದೆ ನಿರ್ಮಾಣವಾಗಿದ್ದು , ಇಲ್ಲಿನ ಜನರು ದೇವಿಯ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ.
ಲಕ್ಕಮ್ಮ ದೇವಸ್ಥಾನ (ಬಾಗಲಕೋಟ ರೋಡ)
ಪಿಠೀಕೆ
ಈ ದೇವಸ್ಥಾನವೂ ಹುನಗುಂದ ನಗರದ ವಿಜಯ ಮಹಾಂತೇಶ ಶಾಲೆಯ ಹಿಂಭಾಗದಲ್ಲಿz.É ಈ ದೇವಸ್ಥಾನದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ.

ದೇವಾಲಯದ ಲಕ್ಷಣಗಳು…….
ಆಕಾರ:- ಈ ದೇವಸ್ಥಾನವೂ ಚೌಕಾಕಾರದಲ್ಲಿದ್ದು ಬಾಗಿಲು ಮಧ್ಯದಲ್ಲಿದೆ. ಅಕ್ಕ-ಪಕ್ಕ ಕಿಡಕಿಗಳನ್ನು ಹೊಂದಿದೆ. ದೇವಸ್ಥಾನದ ಬಾಗಿಲುಗಳು ಕಟ್ಟಿಗೆಯಿಂದ ಮಾಡಿದ್ದು, ಬಾಗಿಲಿನ ಮೇಲ್ಭಾಗದಲ್ಲಿ ಕಬ್ಬಿಣ ಸಲಾಕೆಗಳಿಂದ ಕಟ್ಟಲಾಗಿದೆ.

ದೇವಸ್ಥಾನದ ಹೋರನೋಟ

ದೇವಾಲಯದ ಗರ್ಭಗುಡಿ:- ದೇವಸ್ಥಾನದ ಗರ್ಭಗುಡಿಯು ಚಿಕ್ಕದಾಗಿದ್ದು ಬಾಗಿಲನ್ನು ಕಟ್ಟಿಗೆಯಿಂದ ಮಾಡಲಾಗಿದೆ. ಸಾದಾರಣದ ಬಾಗಿಲಾಗಿದೆ.
ಮೂರ್ತಿ:- ದೇವಸ್ಥಾನದ ಗರ್ಭಗುಡಿಯಲ್ಲಿ ಲಕ್ಕಮ್ಮ ದೇವಿಯ ಮೂರ್ತಿ ಇದ್ದು, ಕಪ್ಪು ಕಲ್ಲಿನಿಂದ ಕೆತ್ತಲಾಗಿದೆ. ದೇವಿಯ ಕಣ್ಣುಗಳಿಗೆ ಬಂಗಾರದ ಕಣ್ಣುಗಳನ್ನು ಹಾಕಲಾಗಿದೆ. ದೇವಿಗೆ ಹಸಿರು ಬಣ್ಣದ ಸೀರೆಯನ್ನು ತೊಡಿಸಿದ್ದಾರೆ. ದೇವಿಯ ಎಡಭಾಗದಲ್ಲಿ ಜೋಡಿ ನಾಗರ ಹಾವಿನ ಕಪ್ಪು ಕಲ್ಲಿನ ಶಿಲ್ಪವಿದೆ. ಮತ್ತು ಬಲಭಾಗದಲ್ಲಿ ಲಕ್ಷ್ಮೀ ದೇವಿಯ ಛಾಯಾ ಚಿತ್ರವನ್ನು ಮತ್ತು ನಾಲ್ಕು ಮೊಗಗಳನ್ನು ಹೊಂದಿದ ದೇವಿಯ ಮೂತಿ ಇದೆ. ಕಪ್ಪುಕಲ್ಲಿನದಾಗಿದೆ.

ದೇವಾಲಯದ ಗರ್ಭಗುಡಿ

ಜಾತ್ರೆ:- ಈ ದೇವಸ್ಥಾನದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ ಮಲ್ಲಪ್ಪ, ಲಕ್ಷ್ಮಣ, ಬಾರಕೇರ ಎಂಬುವರು ಈ ದೇವಿಗೆ ದಿನಾಲೂ ಪೊಜೆ ಸಲ್ಲಿಸುತ್ತಾರೆ. ಈ ವಂಶಜರೇ ಮೊದಲಿನಿಂದಲೂ ದೇವಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಈ ದೇವಿಗೆ ಮೂರು ವರ್ಷಕ್ಕೊಮ್ಮೆ ಬನದ ಹುಣ್ಣಿಮೆಯ ದಿನದಂದು ಜಾತ್ರೆ ಮಾಡುತ್ತಾರೆ. ಸಂಪ್ರದಾಯದಂತೆ ಅಂಬೀಗೇರ ಜನಾಂಗದವರೇ ದೇವಿಗೆ ಪೊಜೆ ಸಲ್ಲಿಸುತ್ತಾರೆ. ಮತ್ತು ಅಂಬಿಗ ಜನಾಂಗದವರೂ ಒಂದುಗೂಡಿ ಜಾತ್ರೆಯ ವೆಚ್ಚವನ್ನೂ ಭರಿಸುತ್ತಾರೆ.
ಸಮಾರೋಪ:- ಈ ದೇವಸ್ಥಾನವೂ ಹುನಗುಂದ ನಗರದ ಪ್ರತಿಷ್ಠಿತ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿಯ ಜನತೆ ಈ ದೇವಿಯ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ.
ಲಕ್ಷ್ಮೀ ದೇವಸ್ಥಾನ ( ಮಲ್ಲಿಕಾರ್ಜುನ ನಗರ)
ಪಿಠೀಕೆ
ಈ ದೇವಸ್ಥಾನವೂ ಮಲ್ಲಿಕಾರ್ಜುನ ನಗರದ ಕುಂಚೀಕೋರ್ ಓಣಿಯಲ್ಲಿದೆ. ಇದು ಒಂದು ಮನೆಯ ಒಳಗೆ ಇರುವ ದೇವಸ್ಥಾನವಾಗಿದೆ. ಈ ದೇವಸ್ಥಾನವನ್ನು ಕೆಲ ವರ್ಷಗಳ ಹಿಂದೆ ಕಟ್ಟಿಸಿದ್ದಾರೆ.
ದೇವಾಲಯದ ಲಕ್ಷಣಗಳು…….
ಆಕಾರ:- ಈ ದೇವಸ್ಥಾನವೂ ಚಿಕ್ಕ ಕಟ್ಟಡವನ್ನು ಹೊಂದಿದ್ದು ಈಗಿಗ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನವೂ ಇಲ್ಲಿ ನೆಲೆಸಿ 50-60 ವರ್ಷವಾಯಿತು ಎಂದು ಹೇಳಿದ್ದಾರೆ. ದೇವಸ್ಥಾನದ ಮೇಲೆ ಮೆಟ್ಟಿಲುಗಳ ರೀತಿಯಲ್ಲಿ ಚೌಕಾಕಾರವಾಗಿ ಕಟ್ಟಿಸಿದ್ದಾರೆ. ದೇವಸ್ಥಾನದ ಮೇಲೆ ಚಿಕ್ಕದಾದ ಕಳಸವನ್ನು ಇಟ್ಟಿದ್ದಾರೆ.
ದೇವಾಲಯದ ಗರ್ಭಗುಡಿ:- ದೇವಾಲಯದ ಗರ್ಭಗುಡಿಯ ಬಾಗಿಲು ಚಿಕ್ಕದಾಗಿದ್ದು ಕಟ್ಟಿಗೆಯಿಂದ ನಿರ್ಮಿಸಿದ್ದಾರೆ. ಬಾಗಿಲುಗಳ ಮಧ್ಯದಲ್ಲಿ ಚಿಕ್ಕ ಗಂಟೆಗಳನ್ನು ಹಾಕಿ ಅಲಂಕಾರ ಮಾಡಿದ್ದಾರೆ.
ಮೂರ್ತಿ:- ದೇವಾಲಯದ ಗರ್ಭಗುಡಿಯೋಳಗೆ ದುರ್ಗಾದೇವಿ ಮತ್ತು ಲಕ್ಷ್ಮೀ ದೇವಿಯ ಭಾವಚಿತ್ರವಿದ್ದು ದೇವಿಗೆ ಬೆಳ್ಳಿಯ ಮೊಗದ ವಿಗ್ರಹವಿದೆ. ಮತ್ತು ಕಳಸದಲ್ಲಿ ನೀರು ತುಂಬಿ ಆ ಬಿಂದಿಗೆಗೆ ಪೊಜೆ ಮಾಡುತ್ತಾರೆ. ಇಲ್ಲಿ ದಿನಾಲೂ ದೇವಿಗೆ ಪೊಜೆಯನ್ನು ಸಲ್ಲಿಸುತ್ತಾರೆ.

ದೇವಾಲಯದ ಗರ್ಭಗುಡಿ
ಜಾತ್ರೆ:- ಜಾತ್ರೆಯನ್ನು ದೀಪಾವಳಿ ದಿನದಂದು ವಿಜೃಂಭಣೆಯಿಂದ ಮಾಡುತ್ತಾರೆ. ದೇವಿಗೆ ಸಿಹಿ ಅಡುಗೆಯನ್ನು ಮಾಡಿ ನೈವೇದ್ಯ ಇಡುತ್ತಾರೆ.
ಶಾಂತಾ ಎಂಬುವವರು ದೇವಿಗೆ ದಿನಾಲೂ ಪೊಜೆ ಸಲ್ಲಿಸುತ್ತಾ ಬಂದಿದ್ದಾರೆ. ಮತ್ತು ಈ ಮನೆತನದವರೇ ಮೊದಲಿನಿಂದಲೂ ದೇವಿಗೆ ಪೊಜೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಪೊಜೆಯನ್ನು ಕುಂಚಿಕೊರ್ ಜನಾಂಗದವರೇ ಮಾಡಬೇಕೆಂಬ ನಿಯಮವಿದೆ. ಎಂದು ಹೇಳುತ್ತಾರೆ.
ಸಮಾರೋಪ:- ಈ ದೇವಿಯ ಮೇಲೆ ಇಲ್ಲಿಯ ಜನರು ಅಪಾರವಾದ ನಂಬಿಕೆ ಇಟ್ಟಿದ್ದಾರೆ. ಮತ್ತು ದೇವಿಗೆ ಪ್ರತಿನಿತ್ಯವೂ ಪೊಜೆಯನ್ನು ಸಲ್ಲಿಸುತ್ತಾರೆ.

ದುರ್ಗಮ್ಮ ದೇವಸ್ಥಾನ ( ಬಾಬುಜಗಜೀವನರಾವ್ ನಗರ)
ಪಿಠೀಕೆ
ಈ ದೇವಸ್ಥಾನವು ಹುನಗುಂದ ನಗರದ ಬಾಬುಜಗಜೀವನರಾವ್ ನಗರದಲ್ಲಿದೆ. ಇಲ್ಲಿಯ ಜನತೆ ಈ ದೇವಿಯ ಮೇಲೆ ಅಪಾರ ನಂಬಿಕೆಯನ್ನಿಟ್ಟಿದ್ದಾರೆ. ದೇವಿಗೆ ದಿನನಿತ್ಯ ಪೊಜೆಯನ್ನು ಸಲ್ಲಿಸುತ್ತಾರೆ.
ದೇವಾಲಯದ ಲಕ್ಷಣಗಳು………
ಆಕಾರ:- ಈ ದೇವಸ್ಥಾನವೂ ಆಯತಾಕಾರವಾಗಿದ್ದು, ಮುಂಭಾಗದಲ್ಲಿ 4 ಕಂಬಗಳನ್ನು ಹೊಂದಿದೆ. ದೇವಸ್ಥಾನದ ಮುಂಭಾಗದ ಗೊಡೆಯ ಮೇಲೆ ದುರ್ಗಮ್ಮ ದೇವಿಯ ಶಿಲ್ಪವನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಎದುರುಗಡೆ ಬೇವಿನಮರವಿದೆ. ಮತ್ತು ಮುಂದೆ ಒಂದು ದೊಡ್ಡ ಕಟ್ಟೆಯಿದ್ದು ಅಲ್ಲಿ ಕಲ್ಲಿನ ಮೇಲೆ ಕೆತ್ತಾಲಾಗಿರುವ ನಾಗ ಚಿತ್ರಗಳ ಶಿಲ್ಪಗಳಿವೆ.
ದೇವಸ್ಥಾನದ ಗರ್ಭಗುಡಿ:- ದೇವಸ್ಥಾದ ಗರ್ಭಗುಡಿಯ ಬಾಗಿಲು ಚಿಕ್ಕದಾಗಿದೆ. ಅವುಗಳನ್ನು ಕಟ್ಟಿಗೆಯಿಂದ ನಿರ್ಮಿಸಲ್ಪಟ್ಟಿವೆ. ಬಾಗಿಲಿನ ಮೇಲೆ ಕಲಾಕೃತಿಗಳನ್ನು ಕೆತ್ತಲಾಗಿದೆ. ಆದರೆ ಬಣ್ಣ ಬಳೆದಿರುವುದರಿಂದ ಸ್ಪಷ್ಟವಾಗಿ ಕಂಡುಬರುವುದಿಲ್ಲ.
ಮೂರ್ತಿ:- ಇಲ್ಲಿ ಯಾವುದೇ ರೀತಿಯ ಮೂರ್ತಿ ಕಾಣಬರುವುದಿಲ್ಲ. ದೇವಿಯ ಕಂಚಿನ ಮೊಗದ ಮೂರ್ತಿಯಿದ್ದು, ಹಸಿರು ಬಣ್ಣದ ಸೀರೆಯನ್ನುಡುಸಿ ಹೂವಿನಿಂದ ಅಲಂಕಾರ ಮಾಡಿದ್ದಾರೆ. ದೇವಿಯ ಎಡ-ಬಲದಲ್ಲಿ ಕಟ್ಟಿಗೆಯಿಂದ ಮಾಡಲಾದ ದೇವಿಗಳ ಪ್ರತಿಮೆಗಳು ಇವೆ.
ದೇವಸ್ಥಾನದ ಹೋರನೋಟ ದೇವಾಲಯದ ಗರ್ಭಗುಡಿ

ಜಾತ್ರೆ:- ಈ ದೇವಸ್ಥಾನದಲ್ಲಿ ದಿನಾಲೂ ಪೊಜೆಯನ್ನು ಮಾಡುತಿದ್ದು, ಹುಲಿಗೆಮ್ಮ ಪೊಜೇರಿ ಎಂಬುವವರು ಈಗ ಪೊಜೆಯನ್ನು ಸಲ್ಲಿಸುತ್ತಿದ್ದಾರೆ. ಇಲ್ಲಿ ಪ್ರತಿ ವರ್ಷವೂ ಮಹಾನವಮಿಯ ದಿನದಂದು ಎಲ್ಲಾ ಓಣಿಯ ಜನತೆ ಒಂದುಗೂಡಿ ಪೊಜೆಯನ್ನು ಸಲ್ಲಿಸುತ್ತಾ ಬಂದಿದ್ದು, ಜಾತ್ರೆಯ ದಿನದಂದು ದೇವಿಗೆ ಮಾಂಸಹಾರ ಮಾಡಿ ನೈವೇದ್ಯ ಸಲ್ಲಿಸುತ್ತಾರೆ. ಕುರಿ ಆಡು ಮುಂತಾದವುಗಳು ಬ್ಯಾಟಿ ಮಾಡುತ್ತಾರೆ. ದೇವಿಗೆ ಮಾದರ ಜನಾಂಗದವರೇ ಪೊಜೆ ಸಲ್ಲಿಸುತ್ತಾ ಬಂದಿದ್ದು, ಈಗಲೂ ಅವರೇ ಪೂಜೆಯನ್ನು ಸಲ್ಲಿಸುತ್ತಾರೆ. ಆದರೆ ಜಾತ್ರೆಯ ಸಮಯದಲ್ಲಿ ಎಲ್ಲ ಜಾತಿಯವರೂ ಒಂದೂಗೂಡಿ ಪೊಜೆ ಸಲ್ಲಿಸುತ್ತಾರೆ.
ನಂಬಿಕೆಗಳು:- ಇಲ್ಲಿಯ ಜನರು ದೇವಿಯ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ.
ಸಮಾರೋಪ:- ಇದು ಒಂದು ಪೂರ್ವ ಕಾಲದ ದೇವಸ್ಥಾನವಾಗಿದೆ. ಇಲ್ಲಿನ ಜನರು ದೇವಿಯ ಮೇಲೆ ಅಪಾರವಾದ ನಂಬಿಕೆ ಇಟ್ಟು ಪೊಜೆ ಸಲ್ಲಿಸುತ್ತಾ ಬಂದಿದ್ದಾರೆ.

ಯಲ್ಲಮ್ಮ ದೇವಸ್ಥಾನ (ಮಲ್ಲಿಕಾರ್ಜುನ ನಗರ)
ಪಿಠೀಕೆ
ಈ ದೇವಸ್ಥಾನವೂ ಹುನುಗುಂದ ನಗರದ ಮಲ್ಲಿಕಾರ್ಜುನ ಓಣಿಯಲ್ಲಿದೆ. ಈ ದೇವಸ್ಥಾನವೂ ಗುಡ್ಡದ ಮೇಲಿದೆ. ಅತ್ಯಂತ ಚಿಕ್ಕದಾದ ಕಟ್ಟಡವನ್ನು ಹೊಂದಿದೆ.
ದೇವಾಲಯದ ಲಕ್ಷಣಗಳು……..
ಆಕಾರ:- ಈ ದೇವಸ್ಥಾನವೂ ಚೌಕಾಕಾರವಾಗಿದ್ದು, ದೇವಸ್ಥಾನದ ಮುಂಭಾಗದಲ್ಲಿ ಏರಿ ಹೋಗಲು ಎರಡು ಮೆಟ್ಟಿಲುಗಳಿವೆ. ಮತ್ತು ಗರ್ಭಗುಡಿಯ ಬಾಗಿಲು ಚಿಕ್ಕದಾಗಿದೆ.
ದೇವಾಲಯದ ಗರ್ಭಗುಡಿ:- ಗರ್ಭಗುಡಿಯ ಬಾಗಿಲು ಚಿಕ್ಕದಾಗಿದೆ. ಕಪ್ಪು ಕಲ್ಲಿನಿಂದ ತಯಾರಿಸಿದ ಬಾಗಿಲಾಗಿದೆ. ಮತ್ತು ಬಾಗಿಲಿಗೆ ಕಬ್ಬಿಣದ ಸಲಾಖೆಗಳಿಂದ ಬಂದೋಬಸ್ತ ಮಾಡಲಾಗಿದೆ. ದೇವಸ್ಥಾನದ ಬಾಗಿಲ ಮೇಲೆ ಮಧ್ಯದಲ್ಲಿ ಗಣೇಶನ ಕುಳಿತಿರುವ ಚಿತ್ರವನ್ನು ಕೆತ್ತಲಾಗಿದೆ. ಮತ್ತು ಬಾಗಿಲ ಸುತ್ತ ತಾವರೆ ಹೂವಿನ ಚಿತ್ರವನ್ನು ಕೆತ್ತಲಾಗಿದೆ.
ಮೂರ್ತಿ:- ದೇವಾಲಯದ ಗರ್ಭಗುಡಿಯೊಳಗೆ ಒಂದು ಕಲ್ಲಿನ ಶಿಲೆ ಮತ್ತು ಪಕ್ಕದಲ್ಲಿ ಯಲ್ಲಮ್ಮ ದೇವಿಯ ಶಿಲ್ಪವನ್ನು ಇಡಲಾಗಿದೆ. ದೇವಿಗೆ ಹಸಿರು ಬಣ್ಣದ ಸೀರೆಯನ್ನು ತೊಡಿಸಿದ್ದಾರೆ. ದೇವಿಯ ಮುರ್ತಿಯು ಕಪ್ಪು ಕಲ್ಲಿನದಾಗಿದೆ. ದೇವಿಯ ಮೊಗದ ಮೇಲೆ ಕಣ್ಣುಗಳಿಗೆ ಬೆಳ್ಳಿಯ ಕಣ್ಣುಗಳನ್ನು ತೊಡಿಸಲಾಗಿದೆ. ಎರಡು ಶಿಲ್ಪಗಳಿಗೆ ಮತ್ತು ತಾಳಿಗಳನ್ನು ಹಾಕಿ ಅಲಂಕಾರ ಮಾಡಿದ್ದಾರೆ.
ದೇವಾಲಯದ ಸ್ವಲ್ಪ ಮುಂದೆ ದೇವಿಯ ಪಾದಗಳ ಗದ್ದುಗೆ ಇದೆ. ಇಲ್ಲಿಗೆ ಮೊದಲು ಪೊಜೆ ಮಾಡಿ ನಂತರ ದೇವಿಯ ಪೊಜೆಗೆ ಅಣಿಯಾಗುತ್ತಾರೆ.

ಯಲ್ಲಮ್ಮ ದೇವಿಯ ಮೂರ್ತಿಗಳು ದೇವಿಯಪಾದುಕೆಗಳು
ಜಾತ್ರೆ:- ಈ ದೇವಸ್ಥಾನದ ಪೊಜೆಯನ್ನು ದಿನಾಲ ಕಮಲವ್ವ ಮರಟಗಿ ಎಂಬುವವರು ಮಾಡುತ್ತಾರೆ. ಇವರು ನಿವೃತ್ತ ಸರ್ಕಾರಿ ನೌಕರರು 1982 ನೇ ಇಸ್ವೀಯಿಂದ ಇವರೇ ದೇವಿಗೆ ಪೊಜೆ ಸಲ್ಲಿಸುತ್ತಾ ಬಂದಿದ್ದಾರೆ. ಅಮವಾಸ್ಯೆಯ ದಿನದಂದು ವಿಶೇಷ ಪೊಜೆ ಮಾಡುತ್ತಾರೆ. ಪ್ರತಿ ವರ್ಷವೂ ದವನದ ಹುಣ್ಣಿಮೆಯ ದಿನದಂದು ಎಲ್ಲ ಭಕ್ತರೂ ಒಂದುಗೂಡಿ ಜಾತ್ರೆ ಆಚರಿಸುತ್ತಾರೆ. ಜಾತ್ರೆಯ ದಿನದಂದು ದೇವಿಗೆ ಸಿಹಿ ಅಡುಗೆಯನ್ನು ಮಾಡಿಸುತ್ತಾರೆ. ಅಂದಿನ ದಿನ ಅನ್ನದಾನವನ್ನು ಸಹ ಮಾಡುತ್ತಾರೆ. ತಮ್ಮ ಜನಾಂಗದವರು ಒಂದುಗೂಡಿ ಹಬ್ಬ ಆಚರಿಸುತ್ತಾರೆ.
ನಂಬಿಕೆಗಳು:- ಈ ದೇವಿಗೆ ಇಲ್ಲಿಯ ಜನರು ತುಂಬಾ ನಂಬಿಕಸ್ಥರಾಗಿದ್ದು, ದೇವಿಯ ಪವಾಡಗಳನ್ನು ನಂಬುತ್ತಾರೆ. ಏನೇ ಕಾರ್ಯವಾದರೂ ಅದು ದೇವಿಯ ಆಶೀರ್ವಾದದಿಂದಲೇ ಎಂದು ನಂಬಿದ್ದಾರೆ. ಹಲವಾರು ಪವಾಡಗಳು ನಡೆದಿವೆ ಎಂದು ಹೇಳುತ್ತಾರೆ.
ಸಮಾರೋಪ:- ಇಲ್ಲಿಯ ಜನರು ದೇವಿಯ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ದಿನಾಲೂ ಪೊಜೆಯನ್ನು ಸಲ್ಲಿಸುತ್ತಾರೆ.

ದುರ್ಗಮ್ಮ ದೇವಸ್ಥಾನ ( ಮಲ್ಲಿಕಾರ್ಜುನ ನಗರ)
ಪಿಠೀಕೆ
ಈ ದೇವಸ್ಥಾನವೂ ಹುನಗುಂದ ನಗರದ ಮಲ್ಲಿಕಾರ್ಜುನ ಓಣಿಯಲ್ಲಿದೆ. ಇಲ್ಲಿ ಕುಂಚಿಕೊರ್ ಜನಾಂಗದವರು ವಾಸಿಸುತ್ತಿದ್ದು, ಅವರು ದಿನನಿತ್ಯ ದೇವಿಗೆ ಪೊಜೆ ಸಲ್ಲಿಸುತ್ತಾ ಬಂದಿದ್ದಾರೆ.

ದೇವಾಲಯದ ಲಕ್ಷಣಗಳು……..
ದೇವಾಲಯದ ಉಗಮ:- ಮಲ್ಲಿಕಾರ್ಜುನ ನಗರದಲ್ಲಿ ಈ ದೇವಸ್ಥಾನವೂ ಮೊದಲಿನಿಂದಲೂ ಇದೆ. ಜನರು ಈ ದೇವಿಗೆ ನಂಬಿಕಸ್ಥರಾಗಿದ್ದಾರೆ. ಈ ದೇವಸ್ಥಾನವೂ 11/10/1995 ರಂದು ಸ್ಥಾಪನೆಯಾಗಿದೆ. ಕೊರವಾರು ಎಂಬ ಮನೆತನದವರು ಮೊದಲಿನಿಂದಲೂ ದೇವಿಗೆ ಪೊಜೆ ಸಲ್ಲಿಸುತ್ತಾ ಬಂದಿದ್ದಾರೆ.
ಆಕಾರ:- ದೇವಸ್ಥಾನವೂ ಚೌಕಾಕಾರದಲ್ಲಿದ್ದು ಮುಖ್ಯದ್ವಾರದಲ್ಲಿ ಬೃಹತ್ ಗೇಟನ್ನು ಮಾಡಿಸಿದ್ದು ಒಳಗೆ ವಿಶಾಲವಾದ ಜಾಗವಿದೆ.
ದೇವಾಲಯದ ಗರ್ಭಗುಡಿ:- ಈ ದೇವಸ್ಥಾನದ ಗರ್ಭಗುಡಿಯೊಳಗೆ ಮಂಟಪದ ರೀತಿಯಲ್ಲಿ ನಾಲ್ಕು ಕಂಬಗಳನ್ನು ಹೊಂದಿದ್ದು, ನಡುವೆ ದೇವಿಯ ಮೂರ್ತಿ ಇಟ್ಟು ಪೊಜೆ ಮಾಡಲಾಗುತ್ತದೆ. ಮಂಟಪದ ಮೇಲೆ ತಾಮ್ರದ ಕಳಸವನ್ನು ಇಡಲಾಗಿದೆ.
ಮೂರ್ತಿ:- ಈ ದೇವಾಲಯದ ಗರ್ಭಗುಡಿಯೋಳಗೆ ಯಾವುದೇ ರೀತಿಯ ಮೂರ್ತಿಯು ಕಾಣಬರುವುದಿಲ್ಲ. ಒಂದು ಕಪ್ಪು ಕಲ್ಲು ಇದ್ದು, `ಅದಕ್ಕೆ ದಿನನಿತ್ಯ ಪೊಜೆಸಲ್ಲಿಸುತ್ತಾರೆ.

ದೇವಾಲಯದ ಗರ್ಭಗುಡಿ
ಜಾತ್ರೆ:- ಇಲ್ಲಿ ಪ್ರತಿನಿತ್ಯವೂ ಹನುಮಂತ ಕೊರವಾರು ಎಂಬುವವರು ಪೊಜೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಪ್ರತಿವರ್ಷವೂ ಜಾತ್ರೆಯನ್ನು ಮಾಡುತ್ತಾರೆ. ಸಿಹಿ ಅಡುಗೆಯನ್ನು ಮಾಡಿ ದೇವಿಗೆ ನೈವೇದ್ಯ ಮಾಡುತ್ತಾರೆ. ಇಲ್ಲಿ ಕೊರನು ಜನಾಂಗದವರೇ ಒಂದುಗೂಡಿ ಜಾತ್ರೆಯನ್ನು ವಿಜೃಂಭನೆಯಿಂದ ಆಚರಿಸುತ್ತಾರೆ. ಎಲ್ಲರೂ ಒಂದುಗೂಡಿ ದೇವಿಯನ್ನು ಆರಾಧಿಸುತ್ತಾರೆ. ಮಹಾನವಮಿಯ ದಿನದಂದು ವಿಷೇಶ ಪೊಜೆ ಮಾಡಿ ಜಾತ್ರೆ ಮಾಡುತ್ತಾರೆ.
ನಂಬಿಕೆಗಳು:- ಈ ದೇವರ ಮೇಲೆ ಇಲ್ಲಿಯ ಜನ ಅಪಾರ ನಂಬಿಕೆ ಇಟ್ಟಿದ್ದು, ಪವಾಡಗಳು ನಡೆದಿಲ್ಲ ಎಂದೂ ಹೇಳುತ್ತಾರೆ.
ಸಮಾರೋಪ:- ಕೊರನು ಜನಾಂಗದವರೇ ಪೊಜೆ ಮಾಡಬೇಕೆಂಬ ನಿಯಮವಿದೆ. ಆದರೆ ಜಾತ್ರೆಯ ಸಮಯದಲ್ಲಿ ಎಲ್ಲರೂ ಒಂದುಗೂಡಿ ಪೊಜೆಯನ್ನು ಸಲ್ಲಿಸುತ್ತಾರೆ.
ದುರ್ಗಮ್ಮ ದೇವಸ್ಥಾನ ( ಅಂಬೇಡ್ಕರ್ ನಗರ)
ಪಿಠಿಕೆ
ಈ ದೇವಾಲಯವೂ ಹುನಗುಂದ ನಗರದ ಅಂಬೇಡ್ಕರ ಓಣಿಯಲ್ಲಿದೆ. ಈ ದೇವಿಯ ಮೇಲೆ ಇಲ್ಲಿಯ ಜನ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ದೇವಸ್ಥಾನವೂ ಚಿಕ್ಕದಾಗಿದೆ. ದೇವಸ್ಥಾನದ ಮುಂದೆ ವಿಶಾಲವಾದ ಜಾಗ ಇದೆ.
ದೇವಾಲಯದ ಲಕ್ಷಣಗಳು…….
ಆಕರ:- ಈ ದೇವಸ್ಥಾನವೂ ಚೌಕಾಕಾರದಲ್ಲಿದೆ. ಚಿಕ್ಕ ದೇವಸ್ಥಾನವಾಗಿದೆ. ಕೆಲವು ವರ್ಷಗಳ ಹಿಂದೆ ಈ ದೇವಸ್ಥಾನವನ್ನೂ ನಿರ್ಮಿಸಲಾಗಿದೆ. ದೇವಸ್ಥಾನದ ಮೇಲೆ ಹತ್ತಿ ಹೋಗಲು ಎರಡು ಮೆಟ್ಟಿಲುಗನ್ನು ಮಾಡಿಸಿದ್ದಾರೆ. ಮುಂಭಾಗದಲ್ಲಿ ಕಟ್ಟೆಯ ರೂಪ ಜಾಗವಿದೆ.
ದೇವಾಲಯದ ಗರ್ಭಗುಡಿ:- ದೇವಾಲಯದ ಗರ್ಭಗುಡಿ ಚಿಕ್ಕದಾಗಿದೆ. ಕಬ್ಬಿಣದ ಸಲಾಕೆಗಳಿಂದ ದೇವಾಲಯದ ಬಾಗಿಲುಗಳನ್ನು ನಿರ್ಮಿಸಿದ್ದಾರೆ.
ಮುರ್ತಿ:- ಇಲ್ಲಿ ದೇವಿಯ ಮೂರ್ತಿಯನ್ನು ಕಟ್ಟಿಗೆಯಿಂದ ನಿರ್ಮಾಣ ಮಾಡಲಾಗಿದೆ. ಮೂರ್ತಿಗೆ ಕೇಸರಿ ಬಣ್ಣದಿಂದ ಅಲಂಕಾರ ಮಾಡಿದ್ದಾರೆ. ಎರಡು ದೇವಿಯ ಮೂರ್ತಿ ಇದ್ದು, ಒಂದು ವಿಗ್ರಹದ ದೇವಿಯು ಒಂದು ಕೈಯಲ್ಲಿ ಕತ್ತಿಯನ್ನು ಹಿಡಿದಿದ್ದಾಳೆ. ಇನ್ನೋಂದು ದೇವಿಯು ಸಿಂಹದ ಮೆಲೆ ಕುಳೀತುಕೊಂಡಿದ್ದಾಳೆ. ದೇವಿಗೆ ಹಸಿರು ಬಣ್ಣದ ಸೀರೆಯಿಂದ ಅಲಂಕರಿಸಿದ್ದಾರೆ. ದೇವಿಯ ಪಕ್ಕದಲ್ಲಿ ನವಿಲುಗರಿಯ ಗುಚ್ಛವನ್ನು ಇಟ್ಟಿದ್ದಾರೆ.
ದೇವಾಲಯದ ಗರ್ಭಗುಡಿ

ಜಾತ್ರೆ:- ಯಲ್ಲಪ್ಪ ಈಟಿ ಎಂಬುವವರು ಈ ದೇವಸ್ಥಾನವನ್ನೂ ಕಟಿಸಿದ್ದಾರೆ. ಮೊದಲಿನಿಂದಲೂ ಈಟಿ ಮನೆತನದವರೇ ದೇವಿಯ ಪೂಜೆಯನ್ನು ಮಡುತ್ತಿದ್ದಾರೆ. ದೇವಿಗೆ ಪ್ರತಿನಿತ್ಯವೂ ಪೊಜೆಯನ್ನ ಸಲ್ಲಿಸುತ್ತಿದ್ದಾರೆ. ಜಾತ್ರೆಯನ್ನು ಮೂರು ವರ್ಷಕ್ಕೊಮ್ಮೆ ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಜಾತ್ರೆಯ ದಿನದಂದು ದೇವಿಗೆ ಕೋಣ, ಆಡು ಮುಂತಾದವುಗಳನ್ನು ಬ್ಯಾಟಿ ಮಾಡುತ್ತಾರೆ. ಮತ್ತು ಚಲವಾದಿ ಜಾತಿಯವರೇ ಈ ಜಾತ್ರೆಯನ್ನು ಮಾಡಬೇಕೆಂಬ ನಿಯಮವಿದೆ. ಜಾತ್ರೆಯ ದಿನ ಅನ್ನದಾನವನ್ನೂ ಏರ್ಪಡಿಸುತ್ತಾರೆ.
ನಂಬಿಕೆಗಳು:- ಇಲ್ಲಿ ಯಾವುದೇ ರೀತಿಯ ಪವಾಡಗಳು ನಡೆದಿಲ್ಲ. ದೇವಿಯ ಮೇಲೆ ಇಲ್ಲಿಯ ಜನ ಅಪಾರವಾದ ನಂಬಿಕೆ ಇಟ್ಟಿದ್ದಾರೆ.
ಸಮಾರೋಪ:- ಚಲವಾದಿ ಜನಾಂಗದವರೇ ಇಲ್ಲಿ ದಿನನಿತ್ಯ ಪೊಜೆಯನ್ನು ಸಲ್ಲಿಸಬೇಕೆಂಬ ನಿಯಮವಿದೆ. ದೇವಿಯ ಮೇಲೆ ಇಲ್ಲಿಯ ಜನ ಅಪಾರವಾದ ನಂಬಿಕೆ ಇಟ್ಟಿದ್ದಾರೆ.

ಚಾಮುಂಡೇಶ್ವರಿ ( ಮೆಗಲಪೇಟೆ)
ಪಿಠೀಕೆ
ಈ ದೇವಸ್ಥಾನವೂ ಹುನಗುಂದ ನಗರದ ಮೇಗಲಪೇಟೆಯಲ್ಲಿದೆ. ಈ ದೇವಸ್ಥಾನವೂ ಮರಿ ದೇವರ ಮಠ ಎಂದೂ ಪ್ರಸಿದ್ದಿ ಪಡೆದಿದೆ. ಆದರೆ ಕೆಲ ವರ್ಷಗಳ ಹಿಂದೆ ಇಲ್ಲಿ ಚಾಮುಂಡೇಶ್ವರಿ ದೇವಿಯ ಛಾಯಾಚಿತ್ರವನ್ನಿಟ್ಟು ಪೊಜೆ ಸಲ್ಲಿಸುತ್ತಾರೆ. ಈ ದೇವರಿಗೆ ಇಲ್ಲಿಯ ಜನರು ಅಪಾರವಾದ ನಂಬಿಕೆ ಇಟ್ಟಿದ್ದಾರೆ.
ದೇವಾಲಯದ ಲಕ್ಷಣಗಳು……..
ಆಕಾರ:- ದೇವಸ್ಥಾನವೂ ದೊಡ್ಡದಾಗಿದೆ. ವಿಶಾಲವಾದ ಜಾಗವನ್ನು ಹೊಂದಿದೆ. ದೇವಸ್ಥಾನದ ಒಳಾಂಗಣದಲ್ಲಿ ಗುಡಿ ಇದ್ದು, ಗುಡಿಯನ್ನು ಕಲ್ಲುಗಳಿಂದ ಕಟ್ಟಲಾಗಿದೆ. ದೇವಸ್ಥಾನದ ಬಲಭಾಗದ ಹಿಂದೆ ಬೇವಿನಮರದ ಕಟ್ಟೆ ಇದ್ದು, ಅಲ್ಲಿ ಹಾವಿನ ಚಿತ್ರವಿರುವ ಶಿಲ್ಪಗಳಿವೆ. ಇಲ್ಲಿ ದಿನಾಲೂ ಪೊಜೆಯನ್ನು ಸಲ್ಲಿಸುತ್ತಾರೆ. ದೇವಸ್ಥಾನದ ಮೇಲೆ ಹತ್ತಿ ಹೋಗಲು ಮೂರು ಮೆಟ್ಟಿಲುಗಳಿವೆ. ಮುಂಭಾಗದಲ್ಲಿ ಕಲ್ಲಿನ ಎರಡು ಕಂಬಗಳಿವೆ.
ದೇವಾಲಯದ ಗರ್ಭಗುಡಿ:- ದೇವಾಲಯದ ಗರ್ಭಗುಡಿಯು ಚಿಕ್ಕದಾಗಿದೆ. ಮುಂಭಾಗದ ಮೇಲೆ ಸಾದಾರಣದ ಕಲ್ಲುಗಳನ್ನು ಹಾಕಿದ್ದಾರೆ. ಮೇಲೆ ಗಣೇಶನ ಮೂರ್ತಿಯನ್ನು ಕೆತ್ತಲಾಗಿದೆ.
ಮೂರ್ತಿ:- ಇಲ್ಲಿ ಯಾವುದೇ ರೀತಿಯ ದೇವಿಯ ಮೂರ್ತಿಗಳು ಕಂಡುಬರುವುದಿಲ್ಲ. ಆದರೆ ಗರ್ಭಗುಡಿಯೊಳಗೆ ಲಿಂಗವಿದೆ. ಲಿಂಗದ ಬಲಭಾಗಕ್ಕೆ ಚಾಮುಂಡೇಶ್ವರಿ ಛಾಯಾಚಿತ್ರವನ್ನಿಟ್ಟು ಪೊಜೆ ಸಲ್ಲಿಸುತ್ತಿದ್ದಾರೆ.
ಜಾತ್ರೆ:- ಈ ದೇವಿಯ ಜಾತ್ರೆಯನ್ನು ಪ್ರತಿವರ್ಷ ಮಹಾನವಮಿಯ ದಿನದಂದು ವಿಜೃಂಭನೆಯಿಂದ ಮಾಡುತ್ತಾರೆ. ಸಿಹಿ ಅಡುಗೆಯನ್ನು ಮಾಡಿಸುತ್ತಾರೆ. ಅನ್ನ ಪ್ರಸಾದವನ್ನು ಮಾಡಿರುತ್ತಾರೆ. ಹೋಳೀಗೆ, ಕರಿಗಡಬು, ಅನ್ನ, ಸಾರು ಮುಂತಾದವುಗಳನ್ನು ಮಾಡಿಸುತ್ತಾರೆ. ದಿನಾಲೂ ಇಲ್ಲಿ ದೇವರಿಗೆ ಪೊಜೆ ಸಲ್ಲಿಸುತ್ತಿದ್ದು, ಮಂಗಳವಾರ ಮತ್ತು ಶುಕ್ರವಾರ ಎರಡೂ ದಿನ ಹೇಳಿಕೆಯನ್ನು ನೀಡುತ್ತಾರೆ ಎನ್ನಲಾಗಿದೆ.
ನಂಬಿಕೆಗಳು:- ದೇವಿಯ ಮೇಲೆ ನಂಬಿಕೆ ಇಟ್ಟಿದ್ದಾರೆ.
ಸಮಾರೋಪ:- ಈ ದೇವಸ್ಥಾನವೂ ಮರಿದೇವರ ಮಠ ಎಂದೇ ಹೇಸರುವಾಸಿಯಾಗಿದೆ. ಇಲ್ಲಿ ಕೆಲ ವರ್ಷಗಳ ಹಿಂದೆ ಚಾಮುಂಡೇಶ್ವರಿ ದೇವಿಯ ಪೊಜೆಯನ್ನು ಮಾಡುತ್ತಿದ್ದು, ಪ್ರತಿನಿತ್ಯವೂ ಪೊಜೆಯನ್ನು ಮಾಡುತ್ತಿದ್ದಾರೆ.
ಬನ್ನಿ ಮಹಾಂಕಾಳೀ :- (ಪೋಲಿಸ್ ಕ್ವಾಟರ್ಸ)
ಪಿಠೀಕೆ
ಈ ದೇವಸ್ಥಾನವೂ ಹುನಗುಂದ ನಗರದ ಪೊಲಿಸ್ ಕ್ವಾಟರ್ಸ ಎಂಬಲ್ಲಿ ಇದೆ. ಇದು ಬನ್ನಿ ಗಿಡದ ದೇವಿಯಾಗಿದೆ. ಈ ದೇವರ ಮೇಲೆ ಹುನಗುಂದ ಊರಿನ ಜನತೆ ಎಲ್ಲರೂ ನಂಬಿಕೆ ಇಟ್ಟಿದ್ದಾರೆ.
ದೇವಾಲಯದ ಲಕ್ಷಣಗಳು…….
ಆಕಾರ:- ಈ ದೇವಸ್ಥಾನವೂ ಕಟ್ಟಡವನ್ನು ಹೊಂದಿಲ್ಲ. ಇದು ಬನ್ನಿ ಗಿಡವಾಗಿದ್ದು, ಗಿಡದ ಸುತ್ತ ಕಟ್ಟೆಯನ್ನು ಕಟ್ಟಿಸಿದ್ದಾರೆ.
ಮೂರ್ತಿ:- ಇಲ್ಲಿ ದೇವಿಯ ಯಾವುದೇ ರೀತಿಯ ಮೂರ್ತಿ ಕಾಣಬರುವುದಿಲ್ಲ. ಕಟ್ಟೆಯ ಕೆಳಗೆ ಮಾಡಣಿಯಲ್ಲಿ ನಾಗರ ಹಾವಿನ ಕಲ್ಲಿನ ಶಿಲ್ಪವಿದೆ. ಮುಂದೆ ಹನುಮಂತ ದೇವರ ದೇವಸ್ಥಾನವಿದೆ.

ದೇವಸ್ಥಾನದ ಹೋರನೋಟ

ಜಾತ್ರೆ:- ಇಲ್ಲಿ ಯಾವುದೇ ರೀತಿಯ ಜಾತ್ರೆ ನಡೆದಿರುವುದಿಲ್ಲ. ಊರಿನ ಎಲ್ಲ ಹೆಣ್ಣು ಮಕ್ಕಳು ಮಹಾನವಮಿಯ ದಿನದಂದು ಬೆಳಿಗ್ಗೆ ದೇವಿಗೆ ಪೊಜೆ ಸಲ್ಲಿಸುತ್ತಾರೆ. ಮತ್ತು ಬನ್ನಿ ಗಿಡಕ್ಕೆ ಭಕ್ತಿಯಿಂದ ಪೊಜೆ ಸಲ್ಲಿಸುತ್ತಾರೆ.
ನಂಬಿಕೆಗಳು:- ದೇವಿಯ ಮೇಲೆ ಇಲ್ಲಿ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ಪ್ರತಿಯೊಬ್ಬರು ಭಕ್ತಿಯಿಂದ ಪೊಜೆ ಸಲ್ಲಿಸುತ್ತಿದ್ದಾರೆ.
ಸಮಾರೋಪ:- ಬನ್ನಿಗಿಡದ ಮೇಲೆ ಇಲ್ಲಿಯ ಜನ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ಮತ್ತು ಇಲ್ಲಿ ಪ್ರತಿಯೊಬ್ಬರೂ ದೇವಿಯ ಆರಾಧಕರಾಗಿದ್ದಾರೆ.
ಕಾಳೀಕಾ ದೇವಿ ದೇವಸ್ಥಾನ ( ಚಿತ್ತವಾಡಗಿ ರಸ್ತೆ)
ಪಿಠೀಕೆ
ಈ ದೇವಸ್ಥಾನವೂ ಹುನಗುಂದ ನಗರದ ಚಿತ್ತವಾಡಗಿ ರಸ್ತೆಯ ಪಕ್ಕದಲ್ಲಿದೆ. ಹೊಸದಾಗಿ ಈ ದೇವಸ್ಥಾನವನ್ನು ಕಟ್ಟಿಸುತ್ತಿದ್ದಾರೆ.
ಈ ದೇವಸ್ಥಾನದ ಬಗ್ಗೆ ಯಾವುದೇ ರೀತಿಯ ಮಾಹಿತಿ ದೊರೆಯುವುದಿಲ್ಲ.
ಕಟ್ಟಡ ಕಾರ್ಯಹಂತದಲ್ಲಿದೆ.
ಅನುದಾನ:- ಹುನಗುಂದ ನಗರದಲ್ಲಿ ನೆಲೆಸಿರುವ ಕೆಲವು ಮಾತೃ ದೇವಾಲಯಗಳು ಸರಕಾರದ ಅನುದಾನದ ನೀರಿಕ್ಷೇಯಲ್ಲಿದ್ದಾರೆ. ಇನ್ನೂ ಕೆಲವು ದೇವಾಲಯಗಳು ಸರಕಾರದ ಅನುದಾನವನ್ನು ಪಡೆದಿವೆ ಎಂದು ಹೇಳಬಹುದು.

ಉಪಸಂಹಾರ
ಹುನಗುಂದ ನಗರದಲ್ಲಿ ಒಟ್ಟು 21 ದೇವತೆಗಳನ್ನು ಕಾಣುತ್ತೆವೆ. ಇಲ್ಲಿ ಹಲವಾರು ಜನ ದೇವರುಗಳನ್ನು ತಮ್ಮ ಮನೆಯಲ್ಲಿಯೇ ಸ್ಥಾಪಿಸಿಕೊಂಡು ಪೊಜೆ ಸಲ್ಲಿಸುತ್ತಾ ಬಂದಿದ್ದಾರೆ. ಪ್ರತಿಯೊಂದು ದೇವಸ್ಥಾನವೂ ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ಪ್ರತಿ ದೇವಿಗೂ ಪೊಜೆಯನ್ನು ಸಲ್ಲಿಸುತ್ತಾರೆ. ವiತ್ತು ವಿಜೃಂಭಣೆಯಿಂದ ಜಾತ್ರೆ ಮಾಡಿ ಸಂಭ್ರಮಿಸುತ್ತಾರೆ. ಜಾತ್ರೆಯಲ್ಲಿ ಜಾತಿಯ ಭೇಧ-ಭಾವವಿಲ್ಲದೇ ಎಲ್ಲ ಜನಾಂಗದವರೂ ಒಂದುಗೂಡಿ ಜಾತ್ರೆಯ ದಿನದಂದು ದೇವಿಯನ್ನು ಆರಾಧಿಸುತ್ತಾರೆ.
ಕೆಲವು ಜನ ದೇವಿಯ ಪವಾಡಗಳನ್ನು ನಂಬುತ್ತಿದ್ದು, ಇನ್ನೂ ಕೆಲವರು ದೇವಿಯ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ಪ್ರತಿಯೊಂದು ದೇವರಿಗೂ ಅದರದೇ ಆದ ಹಿನ್ನಲೆಯಿದೆ. ಕೆಲ ದೇವತೆಗಳನ್ನು ಈಗ ಕೆಲ ವರ್ಷಗಳ ಹಿಂದೆ ಜಿರ್ಣೋದ್ದಾರ ಮಾಡಲಾಗಿದ್ದು ಇನ್ನೂ ಕೆಲವು ದೇವಸ್ಥಾನಗಳು ಸರ್ಕಾರದ ಧನ ಸಹಾಯದ ನೀರಿಕ್ಷೆಯಲ್ಲಿವೆ.

ಅಭಿಪ್ರಾಯ
ಈ ಗ್ರಂಥ ಚಿಕ್ಕದಾದ ಗ್ರಂಥವಾಗಿದ್ದರೂ ಅತ್ಯಂತ ಚೊಕ್ಕದಾದ ಗ್ರಂಥವಾಗಿದೆ. ಇದು ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹುನಗುಂದ ಗ್ರಾಮದ ದೇವಾಲಯಗಳ ಇತಿಹಾಸವನ್ನು ಹೊತ್ತು ತಂದ ಪುಸ್ತಕವಾಗಿದೆ.
ಈ ಗ್ರಂಥದ ಕತೃರಾದ ಕುಮಾರಿ ಸ್ವಪ್ನಾ ನಂದವಾಡಗಿ ಇವರು ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಇವರು ಹುನಗುಂದದ ವಿ,ಎಮ್,ಎಸ್,ಆರ್ ಕಲೆ, ವಿಜ್ಞಾನ, ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕಲಾ ವಿಭಾಗದ ಅಂತಿಮ ಸೆಮೆಸ್ಟರ್‍ನಲ್ಲಿ ಅಧ್ಯಯನ ಮಾಡುತ್ತಿದ್ದು, ಇಂತಹ ಚಿಕ್ಕ ವಯಸ್ಸಿನಲ್ಲಿಯೇ ದೇವಾಲಯಗಳ ಐತಿಹಾಸಿಕ ಘಟಣೆಗಳ ಬಗ್ಗೆ ಆಸಕ್ತಿ ವಹಿಸಿದ್ದು ಮೆಚ್ಚುವಂತಹ ವಿಷಯ.
ಈ ಪುಸ್ತಕದ ಒಂದು ವಿಶೇಷವೆಂದರೆ ಇಲ್ಲಿ ಕೇವಲ ಹೆಣ್ಣು ದೇವತೆಗಳ ದೇವಾಲಯಗಳ ಬಗ್ಗೆ ಐತಿಹಾಸಿಕ ಮಾಹಿತಿ ಸಂಗ್ರಹಿಸಲಾಗಿದೆ. ಈ ಪುಸ್ತಕ ಹುನಗುಂದ ಹಾಗೂ ಸುತ್ತ-ಮುತ್ತಲಿನ ಜನತೆಗೆ ದೇವಾಲಯಗಳ ಇತಿಹಾಸವನ್ನು ನೆನಪಿಸಿಕೊಡುತ್ತದೆ. ಈ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಲೂ ಕುಮಾರಿ. ಸ್ವಪ್ನಾ ಅವರು ಬಹಳಷ್ಟು ಶ್ರಮಪಟ್ಟಿದ್ದಾರೆ. ಈ ಪುಸ್ತಕವನ್ನು ಓದಿದಾಗ ದೇವಾಲಯಗಳ ಐತಿಹಾಸಿಕ ಘಟಣೆಗಳು ಅದ್ಭುತವೆನಿಸುತ್ತವೆ. ಏಕೆಂದರೆ ಈ ಗ್ರಾಮದಲ್ಲಿ ಹುಟ್ಟಿ ಬೆಳೆದವರಿಗೇ ದೇವಾಲಯಗಳ ಇತಿಹಾಸದ ಬಗ್ಗೆ ಪರಿಚಯವಿಲ್ಲ. ಈ ಗ್ರಂಥ ಇತಿಹಾಸ ಪರಿಚಯ ಮಾಡಿಕೊಡುವಲ್ಲಿ ಒಳ್ಳೆಯ ಕಾರ್ಯನಿರ್ವಹಿಸಲಾಗಿದೆ.
ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಯುವಕ ಯುವತಿಯರು ಕಷ್ಟಪಟ್ಟು ಇತಿಹಾಸದ ನೆನಪು ಮಾಡಿಕೊಳ್ಳಬೇಕು. ಪ್ರತಿಯೊಂದು ದೇವಾಲಯಗಳೂ ತಮ್ಮದೇ ಆದ ಅಧ್ಬುತ ಇತಿಹಾಸವನ್ನು ಹೊಂದಿವೆ. ಇದರಿಂದ ಇವುಗಳ ಉದ್ದೇಶ ತಿಳಿದುಬರುತ್ತದೆ.
ಇದಕ್ಕಾಗಿ ಕುಮಾರಿ ಸ್ವಪ್ನಾ ನಂದವಾಡಗಿಯವರಿಗೆ ನನ್ನ ಅಭಿನಂದನೆಗಳು.
ಶಶಿಧರ ಎಸ್,ಪಾಟೀಲ್
ರಾಜ್ಯಶಾಸ್ತ್ರ ಉಪನ್ಯಾಸಕರು
ಎಸ್,ವಿ,ಎಮ್,ಕಾಲೇಜು ಇಲಕಲ್.
ಆಧಾರ ಗ್ರಂಥಗಳು
 ಹಿರಿಯರ ಹೇಳೀಕೆಗಳು
 ಸ್ಥಳಕ್ಕೆ ಖುದ್ದು ಭೇಟಿ ನೀಡಿದದು.
 ಹುನಗುಂದದ ಸಾಮಾಜಿಕ ಜಾಲತಾಣ
 ಗ್ರಾಮ ದೇವತೆಗಳು ಡಾ. ಬಿ,ಸಿ,ಪಾಟೀಲ್

ಕುಮಾರಿ ಸಪನಾ ಭೀ. ನಂದವಾಡಗಿ
ಬಿ.ಎ.-3
ವಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಮತ್ತು ವಿ.ಎಸ್. ಬೆಳ್ಳಿಹಾಳ
ವಾಣಿಜ್ಯ ಮಹಾವಿದ್ಯಾಲಯ, ಹುನಗುಂದ

Leave A Comment