ಶ್ರೀ ವಿಜಯ ಮಹಾಂತೇಶ ಸಂಸ್ಥಾನಮಠ, ಚಿತ್ತರಗಿ-ಇಲಕಲ್ಲ-ಹುನಗುಂದ

ಶ್ರೀ ಮಠವ ಬೆಳಗಿದ ಹಣತೆಯ ಕುಡಿಗಳುVijaya Mahanteshwar Sawasthanmath Chittaragi - Ilkal

ಇಂದು ಸರಕಾರ ಮಾಡಬೇಕಾದ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಅದರಲ್ಲೂ ಕರ್ನಾಟಕದ ಅನೇಕ ಲಿಂಗಾಯತ ಮಠ ಮಾನ್ಯಗಳು ಮಾಡುತ್ತ ಬಂದಿವೆ. ಅಧ್ಯಾತ್ಮ ಜ್ಞಾನದೊಂದಿಗೆ ಶೈಕ್ಷಣಿಕ ದಾಸೋಹ ಕಾರ್ಯಗಳಲ್ಲಿ ತೊಡಗಿದ ಉತ್ತರ ಕರ್ನಾಟಕದ ಕೆಲವೇ ಮಠಗಳಲ್ಲಿ ಚಿತ್ತರಗಿ ಸಂಸ್ಥಾನ ಮಠ ಇಲಕಲ್ಲ ಕೂಡಾ ಎದ್ದು ಕಾಣುವ ಹೆಸರು. ದ್ಯಾಂಪೂರ ಚೆನ್ನಕವಿಗಳು ಷಟ್ಪದಿ ಛಂದಸ್ಸಿನಲ್ಲಿ ರಚಿಸಿದ ‘ವಿಜಯಮಹಾಂತೇಶ್ವರ ಪುರಾಣ’ – ಕೃತಿಯ ಪ್ರಕಾರ ಈ ಶ್ರೀ ಮಠಕ್ಕೆ ಪೀಠಾಧಿಪತಿಗಳಾಗಿ ಹೋದ 16 ಸ್ವಾಮಿಗಳ ಹೆಸರನ್ನು ಮಾತ್ರ ಕಾಣಬಹುದು. ಆದರೆ ಅವರಲ್ಲಿ ಮೊದಲಿನ 14 ಜನ ಪೀಠಾಧಿಪತಿಗಳ ಇತಿಹಾಸ ಲಭ್ಯವಿಲ್ಲ. 15ನೆಯವರಾದ ಶ್ರೀ ಗುರುಮಹಾಂತಸ್ವಾಮಿಗಳ ಅಲ್ಪ ಪರಿಚಯ ಕಲ್ಲೂರ ಸಂಗಣ್ಣನ ‘ಪರಿಚಯ ಪಂಚಾರತಿ’ ಎಂಬ ಕೃತಿಯಲ್ಲಿ ದೊರೆಯುತ್ತದೆ. ಆನಂತರದ 16ನೇ ಪೀಠಾಧಿಪತಿಗಳಾದ ಶ್ರೀ ವಿಜಯ ಮಹಾಂತಸ್ವಾಮಿಗಳ ಜೀವನ ಚರಿತ್ರೆಯೇ ಚೆನ್ನಕವಿಗಳ ಬೃಹತ್‍ಗ್ರಂಥ. ವಿಜಯ ಮಹಾಂತಸ್ವಾಮಿಗಳಿಗಿಂತಲೂ ಹೆಚ್ಚಿನ ರೂಪದಲ್ಲಿ ಶ್ರೀ ಮಠ ಅಭಿವೃದ್ಧಿಗೊಂಡಿದ್ದು 19ನೇ ಪೀಠಾಧಿಪತಿಗಳಾದ ಡಾ. ಮಹಾಂತಸ್ವಾಮಿಗಳ ಕಾಲದಲ್ಲಿ. ಅವರ ನೆರಳಾಗಿ ಶ್ರಮಿಸುತ್ತಿರುವ 20ನೇ ಪೀಠಾಧಿಪತಿಗಳಾದ ಗುರುಮಹಾಂತಸ್ವಾಮಿಗಳು ಆ ಮಣಿಹವನ್ನು ಕಾರ್ಯರೂಪದಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇವರೆಲ್ಲರ ಸಮಾಜ ಸೇವಾಕಾರ್ಯಗಳೊಂದಿಗೆ ಇವರ ಜೀವನೇತಿಹಾಸವನ್ನು ಪರಿಚಯಿಸುವುದು ಈ ಲೇಖನದ ಮೂಲ ಆಶಯ.Vijaya Mahanta matha gadduge Ilkal

12ನೇ ಶತಮಾನದಲ್ಲಿ ಕಲ್ಯಾಣಪಟ್ಟಣದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಶೂನ್ಯ ಪೀಠಾಧ್ಯಕ್ಷರಾದ ಅಲ್ಲಮ ಪ್ರಭುದೇವರು ತಮ್ಮ ಶಿಷ್ಯರೊಂದಿಗೆ ದೇಶ ಸಂಚಾರಮಾಡುತ್ತಾ ಬಂದು ಚಿತ್ತರಗಿ ಎಂಬ ಸಣ್ಣಹಳ್ಳಿಯಲ್ಲಿ ಕೆಲವು ದಿನ ಇದ್ದರು. ಅಲ್ಲಿ ಇರುವವರೆಗೆ ಆ ಊರಿನಲ್ಲಿರುವ ಭಕ್ತರಿಗೆ ಮಾರ್ಗದರ್ಶನ ಮಾಡುತ್ತಾ ಬಸವತತ್ವ ಉಪದೇಶದಿಂದ ಜಾತಿ, ಮತ, ಪಂಥಗಳನ್ನು ಎಣಿಸದೆ, ಬಸವ ತತ್ವ ನಿಷ್ಠೆ ಮತ್ತು ಬಸವ ಪ್ರಜ್ಞೆಯಿಂದ ಬದುಕಲು ಹಚ್ಚಿ ಸಮಾಜದ ಸ್ವಾಸ್ಥ್ಯಕ್ಕೆ ಕಾರಣರಾಗಿದ್ದರು. ಅಲ್ಲಮ ಪ್ರಭುಗಳು ಅಲ್ಲಿಂದ ಪುನಃ ಸಂಚಾರ ಹೊರಟ ಸಂದರ್ಭದಲ್ಲಿ ಚಿತ್ತರಗಿ ಊರಿನ ಭಕ್ತರು ನಮ್ಮ ಬದುಕಿಗೆ ಮಾರ್ಗದರ್ಶಕರಾದ ತಾವು ನಮ್ಮ ಊರಲ್ಲಿಯೇ ಇರಬೇಕೆಂದು ಪರಿಪರಿಯಾಗಿ ಬೇಡಿಕೊಂಡರು. ಆದರೆ, ಅದಕ್ಕೆ ಅಲ್ಲಮ ಪ್ರಭುಗಳು ಸಮ್ಮತಿಸದೆ; ನಿಮ್ಮ ಈ ಪ್ರೀತಿ, ವಿಶ್ವಾಸ ಜಂಗಮನನ್ನು ಕಟ್ಟಿಹಾಕಬಾರದು. ನಾವೀಗ ಸಂಚಾರ ಮಾಡುವುದು ಅವಶ್ಯ ಮತ್ತು ಅನಿವಾರ್ಯವಾಗಿದೆ. ಆದರೂ ನಿಮ್ಮ ಬೇಡಿಕೆಯ ಮೇರೆಗೆ ಈ ಊರಿಗೆ ಮತ್ತು ಈ ನಾಡಿಗೆ  ಮಾರ್ಗದರ್ಶಕನಾದ ನನ್ನ ಶಿಷ್ಯರಲ್ಲಿಯೇ ಶ್ರೇಷ್ಠನೆನಿಸಿದ ಈ ಗುರುಮಹಾಂತ ಸ್ವಾಮಿಗಳನ್ನು ಇಲ್ಲಿ ಬಿಟ್ಟು ಹೋಗುತ್ತೇನೆಂದು ಹೇಳಿ, ಚಿತ್ತರಗಿ ನಿರಂಜನ ಪೀಠ ಸ್ಥಾಪಿಸಿ ಅದರ ಅಧ್ಯಕ್ಷರನ್ನಾಗಿ ಮಾಡಿ ಅಲ್ಲಿಂದ ನಿರ್ಗಮಿಸಿದರು. ಅವರಿಂದ ಆರಂಭವಾದ ಈ ಚಿತ್ತರಗಿ ಇಲಕಲ್ಲ ಪೀಠದ ಪರಂಪರೆಯಲ್ಲಿ 12ನೇ ಶತಮಾನದಿಂದ ಇಲ್ಲಿಯವರೆಗೆ ಒಟ್ಟು 20 ಜನ ಪೀಠಾಧಿಪತಿಗಳನ್ನು ಕಾಣುತ್ತೇವೆ.*

1. ಶ್ರೀ ಗುರು ಮಹಾಂತಸ್ವಾಮಿಗಳು  :

ಚಿತ್ತರಗಿ-ಇಲಕಲ್ಲ ಶ್ರೀಮಠಕ್ಕೆ ಕ್ರಿ.ಶ. 1839 ರಿಂದ 1875ರವರೆಗಿನ ಕಾಲಾವಧಿಯಲ್ಲಿ ಗುರುಪರಂಪರೆಯ 15ನೇ ಪೀಠಾಧಿಪತಿಗಳಾಗಿದ್ದವರು ಶ್ರೀ ಗುರುಮಹಾಂತಸ್ವಾಮಿಗಳು. ಇವರ ಪೂರ್ವಾಶ್ರಮದ ಪರಿಚಯವನ್ನು ಬಹುಶಃ ಯಾರೂ ಬರೆದಿಡುವ ಪ್ರಯತ್ನವನ್ನೇ Mahanta mathaಮಾಡಿಲ್ಲವೆನಿಸುತ್ತದೆ. ಆದರೆ ಅವರು ಪೀಠಾಧಿಪತಿಗಳಾಗಿ ಬಂದ ಮೇಲೆ ನಡೆದ ಕೆಲ ಘಟನೆಗಳು ವಿಶಿಷ್ಟ ಮಹತ್ವವನ್ನು ಪಡೆದುದರಿಂದ ಅಂಥವನ್ನು ಕೆಲವರು ದಾಖಲಿಸಿದ್ದಾರೆ. ಗುರುಮಹಾಂತಸ್ವಾಮಿಗಳು ಬ್ರಿಟಿಷರು ಭಾರತದಲ್ಲಿ ಸರ್ವಾಧಿಕಾರ ಸ್ಥಾಪಸುವ ಮೊದಲು ಹೈದ್ರಾಬಾದ ನವಾಬನ ರಾಜಗುರುಗಳಾಗಿದ್ದರು. ಈ ರಾಜಗುರು ಪದವಿ ದೊರೆಯುವುದಕ್ಕೆ ಕಾರಣವಾದ ಘಟನೆಯೊಂದು ಹೀಗಿದೆ. ಹೈದ್ರಾಬಾದನಲ್ಲಿ ನಿಜಾಂರ ಆಳ್ವಿಕೆಯು ಉಚ್ಘ್ರಾಯಸ್ಥಿತಿಯಲ್ಲಿರುವಾಗ ಈ ನಿಜಾಂ ದೊರೆ/ ನವಾಬನು ಈಗಿನ ರಾಯಚೂರು ಜಿಲ್ಲೆಯ ಭಾಗಗಳಾದ ಲಿಂಗಸ್ಗೂರು, ಛಾವಣಿ ಹಾಗೂ ಹುನಗುಂದ ತಾಲೂಕಿನ ಅಮರಾವತಿ ಭಾಗದವರೆಗೂ ತನ್ನ ರಾಜ್ಯ ಭಾರದ ಕಾಲಕ್ಕೆ ಸಾಕಷ್ಟು ದಬ್ಬಾಳಿಕೆ ಮಾಡುತ್ತಲೇ ಇದ್ದ. ಆ ಹಿನ್ನಲೆಯಲ್ಲಿ ತನ್ನ ಆಳ್ವಿಕೆಗೆ ವಿರೋಧ ಒಡ್ಡುತ್ತಿದ್ದ ಕೆಲವು ಶ್ರೀಮಠದ ಭಕ್ತರನ್ನು ಬಂಧಿಸಿ ಸೆರೆಮನೆಯಲ್ಲಿ ಇಟ್ಟಿದ್ದ. ತನ್ನಭಕ್ತರ ಬಿಡುಗಡೆಗಾಗಿ ಚಿಂತಿಸಿದ ಸ್ವಾಮಿಗಳು ಮಾಡಿದ ಒಂದು ಉಪಾಯ ಹೀಗಿದೆ. ನವಾಬನಿಗೆ ಸಂತಾನ ಭಾಗ್ಯವಿಲ್ಲವೆಂಬುದನ್ನು ಅರಿತು ಗುರುಮಹಾಂತ ಸ್ವಾಮಿಗಳು ತಮ್ಮ ಮಠದ ಭಕ್ತನೊಬ್ಬನಿಗೆ, ಬಬಲಾದಿಯ ಸಾರುವ ಅಯ್ಯನ ವೇಷ ಹಾಕಿಸಿ ಹೈದರಾಬಾದ ನವಾಬನ ಅರಮನೆಯ ಮುಂದೆ ನಿಂತು ನವಾಬರಿಗೆ ವರ್ಷ ತುಂಬುವುದರೊಳಗೆ ಪುತ್ರ ಸಂತಾನ ಭಾಗ್ಯ ಪ್ರಾಪ್ತವಾಗುವುದು ಎಂಬ ಹೇಳಿಕೆಯನ್ನು ಸಾರುವಂತೆ (ಘೋಷಿಸು) ಮಾಡಿದರು. ಅದನ್ನು ಕೇಳಿ ಸಂತಾನ ಪ್ರಾಪ್ತಿಯ ಆಸೆಯನ್ನೇ ತೊರೆದ ನವಾಬನಿಗೆ ಸಿಟ್ಟು Mahanta matha gaddugeಬಂತು. ಆ ಸಾರುವ ಅಯ್ಯನನ್ನು ಬಂಧಿಸಿ ನಿನ್ನ ವಾಕ್ಯದ ಪರೀಕ್ಷೆಗಾಗಿ ನಿನ್ನನ್ನು ಕಾರಾಗೃಹದಲ್ಲಿಡುತ್ತಿದ್ದೇನೆ; ನಿನ್ನಮಾತು ಸುಳ್ಳಾದರೆ ವರ್ಷದ ಅವಧಿ ಮುಗಿದ ತಕ್ಷಣ ನಿನ್ನ ನಾಲಿಗೆಯನ್ನೇ ಕತ್ತರಿಸಲಾಗುತ್ತದೆ ಎಂದೂ ಎಚ್ಚರಿಸಿದ. ಮುಂದೆ ಒಂದು ವರ್ಷ ತುಂಬುವುದರೊಳಗೆ ಪುತ್ರ ಸಂತಾನವಾದಾಗ, ಇದು ಗುರುಮಹಾಂತ ಸ್ವಾಮಿಗಳ ಪ್ರೇರಣೆಯಿಂದ ಆಡಿದ ಮಾತು ಎಂಬುದು ವಿಚಾರಣೆಯ ಕಾಲಕ್ಕೆ ಗೊತ್ತಾದಾಗ ಪೂಜ್ಯರ ಬಗ್ಗೆ ಗೌರವ ಭಾವ ಮೂಡಿ, ಅವರನ್ನು ಹೈದ್ರಾಬಾದ್‍ಗೆ ಕರೆಸಿಕೊಂಡು ತನ್ನ ಸಂತೋಷಕ್ಕೆ ಕಾಣಿಕೆಯಾಗಿ ಏನು ನೀಡಲಿ ಎಂದು ವಿನಂತಿಸಿದಾಗ ಶ್ರೀ ಮಠದ ಭಕ್ತರನ್ನು ಬಂಧಮುಕ್ತರನ್ನಾಗಿ ಮಾಡಬೇಕೆಂದು ಹೇಳಿ, ಮೌನ ತಾಳಿದರು. ಆಗ ಖುಷಿಗೊಂಡ ನವಾಬ ಸೆರೆಯಿಂದ ಭಕ್ತರನ್ನು ಬಿಡುಗಡೆಗೊಳಿಸಿದ್ದಲ್ಲದೆ, ಯಾವ ತನ್ನ ಅರಮನೆ ಮುಂದೆ ನಿಂತು ಸಾರುವ ಅಯ್ಯ ಸಾರಿದ್ದನೋ ಅದೇ ಅರಮನೆಯನ್ನು ಹಾಗೂ 600 ಎಕರೆ ಭೂಮಿಯನ್ನು ದಾನವಾಗಿ ಕೊಟ್ಟನು. ಆ ಅರಮನೆಗೆ ಶ್ರೀಗಳು ‘ಮಹಾಂತಮಂಜಿಲ್’ ಎಂದು ಹೆಸರಿಟ್ಟರು.

ಇನ್ನೊಂದು ಉದಾಹರಣೆಯೆಂದರೆ ಒಮ್ಮೆ ‘ಈಸ್ಟ ಇಂಡಿಯಾ ಕಂಪನಿ’ಯಲ್ಲಿ ಸರಕಾರದ ಸೇನಾಪತಿಯಾಗಿದ್ದ ಬಾಲ್ಮೀನ್ ಸಾಹೇಬರು ಗುರು-ಮಹಾಂತಸ್ವಾಮಿಗಳ ಶಿವಯೋಗಸಿದ್ಧಿ, ತಪೋಬಲ ಮತ್ತು ಉದಾರ ಮನೋಭಾವಗಳನ್ನು ತಿಳಿದು ಶಿವಯೋಗಿಗಳ ಸೇವೆಯಲ್ಲಿ Mahanta matha Interiorನಿರತನಾದದ್ದಲ್ಲದೆ, ಅವರ ಅಪ್ಪಣೆಯಂತೇ ನಡೆದುಕೊಳ್ಳುತ್ತಿದ್ದ. ಇದರಿಂದಾಗಿ ಬ್ರಿಟಿಷ್ ಸರಕಾರ ಹಾಗೂ ನಿಜಾಂ ಸರಕಾರಗಳೆರಡೂ ಶ್ರೀಮಠಕ್ಕೆ ತುಂಬ ಗೌರವ ಕೊಡುತ್ತಿದ್ದವು.

ಇನ್ನೊಮ್ಮೆ ಕ್ಷೇತ್ರ-ಸಂಚಾರ ಮಾಡುತ್ತ ಹಂಪೆಗೆ ಬಂದಾಗ ಹಂಪೆಯ ಜಾತ್ರೆಯಲ್ಲಿ ಶೃಂಗೇರಿ ಜಗದ್ಗುರುಗಳು ಗುರುಮಹಾಂತಸ್ವಾಮಿಗಳನ್ನು ಗೌರವಾದರಗಳಿಂದ ಸ್ವಾಗತಿಸಿ, ಅತಿಥಿ ಸತ್ಕಾರ ಮಾಡಿ ಆ ಸಂದರ್ಭದಲ್ಲಿ ತಮಗೆ ಅರ್ಪಿಸಿದ ಬೆಲೆಬಾಳುವ ಕಾಣಿಕೆಗಳನ್ನು ತಮಗಾಗಿ ಇಟ್ಟುಕೊಳ್ಳದೆ, ಪಂಡಿತರು ಹಾಗೂ ಕಲಾವಿದರಿಗೆ ಹಂಚಿ ಕಲಾ ಪ್ರೀತಿಯನ್ನು ಮೆರೆದರು. ಇದರಿಂದಾಗಿ ಇವರು ಕಲಾವಿದರು, ವಿದ್ವಾಂಸರು, ದೀನ ದಲಿತರ ಬಗ್ಗೆ ಎಷ್ಟೊಂದು ಕಾಳಜಿ ಉಳ್ಳವರಾಗಿದ್ದರೆಂಬುದು ವಿದಿತವಾಗುತ್ತದೆ.

ಗುರುಮಹಾಂತ ಶ್ರೀಗಳು ಅನ್ಯಮತೀಯರನ್ನೂ ಗೌರವಾದರಗಳಿಂದ ಕಾಣುತ್ತಿದ್ದರೆಂಬುದಕ್ಕೆ ಸಿಗುವ ಉದಾಹರಣೆಗಳೆಂದರೆ, ಇಲಕಲ್ಲಿನ ಮುಸ್ಲಿಂ ಧರ್ಮಗುರು ಮುರ್ತುಜಾ ಶಹಾಖಾದ್ರಿಯವರು ಮತ್ತು ಗುರುಮಹಾಂತ ಶ್ರೀಗಳು ಗಾಢ ಸ್ನೇಹಿತರಾಗಿದ್ದರು. ಈ ಸ್ನೇಹದ ಪರೀಕ್ಷೆಗಾಗಿಯೇ ಮಾತು ಮಾತಿನ ತೀವ್ರತೆಯಲ್ಲಿ ತಮ್ಮೊಳಗೆ ಹಾಕಿಕೊಂಡ ಕರಾರು ಏನೆಂದರೆ, ತಮ್ಮಿಬ್ಬರಲ್ಲಿ ಯಾರು ಮೊದಲು ಮರಣ  Mahanta matha 01ಹೊಂದಿದರೂ, ಬದುಕಿ ಉಳಿದವರು ಮೃತರಾದವರನ್ನು ಅಂತ್ಯಸಂಸ್ಕಾರಗೊಳಿಸಬೇಕೆಂದು ನಿರ್ಧರಿಸಲಾಯಿತು. ಮುಂದೆ ಮುರ್ತುಜಾಖಾದ್ರಿಯವರು ಮರಣಹೊಂದಿದಾಗ ಕೊಟ್ಟಮಾತಿನಂತೆ ಗುರುಮಹಾಂತ ಶ್ರೀಗಳು ಖಾದ್ರಿಯವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರಂತೆ. ಇದೇ ರೀತಿ ಬ್ರಾಹ್ಮಣ ಸಮುದಾಯದ ಹಿರಿಯರಾದ ಹೆರೂರ ಬಾವಾ ಮತ್ತು ದೇವಾಂಗ ಸಮುದಾಯದ ಮುಖಂಡರಾದ ರುದ್ರಮುನಿ ಸ್ವಾಮಿಗಳೊಂದಿಗೂ ಆತ್ಮೀಯ ಸಂಬಂಧ ಹೊಂದಿದ್ದರು.

ಈ ಎಲ್ಲ ಉದಾಹರಣೆಗಳನ್ನು ಅವಲೋಕಿಸಿದರೆ, ಗುರುಮಹಾಂತ ಸ್ವಾಮಿಗಳು ಭಾವೈಕ್ಯತೆಗೆ ಮತ್ತು ಕೋಮು ಸೌಹಾರ್ದತೆಗೆ ಗಟ್ಟಿಮುಟ್ಟಾದ ಫಾಯಾ ಹಾಕಿದರೆಂದೇ ಹೇಳಬೇಕಾಗುತ್ತದೆ. ಇವರ ಇಂಥ ಧರ್ಮಸಮನ್ವಯ ಭಾವವೇ ಚಿತ್ತರಗಿ ಸಂಸ್ಥಾನಪೀಠದ ಕೀರ್ತಿಗೆ ಮೂಲಕಾರಣವಾಗಿದೆ.

2.            ಶ್ರೀ ವಿಜಯ ಮಹಾಂತ ಶಿವಯೋಗಿಗಳು  :Ilakal Vijaya Mahanta matha gadduge image

ಚಿತ್ತರಗಿ-ಇಲಕಲ್ಲ ಪೀಠಕ್ಕೆ ಕ್ರಿ.ಶ. 1879 ರಿಂದ 1911ರ ವರೆಗಿನ ಕಾಲದಲ್ಲಿ ಶ್ರೀಮಠದ 16ನೇ ಪೀಠಾಧಿಪತಿಗಾಳಾಗಿ ಬಂದವರು ಇವರು. ಮೂಲತಃ ಮೈಸೂರು ಸೀಮೆಯ, ಈಗಿನ ಹಾಸನಜಿಲ್ಲೆಯ ಸಸಿವಾಳದಲ್ಲಿ ಕ್ರಿ.ಶ.1850 ರಲ್ಲಿ ವೀರಯ್ಯ ಮತ್ತು ಗೌರಮ್ಮನವರಿಗೆ 2ನೇ ಮಗ ಮಳೆಯಪ್ಪನಾಗಿ ಜನಿಸಿ, ಬಾಲ್ಯದಲ್ಲಿಯೇ ವೈರಾಗ್ಯದ ಕಡೆಗೆ ವಾಲಿದವರು. ತಾರುಣ್ಯ ಪೂರ್ವದಲ್ಲಿಯೇ ಕಲ್ಬೆಟ್ಟದಲ್ಲಿ ತಪಸ್ಸಿನ ಸಾಧನೆಮಾಡಿದರೂ ಸಂಸ್ಕøತ ವಿದ್ಯಾಭ್ಯಾಸದ ಹಂಬಲದೊಂದಿಗೆ ಬಳ್ಳಾರಿಯ ಸಕ್ಕರಿ, ಕರಡೆಪ್ಪನವರ ಸಂಸ್ಕøತ ಪಾಠ ಶಾಲೆಯಲ್ಲಿ ಸೇರಿದರು. ಅವರ ದಾಸೋಹದ ಮನೆಯಲ್ಲಿ ಉಣ್ಣದೆ ಊರ ಹೊರ ವಲಯದಲ್ಲಿ ಹಾಕಿಕೊಂಡ ಗುಡಿಸಲಲ್ಲಿ ಇರುತ್ತ ಭಿಕ್ಷಾನ್ನದಿಂದ ಬದುಕುತ್ತಿದ್ದ ಸ್ವತಂತ್ರ ಪ್ರವೃತ್ತಿಯ ವಿದ್ಯಾರ್ಥಿಯಾಗಿದ್ದರು. ಗುರುಮಹಾಂತಸ್ವಾಮಿಗಳು ಲಿಂಗೈಕ್ಯರಾದ ನಂತರ ಯೋಗ್ಯ ಉತ್ತರಾಧಿಕಾರಿಗಳ ಹುಡುಕಾಟದಲ್ಲಿದ್ದ ಶ್ರೀಮಠದ ಭಕ್ತ ಅಮರಾವತಿಯ ರಾಮಪ್ಪ ದೇಸಾಯಿಯವರು ಇಂಥ ಕಠಿಣ ಅನುಷ್ಠಾನದಲ್ಲಿ ತೊಡಗಿದ್ದ ಬಾಲಕನನ್ನು ಚಿತ್ತರಗಿ-ಇಲಕಲ್ಲ ಪೀಠಕ್ಕೆ ತರುವ ಹಂಬಲದಿಂದ ಕರಡೆಪ್ಪನವರ ಮೂಲಕ ವಿನಂತಿಸಿಕೊಂಡಾಗ, ಮಠದ ಜವಾಬ್ದಾರಿಯೆಂದರೆ ಸಂಸಾರದ ಜವಾಬ್ದಾರಿ ಹೊತ್ತಂತೆಯೇ. ಮನೆ-ಮಠ ತ್ಯಜಿಸಿ ಬಂದು ಸನ್ಯಾಸಿಯಾದ ನನಗೆ ಧ್ಯಾನ ತಪಸ್ಸುಗಳನ್ನು ಬಿಟ್ಟು ಬೇರೇನೂ ಬೇಕಿಲ್ಲ. ನಾನೇ Ilakal Vijaya Mahanta matha gadduge 04ಇನ್ನೂ ಸಾಧಕನಾಗಿರುವಾಗ ಭಕ್ತರನ್ನು ನಾನೇನು ಉದ್ಧರಿಸಬಲ್ಲೆ? ನಾನಂತೂ ಯಾರ ಹಂಗಿನಲ್ಲೂ ಇರಲಾರೆ, ದೇಹದ ಮೇಲಿನ ಎಚ್ಚರ ಇರುವವರೆಗೂ ಯಾರ ಆಶ್ರಯವಿಲ್ಲದೆ ನನ್ನ ಕಾರ್ಯ ಮಾಡುತ್ತೇನೆಂದು; ಕರಡೆಪ್ಪನವರ ಪಾಠ ಶಾಲೆಯನ್ನು ತೊರೆದು ನರೇಗಲ್ಲದಲ್ಲಿ ಗುಡಿಸಲು ಹಾಕಿಕೊಂಡು ಸ್ವತಂತ್ರವಾಗಿ ಧ್ಯಾನ ಮತ್ತು ಕಠಿಣ ಅನುಷ್ಠಾನದಲ್ಲಿ ತೊಡಗಿದರು. ಹೀಗೆ ಮಠದ ಉತ್ತರಾಧಿಕಾರಿ ಪದವಿ ತಿರಸ್ಕರಿಸಿ ಮಾತನಾಡಿದ ಮಾತಿನಲ್ಲಿ ಪೂಜಿಸುವ ಭಕ್ತನ ಸ್ಥಾನ ನನಗೆ ಬೇಕೇ ವಿನಃ, ಪೂಜಿಸಿಕೊಳ್ಳುವ ಅಧಿಕಾರ ನನಗೆ ಬೇಡವೆಂಬ ವೈರಾಗ್ಯಭಾವ ಎದ್ದುಕಾಣುತ್ತದೆ. ಮುಂದೆ ಕರಡೆಪ್ಪನವರ ನಿಧನದ ವಾರ್ತೆ ಬಂದ ದಿನವೇ ತಾವು ತೀವ್ರ ಆಮಶಂಕೆಗೆ ತುತ್ತಾಗಿ ಬಳಲುತ್ತಿರುವಾಗ ಅಪರಾಧಿ ಮನೋಭಾವ ಮೂಡಿ ತಾವು ಕರಡೆಪ್ಪನವರ ಮಾತು ತಿರಸ್ಕರಿಸಿದ್ದೇ ತಪ್ಪು ಎಂಬ ಅರಿವು ಮೂಡುತ್ತಿದ್ದಂತೆಯೇ ತಕ್ಷಣ ಆಮಶಂಕೆ ನಿಂತಿತು. ಹೀಗೆ ಮಠದ ಉತ್ತರಾಧಿಕಾರಕ್ಕೆ ಒಪ್ಪಿಗೆ ನೀಡಲು ಸಿದ್ಧವಾಗುತ್ತಲೇ; ರಾಮಪ್ಪ ದೇಸಾಯಿಯವರು ಎರಡನೇ ಪ್ರಯತ್ನವಾಗಿ ಇವರನ್ನು ಹುಡುಕಿಕೊಂಡು ಬಂದು ಒಪ್ಪಿಸಿದರು.

ಹೀಗೆ ಹಠ ಮಾಡಿದ ಮಳೆಯಪ್ಪಯ್ಯ ಕ್ರಿ.ಶ. 1879ರಲ್ಲಿ ವಿಜಯ ಮಹಾಂತೇಶ ಎಂಬ ಹೊಸ ಹೆಸರಿನೊಂದಿಗೆ 16ನೇ ಪೀಠಾಧಿಪತಿಯಾಗಿ ಅಧಿಕಾರವನ್ನು ವಹಿಸಿಕೊಂಡು ಮುಂದೆ ಲಿಂಗದಲ್ಲಿ ಲೀನವಾಗುವ ಸಮಯದಲ್ಲೂ ಜಂಗಮ ಪಾದೋಕ ಸ್ವೀಕಾರಕ್ಕಾಗಿ ಮಾತ್ರ ಬಾಯಿತೆರೆದ ನಿಷ್ಠುರವಾದಿಗಳು. ಆದರೆ ಭಕ್ತ-ಸಮಾಜವೆಂದರೆ ಬೆಣ್ಣೆಯಂತೆ ಕರಗುವ ಮಮತಾಮಯಿ.

ಮಠದ ಅಧಿಕಾರ ವಹಿಸಿಕೊಂಡ ಮೇಲೂ ಅತ್ಯಂತ ಸರಳ ಜೀವನ ರೂಢಿಸಿ ಕೊಂಡವರು. ಯಾವುದೇ ತರದ ಮೃಷ್ಟಾನ್ನಕ್ಕೆ ಆಸೆ ಪಡದೆ ಸಾದಾ ಆಹಾರ ಸೇವಿಸುತ್ತಿದ್ದರು. ತಮ್ಮ ಪ್ರಸಾದವನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು. ಹೆಚ್ಚಾಗಿ ಆಕಳ ಹಾಲನ್ನು ಕುಡಿದುಕೊಂಡೇ ಎಷ್ಟೋ ದಿನಗಳವರೆಗೆ ಅನ್ನ ಸೇವಿಸದೇ ಇರುತ್ತಿದ್ದರು. ಉಳಿದ ಸಮಯದಲ್ಲಿ ಅಪ್ಪ ಬಸವಣ್ಣನ ವಚನಗಳನ್ನು ಓದಿ ಅರ್ಥೈಸಿಕೊಂಡು, Ilakal Vijaya Mahanta matha gadduge 03ಭಕ್ತರಿಗೂ ಅದರ ಸಾರ ಸತ್ವವನ್ನು ಕುರಿತು ಹೇಳುತ್ತಿದ್ದರು. ಊರಿಂದೂರಿಗೆ ಸಂಚರಿಸುವಾಗಲಂತೂ ಬಸವಣ್ಣನವರ ವಚನ ಕಟ್ಟುಗಳನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡೇ ಇರುತ್ತಿದ್ದರು. ಬಸವಣ್ಣನ ವರನ್ನು ಎಂದೂ ಅವರ ಹೆಸರು ಹಿಡಿದು ಮಾತನಾಡದೆ ‘ಅಪ್ಪ’ ಎಂದೇ ಉಚ್ಚರಿಸುತ್ತಿದ್ದರು.

ಸಮಾಜದಲ್ಲಿ ಬಡವರನ್ನು ಕುರಿತು ಮರುಗುವ ಮತ್ತು ಸಹಾಯ ಮಾಡಿ ಉದ್ಧರಿಸುವ ಬುದ್ಧಿಯಿಂದಾಗಿಯೇ ಅವರೊಬ್ಬ ಕರುಣಾಮಯಿ, ಪರೋಪಕಾರಿ ಎಂದು ಗುರುತಿಸಲ್ಪಟ್ಟಿದ್ದಾರೆ. ತನ್ನನ್ನು ನಂಬಿ ಆಸರೆ ಬೇಡಿ ಬಂದವರಿಗೆ ಬದುಕಿನ ಸಮಸ್ಯೆಗಳನ್ನು ದೂರಮಾಡಿ ಉದ್ಧರಿಸಿದ್ದಾರೆ. ಸಾಲ ಮಾಡಿ ಸಂಸಾರಕ್ಕೆ ಹೆದರಿ ಸನ್ಯಾಸಿಯಾಗಲು ಬಯಸಿದವರಿಗೆ ತಿದ್ದಿ ಬುದ್ದಿ ಹೇಳಿ, ಉಪದೇಶಿಸಿ ಧೈರ್ಯ ತುಂಬಿದ್ದಾರೆ. ಚೆನ್ನಬಸು ಎಂಬ ಶಿಷ್ಯನ ಸಂದರ್ಭವನ್ನು ಕೇವಲ ನೆಪವಾಗಿಟ್ಟುಕೊಂಡು ಬೋಧಿಸಿದ ಲಿಂಗಾಯತ ಧರ್ಮ ತತ್ವಗಳು ಭಕ್ತರಿಗೆ ಬದುಕಿನಲ್ಲಿ ಅಳವಡಿಸಿಕೊಳ್ಳುವಷ್ಟು ಸರಳವಾಗಿವೆ. ಹಣದ ಚಂಚಲತೆಯನ್ನು ಕುರಿತು ವ್ಯಾಖ್ಯಾನಿಸಿ- ಮಾನವನ ಬದುಕಿಗೆ ಗುಣ ಅಗತ್ಯವೇ ಹೊರತು ಹಣ ಅಲ್ಲ ಎಂದು ಸೂಚಿಸಿದ್ದಾರೆ.

ಒಮ್ಮೆ ಬಿನ್ನಹಕ್ಕೆ ಕರೆಯಲು ಬಂದ ಇಲಕಲ್ಲ ಭಕ್ತರಲ್ಲಿ ಭೇದ ಮೂಡಿದಾಗ, ಸ್ವಾರ್ಥಭಾವ ಪ್ರದರ್ಶಿಸಿದಾಗ ಮೌನವಾಗಿ ಮಠದಿಂದ ಒಂದು ವರ್ಷ ದೂರವಿದ್ದು ಬುದ್ದಿ ಕಲಿಸಿದ್ದರು. ಕೆಲವರು ಧರ್ಮದ ಆಚರಣೆಯಲ್ಲಿ ವಿನಾಕಾರಣ ಮಡಿವಂತಿಕೆ ಆಚರಿಸುತ್ತಾರೆ. ಅಂಥ ಕಟ್ಟುನಿಟ್ಟಿನಿಂದ ಸಾಮಾನ್ಯ ಲೌಕಿಕ ಬದುಕು ಅಸಾಧ್ಯವೆಂದು ತಿಳಿಹೇಳಿ ಭಕ್ತಿಗೆ ಪರಿಶುದ್ಧ ಮನಸ್ಸು ಇದ್ದರೆ ಸಾಕು ಎಂದು ಸೂಚಿಸಿದವರು.

ಸಾಮಾಜಿಕ ಸುಧಾರಣೆಯ ಹಂಬಲದಿಂದ ಬಾಲ್ಯವಿವಾಹ, ಮುದುಕನ ಮದುವೆ, ವಧುದಕ್ಷಿಣೆ ಮತ್ತು ವರದಕ್ಷಿಣೆ ಪದ್ಧತಿಗಳನ್ನು ಬಲವಾಗಿ ವಿರೋಧಿಸಿದವರು. ಮಕ್ಕಳಿಗೆ ಮದುವೆ ಮಾಡಿ ಮುಗಿಸುವುದೊಂದೇ ದೊಡ್ಡ ಜವಾಬ್ದಾರಿ ಎಂದು ಭಾವಿಸಿದ ಪಾಲಕರಿಗೆ ವ್ಯಂಗ್ಯದ ಚಾಟಿ ಏಟು Ilakal Vijaya Mahanta matha gadduge 02ಕೊಟ್ಟು – ಮಕ್ಕಳಿಗೆ ಉತ್ತಮ ವಿದ್ಯೆ ಮತ್ತು ಸಂಸ್ಕಾರಗಳನ್ನು ನೀಡುವುದೇ ತಂದೆ ತಾಯಿಗಳ ದೊಡ್ಡ ಕರ್ತವ್ಯವೆಂದು ಸೂಚಿಸಿದ್ದಾರೆ.

ಮೂಲತಃ ಸಮಾಜದಲ್ಲಿ ಬಡತನಕ್ಕೆ ಕಾರಣವಾದ ಮೂಢನಂಬಿಕೆಗಳನ್ನು ದೂರಮಾಡಲು ಹಾವಿಗೆ ಹಾಲೆರೆಯುವ ಬದಲು ಬಡ ಮಕ್ಕಳಿಗೆ ಹಾಲು ಕುಡಿಸುವ ಹಬ್ಬವನ್ನು ಆಚರಣೆಗೆ ತಂದವರು. ಕೆಲವರು ತಮ್ಮ ಅಜ್ಞಾನ ಮತ್ತು ಅನಕ್ಷರತೆಯಿಂದಾಗಿ ಕೆಟ್ಟ ಚಟಗಳಿಗೆ ಬಲಿಯಾಗಿ ಹೀನ ಸ್ಥಿತಿಗೆ ಇಳಿದಾಗ, ಅಂಥವರನ್ನು ಕಂಡು, ಅವರ ಮನಸ್ಸುಗೆದ್ದು ಯಾವ ಆಣೆ-ಪ್ರಮಾಣಗಳಿಲ್ಲದೇ ತಾವಾಗಿಯೇ ತಮ್ಮ ವ್ಯಸನಗಳನ್ನು ತ್ಯಜಿಸುವಂತೆ ಮನಃ ಪರಿವರ್ತನೆಗೊಳಿಸಿ, ಆ ಮೂಲಕ ಸಮಾಜದ ಆರ್ಥಿಕ ಸ್ಥಿತಿ ಸುಧಾರಿಸುವಂತೆ ಮಾಡಿ ಸಾಮಾಜಿಕ ಸಮಾನತೆ ತಂದವರು.

ಮೂಲತಃ ಲಿಂಗಾಯತ ಧರ್ಮಕ್ಕೆ ಮಾರ್ಗದರ್ಶಕ ಜಂಗಮರನ್ನು ತರಬೇತುಗೊಳಿಸುವ ಶಿವಯೋಗ ಮಂದಿರವೆಂಬ ಗುರುಕುಲ ಪದ್ಧತಿಯ ಶಿಕ್ಷಣ ಸಂಸ್ಥೆಗೆ ಕ್ರಿ.ಶ.1908ರಲ್ಲಿ ಸೂಕ್ತ ಸ್ಥಳ ತೋರಿಸಿ, ಹಾನಗಲ್ಲ ಕುಮಾರ ಸ್ವಾಮಿಗಳಿಗೆ ಪೆÇ್ರೀತ್ಸಾಹ ನೀಡಿ, ಆ ಶಿವಯೋಗ ಮಂದಿರದ ಅಭಿವೃದ್ಧಿಗೆ ಕಾರಣರಾದವರು.

ಸ್ವತಃ ಇಷ್ಟಲಿಂಗ ಯೋಗಸಿದ್ಧಿಯನ್ನು ಪಡೆದವರು. ನಿತ್ಯವೂ ತಾಸುಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ, ಶಿವಯೋಗದಲ್ಲಿ (ಇಷ್ಟಲಿಂಗಯೋಗ) ತಲ್ಲೀನರಾಗುತ್ತಿದ್ದರು. ಅಗಾಧವಾದ ಶಿವಯೋಗ ಶಕ್ತಿಯನ್ನು ಪಡೆದಿದ್ದರು. ಭಕ್ತರಿಗೂ ಸಹ ಅವರು ಕೇವಲ ಇಷ್ಟಲಿಂಗ ಪೂಜೆಮಾಡಿರಿ ಮತ್ತು ಬಸವಣ್ಣನವರ ವಚನಗಳನ್ನು ಓದಿರಿ. ಇದರಿಂದ ನಿಮ್ಮ ಜೀವನದ ಎಲ್ಲ ಕಷ್ಟಗಳು ಪರಿಹಾರವಾಗುತ್ತವೆ ಎಂದು ಹೇಳುತ್ತಿದ್ದರು. ಇಷ್ಟಲಿಂಗ Ilakal Vijaya Mahanta matha gadduge 01ಬಿಟ್ಟು ಬೇರೆ ಯಾವ ದೇವರನ್ನೂ ಪೂಜಿಸಬಾರದು, ಏಕೆಂದರೆ ದೇವರನ್ನು ಲಿಂಗದಲ್ಲಿಯೇ ಕಾಣಬೆಕೆಂದು ಹೇಳುತ್ತಿದ್ದರು.

ಹೀಗÉ ಬಸವಾದಿ ಶರಣರ ವಚನಗಳನ್ನು ಭಕ್ತರಿಗೆ ಬೋಧಿಸುತ್ತಲೇ ತಮ್ಮ ಇಹದ ಕಾರ್ಯವನ್ನು ತೀರಿಸಿ ಮುಕ್ತಿ ಮಂದಿರವನ್ನು ಪ್ರವೇಶಿಸಿದ ವಿಜಯ ಮಹಾಂತಸ್ವಾಮಿಗಳು ಈ ನಾಡಿನ ಪ್ರತಿಯೊಬ್ಬ ಭಕ್ತನ ಮನಸ್ಸಿನಲ್ಲಿ ಅಥವಾ ಹೃದಯದಲ್ಲಿ ಶಾಶ್ವತವಾಗಿ ವಾಸವಾಗಿದ್ದಾರೆ. ಇವರಿಂದಲೇ ಈ ಮಠ-ಹಲವು ಶಾಖಾಮಠಗಳಾಗಿ ವಿಸ್ತರಿಸಿಕೊಂಡಿದೆ, ಮುಂದಿನವರಿಗೆ ಮಾರ್ಗದರ್ಶಕವಾಗಿದೆ.

3.            ಶ್ರೀ ಗುರು ಮಹಾಂತಸ್ವಾಮಿಗಳು (ದೋಟಿಹಾಳ) :

ಚಿತ್ತರಗಿ-ಇಲಕಲ್ಲ ಶ್ರೀಮಠಕ್ಕೆ 1928 ರಿಂದ 1939ರ ಕಾಲಾವಧಿಯಲ್ಲಿ 17ನೇ ಪೀಠಾಧಿಪತಿಗಳಾಗಿ ಬಂದ ಗುರುಮಹಾಂತಸ್ವಾಮಿಗಳು ತಮ್ಮ 11 ವರ್ಷಗಳ ಅವಧಿಯಲ್ಲಿ ವಚನಚಿಂತನೆ, ಪಾಠ-ಪ್ರವಚನ, ಶಿವಾನುಭವ ಕಾರ್ಯಕ್ರಮ, ಸಾಹಿತಿಗಳಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಶ್ರೀಮಠದಲ್ಲಿ ಸಾಹಿತ್ಯ-ಸಂಸ್ಕøತಿ-ಧಾರ್ಮಿಕ ಪರಿಸರವನ್ನು ನಿರ್ಮಾಣ ಮಾಡಿದರು.

ಆದರೆ ಇವರು ಲಿಂಗೈಕ್ಯರಾದ ಮೇಲೆ ಶ್ರೀಮಠದ ಭಕ್ತರೆಲ್ಲಾ ಸೇರಿ ಶಿವಯೋಗ ಮಂದಿರದಲ್ಲಿ ಸಾಧಕರಾಗಿದ್ದ ಶ್ರೀ ಕೊಪ್ಪದ ಮಹಾಂತ ಸ್ವಾಮಿಗಳನ್ನು ಶ್ರೀಮಠಕ್ಕೆ ಕರೆದು ತಂದರೂ ಅವರು ಪೀಠಾಧಿಕಾರಿಗಳಾಗದೆ 1939 ರಿಂದ 63ರವರೆಗೆ ಶ್ರೀ ಮಠದ ಉಸ್ತುವಾರಿ ನೋಡುತ್ತಾ ಮಠದ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಿದವರು.

4.            ಶ್ರೀ ಗುರು ಮಹಾಂತಸ್ವಾಮಿಗಳು (ಜಮಖಂಡಿ) :Ilakal Vijaya Mahanta matha gadduge

ಚಿತ್ತರಗಿ-ಇಲಕಲ್ಲ ಶ್ರೀಮಠಕ್ಕೆ 18ನೇ ಪೀಠಾಧಿಪತಿಗಳಾಗಿ 1963ರಲ್ಲಿ ಬಂದ ಜಮಖಂಡಿಯ ಶ್ರೀ ಗುರುಮಹಾಂತಸ್ವಾಮಿಗಳು ಸಮಾಜಕ್ಕೆ ಸಲ್ಲಿಸಿದ ಸೇವೆ ಬಹುದೊಡ್ಡದು. ಇಲಕಲ್ಲ ನಗರದಲ್ಲಿ 1963ರಲ್ಲಿ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದ ಮರು ವರ್ಷ 1964 ರಲ್ಲಿ ಶ್ರೀ ವಿಜಯ ಮಹಾಂತೇಶ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವನ್ನು ಸ್ಥಾಪಿಸಿದ್ದು ಈ ಭಾಗದ ಉನ್ನತ ಶಿಕ್ಷಣ ಪ್ರೇಮಿಗಳಿಗೆ ಒಂದು ವರದಂತಾಯಿತು. ಆದರೆ 1970 ರಲ್ಲಿ ಅಕಾಲಿಕವಾಗಿ ವಾಹನ ಅಪಘಾತದಲ್ಲಿ ಲಿಂಗದಲ್ಲಿ ಲೀನರಾದರು.

5.            ಡಾ. ಮಹಾಂತ ಸ್ವಾಮಿಗಳು :

17ನೇ ಮೇ 1970 ರಂದು ಚಿತ್ತರಗಿ-ಇಲಕಲ್ಲ ಪೀಠಕ್ಕೆ 19ನೇ ಪೀಠಾಧಿಪತಿಗಳಾಗಿ ಬಂದ ಮಹಾಂತಸ್ವಾಮಿಗಳು ಈಗಿನ ಮುಧೋಳ ತಾಲೂಕಿನ ಮಳಲಿ ಗ್ರಾಮದಲ್ಲಿ 1930 ಆಗಷ್ಟ 1 ರಂದು ಪಾಲಭಾವಿಮಠದ ವಿರುಪಾಕ್ಷಯ್ಯ ಮತ್ತು ನೀಲಮ್ಮ ದಂಪತಿಗಳ ಮುದ್ದಿನ ಮಗನಾಗಿ ಜನಿಸಿದರು. ಮೂಲ ಹೆಸರೂ ಮಹಾಂತಯ್ಯನೇ. ತನ್ನ ಹತ್ತನೇವಯಸ್ಸಿನಲ್ಲೇ ಹಿಪ್ಪರಗಿಯ ಪ್ರಾಥಮಿಕ ವಿದ್ಯಾಭ್ಯಾಸ ನಿಲ್ಲಿಸಿ, ಸವದಿ ಮಠದ Mahantshrigaluಅನೌಪಚಾರಿಕ ಅಧಿಕಾರವನ್ನು ಸ್ವೀಕರಿಸಿ ಸಂಗನಬಸವ ಸ್ವಾಮಿಗಳ ಗುರುಕರ ಸಂಜಾತನಾಗಿ ಬೆಳೆಯತೊಡಗಿದ ಸಮಯದಲ್ಲೇ 1943ರಲ್ಲಿ ಮುಧೋಳದ ಗವಿಮಠದ ಸಂಸ್ಕøತ ಪಾಠ ಶಾಲೆಗೆ ಪ್ರವೇಶದೊರೆಯಿತು. ಮುಂದೆ 1945ರಲ್ಲಿ ಶಿವಯೋಗ ಮಂದಿರಕ್ಕೆ ಬಂದು ಶಿವಯೋಗ ಸಾಧನೆಯಲ್ಲಿ ತೊಡಗಿದರು. ಅಲ್ಲಿದ್ದ ಆರು ವರ್ಷಗಳ ಅವಧಿಯಲ್ಲಿ ಸಂಗೀತ, ಕನ್ನಡ ಮತ್ತು ಸಂಸ್ಕøತ ಭಾಷಾ ಅಧ್ಯಯನ ಮುಗಿಸಿದರು. ತಮ್ಮ ಜ್ಞಾನದಾಹ ಹಿಂಗಿಸಿಕೊಳ್ಳಲು ಇನ್ನೂ ಓದಬೇಕೆನಿಸಿದಾಗ ಸವದಿ ಊರಿನ ಭಕ್ತರ ಸಹಕಾರದಿಂದ 1951ರಲ್ಲಿ ಕಾಶಿಯ ವಿದ್ಯಾಪೀಠಕ್ಕೆ ಸೇರಿದಾಗ ಅಲ್ಲಿ ಮುಂದೆ ಮೂಜಗಂ ಎಂದೇ ಖ್ಯಾತರಾದ ಮಹಾಂತ ದೇವರು ಜೊತೆಗಾರರಾಗಿದ್ದರು. ಕಾಶಿಯಲ್ಲಿರುವಾಗಲೇ ಅಲ್ಲಿನ ಕ್ವೀನ್ಸ ಕಾಲೇಜಿನಲ್ಲಿ ಒಂದು ವರ್ಷ ಇಂಗ್ಲೀಷ, ಹಿಂದಿ, ಸಂಸ್ಕøತ ಭಾಷೆಗಳ ಶಾಸ್ತ್ರೀಯ ಅಧ್ಯಯನ ಕೈಗೊಂಡರು. 1952 ರಲ್ಲಿ ದಿಢೀರನೆ ಸವದಿಗೆ ಮರಳಿದಾಗ ಅಲ್ಲಿ ಬರಗಾಲ ತಾಂಡವಾಡುತ್ತಿತ್ತು. ಅಲ್ಲಿ ಬಡವರಿಗಾಗಿ ಗಂಜೀ ಕೇಂದ್ರ ತೆರೆದು ಜೋಪಾನಮಾಡಿದ್ದಲ್ಲದೆ; ಅದೇ ಸಂದರ್ಭದಲ್ಲಿ ಕೃಷ್ಣಾ ತೀರದ ಗುಹೆಯೊಂದರಲ್ಲಿ ಮೌನವೇ-ಪೂಜೆ, ಮೌನವೇ-ಮಾತು, ಮೌನವೇ-ಕ್ರಿಯೆ ಎಂಬಂಥ ಅನುಸಂಧಾನ ಮತ್ತು ಕಠಿಣ ಅನುಷ್ಠಾನ ಗೈದವರು. ತೀರದ ಜ್ಞಾನ ದಾಹದ ಅಧ್ಯಯನಕ್ಕಾಗಿ 1953ರಲ್ಲಿ ಗದಗಿನ ಪುಟ್ಟರಾಜ ಗವಾಯಿಗಳ ಆಶ್ರಮ ಸೇರಿ, ಅಲ್ಲಿ ಸಂಸ್ಕøತ ಮತ್ತು ಸಂಗೀತ ಸಾಧನೆಗೆ ತೊಡಗಿದರು. ಇಲ್ಲಿರುವಾಗಲೇ ಪ್ರವಚನ ಕಲೆಯನ್ನು ಕರಗತ ಮಾಡಿಕೊಂಡದ್ದು.

ಮುಂದೆ 1961 ಡಿಶೆಂಬರ್ 13 ರಂದು ಅಥಣಿ ತಾಲೂಕಿನ ಸವದಿ ಮಠಕ್ಕೆ ಪಟ್ಟಕಟ್ಟಲಾಯಿತು. ಇಲ್ಲಿಂದ ಎಂಟು ವರ್ಷಗಳ ಕಾಲ ತಾವು ಒಬ್ಬ ಶ್ರೇಷ್ಠ ಪ್ರವಚನ ಪಟುವಾಗಿ ಬೆಳೆದರು. ಈ ಹಿಂದೆ ತಾವು ನವಿಲುಗುಂದದ ಗವಿಮಠದಲ್ಲಿದ್ದಾಗ ಅಲ್ಲಿನ ಬಸವಲಿಂಗಸ್ವಾಮಿಗಳು“ಮಠಬಿಟ್ಟು ಧರ್ಮವನ್ನು ಹಳ್ಳಿ ಹಳ್ಳಿಗೆ ಒಯ್ಯಿರಿ” ಎಂದು ಸೂಚಿಸಿದ ಮಾತು ಅವರಿಗೆ ವಚನ-ವಾಕ್ಯದಂತಾಗಿತ್ತು. ಅದರಿಂದಾಗಿ ಪ್ರವಚನಕ್ಕಾಗಿ ಹಳ್ಳಿ ಹಳ್ಳಿಗೆ ಸಂಚರಿಸುವಾಗ ಸಮಾಜದ ಜನರಲ್ಲಿನ ಮೂಢನಂಬಿಕೆಗಳು, ಅಜ್ಞಾನ, ಬಡತನಗಳ ಗಾಢ ಪರಿಚಯವಾಯಿತು. ಪ್ರವಚನದೊಂದಿಗೇ ಅವುಗಳ ನಿವಾರಣೆಗೆ ಪ್ರಯತ್ನಿಸುತ್ತಿದ್ದರು.

ಇದೇ ಸಂದರ್ಭದಲ್ಲಿ ಗುರುಮಹಾಂತಸ್ವಾಮಿಗಳು (ಜಮಖಂಡಿ) ಲಿಂಗೈಕ್ಯರಾಗಿ, ಇಲಕಲ್ಲ ಮಠದ ವಾರಸುದಾರತ್ವಕ್ಕಾಗಿ ಭಕ್ತ ಸಮೂಹ ಶೋಧ ಕಾರ್ಯದಲ್ಲಿ ತೊಡಗಿದ್ದಾಗ ಅವರ ಕಣ್ಣಿಗೆ ಬಿದ್ದವರು ಪ್ರವಚನ ಪಟುಗಳು ಆದ ಸವದಿ ಮಹಾಂತ ಸ್ವಾಮಿಗಳು. ಈ ನಾಡಿನ ಭಕ್ತರ ಒತ್ತಾಯದ ಮೇರೆಗೆ ಇಲಕಲ್ಲ-ಚಿತ್ತರಗಿ ಸಂಸ್ಥಾನ ಮಠಕ್ಕೆ 19ನೇ ಪೀಠಾಧಿಪತಿಗಳಾಗಿ ಪ್ರವೇಶಿಸಿದ ಮಹಾಂತಸ್ವಾಮಿಗಳು ಕೈಗೆತ್ತಿಕೊಂಡ ಮೊದಲ ಕಾರ್ಯವೆಂದರೆ, ಜೀರ್ಣಾವಸ್ಥೆಯಲ್ಲಿದ್ದ 63 ಶಾಖಾಮಠಗಳ ಜೀರ್ಣೋದ್ದಾರ ಕಾರ್ಯ ಮಾಡಿ, ಅಲ್ಲಿ ಪ್ರತಿ ವಾರವೂ ಶಿವಾನುಭವ ಕಾರ್ಯಕ್ರಮ ನಡೆಯುವಂತೆ ವ್ಯವಸ್ಥೆ ಮಾಡಿದ್ದು. ಹಾಗೆ ನೋಡಿದರೆ ಈ ಪೀಠಕ್ಕೆ ಇವರುಬಯಸಿ ಬಂದ ಉದ್ದೇಶವೆಂದರೆ ಈ ನಾಡಿನ ಹಳ್ಳಿ ಹಳ್ಳಿಗೆ ಹೋಗಿ ಬಸವಣ್ಣನವರ ಸಂದೇಶ ಸಾರುವ ಮತ್ತು ಆ ಮೂಲಕ ಜನ ಕಲ್ಯಾಣ ಸಾಧಿಸಬೇಕೆಂಬುದೊಂದೇ ಮಹದುದ್ದೇಶವಾಗಿತ್ತು.

ಇಲ್ಲಿಯವರೆಗೆ ಜನರ ಮನಸ್ಸಿನಲ್ಲಿ ಮಠಗಳು ಎಂದರೆ, ಅಧಿಕಾರದ ಆಸೆ ಇರುವ, ಆಸ್ತಿಯ ವ್ಯಾಮೋಹವಿರುವ, ಪಾರಂಪರಿಕ ಮನೋಭಾವದ ಜಂಗಮರು ಇರುವ ಸ್ಥಾನ ಎಂಬುದಾಗಿತ್ತು. ಆದರೆ ಇಂಥಲ್ಲಿ ಕ್ರಿಯಾಶೀಲರಾದ ಜಂಗಮರು ನಿರಂತರ ಕಾರ್ಯ ಪ್ರವೃತ್ತರಾಗಿದ್ದುಕೊಂಡು ಶರಣ ಸಂದೇಶ ಸಾರುವ ಕ್ರಿಯಾಶೀಲ ಮಠಗಳನ್ನಾಗಿಸಿದ್ದು ಮಹಾಂತಸ್ವಾಮಿಗಳ 2ನೇ ಸ್ತುತ್ಯಾರ್ಹಕಾರ್ಯ. ಅಂದರೆ ಶ್ರೀಮಠವನ್ನು ಶರಣ ಸಿದ್ಧಾಂತದ ವಿದ್ಯಾಪೀಠವನ್ನಾಗಿ ಪರಿವರ್ತಿಸಿ ಅಲ್ಲಿ ಲಿಂಗಪೂಜೆ, ಶಿವಾನುಭವ, ಕಾಯಕದ ಬಗ್ಗೆ ಅರಿವು ಮೂಡಿಸುವ ಮೂಲಕ, ಎಲ್ಲಾ ವೃತ್ತಿಯ ಜನರನ್ನು ಆಕರ್ಷಿಸಿ, ಬಸವ ತತ್ವ ಪ್ರಸಾರ ಕಾರ್ಯದೊಂದಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕøತಿಕ ಜಾಗೃತಿ ಮೂಡಿಸುವ ಕೇಂದ್ರವನ್ನಾಗಿ ಈ ಮಠವನ್ನು ಪರಿವರ್ತಿಸಿದರು. ಈ ಸಾಮಾಜಿಕ ಪರಿವರ್ತನೆಯ ಕಾರ್ಯವನ್ನು ಒಂದು ಆಂದೋಳನವನ್ನಾಗಿಸಿದ್ದು ‘ಮಹಾಂತ ಜೋಳಿಗೆ’ಯ ಸಂಚಾರದಿಂದ. 1975ರಲ್ಲಿ ಹುನಗುಂದದ ಹರಿಜನ ಕೇರಿಯಿಂದ ಆರಂಭವಾಗಿ ಚಟಗಳ ಭಿಕ್ಷೆ ಕೇಳುತ್ತ ಪರರಾಷ್ಟ್ರಗಳವರೆಗೂ ಸಂಚಾರ ಮಾಡಿ ಬಂದಿದ್ದಾರೆ.

ಇಲ್ಲೀವರೆಗೆ ದುಶ್ಚಟಗಳಿಗೆ ದಾಸರಾಗಿ ತಮ್ಮನ್ನೂ, ಕುಟುಂಬದವರನ್ನೂ, ಬಳಗದವರನ್ನು Mahant shrigalu & Vijayamahantshrigaluದುಸ್ಥಿತಿಗೆ ತಂದು ನಿಲ್ಲಿಸುತ್ತಿದ್ದ ಹಲವು ಚಟಗಳನ್ನು ಶ್ರೀಗಳ ಜೋಳಿಗೆಗೆ ಹಾಕಿ ಮುಕ್ತರಾದರು. ಇದರಿಂದಾಗಿ ಎಷ್ಟೋ ಹಳ್ಳಿಗಳು ಅನಿಷ್ಟ ಪದ್ದತಿಗಳಾದ ದೇವದಾಸಿ ಪದ್ಧತಿ ಮೊದಲಾಗಿ, ಪಾನಮುಕ್ತ, ಜಗಳ ರಹಿತ ಹಳ್ಳಿಗಳಾಗಿ ನಿರ್ಮಲ ಬದುಕನ್ನು ನಡೆಸುವಂತಾಯಿತು. ಅಂತಹ ಹಳ್ಳಿಗರ ಬಾಳಿಗೆ ಮಹಾಂತ ಸ್ವಾಮಿಗಳು ದೇವರೇ ಆದರು. ಹೀಗೆ ಜೋಳಿಗೆಗೆ ಹಾಕಿ ಚಟದಿಂದ ಮುಕ್ತರಾದವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಪ್ರಸಾದ ನಿಲಯಗಳನ್ನು ಆರಂಭಿಸಿದರು. ಇದರಿಂದಾಗಿ ಈಗಾಗಲೇ ಚಿತ್ತರಗಿ ಇಲಕಲ್ಲ ಪೀಠದಲ್ಲಿ ನಡೆಯುತ್ತಿದ್ದ ಧರ್ಮ ಪ್ರಸಾರದ ಕಾರ್ಯದೊಂದಿಗೆ; ಸಾಮಾಜಿಕ ಜಾಗ್ರತೆಗಾಗಿ ಅಗತ್ಯವಾದ ಶಿಕ್ಷಣ ಕ್ಷೇತ್ರದ ಕಡೆಗೆ ಮನಸ್ಸು ತಿರುಗಿಸಿದ್ದು ಇನ್ನೊಂದು ಬಹುದೊಡ್ಡ ಕಾರ್ಯವೇ, ಶರಣರ ತತ್ವ, ಸಿದ್ಧಾಂತ, ಅನುಭಾವಗಳ ತಳಹದಿಯ ಮೇಲೆ 1975ರಲ್ಲಿ ಸ್ಥಾಪಿಸಲ್ಪಟ್ಟ ‘ಶರಣ ಸಿದ್ಧಾಂತ ವಿದ್ಯಾಪೀಠ’ವು ಮಹಾಂತ ಸ್ವಾಮಿಗಳ ನೇತೃತ್ವದಲ್ಲಿ ನಾಡಿನ ತುಂಬೆಲ್ಲ ಹಲವು ಶಿವಾನುಭವ ಶಿಬಿರಗಳನ್ನು ಯಶಸ್ವಿಯಾಗಿ ಜರುಗಿಸಿದೆ.

ಜಾತ್ರಾಮಹೋತ್ಸವಗಳ ಕಾಲಕ್ಕೆ ಅಡ್ಡಪಲ್ಲಕ್ಕಿಯಲ್ಲಿ ಸ್ವಾಮಿಗಳ ಬದಲಾಗಿ ವಚನ ಕಟ್ಟುಗಳ ಮೆರವಣಿಗೆ ಮಾಡುವುದನ್ನೂ ರೂಢಿಗೆ ತಂದಿದ್ದಾರೆ. ಪ್ರತಿಯೊಂದೂ ಶಾಖಾಮಠಗಳಲ್ಲಿ ಪ್ರತಿವರುಷ ‘ಶರಣ ಸಂಸ್ಕøತಿ ಮಹೋತ್ಸವ’ ನಡೆಯುವಂತೆ ಮಾಡಿದ್ದಾರೆ. ಬಸವ ಕೇಂದ್ರಗಳನ್ನು ಪ್ರತಿ ಊರಲ್ಲಿ ಸ್ಥಾಪಿಸಿ, ಮನೆ ಮನೆಯಲ್ಲಿ ಮಹಾಮನೆ ಕಾರ್ಯಕ್ರಮಗಳನ್ನು ಏರ್ಪಡಿಸಿ ವಚನಗಳ ವಿಶ್ಲೇಷಣೆಗೆ ತೊಡಗಿಸಿದ್ದಾರೆ. 1992 ರಿಂದ ಬಸವ ಗುರುಕಾರುಣ್ಯ ಪ್ರಶಸ್ತಿಯನ್ನು ಆರಂಭಿಸಿ ನಾಡಿನಲ್ಲಿ ಬಸವತತ್ವ ಪ್ರಸಾರ, ಶರಣ ಸಂಸ್ಕøತಿಗಾಗಿ ಶ್ರಮಿಸುತ್ತಿರುವವರನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 1986 ರಿಂದಲೇ ಶ್ರೀಮಠದಿಂದ ಶರಣ ಸಂದೇಶ ಸಾರುವ ‘ಬಸವ ಬೆಳಗು’ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಹೊರತರುತ್ತಿದ್ದಾರೆ.

1975ರಲ್ಲಿ ಆರಂಭಿಸಿದ ‘ಶ್ರೀವಿಜಯ ಮಹಾಂತೇಶ್ವರ ಧರ್ಮ ಪ್ರಸಾರಕ ಮಂಡಲ’  ಹೆಸರಿನ ಗ್ರಂಥಮಾಲೆಯಿಂದ ನಾಡಿನ ಖ್ಯಾತ ಸಾಹಿತಿಗಳ, ವಿದ್ವಾಂಸರ 90 ಕೃತಿಗಳು ಈಗಾಗಲೇ ಬೆಳಕು ಕಂಡಿವೆ (ಪ್ರಕಟಗೊಂಡಿವೆ).

ಸಾಮಾಜಿಕ ಕ್ರಾಂತಿಯ ದ್ಯೋತಕವಾಗಿ ಶರಣರ ವಚನದಂತೆ “ಇವನಾರವ, ಇವನಾರವ, ಇವನಾರವ ಎಂದೆನಿಸದೆ ಇವನಮ್ಮವ, ಇವನಮ್ಮವ, ಇವನಮ್ಮವನೆಂದೆನಿಸಯ್ಯ”-ಎಂಬಂತೆ ಇಲ್ಲೀವರೆಗೆ ಯಾರೂ ಮಾಡದ ಸಾಹಸಕ್ಕೆ ಕೈಹಾಕಿದವರು ಪೂಜ್ಯ ಮಹಾಂತಶ್ರೀಗಳು. ತಮ್ಮ ಶಾಖಾಮಠಗಳಿಗೆ ದಲಿತರನ್ನು ಪೀಠಾಧಿಪತಿಗಳನ್ನಾಗಿ ಮಾಡಿದ್ದು ನಿಜವಾದ ಕ್ರಾಂತಿ. ಉದಾಹರಣೆಗೆ ಚಿತ್ರದುರ್ಗದ-ಸಿದ್ದಯ್ಯನಕೋಟೆಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಶಾಖಾಮಠದಲ್ಲಿ 1998ರ ಎಪ್ರೀಲ್ ತಿಂಗಳಲ್ಲಿ ದಲಿತ ವಟು (ಮಾದರ) ಶ್ರೀ ಬಸವಲಿಂಗ ದೇಶಿಕರಿಗೆ ಶ್ರೀ ಮನಿಪ್ರ ಬಸವಲಿಂಗ ಮಹಾಸ್ವಾಮಿಗಳು- ಎಂಬ ಜಂಗಮ ದೀಕ್ಷೆ ನೀಡಿ- ನಿರಂಜನ ಚರಪಟ್ಟಾಧಿಕಾರ ನೆರವೇರಿಸಿದ್ದು ಒಂದು ಉದಾಹರಣೆ ಯಾದರೆ; ಎರಡನೆಯ ಉದಾಹರಣೆ- ರಾಯಚೂರ ಜಿಲ್ಲೆ ಲಿಂಗಸ್ಗೂರ ತಾಲೂಕಿನ ಛಾವಣಿಯಲ್ಲಿ 2002ರ ನವ್ಹೆಂಬರ್ ತಿಂಗಳಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶಾಖಾಮಠಕ್ಕೆ ಲಂಬಾಣಿ ಜನಾಂಗದ ವಟುವಿಗೆ ಜಂಗಮದೀಕ್ಷೆ ನೀಡಿ ಪೂಜ್ಯ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳೆಂದು ಪಟ್ಟಕಟ್ಟಿದ್ದು. ಈ ಉದಾಹರಣೆಗಳಿಂದ ಸ್ವಾಮಿತ್ವ ಅಥವಾ ಜಂಗಮ ಪದವಿ ಬರುವುದು ಸಾಧನೆ ಹಾಗೂ ಸಂಸ್ಕಾರದಿಂದಲೇ ಹೊರತು ಹುಟ್ಟಿನಿಂದ ಅಲ್ಲ ಎಂಬ ಬಸವ ಸಂದೇಶವನ್ನು ಮಹಾಂತ ಶಿವಯೋಗಿಗಳು ಆಚರಣೆಯಲ್ಲಿ ತಂದು ತೋರಿದ ಸಂಗತಿ.

ಇನ್ನೊಂದೆಡೆ ಮಹಾಂತ ಸ್ವಾಮಿಗಳು ವಯಸ್ಸಿನ ಮತ್ತು ಜಾತಿಯ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ-ದಲಿತ ವಟುಗಳಿಗೆ ತಾವೇ ಜಂಗಮ ದೀಕ್ಷೆ ಮಾಡಿದ ಮೇಲೆ ಅವರ ಪಾದಪೂಜೆ ಮಾಡಿ ಅವರ ಪಾದೋದಕ ಸ್ವೀಕರಿಸಿದ್ದು ಬಸವಣ್ಣನವರ “ದಾಸೋ ಅಹಂ ಭಾವ”-ದ ಪ್ರತೀಕ. ಆ ಉದಾಹರಣೆಗಳೆಂದರೆ, (1) ಬಾಗಲಕೋಟದ ಭೋವಿ ಗುರುಪೀಠದ ಶರಣ ಬಸವಸ್ವಾಮಿಗಳು ಮತ್ತು ಇವರ ಮರಣಾನಂತರ ಇವರ ಉತ್ತರಾಧಿಕಾರಿ (2) ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳಿಗೆ ಮಹಾಂತ ಶಿವಯೋಗಿಗಳು ತಾವೇ ಸ್ವತಃ ಜಂಗಮದೀಕ್ಷೆ ನೀಡಿ ಅವರ ಪಾದೋದಕ ಹಾಗೂ ಪ್ರಸಾದ ಸೇವನೆ ಮಾಡಿದ ಎರಡು ಉದಾಹರಣೆಗಳು.

ಮತ್ತೊಂದು ಬಹುಮುಖ್ಯ ನೂತನ ಕಾರ್ಯವೆಂದರೆ, ಇಲ್ಲೀವರೆಗೆ ಲಿಂಗ ಮತ್ತು ಜಂಗಮ ದೀಕ್ಷೆ ನೀಡುವವರೆಲ್ಲಾ ಉತ್ತಮ ಜಾತಿಯಿಂದ ಬಂದ ಮಹಾಸ್ವಾಮಿಗಳೇ ಆಗಿರುತ್ತಿದ್ದರು. ಆದರೆ ಪೂಜ್ಯ ಮಹಾಂತಶ್ರೀಗಳು ಇದಕ್ಕೆ ತದ್ವಿರುದ್ದವಾಗಿ ದಲಿತ ಸ್ವಾಮಿಗಳಿಂದ ಉತ್ತಮ ಜಾತಿಯಿಂದ ಬಂದ ವಟುಗಳಿಗೆ ಲಿಂಗದೀಕ್ಷೆ ಮತ್ತು ಜಂಗಮ ದೀಕ್ಷೆ ಕೊಡಿಸಿದ ಉದಾಹರಣೆಗಳೆಂದರೆ, ಭಾಲ್ಕಿ ಪಟ್ಟಾಧ್ಯಕ್ಷರಿಂದ ಜಂಗಮ ದೀಕ್ಷೆ ಪಡೆದಿದ್ದ ದಲಿತ ಮೂಲದ ಬೆಲ್ದಾಳ ಶ್ರೀ ಸಿದ್ಧರಾಮೇಶ್ವರ ಶರಣರಿಂದ 1997ರಲ್ಲಿ ಮರೆಗುದ್ದಿಯ ಗುರುಮಹಾಂತ ಶ್ರೀಗಳಿಗೆ ಜಂಗಮ ದೀಕ್ಷೆ ಕೊಡಿಸಿದ್ದು ಸಾಮಾಜಿಕ ನ್ಯಾಯಕ್ಕೆ ಹಿಡಿದ ಕನ್ನಡಿಯೇ     ಸರಿ. ಉಳಿಮುಟ್ಟಿದ ಕಲ್ಲು ಲಿಂಗವಾದಂತೆ- ಎಂಬ ಶರಣತತ್ವ ಹಾಗೂ ಕವಿರನ್ನನ  ಕಂದಪದ್ಯದ

                                “ಬೆಳಗುವ ಸೊಡರೊಳ್ ಸೊಡರಂ

                                ಬೆಳಗಿ ಪಲರ್ ಕೊಂಡು ಪೆÇೀಗೆಯುಂ ಕುಂದದೆಪ

                                ಜ್ಜಳಿಸುವ ವೊಲ್ ಜಗಮೆಲ್ಲಂ”

ಎಂಬ ಮಾತಿನಂತೆ ಲಿಂಗವೆಂಬ ಜ್ಯೋತಿಮುಟ್ಟಿದ ಜಂಗಮನಿಂದ ಯಾರಿಗೆ ಮುಟ್ಟಿಸಿದರೂ ಆಯಾ ಜೋತಿಯಾಗಿಯೇ ಬೆಳಗುವಂತೆ-ಜ್ಯೋತಿಗೆ ಯಾವುದೇ ಜಾತಿ-ಕುಲದ ಸೋಂಕಿಲ್ಲ. ಅದು ಎಲ್ಲರ ಮನೆಯನ್ನೂ ಬೆಳಗುವುದೊಂದೇ ಅದರ ಧರ್ಮೆಂಬ ತತ್ವ ಈ ಮೂಲಕ ಸಾರಿದವರು.

ಅಷ್ಟೇ ಅಲ್ಲ ಇಲ್ಲೀವರೆಗೆ ಯಾರಾದರೂ ಸ್ತ್ರೀಯರು ಜಂಗಮದೀಕ್ಷೆ ಬಯಸಿದರೆ, ಸ್ವಾಮಿಗಳಾದವರು ಕೇವಲ ಕಾವಿಸೀರೆ ಮತ್ತು ರುದ್ರಾಕ್ಷಿ ಹಾರವನ್ನು ಕೈಗೆನೀಡಿ ಆಶೀರ್ವದಿಸುತ್ತಿದ್ದರು. ಆದರೆ ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳು ಲಿಂಗ ಸಮಾನತೆ ತರುವ ನಿಟ್ಟಿನಲ್ಲಿ ಎಲ್ಲ ಸ್ವಾಮಿಗಳಿಗಿಂತ ಭಿನ್ನವಾಗಿ ಆಲೋಚಿಸಿ ಅದನ್ನು ಕಾರ್ಯರೂಪಕ್ಕೂ ತಂದ ಆಚರಣೆಯೆಂದರೆ, –

ಲಿಂಗಾಯತ ಧರ್ಮದಲ್ಲಿ ಗಂಡು ಮಕ್ಕಳಿಗೆ ಸ್ವಾಮಿಗಳು ಜಂಗಮದೀಕ್ಷೆ ನೀಡಿ, ಪಾದಪೂಜೆ ನೆರವೇರಿಸಿ ಪಾದೋದಕ ಸ್ವೀಕರಿಸುವ ಹಾಗೆಯೇ; ಹೆಣ್ಣು ಮಕ್ಕಳಿಗೂ ಜಂಗಮದೀಕ್ಷೆ ನೀಡಿ, ಅವರ ಪಾದಪೂಜೆ ನೆರವೇರಿಸಿ, ಪಾದೋದಕ ಸ್ವೀಕರಿಸಿದ ಅಪರೂಪದ ಸಂಗತಿ ಲಿಂಗ ಸಮಾನತೆಗೆ ಸಾಕ್ಷಿ. ಅಂಥ ಉದಾಹರಣೆಗಳೆಂದರೆ (1) ಲೋಕಾಪೂರ ಸಮೀಪದ ನಾಗನೂರಿನ ಮಹಿಳಾ ವಟುವಿಗೆ ಶ್ರೀ ಮ.ನಿ.ಪ್ರ. ಬಸವಗೀತಾ (ಪ್ರಕಾಶ) ತಾಯಿಗೆ ಮತ್ತು (2) ಬೀದರ ತಾಲೂಕಿನ ಮಲ್ಕಾಪುರದ ಶ್ರೀ ಮ.ನಿ.ಪ್ರ. ಬಸವಾಂಜಲಿ ತಾಯಿಯವರಿಗೆ ಜಂಗಮ ದೀಕ್ಷೆ ನೀಡಿ, ಪಾದಪೂಜೆ ಮಾಡಿ, ಪಾದೋದಕ ಸ್ವೀಕರಿಸಿದ ಉದಾಹರಣೆಗಳಿಂದ – ತಾಳ್ಮೆಯ ಮೂರ್ತಿ ತಾಯಿಯೂ ಲಿಂಗ ಮತ್ತು ಜಂಗಮ ದೀಕ್ಷೆಗೆ ಅರ್ಹಳು ಎಂಬ ಶರಣರ ತತ್ವವನ್ನು ಸಾರಿದಂತಿವೆ.

ಹೇಳಲೇಬೇಕಾದ ಮತ್ತೊಂದು ಸತ್ಕಾರ್ಯವೆಂದರೆ ಜಂಗಮನಿಗೆ ಹಣದ ಮೋಹ ಇರಬಾರದು ಎಂಬುದನ್ನು ಜಾರಿಯಲ್ಲಿ ತರುವ ನಿಟ್ಟಿನಲ್ಲಿ ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳಿಗೆ ಕರ್ನಾಟಕ ಸರಕಾರ ‘ಬಸವ ಪುರಸ್ಕಾರ’ ಪ್ರಶಸ್ತಿಯ ಜೊತೆಗೆ ಸಲ್ಲಿಸಿದ 10 ಲಕ್ಷ ಹಣದ ಜೊತೆಗೇ ತಮ್ಮ ಕೈಯಿಂದ ಕೆಲವು ಲಕ್ಷ ಹಣವನ್ನು ಹಾಕಿ ನಾಡಿನಖ್ಯಾತ ಸಾಹಿತಿಗಳು ಮತ್ತು ಸಮಾಜ ಸೇವಾ ಸಂಸ್ಥೆಗಳಿಗೆ ನೀಡಿದ್ದು ಒಂದು ಮೇಲ್ಪಂಕ್ತಿ ಎಂದೇ ಹೇಳಬೇಕಾಗುತ್ತದೆ. ಆ ಹಣದ ಆಶೀರ್ವಾದ ಪಡೆದ ಅದೃಷ್ಠಶಾಲಿಗಳೆಂದರೆ, ಡಾ. ಎಂ.ಎಂ.ಕಲಬುರ್ಗಿ, ಡಾ. ಚೆನ್ನವೀರ ಕಣವಿ, ಡಾ. ಪಾಟೀಲ ಪುಟ್ಟಪ್ಪ, ಕೋ. ಚೆನ್ನಬಸಪ್ಪ, ಸಿದ್ದಣ್ಣ ಲಂಗೋಟಿ, ರಮ್ಜಾನ ದರ್ಗಾ, ಅರವಿಂದ ಜತ್ತಿ, ಡಾ. ಚಂದ್ರಶೇಖರ ಕಂಬಾರ, ಸಿ. ಎಚ್. ನಾರ್ನಾಳ, ಜಿ. ಎಚ್. ಹನ್ನೆರಡುಮಠ, ಮುರುಘ ಶರಣರು-ಚಿತ್ರದುರ್ಗ ಅವರಿಗೆ ತಲಾ ಒಂದು ಲಕ್ಷ ರೂಪಾಯಿಗಳನ್ನು ಹಂಚಿದ್ದಲ್ಲದೆ; 1ಲಕ್ಷ ಶಿವಯೋಗ ಮಂದಿರಕ್ಕೆ ಹಾಗೂ 2 ಲಕ್ಷ ಹಣವನ್ನು ಅಥಣಿಯ ‘ದೇವದಾಸಿ ವಿಮೋಚನಾ ಸಂಸ್ಥೆಗೆ ದೇವದಾಸಿಯರ ಮಕ್ಕಳ ವಸತಿ ಶಾಲೆಗೆ ವಿನಿಯೋಗಿಸಲು ನೀಡಿದ್ದು ಬಹುದೊಡ್ಡ ಸ್ತುತ್ಯಾರ್ಹ ಕೆಲಸ. ಇಂತಹದೇ ಕರ್ನಾಟಕದ ಮದ್ಯಪಾನ ಸಂಯಮ ಮಂಡಳಿಯ ‘ಸಂಯಮ ಪ್ರಶಸ್ತಿಯ’ ಹಣವನ್ನು ವಿಜಯ ಮಹಾಂತ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ನೀಡಿದ್ದು ಅವರ ಹಣದ ಮೇಲಿನ ನಿರ್ಮೋಹ ಹಾಗೂ ಸಾಮಾಜಿಕ ಕಾಳಜಿಯನ್ನು ತೋರಿಸುತ್ತದೆ. ಆ ಮೂಲಕ ಶತಮಾನೋತ್ಸವ ಕಾರ್ಯಕ್ರಮದ ಯಶಸ್ಸಿಗೂ ಶ್ರಮಿಸಿದರು.

ಇವರು ಸಮಾಜದಲ್ಲಿನ ಮೂಢನಂಬಿಕೆಗಳನ್ನು ತೊಡೆದುಹಾಕಿ ಜನರಲ್ಲಿ ಆತ್ಮಬಲ ತುಂಬುವ ಸಲುವಾಗಿಯೇ-ಮಂಗಲ ಮಹೋತ್ಸವದಲ್ಲಿ ಅಕ್ಷತೆ ಹಾಕುವ ಬದಲು-ಆ ಅಕ್ಕಿಯನ್ನು ಬಡವರಿಗೆ ಅನ್ನದಾಸೋಹಕ್ಕೆ ಬಳಸಲು ಸೂಚಿಸಿ ಹೂ ಹಾಕಿ ಆಶೀರ್ವದಿಸುತ್ತಾರೆ. ವರದಕ್ಷಿಣೆ ತಕ್ಕೊಳ್ಳುವವರ ಮದುವೆಗೆ ಹೋಗೋದೇ ಇಲ್ಲ. ಮದುವೆಯಲ್ಲಿ ಸಂಸ್ಕøತ ವೇದಮಂತ್ರಗಳ ಬದಲು ‘ವಚನ ಮಂತ್ರ’ವನ್ನು ರೂಢಿಯಲ್ಲಿ ತಂದಿದ್ದಾರೆ.

ಬಸವಣ್ಣನವರ – “ಎಮ್ಮವರು ಬೆಸಗೊಂಡರೆ ಶುಭಲಗ್ನ ವೆಂದೆನ್ನಿರಯ್ಯಾ” ಎಂಬ ವಚನದ ಸಾರದಂತೆ ಪಂಚಾಂಗ, ಜ್ಯೋತಿಷ್ಯವನ್ನು ನಂಬುವುದನ್ನು ಬಿಡಿಸಲು ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಈಗ ಸರಕಾರ ನಕಲು ಮಾಡುತ್ತಿರುವ ಕಾರ್ಯಕ್ರಮವಾದ ಬರಗಾಲದಲ್ಲಿ ಗಂಜಿ ಕೇಂದ್ರವನ್ನು ತೆರೆಯುವ ಕಾರ್ಯವನ್ನು ಎಷ್ಟೋ ವರ್ಷಗಳ ಹಿಂದೆಯೇ ಜಾರಿಗೆ ತಂದಿದ್ದಾರೆ. ನಾಗರ ಪಂಚಮಿಯಂದು ಕಲ್ಲು ನಾಗರಕ್ಕೆ ಹಾಲೆರೆಯುವುದನ್ನು ಬಿಡಿಸಿ ಮಕ್ಕಳಿಗೆ ಹಾಲು ಕುಡಿಸುವ ಹಬ್ಬವನ್ನಾಗಿ ಆಚರಿಸುತ್ತಿದ್ದಾರೆ.

ಹೀಗೆ ನಿರಂತರವಾಗಿ ಭಕ್ತರ ಉದ್ಧಾರದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಹಾಂತ ಶ್ರೀಗಳನ್ನು ಹುಡುಕಿಕೊಂಡು ಹಲವು ಪ್ರಶಸ್ತಿಗಳು ಬಂದಿವೆ. ಅವು ಇಂತಿವೆ.

1.            2006 ರಲ್ಲಿ ‘ಕನಕಶ್ರೀ ಪ್ರಶಸ್ತಿ’ – ಅಥಣಿಯ ಕನಕದಾಸ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದಿಂದ.

2.            2006 ರಲ್ಲಿ ‘ಅಂಬಿಗರ ಚೌಡಯ್ಯ ಗಣಾಚಾರ ಪ್ರಶಸ್ತಿ’ ಗದಗ-ಬೆಟಗೇರಿಯ ಅಂಬಿಗರ ಚೌಡಯ್ಯ ಪ್ರತಿಷ್ಠಾನದಿಂದ.

3.            21-1-2009 ರಲ್ಲಿ ‘ಗೌರವ ಡಾಕ್ಟರೇಟ’ – ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ.

4.            2-7-2012ರಲ್ಲಿ ‘ಸಂಯಮ ಪ್ರಶಸ್ತಿ’ – ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ.

5.            31-7-2012 ರಲ್ಲಿ ‘ಬಸವ ಪುರಸ್ಕಾರ-ರಾಷ್ಟ್ರೀಯ ಪ್ರಶಸ್ತಿ’- ಕರ್ನಾಟಕ ರಾಜ್ಯ ಸರಕಾದಿಂದ 2008ನೇ ಸಾಲಿಗಾಗಿ.

6.            ಚಿತ್ರದುರ್ಗ ಮುರಘಾಮಠದಿಂದ ‘ಮುರುಘಶ್ರೀ ಪ್ರಶಸ್ತಿ’.

ಹೀಗೆ ಹಲವು ಪ್ರಶಸ್ತಿಗಳಲ್ಲಿ ಇವು ಆಯ್ದ ಕೆಲವು ಮಾತ್ರ. ಇದೀಗ ತಮ್ಮ ಕಾರ್ಯಭಾರವನ್ನು ಕಡಿಮೆ ಮಾಡುವುದಕ್ಕಾಗಿ 2004ರಲ್ಲಿಯೇ ಸಾತ್ವಿಕ ಸ್ವಭಾವದ, ವಿನಯವಂತ, ಪರಿಶುದ್ಧ ನಡತೆಯ, ಉನ್ನತ ಪದವಿ ಪಡೆದಿದ್ದರೂ ವಿದ್ಯಾಮದವಿಲ್ಲದ ಕ್ರಿಯಾಶೀಲ ವ್ಯಕ್ತಿಯನ್ನು ಗುರುತಿಸಿ ಕರೆತಂದು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದ್ದರೂ, ದಣಿವು ಅರಿಯದೆ ಹಗಲಿರುಳೂ ಸಮಾಜೋಧ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡು ಕಿರಿಯ ಸ್ವಾಮಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

6.            ಗುರುಮಹಾಂತ ಸ್ವಾಮಿಗಳು (ನರಗುಂದ)Gurumahant Shrigalu Ilkal

ಮಹಾಂತಶ್ರೀಗಳು ತಮ್ಮ 75ನೇ ವಯಸ್ಸಿನಲ್ಲಿ ಹಿರಿಯ ಭಕ್ತರು ಮತ್ತು ಹಲವು ಜಗದ್ಗುರುಗಳ ಒತ್ತಾಯದ ಮೇರೆಗೆ ಉತ್ತರಾಧಿಕಾರಿಗಾಗಿ ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದವರು ಶ್ರೀ ಸಿದ್ಧರಾಮ ಸ್ವಾಮಿಗಳು. ಮೂಲತಃ ನರಗುಂದದ ಲಿಂಗಾಯತ ಹೆಗಡ್ಯಾಳ ಶರಣ ದಂಪತಿಗಳಾದ ವೀರಪ್ಪ ಮತ್ತು ಶಾಂತಮ್ಮನವರ ಹಿರಿಯ ಮಗನಾಗಿ 27-5-1960 ರಂದು ಜನಿಸಿದರು. ಹುಬ್ಬಳ್ಳಿಯ ಕಲಬುರ್ಗಿ ಮಠಾಧೀಶರಾಗಿದ್ದ ಶ್ರೀ ಶಿವಮೂರ್ತಿ ಸ್ವಾಮಿಗಳ ಅಪ್ಪಣೆಯಂತೆ ಶಿವನಾಗಪ್ಪ ಎಂದು ನಾಮಕರಣವಾಯಿತು. ಇವರು ಧಾರವಾಡದ ಮುರುಘಾಮಠದಲ್ಲೇ ಇದ್ದುಕೊಂಡು, ಎಲ್.ಎಲ್.ಬಿ ಓದಿದವರು. ಆಗಿನ ಮಠದ ಶ್ರೀಗಳಾದ ಪೂಜ್ಯ ಮಹಾಂತಪ್ಪಗಳಿಂದ ದೀಕ್ಷೆ ಪಡೆದು, ಅವರ ಸೇವೆ ಮಾಡುತ್ತಲೇ ಈ ಉನ್ನತ ವ್ಯಾಸಂಗಮಾಡಿದವರು. ಆದರೆ ಕರಿಕೋಟು ತೊಟ್ಟು ವಕೀಲಿ ವೃತ್ತಿ ಮಾಡಬೇಕೆಂದು ನ್ಯಾಯಾಲಯ ಪ್ರವೇಶಿಸಿದಾಗ, ಅಲ್ಲಿ ಸುಳ್ಳು ಹೇಳಿದರೆ ಮಾತ್ರ ಈ ವೃತ್ತಿ ಮುನ್ನಡೆಯುತ್ತದೆಂದು ಗೊತ್ತಾಗಿ ಮಹಾಂತಪ್ಪಗಳ ಮುಂದೆ – “ಅಪ್ಪಾ ನನ್ನಿಂದ ಸುಳ್ಳು ಹೇಳುವುದಾಗುವುದಿಲ್ಲ. ಅದಕ್ಕೆ ಈ ವಕೀಲ ವೃತ್ತಿ ಬೇಡ” ಎಂದು ಕರಿಕೋಟು ಕಳಚಿ, ಮಠದಲ್ಲಿ ಅಪ್ಪಗಳ ಮತ್ತು ವಿಧ್ಯಾರ್ಥಿಗಳ ಸೇವೆಗೆ ನಿಂತರು. ಪ್ರತಿನಿತ್ಯ ಬೆಳಗಿನ ಜಾವ 4-30 ರಿಂದ 5 ಗಂಟೆಯ ಒಳಗಾಗಿ ಶ್ರೀಮಠದ 126 ಕೊಠಡಿಗಳಲ್ಲಿದ್ದ ಸುಮಾರು 600 ವಿದ್ಯಾರ್ಥಿಗಳನ್ನು ಬಾಗಿಲುಬಡಿದು, ಹೆಸರು ಹಿಡಿದು ಕೂಗಿ ಎಚ್ಚರಿಸಿ 5 ಗಂಟೆಯೊಳಗಾಗಿ ಎಲ್ಲರನ್ನು ಪ್ರಾರ್ಥನೆಗೆ ತೊಡಗುವಂತೆ ಮಾಡುತ್ತಿದ್ದ ಕಾರ್ಯ ಸ್ತುತ್ಯಾರ್ಹವಾದದ್ದು. 10 ನಿಮಿಷದಲ್ಲಿ ಪ್ರಾರ್ಥನೆ ಮುಗಿಸಿದ ಶ್ರೀ ಮಠದ ವಿದ್ಯಾರ್ಥಿಗಳು ಕನಿಷ್ಠ ಎರಡು ತಾಸು ಓದುವಂತೆ ಮುತುವರ್ಜಿ ವಹಿಸುತ್ತಿದ್ದರು. ಪ್ರಸಾದ ಸೇವನೆಯ ಕಾಲಕ್ಕೆ ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನಿಂದ ಲಿಂಗಾಯತ ಧರ್ಮ ಸಂಪ್ರದಾಯದಂತೆ  ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸೇವಿಸಿದ ನಂತರವಷ್ಟೆ ತಾವು ಪ್ರಸಾದ ಸ್ವೀಕರಿಸುತ್ತಿದ್ದರು. ಅಂದರೆ ಮುರುಘಾ ಮಠದ ಮಹಾಂತಪ್ಪಗಳಿಂದ ಶಿವದೇವರು ಎನಿಸಿಕೊಂಡು ವಿದ್ಯಾರ್ಥಿಗಳ ಪಾಲಿನ ದೇವರೇ ಆಗಿದ್ದರು. ಮಠಕ್ಕೆ ಆಗಮಿಸುತ್ತಿದ್ದ ಪೂಜ್ಯರ, ಶರಣ ಸದ್ಭಕ್ತರ, ಅನುಭವಿಗಳ ಶಿವಾನುಭವ ಮತ್ತು ಪ್ರವಚನ ಕೇಳುತ್ತ ಸಹಜ ವೈರಾಗ್ಯತಾಳಿ ವಿದ್ಯಾರ್ಥಿಗಳ ಬಾಯಲ್ಲಿ ಹೆಗಡ್ಯಾಳ ಶರಣರು ಎಂದೇ ಪ್ರಸಿದ್ಧರಾದವರು.

ಮುಂದೆ ಚಿತ್ರದುರ್ಗದ ಜಗದ್ಗುರುಗಳ ಕೃಪೆಗೆ ಪಾತ್ರರಾಗಿ ಜಂಗಮ ದೀಕ್ಷೆ ಪಡೆದು   ಶ್ರೀ ಸಿದ್ಧರಾಮ ಸ್ವಾಮಿಗಳು ಎಂದು ಮರುನಾಮಕರಣಗೊಂಡು, ಈಗಾಗಲೇ ಕನ್ನಡ, ಇಂಗ್ಲೀಷ ಭಾಷಾ ಪ್ರಭುತ್ವ ಹೊಂದಿದ್ದರಿಂದಾಗಿ, ಚಿತ್ರದುರ್ಗದ ಶ್ರೀಗಳೊಂದಿಗೆ ಅಮೇರಿಕಾ, ಇಂಗ್ಲಂಡ, ಫ್ರಾನ್ಸ, ಇಟಲಿ, ಜರ್ಮನ್ ಮೊದಲಾದ ದೇಶಗಳಲ್ಲಿ ಬಸವತತ್ವ ಪ್ರಸಾರ ಕಾರ್ಯದಲ್ಲಿ ಸೇವೆ ಸಲ್ಲಿಸಿದವರು. ಮುಂದೆ ಚಿತ್ರದುರ್ಗದ ಜಗದ್ಗುರುಗಳು ಸ್ಥಾಪಿಸಿದ ಬಸವತತ್ವ ಮಹಾ ವಿದ್ಯಾಲಯದ ಸಾಧಕರಿಗೆ, ಸಹಜ ಶಿವಯೋಗದ ಶಿಬಿರಗಳಿಗೆ, ವಚನ ಕಮ್ಮಟ ಪರೀಕ್ಷೆಗಳಿಗೆ ಕ್ರಿಯಾಶೀಲ ಸಂಘಟಕರಾಗಿ ದುಡಿದವರು.

ಇದೆಲ್ಲ ರೀತಿಯ ಸಂಘಟನಾ ಶಕ್ತಿಯನ್ನು ಅವಲೋಕಿಸಿದ ಚಿತ್ರದುರ್ಗದ ಮುರುಘರಾಜೇಂದ್ರ ಶರಣರು ಮೈಸೂರಿನ ತಮ್ಮ ಶಾಖಾಮಠಕ್ಕೆ ಬಸವ ತತ್ವ ಪ್ರಸಾರಕ್ಕಾಗಿ ಚರಜಂಗಮ ಸೇವೆ ಸಲ್ಲಿಸಲು ನಿಯಮಿಸಿದರು. ಇಂಥ ಸೇವೆ ಸಲ್ಲಿಸುವಾಗ ಇಲಕಲ್ ಪೂಜ್ಯರ ಕೃಪಾದೃಷ್ಟಿಗೆ ಬಿದ್ದು, ಹಲವು ಪೂಜ್ಯರಿಂದ ತಮ್ಮ ಪ್ರಸ್ತಾಪವನ್ನು ಮುಂದಿಟ್ಟಾಗ ನಯವಾಗಿ ತಿರಸ್ಕರಿಸಿ ಈ ಕಾರಣ ನೀಡಿದರು; ಅದೇನೆಂದರೆ, ಯಾವುದೇ ಒಂದು ಮಠಕ್ಕೆ ಸ್ವಾಮಿಯಾಗಿ ಸಂಪ್ರದಾಯಗಳ ಬಲೆಗೆ ಸಿಲುಕಿ ಜಡವಾಗುವುದಕ್ಕಿಂತ ಕ್ರಿಯಾಶೀಲ ಜಂಗಮನಾಗಿರುವುದೇ ಮೇಲು. ಆದ್ದರಿಂದ ನಾನು ಒಲ್ಲೆ ಎಂದರು. ಬಹುಶಃ ಮಳೆಯಯ್ಯನವರೂ ತಾವು ಇಲಕಲ್‍ಮಠಕ್ಕೆ ಸ್ವಾಮಿಗಳಾಗಿ ಹೋಗಬೇಕೆಂದು ಬಳ್ಳಾರಿಯ ಸಕ್ಕರೆ ಕರಡೆಪ್ಪನವರು ಕೇಳಿದ ಮಾತಿಗೆ ನಾನು ಯಾರ ಹಂಗಿಗೂ ಒಳಗಾಗದೇ ಸ್ವತಂತ್ರವಾಗಿ ಬದುಕುತ್ತೇನೆ, ಮಠದ ಅಧಿಕಾರ ನನಗೆ ಬೇಡ ಎಂದ ಮಾತನ್ನೇ ಇವರ ಮಾತೂ ಹೋಲುತ್ತದೆ. ಆದರೆ ಇಲಕಲ್ಲ ಮಹಾಂತ ಶ್ರೀಗಳ ಮಾತೃಹೃದಯಕ್ಕೆ ಮಣಿದು, ಚಿತ್ರದುರ್ಗ ಜಗದ್ಗುರುಗಳ ಒತ್ತಾಯಕ್ಕೆ ತಲೆಬಾಗಿ ಚಿತ್ತರಗಿ ಪೀಠಕ್ಕೆ ಒಪ್ಪಿಗೆ ಸೂಚಿಸಿ, 2003 ಡಿಶೆಂಬರ್ 16ರಂದು ನೂತನ ಉತ್ತರಾಧಿಕಾರಿಗಳಾಗಿ ಇಲಕಲ್ ಪ್ರವೇಶಿಸಿದರು.

ಆದರೆ, ಜಾತಿಯಿಂದ ಜಂಗಮರಾದವರೇ ಮಠಾಧಿಪತಿಯಾಗಬೇಕೆಂಬ ಪೂರ್ವಾಗ್ರಹ ಪೀಡಿತರಾದ ಕೆಲವು ಜಾತಿವಾದಿಗಳು ಇವರನ್ನು ಉತ್ತರಾಧಿಕಾರಿಗಳಾಗಿ ಕರೆದು ತಂದದ್ದಕ್ಕೆ   ವಿರೋಧ ವ್ಯಕ್ತಪಡಿಸಿದರು. ಏಕೆಂದರೆ ಇವರು ಲಿಂಗಾಯತ ಶಿವಭಕ್ತ ಕುಟುಂಬದ ಭಕ್ತವರ್ಗದಿಂದ ಬಂದವರಾಗಿದ್ದರು. ಆದ ಕಾರಣ ಕೆಲವು ಜಾತಿವಾದಿಗಳು ವಿರೋಧಿಸುತ್ತಿದ್ದರು. 2004 ಅಗಷ್ಟ 26 ರಂದು ಪೂಜ್ಯ ಶ್ರೀಗಳು ಭಕ್ತರ ಮನದ ಗೊಂದಲ ದೂರಮಾಡುವ ಸಲುವಾಗಿಯೇ ಬಹಳಷ್ಟು ಜಗದ್ಗುರುಗಳ ನೇತೃತ್ವದಲ್ಲಿ ಜನಜಾಗೃತಿ ಸಮಾವೇಶದಲ್ಲಿ ಮುಂದೆ ನಡೆವ ಪಟ್ಟಾಧಿಕಾರ ಸಮಾರಂಭಕ್ಕೆ ಸಹಕಾರ ನೀಡಬೇಕೆಂದು ಕೋರಿದರು. ಆದರೆ 30-8-2004ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಶ್ರೀ ಮಠವು ಆಯೋಜಿಸಿದ್ದ ‘ಐತಿಹಾಸಿಕ ಪರಂಪರೆ ಉಳಿಸಿ’ ಎಂಬ ಸಮಾರಂಭದಲ್ಲಿ ಜಾತಿವಾದಿಗಳಾದ ಉದ್ರಿಕ್ತ ಜನರ ಗುಂಪು ಹಲವು ಶ್ರೀಗಳ ಮೇಲೆ ಹಲ್ಲೆ ಮಾಡಿದಾಗ ಅಕ್ಷರಶಃ ರಣರಂಗವಾದ ವಿಜಯ ಮಹಾಂತೇಶ ಅನುಭವ ಮಂಟಪ ಇಂಥ ದುರ್ಘಟನೆಗೆ ಸಾಕ್ಷಿಯಾಯಿತು. ಮುಂದೆ ಶ್ರೀಗಳು ಚಿಕಿತ್ಸೆ ಪಡೆದು ಬಂದ ಮೇಲೆ ಭಕ್ತರೊಂದಿಗೆ ಚರ್ಚಿಸಿ, ಲಿಂಗಾಯತ ಧರ್ಮದಲ್ಲಿ ಜಾತಿಯಿಂದ ಜಂಗಮರಾದವರೇ ಮಠಾಧಿಪತಿಗಳಾಗಬೇಕೆಂಬ ಯಾವ ನಿಯಮವೂ ಇಲ್ಲ. ಈ ಧರ್ಮದಲ್ಲಿ ಒಬ್ಬ ಲಿಂಗಾಯತನು, ಅವನ ಅರಿವು, ಆಚಾರ, ಅನುಭಾವದಿಂದ ಜಂಗಮನಾಗುತ್ತಾನೆ. ಇಂತಹ ಲಿಂಗಾಯತ ವಟುವಿಗೆ ಜಂಗಮದೀಕ್ಷೆ ನೀಡಿ ಮಠಾಧಿಪತಿಯನ್ನಾಗಿ ಮಾಡುವುದೇ ನಮ್ಮ ಧರ್ಮದ ನಿಯಮವಾಗಿದೆ. ಇಲ್ಲಿ ಜಾತಿಯಿಂದ ಯಾರೂ ಶ್ರೇಷ್ಠರಲ್ಲ; ನೀತಿ ಮತ್ತು ಸಾಧನೆಯಿಂದ ಶ್ರೇಷ್ಠತೆಯನ್ನು ಪಡೆಯುತ್ತಾರೆ. ಈ ಧರ್ಮದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅತ್ಯುನ್ನತ ಧಾರ್ಮಿಕ ಪೀಠವಾದ ಅನುಭವ ಮಂಟಪದ ಶೂನ್ಯ ಪೀಠಕ್ಕೆ ಒಂದು ದಲಿತ ಸಮುದಾಯದಿಂದ ಬಂದ ಅಲ್ಲಮ ಪ್ರಭುವನ್ನು ಅಧ್ಯಕ್ಷರನ್ನಾಗಿ ಪಟ್ಟಾಭಿಷಿಕ್ತಗೊಳಿಸಿದ್ದರು.  ಇವರೇ ನಮ್ಮ ನಿರಂಜನ ವಿರಕ್ತ ಪೀಠಗಳ ಮೂಲ ಪುರುಷರು. ಮುಂದಿನ ಶೂನ್ಯ ಪೀಠಾಧ್ಯಕ್ಷರಾಗಿ ಬಂದ ಚನ್ನಬಸವಣ್ಣನವರು, ಸಿದ್ಧರಾಮ ಶಿವಯೋಗಿಗಳು ಇವರೆಲ್ಲ ಭಕ್ತ ವರ್ಗದವರೇ. ನಂತರ ಯಡಿಯೂರು ಸಿದ್ಧಲಿಂಗೇಶ್ವರರೂ ಭಕ್ತವರ್ಗದವರೇ ಆಗಿದ್ದರು. ಇನ್ನೂ ಹಲವು ಮಠಾಧೀಶರೂ ಭಕ್ತವರ್ಗದವರೇ ಆಗಿದ್ದರು. ಇತ್ತೀಚೆಗೆ ಅಥಣಿ ಗಚ್ಚಿನಮಠದ ಲಿಂ.ಸಿದ್ಧಲಿಂಗ ಮಹಾಸ್ವಾಮಿಗಳು, ನವಲಗುಂದ ಗವಿಮಠದ ಲಿಂ. ಬಸವಲಿಂಗ ಮಹಾಸ್ವಾಮಿಗಳು, ಬೀಳೂರಿನ ಲಿಂ. ಗುರು ಬಸವಮಹಾಸ್ವಾಮಿಗಳು ಇವರೆಲ್ಲರೂ ಭಕ್ತ ವರ್ಗದವರೇ ಆಗಿದ್ದಾರೆ. ಅದಕ್ಕಾಗಿ ಈ ಲಿಂಗಾಯತ ಧರ್ಮದಲ್ಲಿ ಜಾತಿಗೆ ಪ್ರಾಧಾನ್ಯತೆಯಿಲ್ಲ, ನೀತಿಗೆ ಪ್ರಾಧಾನ್ಯತೆಯಿದೆ. ಸ್ವಭಾವ ನೋಡಿ ಸ್ವಾಮಿಯನ್ನಾಗಿ ಮಾಡಬೇಕೇ ವಿನಃ ಜಾತಿ ನೋಡಿ ಮಾಡಬಾರದು. ಪ್ರತಿಯೊಬ್ಬ ಲಿಂಗಾಯತನಿಗೂ ದೀಕ್ಷಾ ಸಂಸ್ಕಾರದ ಮೂಲಕ ಗುರು, ಲಿಂಗ, ಜಂಗಮ ಆಗುವ ಅರ್ಹತೆ ಬರುತ್ತದೆ. ಆದ್ದರಿಂದ ಇದು ಲಿಂಗಾಯತ ಧರ್ಮದ ನಿಯಮಗಳಿಗೆ ಅನುಸಾರವಾಗಿಯೇ ಇದೆ ಎಂದು ಭಕ್ತರಿಗೆ ಧರ್ಮದ ತಿರುಳನ್ನು ತಿಳಿಸಿ, ಕೆಲವು ಜಾತಿವಾದಿಗಳ ಮಾತುಗಳಿಗೆ ಕಿವಿಗೊಡಬೇಡಿರೆಂದು ತಿಳುವಳಿಕೆ ನೀಡಿ ಭಕ್ತರ ಮನಸ್ಸು, ತಿಳಿಗೊಳಿಸಿದರು. ಆನಂತರ ಮನಃ ಪರಿವರ್ತನೆಯಾದ ಭಕ್ತರೆಲ್ಲ ಒಪ್ಪಿಗೆ ಸೂಚಿಸಿ, 2004 ಸಪ್ಟೆಂಬರ್ 12ರಂದು ಶ್ರೀ ಮಠದ 20ನೇ ಪೀಠಾಧಿಪತಿಗಳನ್ನಾಗಿ ಮಾಡಿ, ಪಟ್ಟಾಧಿಕಾರ ಮಹೋತ್ಸವದಲ್ಲಿ ಶ್ರೀ ಮ.ನಿ.ಪ್ರ. ಗುರುಮಹಾಂತಸ್ವಾಮಿಗಳೆಂದು ಮರುನಾಮಕರಣಗೊಳಿಸಿದರು.

ಮುಂದೆ ಮಹಾಂತಶ್ರೀಗಳು ಇಟ್ಟ ಹೆಜ್ಜೆಯಲ್ಲಿಯೇ ನಡೆಯುತ್ತ, ವಯಸ್ಸಿನಿಂದ ಜರ್ಜರಿತರಾದ ಪೂಜ್ಯ ಅಪ್ಪಗಳನ್ನು ಅನಾರೋಗ್ಯಕ್ಕೆ ಒಳಗಾದ ಪ್ರತಿ ಸಂದರ್ಭದಲ್ಲೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೆಲ್ಲ ತಾಯಿ ತನ್ನ ಮಗುವನ್ನು ಜೋಪಾನ ಮಾಡುವಂತೆ ಶುಶ್ರೋಷೆ ಮಾಡಿದರು. ಹೃದಯ ಶಸ್ತ್ರ ಚಿಕಿತ್ಸೆಯಾದಾಗಲಂತೂ ನಿದ್ರೆ, ಪ್ರಸಾದ ಸೇವನೆಯನ್ನು ಬಿಟ್ಟು ಸೇವೆ ಮಾಡಿ ಉಳಿಸಿಕೊಂಡರು. ಶ್ರೀಗಳು ಗುಣಮುಖರಾದ ಮೇಲೆ ಒತ್ತಾಯಪಡಿಸಿದ್ದರಿಂದಾಗಿ ಅವರ ಮನನೋಯಿಸಬಾರದೆಂದು 2006ರಲ್ಲಿ ಬಸವತತ್ವ ಪ್ರಸಾರ ಕಾರ್ಯನಿಮಿತ್ತ ಆಸ್ಟ್ರೇಲಿಯಾಕ್ಕೆ ಹೋಗಿಬಂದರು. ಪುನಃ ಬಂದ ಮೇಲೆ ಶ್ರೀಗಳ ಆರೋಗ್ಯದತ್ತ ಕಾಳಜಿವಹಿಸಲು ಟೊಂಕಕಟ್ಟಿ ನಿಂತರು. ಮಠದ ಪ್ರತಿಯೊಂದೂ ಕಾರ್ಯಗಳತ್ತ ನಿಗಾವಹಿಸತೊಡಗಿದರು. ಇವರು ಕೃತಿಯ ರೂಪದಲ್ಲಿ ಮಾಡಿ ತೋರಿದ ಸಾಮಾಜಿಕ ಸುಧಾರಣಾ ಕಾರ್ಯಗಳನ್ನು ಕಂಡು ಮೆಚ್ಚಿದ ಹಾಗೂ ಹಿಂದೆ ವಿರೋಧ ವ್ಯಕ್ತಿ ಪಡಿಸಿದವರೂ ಆದಿಯಾಗಿ ಸದ್ಭಕ್ತರೆಲ್ಲಾ ತಮ್ಮ ಕಾರ್ಯಕ್ಕೆ ವಿಷಾದ ಪಟ್ಟುಕೊಂಡರು. ಸ್ವಾಮಿಗಳು ಎಂದರೆ ಹೀಗಿರಬೇಕು ಎಂದು ಇವರತ್ತ ಕೈಮಾಡಿ ತೋರಿಸುವಂತೆ ಸದ್ವಿನಯದಿಂದ ಬದುಕುತ್ತಿದ್ದಾರೆ. 2012 ಅಗಷ್ಟ 10, 11,12 ರಂದು ಲಿಂ. ಶ್ರೀ ವಿಜಯಮಹಾಂತ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವುದರ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದ ಪ್ರೀತಿಗೆ ಪಾತ್ರರಾದರೆಂದೇ ಹೇಳಬೇಕು. ಸಮಾಜದಲ್ಲಿ ಕ್ರಾಂತಿ ಎಂದರೆ ಹೀಗೇ ಇರುತ್ತದೇನೋ ಎಂದು ಖಚಿತ ಅಭಿಪ್ರಾಯ ತಾಳುವಂತೆ ಪ್ರತಿಯೊಂದೂ ಕಾರ್ಯದಲ್ಲಿ ಹೊಸತನವನ್ನು ಮೆರೆದವರು.

ಯಾರು ಇಲ್ಲೀವರೆಗೆ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದರೋ ಅಂಥ ಕಾಯಕ ಜೀವಿಗಳನ್ನು ಕರೆದು ಸನ್ಮಾನಿಸುವ ಕಾರ್ಯ ಅದಾಗಿತ್ತು. ಉದಾಹರಣೆ ಃ- ನಗರದ ಸ್ಥಳೀಯ ಉದ್ಯೋಗಿಗಳಾದ ‘ನೇಕಾರಗೋಷ್ಠಿ’, ದೇಶರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವವರ ‘ಸೈನಿಕ ಗೋಷ್ಠಿ’, ಸಮಾಜದಲ್ಲಿ ದುಷ್ಚಟಕ್ಕೆ ದಾಸರಾಗಿಯೂ ಮನಃ ಪರಿವರ್ತನೆಗೊಂಡು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡವರ ‘ಸಮಾಜ ಪರಿವರ್ತನಾಗೋಷ್ಠಿ’, ದೇಶದ ಬೆನ್ನೆಲುಬು ಆಗಿರುವ ‘ರೈತಗೋಷ್ಠಿ’, ಅಂತರ್ಜಾತಿ ವಿವಾಹಕ್ಕೆ ಪೆÇ್ರೀತ್ಸಾಹ ನೀಡುವ ಸಲುವಾಗಿ ‘ಅಂತರ್ಜಾತಿ ವಿವಾಹಗೋಷ್ಠಿ’, ಜಾನಪದ ಕಲೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದ ‘ಕಲಾವಿದರಗೋಷ್ಠಿ’, ‘ವಿಶ್ವ ಬಸವಧರ್ಮಗೋಷ್ಠಿ’, ಹೀಗೆ ಪ್ರತಿಯೊಂದು ಗೋಷ್ಠಿಯಲ್ಲಿ ಸಾಂಪ್ರದಾಯಕವಾಗಿ ಉದ್ಘಾಟನೆ ಮಾಡದೆ, ಒಂದೊಂದರಲ್ಲೂ ಒಬ್ಬೊಬ್ಬರಿಂದ ಅದಕ್ಕೆ ಸೂಕ್ತವಾದ ಘೋಷವಾಕ್ಯವನ್ನು ಫಲಕದ ಮೇಲೆ ಬರೆಯಿಸಿ, ಉದ್ಧೋಷಿಸಿ ಆರಂಭಿಸಲಾಯಿತು. ಪ್ರತಿಯೊಂದು ಗೋಷ್ಠಿಯಲ್ಲಿ ತಲಾ 100 ಜನ ದಂಪತಿಗಳಿಗೆ ಶಾಲು ಹೊದಿಸಿ, ದೊಡ್ಡ ರುದ್ರಾಕ್ಷಿ ಮಾಲೆ ಹಾಕಿ, ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.

‘ರೈತಗೋಷ್ಠಿ’ಯಂತೂ ಎಷ್ಟು ಔಚಿತ್ಯಪೂರ್ಣವಾಗಿತ್ತೆಂದರೆ, ಹುನಗುಂದದ ಭಕ್ತ ಸಮೂಹ ಕೊಡಿಸಿದ 100 ಗೋವುಗಳನ್ನು 100 ರೈತ ದಂಪತಿಗಳಿಗೆ ಕಾಣಿಕೆಯಾಗಿ ನೀಡಲಾಯಿತು.

‘ಬಸವಧರ್ಮ ಗೋಷ್ಠಿ’ಯಲ್ಲಿ ನಾಡಿನ 100 ಜನ ಮಠಾಧೀಶರು ತಮ್ಮ ತಲೆಯ ಮೇಲೆ ಭಾರತ ಸಂವಿಧಾನ ಕೃತಿಯನ್ನು ಹೊತ್ತು ಆ ಸಂವಿಧಾನದ ತತ್ವಗಳಿಗೆ ಚ್ಯುತಿ ಬಾರದಂತೆ ಬದುಕುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಸಂದರ್ಭ ಕಣ್ಣು ತುಂಬಿಕೊಳ್ಳುವಂತಿತ್ತು.

ದಾಸೋಹ ಮಂಟಪದಲ್ಲಿನ ಪ್ರಸಾದ ವ್ಯವಸ್ಥೆಯಂತೂ ಎಲ್ಲರನ್ನೂ ನಿಬ್ಬೆರಗುಗೊಳಿಸುವಂತಿತ್ತು. ಯಾವುದಕ್ಕೂ ಕೊರತೆಯಾಗದಂತೆ ಭಕ್ತರೇ ಸ್ವಯಂ ಸೇವಕರಾಗಿ ಸೇವೆಸಲ್ಲಿಸುತ್ತಿದ್ದರು. ವಚನ ಸಂಗೀತ ಮತ್ತು ವಚನ ನೃತ್ಯ ಕಾರ್ಯಕ್ರಮಗಳಲ್ಲಿ ಸ್ಥಳಿಯ ಶಾಲಾ ಕಾಲೇಜಿನ ಮಕ್ಕಳು ಸದ್ಭಕ್ತರ ಮನಸೂರೆಗೈದರು.

ಈ ಎಲ್ಲ ಕಾರ್ಯಕ್ರಮಗಳ ಎಳೆ ಎಳೆಯಾದ ಭಾಗಕ್ಕೂ ರೂವಾರಿಗಳೆಂದರೆ ಗುರುಮಹಾಂತ ಶ್ರೀಗಳೇ. ನೇತಾರ ಸಮರ್ಥರಾಗಿದ್ದರೆ ಜೊತೆಗೆ ಎಲ್ಲರೂ ಕೈಗೂಡಿಸುತ್ತಾರೆ ಎಂಬಂತೆ ಶ್ರೀಗಳ ನೇತೃತ್ವದಲ್ಲಿ ಸಮಸ್ತರೂ 2-3 ತಿಂಗಳ ಕಾಲ ಶ್ರಮವಹಿಸಿ, ಅಚ್ಚುಕಟ್ಟಾಗಿ ಪ್ರತಿಯೊಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಒಟ್ಟಿನಲ್ಲಿ ಈ ಕಾರ್ಯಕ್ರಮವಂತೂ ‘ನಭೂತೋ ನಭವಿಷ್ಯತಿ’ ಎಂಬಂತೆ ಯಶಸ್ವಿಯಾಯಿತು.

ಮನೆಮನೆಗೆ ಮಹಾಮನೆ ಕಾರ್ಯಕ್ರಮ, ಮಹಾಂತಜೋಳಿಗೆ ಕಾರ್ಯಕ್ರಮ, ಬಡವರ, ನೇಕಾರರ ಕಾಲನಿಗಳನ್ನು ಸ್ವಚ್ಛಗೊಳಿಸುವ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವುದಲ್ಲದೆ, ಹೊಸ ಯೋಜನೆಗಳನ್ನು ಒಂದೊಂದಾಗಿ ಕಾರ್ಯರೂಪದಲ್ಲಿ ತರುತ್ತಿದ್ದಾರೆ.

ನಿಜವಾದ ಸಾಮಾಜಿಕ ಕ್ರಾಂತಿ ಎಂದರೆ ಇದು. ಇಂಥ ಶ್ರೀಗಳು ಇನ್ನೂ ಹೆಚ್ಚಿನ ಸಮಾಜ ಸುಧಾರಣಾ ಕಾರ್ಯಗಳಲ್ಲಿ ಯಶಸ್ಸು ಪಡೆಯಲೆಂಬುದು ನಮ್ಮೆಲ್ಲರ  ಹಾರೈಕೆ.

ಮಹಾಂತ ಜೋಳಿಗೆ

ಜಂಗಮನಿಗೊಂದು ಜೋಳಿಗೆ- ಇದು ವೀರಶೈವ ಧರ್ಮದಲ್ಲಿ ಸಾಮಾನ್ಯ ತತ್ವ. ಆದರೆ ಅದೆಲ್ಲ ಭಕ್ತರ ಮನೆಗಳಿಗೆ ಹೋಗಿ ಹಿಟ್ಟಿ, ಧಾನ್ಯ ಅಥವಾ ಹಣ ತುಂಬಿಸಿಕೊಂಡು ಅವನ್ನೆಲ್ಲಾ ಬಳಸಿಕೊಂಡು ತನ್ನ ಹೊಟ್ಟೆಪಾಡಿನ ಸಮಸ್ಯೆ ¨ಗೆಹರಿಸಿಕೊಳ್ಳಲು ಸಹಾಯಕವಾದರೆ; ಇಲಕಲ್ಲಿನ ಚಿತ್ತರಗಿ ಪೀಠದ ಶ್ರೀ ಮಹಾಂತ ಶ್ರೀಗಳ ಜೋಳಿಗೆ ಇದಕ್ಕಿಂತ ತೀರ, ತೀರ ಭಿನ್ನವಾದುದು. ಇದರ ವಿಶಿಷ್ಟತೆ ಏನೆಂದರೆ, ಪ್ರತಿಯೊಬ್ಬ ಚಟಗಾರನ ಹತ್ತಿರ ಹೋಗಿ ಅವನಲ್ಲಿನ ದುಶ್ಚಟಗಳನ್ನು ಮಾತ್ರ ತುಂಬಿಸಿಕೊಳ್ಳುತ್ತ, ನಿಸ್ವಾರ್ಥಭಾವದಿಂದ ನಿರಂತರ ಸಂಚರಿಸುತ್ತಿರುವ ಹೊಸ ಬಗೆಯ ಕ್ರಾಂತಿ ಜೋಳಿಗೆ. ಊರೂರಲ್ಲೂ, ಹೊರರಾಜ್ಯಗಳಲ್ಲೂ ಅಲ್ಲದೆ ಇಂಗ್ಲಂಡ ಮೊದಲಾದ ಹೊರ ದೇಶಗಳಲ್ಲೂ ಸಂಚರಿಸಿ ಮಾನವನ ಉದ್ಧಾರಕ್ಕಾಗಿ ಅವಿರತ ಪ್ರಯತ್ನಿಸುತ್ತಿರುವುದು ಇದರ ನಿತ್ಯ ಮತ್ತು ಸ್ತುತ್ಯ ಕಾರ್ಯ.

ಮಾನವನದೇಹ ಸದೃಢವಿದ್ದಾಗ ಮಾತ್ರ ಅದರಲ್ಲಿ ಸದೃಢ ಅಥವಾ ಪರಿಶುದ್ಧ ಮನಸ್ಸು ಇರಲು ಹೇಗೆ ಸಾಧ್ಯವೋ ಹಾಗೇ ದುಶ್ಚಟಗಳಿಲ್ಲದ ವ್ಯಕ್ತಿಗಳಿದ್ದಾಗ ಮಾತ್ರ ಸಮಾಜ ಸ್ವಾಸ್ಥ್ಯದಿಂದ ಇರಬಲ್ಲುದ. ಅಂಥ ಸ್ವಾಸ್ಥ್ಯ ಅಥವಾ ಪರಿಶುದ್ಧ ಸಮಾಜ ನಿರ್ಮಾಣದ ಕಳಕಳಿಯನ್ನು ಹೊಂದಿದ ಇಳಕಲ್‍ನ ಮಹಾಂತ ಸ್ವಾಮಿಗಳು ತಾವು ಈ ಪೀಠಕ್ಕೆ ಬಂದಂದಿನಿಂದ ಈ ವಿಶಿಷ್ಟ ಜೋಳಿಗೆ ಹಾಕಿ ನಿರಂತರ ಪರಿವ್ರಾಜಕರಾಗಿದ್ದಾರೆ. ಸಮಾಜದೊಳಗಿನ ಜನರು ಪರಿಶುದ್ಧ ಗುಣದವರು ಮತ್ತು ನೀತಿವಂತರಾದರೆ ಮಾತ್ರ ನಮ್ಮ ದೇಶ ಅಷ್ಟೇ ಏಕೆ ಇಡೀ ಜಗತ್ತೇ ಉದ್ದಾರವಾಗಬಲ್ಲುದು ಎಂಬ ಬೀಜ ಮಂತ್ರ ತಿಳಿದು ಸಮಾಜ ಜೀವಿಗಳನ್ನು ನೀತಿವಂತರನ್ನಾಗಿ ಪರಿವರ್ತಿಸುವಲ್ಲಿ ಯಶಸ್ವೀ ಕ್ರಾಂತಿ ಪುರುಷರಾಗಿದ್ದಾರೆ.

ಇಂಥ ‘ಮಹಾಂತ ಜೋಳಿಗೆ’ ಯ ಹರಿಕಾರ ಅಥವಾ ಶಿವಶಿಲ್ಪಿಗಳಾದ ಮಹಾಂತಸ್ವಾಮಿಗಳು ಮೂಲತಃ ಅಥಣಿಯ ಸವದಿಗೆ ಮಠಾಧೀಶರಾಗಿ ಹೋಗುವ ಮೊದಲು ಕೃಷ್ಣಾತೀರದ ಗುಹೆಯೊಂದರಲ್ಲಿ – ಮೌನವೇ ಪೂಜೆ, ಮೌನವೇ ಮಾತು, ಮೌನವೇ ಕ್ರಿಯೆ ಎಂಬಂಥ ಕಠಿಣ ಅನುಷ್ಠಾನ ಮತ್ತು ಅನುಸಂಧಾನ ಗೈದವರು. ಅಲ್ಲಿನ ಮಠದಲ್ಲಿ ಅಧ್ಯಯನ, ಲಿಂಗಪೂಜೆ, ಪ್ರವಚನಗಳ ಮೂಲಕ ಧಾರ್ಮಿಕ ಪ್ರಸಾರ ಕೈಗೊಂಡ ನಂತರ 8 ವರ್ಷಕ್ಕೆ ಅಂದರೆ 7-5-1970ನೇ ಇಸವಿಯಲ್ಲಿ ಚಿತ್ತರಗಿ ಪೀಠಕ್ಕೆ ಬಂದರು. ಆದರೆ ಮಠದ ಅಧ್ಯಕ್ಷತೆ, ಅಧಿಕಾರ ಯಾವುದೊಂದೂ ಅವರಿಗೆ ಬೇಕಾಗಿರಲಿಲ್ಲ. ಆದರೂ ಅವರು ಈ ಪೀಠಕ್ಕೆ ಬಯಸಿ ಬಂದ ಉದ್ದೇಶ ಅಪ್ಪ ಬಸವಣ್ಣನ ನಾಡಿನ ಹಳ್ಳಿಹಳ್ಳಿಗೆ ಹೋಗಿ ಬಸವಣ್ಣನ ಸಂದೇಶ ಸಾರಿ ಹಳ್ಳಿಗಳ ಕಲ್ಯಾಣ ಸಾಧಿಸಬೇಕೆಂಬುದೊಂದೇ ಆಗಿತ್ತು.

ಬಂದ ಹೊಸದರಲ್ಲಿ ಚಿಕ್ಕಪುಟ್ಟ ಮಠದ 63 ಶಾಖೆಗಳೂ ಜೀರ್ಣಾವಸ್ಥೆಯಲ್ಲಿದ್ದವು. ಅವುಗಳನ್ನೆಲ್ಲ ಜೀರ್ಣೋದ್ಧಾರ ಮಾಡಿ ಅಲ್ಲಿ ಪ್ರತಿವಾರವೂ ಶಿವಾನುಭವ ಕಾರ್ಯಕ್ರಮ ನಡೆಯುವ ವ್ಯವಸ್ಥೆಯನ್ನು ಮಾಡಿದ್ದು ಮೊದಲ ಕಾರ್ಯ.

ಇಲ್ಲಿಯವರೆಗೆ ಜನಮಾನಸದಲ್ಲಿ ಮಠಗಳೆಂದರೆ, ಅಧಿಕಾರದ ಆಸೆ ಇರುವ, ಆಸ್ತಿ ಪಾಸ್ತಿಗಳ ವ್ಯಾಮೋಹವಿರುವ, ಪಾರಂಪರಿಕ ಜಂಗಮರಿರುವ ಸ್ಥಾನ. ಆದರೆ ಇಂಥಲ್ಲಿ ಕ್ರಿಯಾಶೀಲ ಜಂಗಮರು ನಿರಂತರ ಕಾರ್ಯ ಪ್ರವೃತ್ತರಾಗಿದ್ದು ಶರಣ ಸಂದೇಶ ಸಾರುವ ಕ್ರಿಯಾಶೀಲ ಮಠಗಳನ್ನಾಗಿಸಿದ್ದು ಮಹಾಂತ ಸ್ವಾಮಿಗಳ 2ನೇ ಕಾರ್ಯ. ಅಂದರೆ ಚಿತ್ತರಗಿ ಮಠವನ್ನು ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಜಾಗೃತಿಯನ್ನುಂಟುಮಾಡುವ ಕೇಂದ್ರ ಸ್ಥಾನವನ್ನಾಗಿಸಿದರು.

ನÀಂತರದ ಅವಧಿಯಲ್ಲಿ ಮಠವನ್ನು ಶರಣ ಸಿದ್ಧಾಂತದ ವಿದ್ಯಾಪೀಠವನ್ನಾಗಿ ಪರಿವರ್ತಿಸಿ, ಅಲ್ಲಿ ಲಿಂಗಪೂಜೆ, ಶಿವಾನುಭವ, ಕಾಯಕದ ಬಗ್ಗೆ ಅರಿವು ಮೂಡಿಸುವ ಪಾಠ ಪ್ರವಚನಗಳ ಮೂಲಕ ಎಲ್ಲಾ ವೃತ್ತಿಯ ಜನರನ್ನು ಆಕರ್ಷಿಸಿ, ಬಸವ ತತ್ವ ಪ್ರಸಾರ ಕಾರ್ಯ ಆರಂಭಿಸಿದರು. ಅದರಲ್ಲಿ ಈ ಚಟ ಭಿಕ್ಷೆ ಅತ್ಯಂತ ಹೊಸದು.

1975ನೇ ಇಸ್ವಿ ನವೆಂಬರ್ ತಿಂಗಳಿನ ಒಂದು ಸೋಮವಾರದಂದು ವಿಜಯ ಮಹಾಂತ ಶಿವಯೋಗಿಗಳ ಪುಣ್ಯತಿಥಿಯ ಸವಿನೆನಪಿಗಾಗಿ ಕಾಲ್ನಡಿಗೆಯಿಂದ ಹುನಗುಂದದ ಹರಿಜನ ಕೇರಿಯಿಂದ ಶ್ರೀಗಳ ‘ಮಹಾಂತ ಜೋಳಿಗೆ’ಯ ಸಂಚಾರ ಆರಂಭಿಸಿದರು. ಪ್ರಾರಂಭದಲ್ಲಿ ಭಜನೆ, ನಂತರ ಉಪನ್ಯಾಸ, ಆಮೇಲೆ ‘ಮಹಾಂತ ಜೋಳಿಗೆ’ಯ ಪರಿಚಯ ಮಾಡುತ್ತ.

“ದುಡ್ಡು ದುಗ್ಗಾಣಿಯ ಕೇಳೆನು

ನಿಮ್ಮ ನೆಮ್ಮದಿಯ ಬಾಳಿಗೆ

ನೀಡಿರಯ್ಯ ದುಷ್ಟಚಟಗಳ

ತುಂಬಿಕೊಳುವೆನು ಜೋಳಿಗೆ”

ಎಂದು ತಮ್ಮ ಮುಂಗೈಗೆ ತೂಗು ಹಾಕಿದ್ದ ಜೋಳಿಗೆಯನ್ನು ತೋರಿಸುತ್ತ “ಈ ಜೋಳಿಗೆ ನಿಮ್ಮ ಹಣ ಬೇಡುವುದಿಲ್ಲ; ಧನ, ಧಾನ್ಯಗಳನ್ನು ಬೇಡುವುದಿಲ್ಲ; ನಿಮ್ಮ ದುಶ್ಚಟಗಳನ್ನು ಮಾತ್ರ ಬೇಡುತದೆ. ನಿಮ್ಮ ನಿಮ್ಮ ಕುಟುಂಬ, ನಿಮ್ಮ ನಿಮ್ಮ ನೆರೆಹೊರೆಯವರ ಮತ್ತು ನಿಮ್ಮ ಊರಿನ ಜನರ ಕಲ್ಯಾಣ ಬಯಸಿ ಈ ಜೋಳಿಗೆ ಬಂದಿದೆ” ಎನ್ನುತ್ತ ಮುಂದೆ ಸಾಗುತ್ತಿದ್ದರು.

ಇನ್ನೊಬ್ಬರಿಗೆ ಹೇಳಲಾಗದ, ಮನದಲ್ಲಿ ನೆನೆಯಲೂ ಆಗದಂತಹ-ಚಟಕ್ಕೆ ದಾಸರಾದ ತಮ್ಮನ್ನೂ, ಕುಟುಂಬದವರನ್ನೂ, ಬಳಗದವರನ್ನೂ ನೋವು ಮತ್ತು ಸಾವಿಗೆ ಈಡು ಮಾಡುತ್ತಿದ್ದ, ಭೀಕರ ರೋಗಗಳಿಗೆ ಗುರಿಪಡಿಸುತ್ತಿದ್ದ ದುಷ್ಟ ಚಟಗಳನ್ನೆಲ್ಲ (ಉದಾ: ಬೀಡಿ, ಸಿಗರೇಟು, ಗಾಂಜಾ, ಅಫೀಮು, ಸಾರಾಯಿ ಪಾಕೀಟು/ಬಾಟಲಿ ಮೊದಲಾದವು) ತುಂಬಿಕೊಂಡು; ಶ್ರೀಗಳು ಅವರಿಗೆ “ನಿಮ್ಮೆಲ್ಲ ಅವಗುಣಗಳನ್ನೂ, ದುಷ್ಟ ಅಭ್ಯಾಸಗಳನ್ನೂ ಇಲ್ಲಿ ಹಾಕಿ, ನೀತಿವಂತರಾಗಿ ಬದುಕಿರಿ; ಉತ್ತಮ ಅಚಾರವಂತರಾಗಿ, ಲಿಂಗವಂತರಾಗಿ ಬದುಕಿರಿ” ಎನ್ನುತ್ತಿದ್ದರು.

ಜೋಳಿಗೆಗೆ ಹಾಕುವ ಭೌತಿಕ ವಸ್ತುವಿನ ಚಟದವರು ಅವನ್ನೇ ನೇರವಾಗಿ ಜೋಳಿಗೆಗೆ ಹಾಕಿದರೆ; ಅಭೌತಿಕ ಚಟದವರು ತಾವು ಇಂತಹ ಚಟದ ದಾಸರಾಗಿದ್ದೆವು, ಇನ್ನು ಇಂತಹ ಚಟ ಎಂದೂ ಮಾಡುವುದಿಲ್ಲವೆಂದು ಧೈರ್ಯದಿಂದ ಬಾಯಿಬಿಟ್ಟು ಹೇಳಿಯೋ; ಆ ನೈತಿಕ ಧೈರ್ಯವಿಲ್ಲದವರು ಚೀಟಿಯಲ್ಲಿ ಬರೆದು ಅದನ್ನ್ನು ಜೋಳಿಗೆಗೆ ಹಾಕಿಯೋ ಪ್ರಮಾಣ ಮಾಡುತ್ತಿದ್ದರು. ಇದರಿಂದಾಗಿ ಎಷ್ಟೋ ಕುಟುಂಬದಲ್ಲಿನ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಇದರಿಂದಾಗಿ ಎಷ್ಟೋ ಹಳ್ಳಿಗಳು ಪಾನ ಮುಕ್ತ, ಜಗಳ ಮುಕ್ತ ಹಳ್ಳಿಗಳಾಗಿ ನಿರ್ಮಲ ಬದುಕನ್ನು ನಡೆಸುವಂತಾಯಿತು. ಅಂತಹ ಹಳ್ಳಿಗರ ಬಾಳಿಗೆ ಚಿತ್ತರಗಿ ಶ್ರೀಗಳು ದೇವರೇ ಆದರು.

ಈ ಸಂಚಾರದ ಸಂದರ್ಭದಲ್ಲಿ ಅವರ ಕಣ್ಣಿಗೆ ರಾಚಿದ ಮತ್ತೊಂದು ಸಾಮಾಜಿಕ ಪಿಡುಗು ಎಂದರೆ , ದೇವದಾಸಿ ಪದ್ಧತಿ; ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ. ಎಲ್. ಪಾಟೀಲ ವಕೀಲರ ಸಹಕಾರದೊಂದಿಗೆ ಪ್ರಾರಂಭದಲ್ಲಿ ಅಥಣಿಯ ಅಕ್ಕಪಕ್ಕದ ಹಳ್ಳಿಗಳು, ನಂತರದಲ್ಲಿ ಕುಷ್ಟಗಿ, ತಾವರಗೇರಿ, ಇಲಕಲ್ಲ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಚರಿಸಿ ದೇವದಾಸಿಯಂಥ ಅನಿಷ್ಟ ಪದ್ದತಿಯ ಬಗ್ಗೆ ತಿಳಿಹೇಳುವುದರ ಮೂಲಕ ಹೋಗಲಾಡಿಸಿ, ಅವರಿಗೆ ಪುನರ್ವಸತಿ ಕಲ್ಪಿಸಿ, ಜೀವನದ ಉದ್ಧಾರದ ದಾರಿ ತೋರಿಸಿ ಶರಣ ಸಿದ್ದಾಂತಕ್ಕೆ ಹೊಸ ರೆಕ್ಕೆಯಾದಂತೆ, ಶರಣ ಸಂಸ್ಕøತಿಗೆ ಹೊಸ ಕಣ್ಣಾದರು.

ಒಟ್ಟಿನಲ್ಲಿ ಹಲವು ಚಟಗಳಿಗೆ ದಾಸರಾದವರ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕೆಂದು ಪ್ರಸಾದನಿಲಯಗಳನ್ನು ನಡೆಸಿಕೊಂಡು ಹೋಗುವ ವ್ಯವಸ್ಥೆಯನ್ನೂ ಮಾಡಿದರು. ಏಕೆಂದರೆ ಯಾವುದೇ ಒಂದು ಕ್ರಾಂತಿ ಎಂದರೆ ಸಮಾಜದಲ್ಲಿ ಬೇಡವಾದದ್ದನ್ನು ಕೇವಲ ಕಿತ್ತು ಹಾಕುವುದಷ್ಷೇ ಅಲ್ಲ; ಅದರ ಸ್ಥಾನದಲ್ಲಿ ಉತ್ತಮವಾದ ಬೇರೊಂದನ್ನು ಪ್ರತಿಷ್ಠಾಪಿಸುವುದು. ಹೀಗೆ ಚಿತ್ತರಗಿ ಮಠದಲ್ಲಿ ಈಗಾಗಲೇ ನಡೆಯುತ್ತಿದ್ದ ಧರ್ಮ ಪ್ರಸಾರದ ಕಾರ್ಯ ಒಂದೆಡೆಯಾದರೆ; ಇನ್ನೊಂದೆಡೆ ಸಮಾಜ ಜಾಗ್ರತೆಗೆ ಅಗತ್ಯವಾದ ಶಿಕ್ಷಣ ಕ್ಷೇತ್ರದ ಕಡೆಗೆ ಮನಸ್ಸು ತಿರುಗಿಸಿದ ಶ್ರೀಗಳು ಶಿಕ್ಷಣ ಸಂಸ್ಥೆಗಳ ಸೌಕರ್ಯ, ಅನುಕೂಲತೆಗಳ ವ್ಯವಸ್ಥೆಗೆ ಒತ್ತುನೀಡಿದರು. ಹೀಗೆ ಅವುಗಳಿಗೆ ಒಂದು ಭದ್ರ ನೆಲೆ ಕಲ್ಪಿಸಿದವರೇ ಮತ್ತೆ ಜೋಳಿಗೆ ಹಿಡಿದು ಹಳ್ಳಿ ಹಳ್ಳಿಗೆ ಚಟದ ಭೀಕ್ಷೆಗೆ ಹೊರಟರು.

ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಇನ್ನೂ ಉಳಿದು ಬಂದಿದ್ದ ಜಾತಿ-ಪದ್ಧತಿಯ ತೊನ್ನು ಎಂಬಂತೆ ಸಮಾಜಕ್ಕೆ ಅಂಟಿದ್ದ ಅಸ್ತøಶತೆಯನ್ನು ಹೋಗಲಾಡಿಸಬೇಕಾದರೆ ಮಠಗಳಿಗೆ ದಲಿತರನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸುವ ಮೂಲಕ ಮತ್ತೊಂದು ಕ್ರಾಂತಿಗೆ ನಾಂದಿ ಹಾಡಬಹುದೆಂದು ಆಲೋಚಿಸಿ; ಬೀದರನಲ್ಲಿ ಜರುಗಿದ ಕಲ್ಯಾಣ ನಾಡಿನ 16ನೇ ಶರಣ ಸಮೇಳನದಲ್ಲಿ ದಿನಾಂಕ: 18-4-1994 ರಂದು ಇಲಕಲ್‍ನ ಮಹಾಂತಸ್ವಾಮಿಗಳು  “ಒಬ್ಬ ಸುಸಂಸೃತ, ಸಜ್ಜನ, ದಲಿತ ವ್ಯಕ್ತಿಯು ಲಿಂಗ ಸಂಸ್ಕಾರಕ್ಕೊಳಪಟ್ಟು ಲಿಂಗವಂತನಾಗಿ ಬರುವುದಾದರೆ ಅಂಥವನನ್ನು ವಟುವಾಗಿ ಸ್ವೀಕರಿಸಿ, ತಮ್ಮ ಮಠದ ಉತ್ತರಾದಿಕಾರಿಯನ್ನಾಗಿ ನೇಮಿಸಿಕೊಳ್ಳಲು ಸಿದ್ಧ” ಎಂಬ ಹೇಳಿ ನೀಡಿದರು. ಇಂಥ ಮಾತು ಶ್ರೀಗಳ ಬಾಯಿಂದ ಬರಲು ಶರಣರೇ ಪ್ರೇರಕರು. ಉದಾಹರಣೆ 1) ದಲಿತ ವರ್ಗಕ್ಕೆ ಸೇರಿದ, ನಟುವ ಕುಲದ ಅಲ್ಲಮ ಕಲ್ಯಾಣದ ಅನುಭವ ಮಂಟಪದ ಅಧಿಪತಿಯಾದದ್ದು ಒಂದು ಉದಾಹರಣೆಯಾದರೆ;

2) ಹುನಗುಂದ ತಾಲೂಕಿನ ನಂದವಾಡಗಿಯಲ್ಲಿದ್ದ ಮಠಕ್ಕೆ ಉರಿಲಿಂಗದೇವರು ಅದೇ ಊರಿನ ಕಳ್ಳಪೆದ್ದಿಯನ್ನು ಲಿಂಗ ಸಂಸ್ಕಾರದ ಮೂಲಕ ಪರಿವರ್ತನೆ ಹೊಂದಿದಾಗ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದು 2ನೇ ಉದಾಹರಣೆ.

ಆದರೆ ಈ ಹಿಂದೆಯೂ ಪುರೋಹಿತ ವರ್ಗ ಬಸವಣ್ಣನವರ ಸರ್ವಸಮಾನತೆಯ ತತ್ವವನ್ನು ಒಪ್ಪದೆ ಸಮಾಜವನ್ನು ಬಸವಣ್ಣ ಕುಲಗೆಡಿಸುತ್ತಿದ್ದಾನೆಂದು ರಾಜನವರೆಗೂ ದೂರು ಒಯ್ದ; ಬಸವಣ್ಣನವರನ್ನೇ ಬಹಿರಂಗ ವಿಚಾರಣೆಗೆ ಗುರಿಪಡಿಸುವುದರ ಮೂಲಕ ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿಯುಂಡದ್ದನ್ನು ವಿರೋಧಿಸಿ ಅವಮಾನಿಸಿದ್ದಲ್ಲದೆ, ಅಂತರ್ಜಾತಿ ವಿವಾಹಕ್ಕೆ ವಿರುದ್ದವಾಗಿ ಎಳೆಹೂಟೆ ಶಿಕ್ಷೆಯ ಮೂಲಕ ರಕ್ತ ಕ್ರಾಂತಿಗೆ ಕಾರಣವಾದದ್ದು ಕನ್ನಡ ನಾಡಿನ ಸಂಪ್ರದಾಯಕ್ಕೆ ಜೋತುಬಿದ್ದ ಮನಸ್ಸುಗಳೇ.

 ಅದೇ ರೀತಿ ಮಹಾಂತ ಶ್ರೀಗಳ ಈ ಹೇಳಿಕೆಯೂ ಸಮಾಜದ ಸಂಪ್ರದಾಯವಾದಿಗಳಲ್ಲಿ ಅಲ್ಲೋಲ ಕಲ್ಲೋಲವನ್ನೇ ಎಬ್ಬಿಸಿತು. ಬಸವಣ್ಣನವರಂತೆಯೇ ಇಲಕಲ್ಲ ಶ್ರೀಗಳೂ ಜನರ, ಜಗದ್ಗುರುಗಳ ವಿರೋಧವನ್ನು ಎದುರಿಸಬೇಕಾಯಿತು.

ಬಸವಣ್ಣನವರ ತತ್ವಗಳನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸುತ್ತ ಬಂದ “ಲಿಂಗ ಮುಟ್ಟಿದವರಿಗೆ ಜಾತಿಯಿಲ್ಲ, ಹೊಲೆಯಿಲ್ಲ” ಎಂಬ ಬಸವ ತತ್ವವನ್ನು ಆಚರಣೆಯಲ್ಲಿ ತರುವುದಕ್ಕೆ ಹೆಣಗುತ್ತಲೇ ಇದ್ದರು. ಈ ತರದ ಬಿಸಿ ವಾತಾವರಣ ಕಡಿಮೆಯಾದ 20 ವರ್ಷಗಳ ನಂತರ ಉತ್ತರಾಧಿಕಾರಿ ನೇಮಕದ ಸಂದರ್ಭದಲ್ಲಿ ಲಿಂಗಾಯತ ಧರ್ಮದ ಒಳಪಂಗಡದಲ್ಲೇ ಅತ್ಯಂತ ಸಜ್ಜನ, ಸಂಸ್ಕಾರವಂತ, ಕಾಯ್ದೆ ಪದವೀಧರನೊಬ್ಬ ಸುಳ್ಳು ಹೇಳುವುದು ನನ್ನಿಂದ ಆಗಲಾರದೆಂದು ವಕೀಲಿ ವೃತ್ತಿಯನ್ನೇ ತೊರೆದು ಮಠದ ಸೇವೆಯಲ್ಲಿದ್ದುದನ್ನು ಗುರುತಿಸಿ, ಈ ವ್ಯಕ್ತಿ ನಮ್ಮ ಮಠಕ್ಕೆ ಸೂಕ್ತ ವ್ಯಕ್ತಿ ಎಂದು ಕರೆತಂದು ನೇಮಿಸುವ ಸಂದರ್ಭದಲ್ಲೂ ಭಕ್ತರು ಗುಮಾನಿಯಿಂದ ಕಂಡು ವಿರೋಧಿಸಿ, ಪ್ರತಿಭಟಿಸಿದಾಗ ಸಮಾಧಾನ ಚಿತ್ತದಿಂದ “ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯ” ಎಂಬ ಬಸವ ವಚನದಂತೆ ಭಕ್ತರ ವಿರೋಧವನ್ನು ಎದುರಿಸಿದರು. ತಾಯ ಮಮತೆಯಿಂದ ಎಲ್ಲ ಭಕ್ತರನ್ನು ಕ್ಷಮಿಸುವ ಮೂಲಕ ದೈವೀಗುಣವನ್ನೇ ಮೆರೆದರು.

ಬಿಸಿ ವಾತಾವರಣ ಅರಿದ ಮೇಲೆ ಪ್ರತಿಭಟಿಸಿದವರೆಲ್ಲ ಉತ್ತರಾಧಿಕಾರಿಗಳ ಗುಣಸ್ವಭಾವಗಳಿಗೆ, ಸಮಾಜ ಸುಧಾರಣೆಯ ಕಾರ್ಯಗಳಿಗೆ ಮೆಚ್ಚುಗೆ ಸೂಚಿಸುತ್ತ ತಮ್ಮ ತಪ್ಪಿನ ಅರಿವು ಮೂಡಿ ಪ್ರಾಯಶ್ಚಿತ್ತಗೊಂಡಿದ್ದಾರೆ. ತಮ್ಮ ದುಷ್ಟ ಮನಸ್ಸು ಮತ್ತು ದುರ್ವತನೆಯನ್ನು ಈ ಮಹಾಂತ ಜೋಳಿಗೆಗೆ ಅರ್ಪಿಸಿದ್ದಾರೆ.

 ಶ್ರೀ ಕೃಷ್ಣ ಪರಮಾತ್ಮ-ಗೀತೆಯಲ್ಲಿ

            “ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ

             ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ|

             ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕøತಾಂ

             ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||

ಎಂದು ಹೇಳಿದಂತೆ ಯಾವ, ಯಾವಾಗ ಧರ್ಮಕ್ಕೆ ಚ್ಯುತಿ ಬರುತ್ತದೋ ಆಗಾಗ ಪುನಃ ಜನ್ಮ ವೆತ್ತಿ ಬರುವುದಾಗಿ ಹೇಗೆ ಹೇಳಿದ್ದಾನೋ ಹಾಗೆಯೇ ಚಿತ್ತರಗಿ ಪೀಠದ ಶ್ರೀಗಳ ಈ ‘ಮಹಾಂತ ಜೋಳಿಗೆ’ ಪುನಃ ಪುನಃ ಸಂಚಾರ ಮಾಡುತ್ತಲೇ ಇರುತ್ತದೆ. ಏಕೆಂದರೆ ಹೊಸ ಹೊಸ ಚಟಗಾರರು ಎಲ್ಲ ಕಾಲಕ್ಕೂ, ಎಲ್ಲ ಸಮಾಜಗಳಲ್ಲೂ ಹುಟ್ಟಿಕೊಳ್ಳುತ್ತಲೇ ಇರುವ ಕಾರಣ ಈ ಜೋಳಿಗೆಯ ಸಂಚಾರ ನಿರಂತರ. ಆದರೆ ಒಂದು ಎಚ್ಚರಿಕೆಯ ಕಿವಿಮಾತು. ಈ ಜೋಳಿಗೆ ಮುಟ್ಟಿ ಯಾರು ತಮ್ಮ ಚಟಗಳನ್ನು ಬಿಡುವುದಾಗಿ ವಾಗ್ದಾನ ಮಾಡುತ್ತಾರೋ ಖಂಡಿತ ಅವರು ಆ ಚಟಕ್ಕೆ ಪುನಃ ಬಲಿಯಾಗುವಂತಿಲ್ಲ. ಏಕೆಂದರೆ, ಜಂಗಮ ಜೋಳಿಗೆ ಎಂದರೇನೇ ಬೆಂಕಿ ಇದ್ದಂತೆ. ಆದ್ದರಿಂದ ಚಟ ಬಿಟ್ಟವರು ನಂತರ ಎಚ್ಚರದಿಂದ ಬದುಕಲು ಈ ಜೋಳಿಗೆ ಹಚ್ಚುತ್ತದೆ. ಅಲ್ಲದೆ ಇದು ಬಿಚ್ಚಿದ ಜೋಳಿಗೆಯಲ್ಲ ಮುಚ್ಚಿದ ಜೋಳಿಗೆ. ಹೇಗೆಂದರೆ ತನ್ನಲ್ಲಿ ಯಾರು, ಯಾವ ಚಟದ ಭಿಕ್ಷೆ ನೀಡಿದರು ಅಥವಾ ಅರ್ಪಿಸಿದರೆಂದು ತೋರಗೊಡದೆ ರಹಸ್ಯವಾಗಿಯೇ ತನ್ನ ಸತ್ ಪರಿಣಾಮ ಬೀರುವ ಮಹತ್ ಜೋಳಿಗೆ.

ಚಿತ್ತರಗಿ ವಿಜಯ ಮಹಾಂತೇಶ ಶಾಖಾಮಠಗಳು :

1.  ಇಲಕಲ್ಲ    2. ಹುನಗುಂದ     3 ಇದ್ದಲಗಿ   4. ಬೆಳಗಲ್   5. ಬಿಸನಾಳಕೊಪ್ಪ   6. ಹಡಗಲಿ   7. ಕೂಡಲಸಂಗಮ   8. ಹುಲಗಿನಾಳ   9. ಸೂಳೀಭಾವಿ   10. ಕೆಲೂರ   11. ರಾಮವಾಡಗಿ   12. ಚಿತ್ತವಾಡಗಿ   13. ಚಿಕ್ಕಬಾದವಾಡಗಿ   14. ಹಿರೇಬಾದವಾಡಗಿ   15. ಕರಡಿ   16. ಕೋಡಿಹಾಳ   17. ನಾಗರಾಳ   18. ವೀರಾಪೂರ   19. ಆದಾಪೂರ   20. ಚಿಕ್ಕಮಾಗಿ   21. ಹಿರೇಓತಗೇರಿ   22. ಅಮರಾವತಿ   23. ಹಿರೇಸಿಂಗನಗುತ್ತಿ   24. ಚಿಕ್ಕಸಿಂಗನಗುತ್ತಿ   25. ವಜ್ಜಲ   26. ಚಾಮಲಾಪೂರ   27. ಮರೋಳ   28. ಹೇರೂರ   29. ಗೋರಬಾಳ   30. ಹಿರೇಕೊಡಗಲಿ   31. ಹೂಲಗೇರಿ   32. ಲಿಂಗಸ್ಗೂರ-ಛಾವಣೆ   33. ಕರಡಕಲ್ಲ   34. ಮುದಗಲ್ಲ   35. ಎಲಗಲದಿನ್ನಿ   36. ಐದನಾಳ   37. ಕಾಳಾಪೂರ   38. ಗುಂದಗೋಳಿ   39. ಆನೆಹೊಸೂರ   40. ಜಾಲಿಬೆಂಚಿ   41. ಕೆಸರಟ್ಟಿ   42. ಅಡವಿಭಾವಿ   43. ಕಾಚಾಪೂರ   44. ಬನ್ನಿಗೋಳ   45. ಹುಣಕುಂಟಿ   46. ಸಂತೆಕೆಲೂರ   47. ಕುಪ್ಪಿಗುಡ್ಡ   49. ಹಲ್ಕಾವಟಗಿ   50. ಇಚನಾಳ   51. ಪಲಗಲದಿನ್ನಿ   52. ತೊಂಡಿಹಾಳ   53. ಕ್ಯಾದಿಗುಪ್ಪಿ   54. ದೋಟಿಹಾಳ   55. ಕೆಸೂರ   56. ಮಾಟೂರ   57. ಜಾಲಿಹಾಳ   58. ಶಿರಗುಪ್ಪಿ   59. ಹಿರೇವಂಕಲಕುಂಟಿ   60. ಉಪ್ಪಲದಡ್ಡಿ   61. ಯಲಬುರ್ಗಾ   62. ಈಚಲಕರಂಜಿ (ಮಹಾರಾಷ್ಟ್ರ)    63. ಗಂಜೀಹಾಳ   64. ಹೈದರಾಬಾದ (ಆಂಧ್ರ)    65. ಸಿದ್ದಯ್ಯನಕೋಟೆ (ಚಿತ್ರದುರ್ಗ)

 

ಲೇಖಕರು : ಬಿ.ಬಿ. ಕಡ್ಲಿ

ಉಪನ್ಯಾಸಕರು, ವ್ಹಿ.ಎಂ.ಎಸ್.ಆರ್.ವ್ಹಿ. ಕಾಲೇಜು, ಹುನಗುಂದ

 

ಗ್ರಂಥ ಋಣಃ-

1. ಇಲಕಲ್ಲ ಮಹಾಂತ ಶಿವಯೋಗಿಗಳು – ಡಾ. ಹಿರೇಮಲ್ಲೂರ ಈಶ್ವರನ್.

2. ಶ್ರೀ ವಿಜಯ ಮಹಾಂತೇಶ್ವರ ಪುರಾಣ – ದ್ಯಾಂಪೂರ ಚೆನ್ನಕವಿ

3. ಬಸವಜ್ಯೋತಿ ಮಹಾಂತ ಶಿವಯೋಗಿಗಳು – ಪೆÇ್ರೀ. ಸಿದ್ದಣ್ಣ ಲಂಗೋಟಿ

4. ಚಿತ್ತರಗಿ-ಇಲಕಲ್ಲ ಶ್ರೀ ವಿಜಯ ಮಹಾಂತೇಶ್ವರ ಮಠಗಳು – ಡಾ. ರಾಜಶೇಖರ ಬಸುಪಟ್ಟದ.

5. ‘ವಚನ ಧರ್ಮ ಪರಿಸರ’

Leave A Comment