ವಿಶಿಷ್ಟತೆಯಲ್ಲಿಯೇ ವಿಶಿಷ್ಟವಾದ ತಿಮ್ಮಾಪೂರದ ಮಾರುತೇಶ್ವರ ಹತಾರ ಸೇವೆಯ ಜಾತ್ರೆ

ಜಾತ್ರೆಗಳು ಧಾರ್ಮಿಕ, ಸಾಂಸ್ಕøತಿಕ ಹಾಗೂ ಸ್ಥಳೀಯ ಅಂಶಗಳ ಆಧಾರದ ಮೇಲೆ ಜರುಗುವುದು ಜನತೆಯ ಮನೋಧರ್ಮ ಅಭಿರುಚಿಯಂತೆ ವಿಭಿನ್ನ ಮತಧರ್ಮಗಳ ಕಾರಣಗಳಿಂದಾಗಿ ಜಾತ್ರೆಗಳ ಆಚರಣೆ ವಿಶಿಷ್ಟತೆಯಿಂದ ಕೂಡಿರುತ್ತವೆ.  ಅಂಥ ವಿಶಿಷ್ಟ ಜಾತ್ರೆಗಳಲ್ಲಿ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದ ಮಾರುತೇಶ್ವರ  ಜಾತ್ರೆ ವಿಶಿಷ್ಟತೆಯಲ್ಲಿಯೇ ವಿಶಿಷ್ಟವಾಗಿದೆ.  ಮಾರುತಿ ಬೆಳೆದು ಬಂದ ಬಗ್ಗೆ :              ಕಿಷ್ಕಿಂದ ಕಾಂಡದಿಂದ ಶ್ರೀರಾಮನ ಪಟ್ಟಾಭಿಷೇಕ ದವರೆಗೆ ಪ್ರತಿ ಪ್ರಕರಣದಲ್ಲಿ ಶ್ರೀ ಮಾರುತಿಯ  ಪ್ರಧಾನ ಪಾತ್ರದಲ್ಲಿ ಕಂಡು ಬರುತ್ತಾನೆ. ಹನುಮಂತನಿಲ್ಲದ ರಾಮಯಣವು ಅಪೂರ್ಣ, ಶ್ರಧ್ದೆ, […]

ಮುಂದೆ ಓದಿ...

ತಾಲೂಕಿನ ಸಾಹಿತ್ಯ ಸಮೀಕ್ಷೆ

ತಾಲೂಕಿನ ಸಾಹಿತ್ಯ ಸಮೀಕ್ಷೆ ಬಾಗಲಕೋಟ ಜಿಲ್ಲೆಗೆ ಸೇರಿದ ಆರು ತಾಲೂಕಗಳಲ್ಲಿ ಹುನಗುಂದ ಸಹ ಒಂದು. ನೂರಾಐವತ್ತಕ್ಕೂ ಹೆಚ್ಚು ಹಳ್ಳಿಗಳನ್ನೊಳಗೊಂಡ ಈ ತಾಲೂಕ ಹಲವಾರು ವೈವಿಧ್ಯತೆಗಳೊಂದಿಗೆ ಬಹು ಪ್ರಾಚೀನ ಪರಂಪರೆಯನ್ನು ಹೊಂದಿದೆ. “ದೇವಾಲಯಗಳ ತೊಟ್ಟಿಲು”, “ವಾಸ್ತುಶಿಲ್ಪ – ಮೂರ್ತಿಶಿಲ್ಪಗಳ ಪ್ರಯೋಗಶಾಲೆ” ಎಂದು ಕರೆಯಿಸಿಕೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಐಹೊಳೆ, ಭಕ್ತಿಭಂಡಾರಿ ವಿಶ್ವಗುರು ಬಸವಣ್ಣನವರ ಐಕ್ಯಮಂಟಪವನ್ನುಳ್ಳ ಧಾರ್ಮಿಕ ಕ್ಷೇತ್ರ ಕೂಡಲಸಂಗಮ ಮೊದಲಾದ ಚಾರಿತ್ರಿಕ ಹಿನ್ನಲೆಯ ಸ್ಥಳಗಳು ತಾಲೂಕಿನ ಘನ ಪರಂಪರೆಗೆ ನಾಂದಿ ಹಾಡುತ್ತಿವೆ. ಐತಿಹಾಸಿಕವಾಗಿ ಮಾತ್ರವಲ್ಲದೆ, ರಾಜಕೀಯವಾಗಿ, ಧಾರ್ಮಿಕವಾಗಿ, ಸಾಹಿತ್ಯಿಕವಾಗಿ ಸಾಂಸ್ಕøತಿಕವಾಗಿ […]

ಮುಂದೆ ಓದಿ...

ಗುರುಬಸವಾರ್ಯ ಮಠಮಾಸ್ತರರು

ಹುನಗುಂದದ ವಿಜಯ ಮಹಾಂತೇಶ ಹೈಸ್ಕೂಲಿನಲ್ಲಿ ಒಮ್ಮೆ ವಿದ್ಯಾರ್ಥಿಗಳ, ಶಿಕ್ಷಕರ ಸಾಮೂಹಿಕ ಪ್ರಾರ್ಥನೆ ನಡೆದಿತ್ತು. ಶಾಲೆಯ ಮುಖ್ಯದ್ವಾರದಲ್ಲಿ ಒಂದು ಪೋಲೀಸ್ ಜೀಪು ಬಂದು ನಿಂತಿತು. ಅದರೊಳಗಿನ ಒಬ್ಬ ಪೋಲಿಸ್ ಅಧಿಕಾರಿ ಕೆಳಗಿಳಿದರು. ಪ್ರಾರ್ಥನೆಗೆ ಭಂಗಬರಬಾರದೆಂದು ಅಲ್ಲಿಯೇ ನಿಂತರು. ಪ್ರಾರ್ಥನೆ ಮುಗಿಯುತ್ತಲೇ ಆ ಪೊಲೀಸ ಅಧಿಕಾರಿ ವೇದಿಕೆಯ ಕಡೆಗೆ ಬಂದರು. ಅಲ್ಲಿ ಕುಳಿತಿದ್ದ ಹಿರಿಯ ರೋರ್ವರನ್ನು ಪಾದಮುಟ್ಟಿ ನಮಸ್ಕರಿಸಿದರು. ಅವರು ಭಾವಾವೇಶಕ್ಕೊಳಗಾಗಿದ್ದರು. ಅವರ ಕಣ್ಣುಗಳಲ್ಲಿ ಆನಂದಭಾಷ್ಪಗಳು ಕಾಣುತ್ತಿದ್ದವು. ಅವರು ಹುನಗುಂದ ಹೈಸ್ಕೂಲದ ಹಿಂದಿನ ವಿದ್ಯಾರ್ಥಿ, ಈಗ ಮಹಾರಾಷ್ಟ್ರದಲ್ಲಿ ಪೊಲೀಸ ಅಧಿಕಾರಿ, […]

ಮುಂದೆ ಓದಿ...

ಇತಿಹಾಸದಲ್ಲಿ ಹುನಗುಂದ

ಇತಿಹಾಸದಲ್ಲಿ ಹುನಗುಂದ ಪೀಠಿಕೆ : ಶೀರ್ಷಿಕೆಯ ಹಿನ್ನೆಲೆಯಲ್ಲಿ ‘ಇತಿಹಾಸದಲ್ಲಿ ಹುನಗುಂದ’ ಗ್ರಾಮ ಅಥವಾ ತಾಲೂಕು ಎಂದು ಯಾವುದಾದರೂ ಅರ್ಥದಲ್ಲಿ ಅದರ ವ್ಯಾಪ್ತಿಯನ್ನು ಹಿಗ್ಗಿಸುವ/ಕುಗ್ಗಿಸುವ ಸೌಲಭ್ಯವಿದ್ದರೂ; ಸಂಪಾದಕರ ಕೋರಿಕೆಯಂತೆ ಹುನಗುಂದ ನಗರಕ್ಕೆ ಮಾತ್ರ ಈ ಲೇಖನ ಸೀಮಿತವಾಗಿರಲಿ  ಎಂದಾಗ ಒಪ್ಪಿದೆ ನಿಜ. ಆದರೆ ಬರೆಯಲು ಕೂತಾಗ ಅದು ಆಗಾಗ ತನ್ನ ವ್ಯಾಪ್ತಿಯನ್ನು ಮೀರಿ ಹೊರಚಾಚ ತೊಡಗಿತು. ಆದರೂ ವ್ಯಾಪ್ತಿ ಮೀರದಿರುವ ಒಂದು ಎಚ್ಚರವನ್ನಿಟ್ಟು ಕೊಂಡೇ ಈ ಲೇಖನ ಸಿದ್ಧಪಡಿಸುವಾಗ; ನಿಮ್ಮ ಮನೆ ಎಲ್ಲಿದೆ? ಎಂದು ಗೊತ್ತಿಲ್ಲದವರು ಪ್ರಶ್ನಿಸಿದಾಗ ಇಂಥವರ […]

ಮುಂದೆ ಓದಿ...