ಜಾತ್ರೆ – ಉತ್ಸವಗಳು

ಇತ್ತೀಚೆಗೆ ಕೋಮುಸೌಹಾರ್ದತೆಯೇ ಒಂದು ಸಮಸ್ಯೆಯಾಗಿ ಉಲ್ಬಣವಾಗುತ್ತಿರುವ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಸೌಹಾರ್ದತೆ ಸಹಬಾಳ್ವೆಯಿಂದ ಒಂದೇ ಸಮುದಾಯಗಳಂತೆ ದೇವಾಲಯ ಮತ್ತು ಮಸೀದಿಗಳಿಗೆ ಒಗ್ಗೂಡಿ ಪೂಜೆ ಸಲ್ಲಿಸುತ್ತಿರುವುದು ಮತ್ತು ಜಾತ್ರೆ-ಉತ್ಸವಗಳಲ್ಲಿ ಪಾಲ್ಗೊಳ್ಳುವುದು ಇಂದಿನ ಸೈಬರ್ ಯುಗದಲ್ಲಿ ಅಪರೂಪದ ಸಂಗತಿ. ಭವ್ಯ ಇತಿಹಾಸ ಹೊಂದಿರುವ ನಮ್ಮ ಊರಿನ ಕಲೆ, ಸಾಹಿತ್ಯ, ಸಾಂಸ್ಕøತಿಕ ಪರಂಪರೆಗಳು ಬದಲಾವಣೆಯ ಗಾಳಿಗೆ ಸಿಕ್ಕಿ ವಿನೂತನ ವಿನ್ಯಾಸಗಳನ್ನು ಪಡೆದುಕೊಂಡಿದ್ದರೂ, ಜಾತ್ರೆ-ಉತ್ಸವಗಳು, ಜನಜಾಗೃತಿಗಳೇನೂ ಇಂದು ಕುಂದಿಲ್ಲ. ಈ ಎಲ್ಲಾ ಉತ್ಸವಗಳು ನಮ್ಮ ಕಲಾ ಪ್ರಕಾರ; ಇವು ನಮ್ಮ […]

ಮುಂದೆ ಓದಿ...

ತಾಲೂಕಿನ ಕೆರೆಗಳು

ತಾಲೂಕಿನ ಕೆರೆಗಳು – ಸಿದ್ಧಲಿಂಗಪ್ಪ ಬೀಳಗಿ ಜೀವವಿಕಾಸದ ಚರಿತ್ರೆಯನ್ನು ಅಭ್ಯಸಿಸಿದರೆ ಮಾನವ ಆದಿಮಾನವ ಹಂತವನ್ನು ದಾಟಿ ಸಂಘಜೀವಿಯಾಗಿ ನೆಲೆನಿಂತು ಕಾಲಾಂತರದಲ್ಲಿ ನಿಸರ್ಗದತ್ತವಾದ ಸಂಪನ್ಮೂಲಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡದ್ದು ಕಂಡುಬರುತ್ತದೆ. ಮಳೆಗಾಲದಲ್ಲಿ ಭೂಮಿಗೆ ಬಿದ್ದ ನೀರನ್ನು ಹಿಡಿದಿಟ್ಟು ವರ್ಷವಿಡೀ ಕುಡಿಯಲು, ಜನಜಾನುವಾರು ಪೋಷಣೆಗೆ ಅನುಕೂಲವಾಗಲೆಂದು ಕೆರೆ, ಕಲ್ಯಾಣಿ, ಕ್ರಮೇಣ ಕೃಷಿ, ವಿದ್ಯುತ್, ಮೀನುಗಾರಿಕೆ, ವಿವಿಧೋದ್ದೇಶ ಯೋಜನೆಗಳಿಗಾಗಿ ಬೃಹತ್ ಆಣೆಕಟ್ಟುಗಳನ್ನು ನಿರ್ಮಿಸಿ ಸಂಗ್ರಹಿಸಿದ ನೀರನ್ನು ಜನಸಮುದಾಯದ ಅಗತ್ಯ ಪೂರೈಕೆಗೆ ಬಳಸಲಾರಂಭಿಸಿದ. ಕೆರೆ ಎಂಬುದು ತುಂಬ […]

ಮುಂದೆ ಓದಿ...

ತಾಲೂಕಿನ ಕೃಷಿ ಮಾಹಿತಿ

ತಾಲೂಕಿನ ಕೃಷಿ ಮಾಹಿತಿ – ಎಸ್. ಪಿ. ಬಾಗಲಕೋಟ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಆದಾಯದ ಬುಪಾಲು ಕೃಷಿಯಿಂದಲೇ ಬರುತ್ತದೆ. ‘ಒಕ್ಕಲಿಗ ನಕ್ಕರೆ ಜಗವೆಲ್ಲ ಸಕ್ಕರೆ’, ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ ಎಂಬ ಮಾತುಗಳು ಕೃಷಿಕನ ಬದುಕಿನ ವಾಸ್ತವತೆ ಮತ್ತು ಕೃಷಿಯ ಅಗತ್ಯತೆಯನ್ನು ಅನಾವರಣಗೊಳಿಸುತ್ತವೆ. ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕು ಕೃಷಿಪ್ರಧಾನ ತಾಲೂಕು ಫಲವತ್ತಾದ ಎರೆಮಣ್ಣಿನಲ್ಲಿ ಶ್ರಮವಹಿಸಿ ಸಾಗುವಳಿ ಮಾಡಿ ಉತ್ತಮ ಫಸಲು ತೆಗೆಯುವ ರೈತರ ಕಸರತ್ತು ಮಾದರಿ ಮತ್ತು ಅನುಕರಣೀಯವಾದುದು. ‘ಹುನಗುಂದ ತಾಲೂಕ ಉತ್ತರ ಒಣ […]

ಮುಂದೆ ಓದಿ...

ಒಣಬೇಸಾಯ ಕೃಷಿ

ಒಣಬೇಸಾಯ ಕೃಷಿ – ಡಾ|| ಮಲ್ಲಣ್ಣ ನಾಗರಾಳ ಭಾರತವು ಮೂಲತಃ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಕೃಷಿಕರು ದೇಶದ ಬೆನ್ನೆಲುಬಾಗಿದ್ದಾರೆ. ಕೃಷಿ ಕ್ಷೇತ್ರದ ಉನ್ನತಿಯೇ ದೇಶದ ಉನ್ನತಿ ಎಂಬ ಮಾತು ಭಾರತದ ಮಟ್ಟಿಗೆ ಅಕ್ಷರಶಃ ಸತ್ಯವಾಗಿದೆ. ಅತಿವೃಷ್ಠಿ, ಅನಾವೃಷ್ಠಿ, ಅಕಾಲಿಕ ಮಳೆಯಂತಹ ನೈಸರ್ಗಿಕ ಏರುಪೇರುಗಳನ್ನು ಎದುರಿಸಿ ಭಾರತೀಯ ರೈತ ತನ್ನ ಬದುಕನ್ನು ಸಾಗಿಸಬೇಕಿದೆ. ಪ್ರಸ್ತುತ ಸಂದರ್ಭದಲ್ಲಿ ರೈತ ತನ್ನ ಭೂಮಿಯನ್ನೇ ನಂಬಿ ಬದುಕುವುದು ದುಸ್ತರವೆನ್ನಿಸಿದೆ. ಈ ಎಲ್ಲ ಸಂದಿಗ್ಧತೆಯ ಸುಳಿಯಲ್ಲಿರುವ ಭಾರತಿಯ ರೈತಾಪಿ ವರ್ಗಕ್ಕೆ ಭೂಮಿಯ ನಂಟನ್ನು ಹರಿದುಕೊಂಡು […]

ಮುಂದೆ ಓದಿ...