ಹುನಗುಂದದ ದೊಡ್ಡಪ್ಪನವರ ಬಾವಿ

         ನಮ್ಮ ದೇಶದಲ್ಲಿ ಹಲವಾರು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಈ ಕಾರಣದಿಂದ ಪ್ರತಿಶತ 75 ಜನರು ಇಲ್ಲಿ ಕೃಷಿಯಿಂದಲೇ ಬದುಕುತ್ತಿದ್ದಾರೆ. ಕೃಷಿಗೆ ಅವಶ್ಯಕವಾದ ಮಳೆಗೆ ಮಾನಸೂನ್ ಮಾರುತಗಳೇ ಮುಖ್ಯವಾದ ಆಧಾರ. ಆದರೆ ಮಾರುತಗಳು ಕೇವಲ ಕೆಲವು ಪ್ರದೇಶಗಳಿಗೆ ಮತ್ತು ವರ್ಷದಲ್ಲಿ ಕೆಲವು ಕಾಲ ಮಾತ್ರ ಭೂಮಿಗೆ ನೀರು ಒದಗಿಸುವುದರಿಂದ ಮನುಷ್ಯ ಕೃತಕ ನೀರಾವರಿ ಮೇಲೆ ಅವಲಂಬಿಸಬೇಕಾಗಿದೆ. ಮಳೆ ಬಂದಾಗ ಆ ನೀರನ್ನು ಸಂಗ್ರಹ ಮಾಡಿಟ್ಟುಕೊಂಡು ತನ್ನ ಅವಶ್ಯಕತೆಗಳನ್ನು ಪೂರೈಸಿಕ್ಕೊಳ್ಳಬೇಕಾದಂತಹ ಪರಿಸ್ಥಿತಿ ಇದೆ. ಕೇಲವು […]

ಮುಂದೆ ಓದಿ...

ಶ್ರೀ ವಿಜಯ ಮಹಾಂತೇಶ ಸಂಸ್ಥಾನಮಠ, ಚಿತ್ತರಗಿ-ಇಲಕಲ್ಲ-ಹುನಗುಂದ

ಶ್ರೀ ಮಠವ ಬೆಳಗಿದ ಹಣತೆಯ ಕುಡಿಗಳು ಇಂದು ಸರಕಾರ ಮಾಡಬೇಕಾದ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಅದರಲ್ಲೂ ಕರ್ನಾಟಕದ ಅನೇಕ ಲಿಂಗಾಯತ ಮಠ ಮಾನ್ಯಗಳು ಮಾಡುತ್ತ ಬಂದಿವೆ. ಅಧ್ಯಾತ್ಮ ಜ್ಞಾನದೊಂದಿಗೆ ಶೈಕ್ಷಣಿಕ ದಾಸೋಹ ಕಾರ್ಯಗಳಲ್ಲಿ ತೊಡಗಿದ ಉತ್ತರ ಕರ್ನಾಟಕದ ಕೆಲವೇ ಮಠಗಳಲ್ಲಿ ಚಿತ್ತರಗಿ ಸಂಸ್ಥಾನ ಮಠ ಇಲಕಲ್ಲ ಕೂಡಾ ಎದ್ದು ಕಾಣುವ ಹೆಸರು. ದ್ಯಾಂಪೂರ ಚೆನ್ನಕವಿಗಳು ಷಟ್ಪದಿ ಛಂದಸ್ಸಿನಲ್ಲಿ ರಚಿಸಿದ ‘ವಿಜಯಮಹಾಂತೇಶ್ವರ ಪುರಾಣ’ – ಕೃತಿಯ ಪ್ರಕಾರ ಈ ಶ್ರೀ ಮಠಕ್ಕೆ ಪೀಠಾಧಿಪತಿಗಳಾಗಿ ಹೋದ 16 ಸ್ವಾಮಿಗಳ ಹೆಸರನ್ನು […]

ಮುಂದೆ ಓದಿ...

ಸಾಂಸ್ಕøತಿಕ ಗ್ರಾಮವಾಗಿ ಕರಂಡಿಪುರ (ಕರಡಿ)

ಪ್ರಸ್ತಾವನೆ : ಶಾಸನೋಕ್ತ ಕರವಿಡಿ-30 ಎಂದೇ ಹೆಸರಾದ ಇಂದಿನ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕರಡಿಗ್ರಾಮ ಪ್ರಾಚೀನ ಇತಿಹಾಸ ಹೊಂದಿರುವ ಈ ಗ್ರಾಮ ತನ್ನದೇಯಾದ ವಿಶೇಷತೆಯನ್ನು ಪಡೆದುಕೊಂಡ. ನೊಳಂಬ ದೊರೆಗಳ ಶಾಸನಗಳಲ್ಲಿ ಅವರ ಅಧಿಕಾರದ ವ್ಯಾಪ್ತಿಯನ್ನು ಗುರುತಿಸುವಾಗ ನೊಳಂಬವಾಡಿ-32000, ಬಲ್ಲಕುಂದೆ-300, ಕೋಗಳೆ-500, ಕದಂಬಳಿಕೆ-1000, ಕರವಿಡಿ-30 ಮೊದಲಾದ ನಾಡುಗಳ ಉಲ್ಲೇಖಗಳಿವೆ. ಕರಡಿ ಭೌಗೋಳಿಕ ಹಾಗೂ ಐತಿಹಾಸಿಕ ಹಿನ್ನೆಲೆ : ಕರಡಿಗ್ರಾಮ ತಾಲೂಕಾ ಕೇಂದ್ರವಾದ ಹುನಗುಂದದಿಂದ 25 ಕಿ.ಮಿ. ಅಂತರದಲ್ಲಿದೆ. ಭೌಗೋಳಿಕವಾಗಿ ಕಪ್ಪುಮಣ್ಣಿನಿಂದ ಕೂಡಿದ ಪಲವತ್ತಾದ ಭೂಮಿಯನ್ನು ಹೊಂದಿದೆ. ಜೋಳ, […]

ಮುಂದೆ ಓದಿ...

ಹುನಗುಂದ ತಾಲೂಕು : ಜಾನಪದ

ಹುನಗುಂದ ತಾಲೂಕು : ಜಾನಪದ – ಡಾ|| ಪ್ರಕಾಶ ಗ. ಖಾಡೆ ಕೂಡಲ ಸಂಗಯ್ಯ ಹೊಳಿಯಾಗ ಹ್ಯಾಂಗಿದ್ದಿ ಹಳ್ಳೋತ್ತಿ ಸಣ್ಣ ಮಳಲೊತ್ತಿ ಗಂಗೀಯ ನೀರೊತ್ತಿ ಲಿಂಗ ನೆನೆದಾವ. ಕೃಷ್ಣೆ-ಮಲಪ್ರಭೆಯರ ಕೂಡಲ ಸಂಗಮದಲ್ಲಿನ ಹೊಳೆಯಂಚಿನಲ್ಲಿ ನೆಲೆಸಿರುವ ಸಂಗಯ್ಯನ ಬಗೆಗಿರುವ ಜನಪದರ ಮುಗ್ಧ ಭಕ್ತಿಗೆ ಸಾಕ್ಷಿಯಂತಿರುವ ಈ ತ್ರಿಪದಿ ಜನಸಾಮಾನ್ಯರು ಕಟ್ಟಿಕೊಟ್ಟ ಒಂದು ಅಪೂರ್ವವಾದ ಸಾಹಿತ್ಯದ ರಸಗಟ್ಟಿ. ಹೌದು, ಜಾನಪದ ಎನ್ನುವುದು ಹಳ್ಳಿಯ ಅದರಲ್ಲೂ ಅನಕ್ಷರಸ್ಥ ಸಮುದಾಯದ ಒಡಲೊಳಗಿಂದ ಬಯಲುಗೊಂಡ ಅಪೂರ್ವ ನಿಧಿ. ಹಾಗಾಗಿ ಅಲ್ಲಿ ಮುಗ್ಧತೆ, ಕನಿಕರ, ಅನುಕಂಪ, […]

ಮುಂದೆ ಓದಿ...