ಪಿ. ಬಿ. ಧುತ್ತರಗಿ

ಪಿ. ಬಿ. ಧುತ್ತರಗಿ

ಪುಂಡಲೀಕಗೌಡ ಬಸನಗೌಡ ಧುತ್ತರಗಿ ಎನ್ನುವ ಹೆಸರಿನ ನಾಟಕ ರಚನೆಕಾರ ಹುಟ್ಟಿದ್ದು ಹುನಗುಂದ ತಾಲೂಕಿನ ಅಮೀನಗಡ ಪಕ್ಕದ ಸೂಳೇಬಾವಿಯಲ್ಲಿ 15-16-1929 ರಂದು ನೇಕಾರ ಕುಟುಂಬದ ಸಂಗಮ್ಮನ ಉದರದಲ್ಲಿ ಬಹುದಿನ ಮಕ್ಕಳಾಗದ ಕಾರಣ ಸಂಗಮ್ಮನಿಗೆ ಬಹುಕಾಲ ಮಕ್ಕಳಾಗದಿದ್ದಾಗ ಫಂಡರಪುರದ ವಿಠಲನಿಗೆ ಹರಕೆಹೊತ್ತು ಪಡೆದ ಕಾರಣ ಇಟ್ಟ ಹೆಸರು ಪುಂಡಲೀಕ.

ಬಡತನದ ಕಾರಣ ಕೇವಲ ನಾಲ್ಕನೇ ತರಗತಿಗೇ ಶಾಲೆಗೆ ಶರಣುಹೊಡೆದು ತಂದೆಯ ಪ್ರಭಾವದಿಂದ ಪ್ರಗತಿಶೀಲ ಸಾಹಿತಿಗಳ ಕಥೆ ಕಾದಂಬರಿಗಳನ್ನು ಓದಿ; ಸಮೀಪದ ಊರುಗಳಲ್ಲಿ ನಡೆಯುತ್ತಿದ್ದ ನಾಟಕಗಳನ್ನು ನೋಡಿ ಪ್ರಭಾವಿತನಾದ ಈತ 1952 ರಲ್ಲೇ ರವೀಂದ್ರನಾಟ್ಯ ಸಂಘವನ್ನು ಸ್ಥಾಪಿಸಿದರು. ತಮ್ಮ ಕಂಪನಿಗಳಿಗೆ ಹೊಸನಾಟಕಗಳು ಅವಶ್ಯವೆನಿಸಿದಾಗ 1956 ರಲ್ಲೇ ‘ಕಲ್ಪನಾಪ್ರಪಂಚ’ ಎಂಬ ನಾಟಕ ರಚನೆ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಡಿಪಿಟ್ಟರು. ಮುಂದೆ ಹಲವಾರು ಕಂಪನಿಗಳ ಬೇಡಿಕೆಯ ಮೇರೆಗೆ ನ್ಯಾಯಾಧೀಶ eಣಛಿ ನಾಟಕಗಳನ್ನು ರಚಿಸಿಕೊಟ್ಟದ್ದು ಉಂಟು. ಹೀಗಾಗಿ ನಾಟಕ ರಚನೆಯೆಂದರೆ ಇವರಿಗೆ ನೀರು ಕುಡಿದಷ್ಟೆ ಸುಲಭವಾಗಿತ್ತು. ಇಂಥನಾಟಕಗಳನ್ನು ಸಾಮಾಜಿಕ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಬಿಂಬಿಸುವ ನಾಟಕಗಳಷ್ಟೇ ಅಲ್ಲದೆ ದೇಶಭಕ್ತಿ ಬಿಂಬಿಸುವ ನಾಟಕಗಳೂ ಇವೆ. ಉದಾಹರಣೆಗೆ – ‘ತಾಯಿಯ ಕರಳು’, ‘ಸಂಪತ್ತಿಗೆ ಸವಾಲ್’, ‘ಮಲಮಗಳು’, ‘ಪಣಕಿಟ್ಟ ಪ್ರಮಾಣ’, ‘ಇಲಕಲ್ಲ ಸೀರೆ’, ‘ಚಿಕ್ಕ ಸೊಸೆ’, ‘ಹೊಳೆಯದಂಡೆಹೊಲ’, ‘ನಂದಾದೀಪಾ’, ಮೊದಲಾದ ಸಾಮಾಜಿಕ ಕಥಾಹಂದರವುಳ್ಳ ನಾಟಕಗಳಲ್ಲದೆ; ಸಿಂಧೂರ ಲಕ್ಷ್ಮಣ, ಕಿತ್ತೂರು ಚೆನ್ನಮ್ಮ, ರಾಜಾ ವೀರಮದಕರಿ ನಾದಕರಿ, ಸುರಪುರದ ವೆಂಕಟಪ್ಪ ನಾಯಕ ಮೊದಲಾದ 9 ಐತಿಹಾಸಿಕ ನಾಟಕಗಳು; ಹರಿಗಿರಿಜೆ, ದೇವಿ ಮಹಾತ್ಮೆಯಂತಹ 5 ಪೌರಾಣಿಕ ನಾಟಕಗಳು; ಪುರಂದರದಾಸ, ದೇವರದಾಸಿಮಯ್ಯ – ದಂತಹ 7 ಭಕ್ತಿ ನಾಟಕಗಳೂ ಸೇರಿದಂತೆ ಒಟ್ಟು 56 ನಾಟಕಗಳು 11 ಬಾನುಲಿ ನಾಟಕಗಳನ್ನು ರಚಿಸಿದ ಧುತ್ತರಗಿಯವರು ಕನ್ನಡ ರಂಗಭೂಲಿಯನ್ನು ಶ್ರೀಮಂತ ಗೊಳಿಸಿದ ಸಾಹಿತಿಯಷ್ಟೇ ಆಗಿರದೆ ; ನಟರಾಗಿ ವೃತ್ತಿರಂಗಭೂಲಿಗೆ ನೀಡಿದ ಸೇವೆ ಅಪಾರವಾದುದು.

ಇಲ್ಲಿ ಗಮನಿಸಬೇಕಾದ 2 ಕೃತಿಗಳೆಂದರೆ ಡಾ. ರಾಜಕುಮಾರ ಅವರ ಚಿತ್ರ ಬದುಕಿಗೆ ತಿರುವು ನೀಡಿದ ನಾಟಕ ‘ಸಂಪತ್ತಿಗೆ ಸವಾಲ’ ಮತ್ತು ‘ಸೊಸೆತಂದ ಸೌಭಾಗ್ಯ’ ಹೆಸರಿನ ಚಲನಚಿತ್ರವಾಗಿದೆ. 70 mm ನಲ್ಲಿ ನಿರ್ಮಾಣಗೊಂಡದ್ದು ಇವರ ನಾಟಕ ‘ಚಿಕ್ಕಸೊಸೆ’ – ಈ ಎರಡು ಯಶಸ್ವಿ ಚಿತ್ರಗಳಾಗಿವೆ. ಗುಬ್ಬಿ ವೀರಣ್ಣ ಪ್ರಶಸ್ತಿಗೂ ಭಾಜನರಾದ ಇಂಥ ಧೀಮಂತ ನಾಟಕ ತೆರೆಯ ಮೆರೆಗೆ ಸರಿದದ್ದು 2-11-2007 ರಲ್ಲಿ ಎಂಬುದೊಂದು ವಿಷಾದದ ಸಂಗತಿ.

(ಮಾಹಿತಿ : ಪ್ರೊ : ಬಿ.ಬಿ ಕಡ್ಲಿ)

Leave A Comment