ಕೆಲೂರಿನ ಶ್ರೀ ಪಂಚಲಿಂಗೇಶ್ವರ ದೇವಾಲಯ

ಕೆಲೂರು ಹುನಗುಂದದಿಂದ ನೈರುತ್ಯಕ್ಕೆ 18 ಕಿಲೋಮೀಟರ ದೂರವಿರುವ ಒಂದು ಪುಟ್ಟ ಗ್ರಾಮ. ವ್ಯವಸಾಯ, ಹೈನುಗಾರಿಕೆಯ ಒಂದು ಆಯಕಟ್ಟಿನ ಸ್ಥಳ. ಕೆಲೂರು ಬರೀ ಕೆಲೂರಾಗಿರದೆ ಕೆಲ್ವಡಿ (ಕೆಳ್ವಡಿ- ತಾವರಗೆರೆ ಶಿಲಾ ಶಾಸನದಲ್ಲಿ ಉಲ್ಲೇಖ) ಕಾಳೂರ (ಹುನಗುಂದ ತಾಲೂಕಾ ದರ್ಶನದಲ್ಲಿ ಉಲ್ಲೇಖ) ಆಗಿತ್ತೆಂದು ತಿಳಿದು ಬರುತ್ತದೆ.  ಕೆಲೂರಿನ  ಆಗ್ನೇಯ  ದಿಕ್ಕಿನಲ್ಲಿ  ಬೆಟ್ಟದ ಸಮೀಪಕ್ಕೆ  ದೊಡ್ಡ ಆಲದ ಮರದ ಕೆಳಗೆ ಪಂಚಲಿಂಗೇಶ್ವರ (ರಾಮಲಿಂಗೇಶ್ವರ) ದೇವಾಲಯವಿದೆ. ಬಹುತೇಕ ದೇವಾಲಯಗಳು ಬೆಟ್ಟದ ಮೇಲೆ ಇರುವದನ್ನು ನಾವು ನೋಡುತ್ತೇವೆ. ದೇವರು ಸುಲಭವಾಗಿ ದೊರಕುವದಿಲ್ಲ, ಕಷ್ಟಪಟ್ಟು ದೇವರ […]

ಮುಂದೆ ಓದಿ...

ಶಾಸನಗಳಲ್ಲಿ ನಂದವಾಡಿಗಿ

ಹುನಗುಂದ ತಾಲೂಕು ಕೇಂದ್ರದಿಂದ ಆಗ್ನೆಯದ ಕಡೆಗೆ 24 ಕಿ.ಮಿ. ಅಂತರದಲ್ಲಿರುವ ಐತಿಹಾಸಿಕ ಪರಂಪರೆಯಿಂದ ಕೂಡಿದ ಗ್ರಾಮವೇ ನಂದವಾಡಿಗಿ. ಈ ಗ್ರಾಮವು ಪ್ರಾಚೀನ ಕಾಲದಿಂದಲೂ ತನ್ನದೇಯಾದ ವೈಶಿಷ್ಟ್ಯದಿಂದ ಬೆಳೆದು ಬಂದಿದೆ. ರಾಜಕೀಯವಾಗಿ ಪ್ರಾಚೀನ ಪರಂಪರೆಯನ್ನು ಹೊಂದಿದ್ದು, ಸರ್ವಧರ್ಮ ಸಮನ್ವಯತೆ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪಕಲೆ, ಜನಪದ ಕಲೆ ಮುಂತಾದ ಕ್ಷೇತ್ರಗಳಲ್ಲಿ ತನ್ನದೇಯಾದ ಪ್ರಗತಿಯನ್ನು ಕಂಡುಕೊಂಡ ಗ್ರಾಮ ಇದಾಗಿದೆ. ನಂದವಾಡಿಗಿಯ ಮೂಲ ಇತಿಹಾಸ:                 ನಂದವಾಡಿಗಿ ಗ್ರಾಮನಾಮದ ಕುರಿತು ಬೇರೆ ಬೇರೆ ಅಭಿಪ್ರಾಯಗಳು ಕೇಳಿ ಬರುತ್ತವೆ. ಇದು ಭಾರತದ ಪ್ರಾಚೀನ […]

ಮುಂದೆ ಓದಿ...

ಬಸವ ಯುಗದ ಹೊನ್ನಗುಂದ ಶಿವಶರಣರು

ವಿಶ್ವಸಂಸ್ಕøತಿಯ ಇತಿಹಾಸದಲ್ಲಿ ವಿಶಿಷ್ಟ ಕಾಲ ಬಸವಯುಗ. ಅದು ಶರಣ ಯುಗ, ಕಟ್ಟಕಡೆಯ ವ್ಯಕ್ತಿ ಉತ್ತುಂಗಕ್ಕೇರಿದ ಔನ್ನತ್ಯದ ಯುಗ. ಇದು ಸಮಗ್ರ ಜನಾಂಗದ ಅಂತಃಸತ್ವವನ್ನು ಪ್ರಚೋದಿಸಿದ ವಚನಯುಗ. ಕರ್ಮಕಟ್ಟಳೆ ಮರೆದು, ಸಂಪ್ರದಾಯದ ಸಂಕೋಲೆ ಹರಿದು, ಅಂತರಂಗದ ಕತ್ತಲೆ ಕಳೆದು ಬೆಳೆದವರು ಈ ಶರಣರು. ತಮ್ಮ ಮಾನವ ಸಹಜ ಗುಣ ಸ್ವಭಾವಗಳನ್ನು ಪುರಸ್ಕರಿಸಿ, ಸಂಸ್ಕರಿಸಿ ಶಿವನಿಗೆ ಅರ್ಪಿಸಿದವರು ಈ ಶರಣರು. ಇವರು ಸೇರಿದರು ಸಮೂಹವಾಗಿ ಬಸವಣ್ಣನವರ ಸುತ್ತ, ಅವರ ತತ್ವ ಅಳವಡಿಸಿಕೊಂಡು ಕಟ್ಟಿದರು. ಈ ಭೂಮಿಯ ಮೇಲೆ ಕಲ್ಯಾಣ ರಾಜ್ಯ. […]

ಮುಂದೆ ಓದಿ...

ಐಹೊಳೆ – ವಾಸ್ತುಶಿಲ್ಪದ ತೊಟ್ಟಿಲು

ಐಹೊಳೆ – ವಾಸ್ತುಶಿಲ್ಪದ ತೊಟ್ಟಿಲು  ಚಾಲುಕ್ಯ ವಂಶದ ಉಗಮ ಚಾಲುಕ್ಯರ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ಇನ್ನೂ ಭಿನ್ನಾಭಿಪ್ರಾಯವಿದೆ. ಒಂದು ಪೌರಾಣಿಕ ಕಥೆಯ ಪ್ರಕಾರ ಇಂದ್ರನ ವಿನಂತಿಯ ಮೇರೆಗೆ ಧರ್ಮ ಸ್ಥಾಪನೆಗಾಗಿ ಬ್ರಹ್ಮನು ತನ್ನ ಬೊಗಸೆ (ಚುಲಕ)ಯಿಂದ ವೀರಯೋಧ ನನ್ನು ಹುಟ್ಟಿಸಿದನಂತೆ, ಈ ವೀರಯೋಧನ ವಂಶವೇ ಮುಂದೆ ಸಾಮ್ರಾಜ್ಯವಾಗಿ ರೂಪಗೊಂಡಿತು. ರಾಜ ಲಾಂಛನ ಬಾದಾಮಿ ಚಾಲುಕ್ಯರ ರಾಜ ಲಾಂಛನ ಅಥವಾ ರಾಜ ಚಿನ್ಹೆ ವರಾಹ, ಶಂಖ, ಚಕ್ರ ದರ್ಪಣವಾದರೆ ವರಾಹ, ಸೂರ್ಯ, ಚಂದ್ರ, ಖಡ್ಗ ವಿಜಯನಗರ ಸಾಮ್ರಾಜ್ಯದ ರಾಜಮುದ್ರೆಯಾಗಿದೆ. […]

ಮುಂದೆ ಓದಿ...