ಕೂಡಲಸಂಗಮ

kudalsangam temple year 1978

1.            ಸಂಗಮೇಶ್ವರ ದೇವಸ್ಥಾನ-ಒಂದು ಇತಿಹಾಸಿಕ ಹಿನ್ನೆಲೆ.

     ಸಂಗಮೇಶ್ವರ ದೇವಾಲಯವನ್ನು ಕಲ್ಯಾಣಿ ಕಲಚೂರಿಗಳ ಅರಸರು ನಿರ್ಮಿಸಿರುವರು ಎಂದು ಶಾಸನಗಳಿಂದ ತಿಳಿದು ಬರುತ್ತದೆ. ಈ ದೇವಾಲಯವನ್ನು ಸುಮಾರು 11 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ದೇವಾಲಯದ ಹೊರಮೈ ಗ್ರ್ರ್ಯೆನೈಟ ಮತ್ತು ಮರಳುಗಲ್ಲಿನಿಂದ ನಿರ್ಮಿತವಾಗಿದೆ. ಅಲ್ಲಲ್ಲಿ ಕುಸುರಿ ಕೆಲಸ ಮಾಡಲಾಗಿದೆ. ಮಲಪ್ರಭೆಯ ಸಂಗಮ ಸ್ಥಾನದಲ್ಲಿರುವ ಐಕ್ಯ ಮಂಟಪದ ಎದುರಿಗೆ ಪೂರ್ವಾಭಿಮುಖವಾಗಿ ಸಂಗಮೇಶ್ವರ ದೇವಾಲಯ ಇದೆ.

      ಪ್ರವೇಶದ್ವಾರದ ಎಡಬಲಕ್ಕೆ ಕಟ್ಟೆಗಳಿವೆ. ಈ ದೇವಾಲಯದ ಅತ್ಯಂತ ಸುಂದರ ಭಾಗ ರಂಗಮಂಟಪ. ಕರಿಕಲ್ಲಿನಲ್ಲಿ ಕೆತ್ತಲಾದ ಕಂಬಗಳು,

kudalsangam Sangameshwar Temple

ಶಿಲ್ಪಗಳು ಕುಸುರಿ ಕೈಚಳಕದಿಂದ ಕಲಾತ್ಮಕವಾಗಿದ್ದು ಆಕರ್ಷಣೀಯವಾಗಿವೆ ಮುಖಮಂಟಪ ಹಾಗೂ ರಂಗ ಮಂಟಪಗಳ ಛಾವಣಿಯಲ್ಲಿ ವಿಶೇಷ ವಿನ್ಯಾಸವಿಲ್ಲ. ಗರ್ಭಗುಡಿಯಲ್ಲಿ ಒಂದು ಸಣ್ಣ ಪ್ರಮಾಣದ ಲಿಂಗವಿದೆ. ಇದಕ್ಕೆ ಉದ್ಭವ ಲಿಂಗವೆಂಬ ಪ್ರತೀತಿ ಇದೆ. ಈ ಉದ್ಭವ ಲಿಂಗವೇ ಬಸವಣ್ಣನ ಆರಾಧ್ಯ ದೈವ ಸಂಗಮೇಶ್ವರ. ಲಿಂಗ ಮತ್ತು ಪಾಣಿಪೀಠದ ಮಧ್ಯೆ ಇರುವ ಸ್ಥಳದಲ್ಲಿ ಒಂದು ಕಾಲದಲ್ಲಿ ನೀರು ಕಾಣುತ್ತಿತ್ತು. ಅದು ಈ ಪ್ರದೇಶದ ಮಳೆ ಬೆಳೆಯ ಸೂಚಿಸುವ ಸಂಕೇತವಾಗಿತ್ತೆಂದು ಪ್ರತೀತಿ ಇತ್ತು. ಲಿಂಗದ ಮೇಲೆ ಒಂದು ಛೇದವಿದೆ. ಅದರಲ್ಲಿಯೇ ಸಂಗಮೇಶ್ವರ ಐಕ್ಯರಾದರೆಂದು ಭಾವುಕರ ನಂಬಿಕೆ. ಬಸವಣ್ಣನವರು ತಮ್ಮ ಕೊನೆಯ ದಿನಗಳನ್ನು ಇಲ್ಲಿಯೇ ಕಳೆದರೆಂದು ಹೇಳಲಾಗುತ್ತಿದೆ.

     ಗರ್ಭಗುಡಿಯ ದಕ್ಷಿಣದ ಗೋಡೆಯಲ್ಲಿ ಒಂದು ಚಿಕ್ಕ ಹಾಗೂ ಸುಂದರ ವಿಗ್ರಹವಿದೆ. ಗರ್ಭಗುಡಿಯ ಹೊರಭಾಗದಲ್ಲಿ ದಕ್ಷಿಣದ ಗೋಡೆಯಲ್ಲಿ

 

ಬಸವಣ್ಣನವರು ವಚನ ರಚನೆಯಲ್ಲಿ ತೊಡಗಿದ ಭಂಗಿಯ ಕರಿ ಶಿಲೆಯ ಮೂರ್ತಿ ಇದೆ. ಉತ್ತರದ ಗೋಡೆಯಲ್ಲಿ ಅಕ್ಕಮಹಾದೇವಿಯ ಕರಿಶಿಲೆಯಮೂರ್ತಿ ಇದೆ. ಕೂಡಲಸಂಗಮ ದೇವಸ್ಥಾನವನ್ನು ತಿರುಗಿ ಮೂಲಸ್ಥಾನದಲ್ಲಿ ಮೊದಲ ವಿನ್ಯಾಸ ಮತ್ತು ರೂಪದಲ್ಲಿಯೇ ಪುನಃ ನಿರ್ಮಿಸಲಾಗಿದೆ ಇದಕ್ಕೆ 1.2 kudalsangam Sangameshwar Swamiಕೋಟಿ ರೂಪಾಯಿಗಳು ಮತ್ತು ದೇವಸ್ಥಾನದ ಮೂರು ಕಡೆ ಪೌಳಿಗಳನ್ನು ಹಾಗೂ ರಾಜಗೋಪುರವನ್ನು 85 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಲಾಗಿದೆ.

2.            ಬಸವೇಶ್ವರ ಐಕ್ಯ ಮಂಟಪ

     ಕೃಷ್ಣ ಮತ್ತು ಮಲ್ಲಪ್ರಬಾ ನದಿಗಳ ಸಮ್ಮಿಲನದಲ್ಲಿ ಬಸವೇಶ್ವರ ಐಕ್ಯ ಮಂಟಪವನ್ನು ನಿರ್ಮಿಸಲಾಗಿದೆ. ಇದು ಚಾಲುಕ್ಯ ಶೈಲಿಯ ನಾಲ್ಕು ಕಂಬಗಳ 15 ಅಡಿ ಎತ್ತರದ ಮಂಟಪ. ಈಗ ಐಕ್ಯ ಮಂಟಪ ಬಾಗಲಕೋಟ ಜಿಲ್ಲೆಯ ಲಾಂಛನವಾಗಿದೆ. ಇದು

 

ಬಸವಸಾಗರದ ಹಿನ್ನೀರಿನಿಂದ ಆವೃತವಾಗಿದ್ದು. ಇದರ ರಕ್ಷಣೆಗೆ 60 ಅಡಿ ಎತ್ತರದ ಕಾಂಕ್ರಿಟ ಬಾವಿಯನ್ನು ನಿರ್ಮಿಸಲಾಗಿದೆ. ದರ್ಶನಾರ್ಥಿಗಳು ಹೋಗಿ ಬರಲು ಒಳಗೆ ಎರಡು ಬದಿಯಲ್ಲಿ ಮೆಟ್ಟಲುಗಳನ್ನು ಕಟ್ಟಲಾಗಿದೆ. ದೇವಸ್ಥಾನÀ ಆವರಣದಿಂದ ಐಕ್ಯಮಂಟಪಕ್ಕೆ ಹೋಗಲು ಆಕರ್ಷಕ ಸೇತುವೆಯನ್ನು ನಿರ್ಮಿಸಲಾಗಿದೆ. ಅದೇ ರೀತಿ ಸೇತುವೆ ಮೇಲೂ ಸುಂದರ ಹೊದಿಕೆಯನ್ನು ನಿರ್ಮಿಸಲಾಗಿದೆ.

3.            ಜಾತವೇದ ಮುನಿಗಳ ಗದ್ದುಗೆkudalsangam Aikyamantapa

      ಬಸವಣ್ಣನವರ ವಿದ್ಯಾಗುರುಗಳೇ ಜಾತವೇದ ಮುನಿಗಳು. 12 ನೇ ಶತಮಾನದಲ್ಲಿ ವಿಭೂತಿ ಪುರುಷ ಬಸವಣ್ಣನು ಜನಿಸಿದಾಗ ಲಿಂಗದಕಟ್ಟಿ ಆಶೀರ್ವದಿಸಿ ಮುಂದೆ ಸಾರಂಗಮಠದ ಗುರುಕುಲ ಸ್ಥಾಪಿಸಿದ ಜಾತವೇದ ಮುನಿಗಳ ಗದ್ದುಗೆ ಸಂಗಮೇಶ್ವರ ದೇವಸ್ಥಾನದ ಬಲಗಡೆಗೆ ಉತ್ತರಾಭಿಮುಖವಾಗಿ ಇದೆ.

4.            ಬಸವೇಶ್ವರ ವೃತ್ತ

    ಮಹಾದ್ವಾರದಿಂದ 1.5 ಕಿ.ಮಿ ಪೂರ್ವಕ್ಕೆ ರಾಜಬೀದಿಯಲ್ಲಿ ಬಂದರೆ ಅಲ್ಲಿ ಸಿಗುವುದೇ ಬಸವೇಶ್ವರ ವೃತ್ತ. ಈ ವೃತ್ತಕ್ಕೆ 7 ರಸ್ತೆಗಳು ಕೂಡಿದುದ್ದು, ಈ ಬಸವ ವೃತ್ತವು ವಿಶಾಲವಾಗಿದೆÀ ಪೀಠದ ಮೇಲೆ 4 ಕಂಬಗಳಿಂದ ನಿರ್ಮಿತವಾದ ಒಂದು ಸುಂದರ ಮಂಟಪವಿದೆ. ಈ ಮಂಟಪದ ಮಧ್ಯದಲ್ಲಿ ಪೂಜಾನಿರತ ಬಾಲಬಸವಣ್ಣನವರ ಸುಂದರವಾದ 7 ಫೂಟು ಎತ್ತರದ ಕಂಚಿನ ಮೂರ್ತಿಯಿದೆ. ಈ ಮೂರ್ತಿ ಬಸವಣ್ಣನವರು ಬಾಗೇವಾಡಿಯಿಂದ kudalsangam circleಕೂಡಲಸಂಗಮಕ್ಕೆ ಬಂದು ವಿದ್ಯಾರ್ಜನೆ ಮಾಡಿದ ಕಲ್ಪನೆಯನ್ನು ನೀಡುತ್ತದೆ. ಈ ಪೀಠದ ಸುತ್ತಲೂ ಕಬ್ಬಿಣದ ಜಾಲವುಳ್ಳ ಕಟಾಂಜನವಿದ್ದು, ವೃತ್ತಾಕಾರದ ಪೀಠದ ಸುತ್ತಲೂ ವಿವಿಧ ಬಣ್ಣಗಳ ಕಾರಂಜಿಗಳಿವೆ ಈ ಪೀಠದ 4 ದಿಕ್ಕುಗಳಿಗೂ ನಾಲ್ಕು ವಚನಗಳಿವೆ. ಇದು ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ.

5.            ತೇರಿನ ಮನೆ ಹಾಗೂ ವೀಕ್ಷಣ ಗೋಪುರ

       ಕೂಡಲಸಂಗಮದ ಸಂಗಮೇಶ್ವರ ಜಾತ್ರೆಯ ಕೇಂದ್ರ ಬಿಂದು ರಥೋತ್ಸವ ತೆರಿಗೆ ಬಂಗಾರ ಕಳಸವನ್ನು  ಬಾಗಲಕೋಟೆಯ ಸರಕಾರಿ ಖಜಾನೆಯಿಂದ ಬಿಗಿ ಪಹರೆಯಲ್ಲಿ ಕೂಡಲಸಂಗಮಕ್ಕೆ ತರಲಾಗುತ್ತದೆ. ಕೂಡಲಸಂಗಮ ಅಭಿವೃದ್ಧಿ ಮಂಡಳಿ ತೇರನ್ನು ನವೀಕರಿಸಿದೆ. ತೇರನ್ನು ಬಿಸಿಲು ಗಾಳಿಯಿಂದ ಸಂರಕ್ಷಿಸಲು ರಥದ ಮನೆ ನಿರ್ಮಿಸಲಾಗಿದೆ. ಇದು 50 ಅಡಿ ಎತ್ತರವಿದೆ. ಎರಡು ನದಿಗಳ ಸಂಗಮ ಸ್ಥಾನದಲ್ಲಿ ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಈ ಕಟ್ಟಡದ ಮೇಲ್ಮಹಡಿಯಿಂz ಸುತ್ತಲೂ ರಮಣೀಯ ಪರಿಸರವನ್ನು ವೀಕ್ಷಿಸಬಹುದು. ಈ ವೀಕ್ಷಣಾ ಮಹಡಿಯಲ್ಲಿ ವಿಚಾರ ಸಂಕೀರ್ಣದಂತಹ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ತೇರಿನ ಮನೆಗೆ 20 ಅಡಿ ಅಗಲ 40 ಅಡಿ ಎತ್ತರದ ಸುಂದರವಾz ಕಬ್ಬಿಣದ ಬಾಗಿಲುಗಳನ್ನು ಜೋಡಿಸಲಾಗಿದೆ. ಬಾಗಿಲುಗಳನ್ನು ಸುಲಭವಾಗಿ ಮುಚ್ಚಲು ತೆರೆಯಲು ವಿಶಿಷ್ಟ ಬೇರಿಂಗ್ ಅಳವkudalsangam temple viewಡಿಸಲಾಗಿದೆ. ಈ ತೇರಿನ ಮನೆಯ ಎದುರಿಗೆ ರಥದ ಬೀದಿ ಪಾದಗಟ್ಟೆಗಳಿವೆ.

6.            ಸಭಾ ಭವನ

     ವಿಶ್ವವಿಖ್ಯಾತ ಗೋಲಗುಮ್ಮಟದ ಇಮ್ಮಡಿ ವಿಸ್ತಾರ ಹೊಂದಿದ ವೃತ್ತಾಕಾರದ ಸಭಾಗೃಹ ಕೂಡಲಸಂಗಮದ ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ. ಇದು ಏಷ್ಯಾದಲ್ಲಿಯೇ ಅತಿ ದೊಡ್ಡ ಗುಮ್ಮಟವಾಗಿದ್ದು, ಇದರ ಪ್ರವೇಶದ ನಾಲ್ಕು ದ್ವಾರಗಳ ಮೇಲೆ ಚಾಲುಕ್ಯ ಶೈಲಿಯ ಗೋಪುರಗಳು ಹಾಗೂ ರೋಮನ್ ವಾಸ್ತು ಶಿಲ್ಪದ 72 ಕಂಬಗಳಿವೆ. ಗುಮ್ಮಟದಲ್ಲಿ ಬೌದ್ದ ಸ್ತೂಪ ಶೈಲಿಯ ವಾತಾಯನಗಳು, ಇಸ್ಲಾಮಿಕ್ ವಾಸ್ತುಶಿಲ್ಪದ ಗುಮ್ಮಟ, ಗ್ರೀಕ್ ಮಾದರಿಯ ಬೃಹತ್ ವೇದಿಕೆ ಈ 5 ವಾಸ್ತುಶಿಲ್ಪ ಮಾದರಿಗಳ ಸಂಗಮವಿದು.

     ಸಭಾಗೃಹದಲ್ಲಿ ಪ್ರತಿಧ್ವನಿ ನಿರೋಧಕ ವ್ಯವಸ್ಥೆಯನ್ನು ಮಾಡಲಾಗಿದೆ, ಗುಮ್ಮಟದ ಮೇಲ್ಪದರಿನಲ್ಲಿ ಸ್ಪೇನಲೆಸ್ ಸ್ಟೀಲ್ ಫಲಕ ಹೊದಿಕೆ, ಅದರ ಕೆಳಗೆ ಗ್ಲಾಸವೊಲ್ ಪದರು ಇದೆ. ಅkudalsangam Sabha Bhavanದರ ಕೆಳಗೆ ರಂಧ್ರವುಳ್ಳ ಅಲ್ಯೂಮಿನಿಯಂ ತಗಡುಗಳಿಂದಾಗಿ ಪ್ರತಿಧ್ವನಿ ಆಗದಂತೆ ಮಾಡಲಾಗಿದೆ.

           ಸಭಾಗೃಹದಲ್ಲಿ 5 ಸಾವಿರ ಸ್ಥಿರ ಆಸನಗಳು ವೃತ್ತಾಕಾರದಲ್ಲಿವೆ. ಅಂತರಾಷ್ಟ್ರೀಯ ಮಾನಕಗಳಿಗೆ ಅನುಗುಣವಾಗಿ ವೇದಿಕೆ ನಿರ್ಮಿಸಲಾಗಿದೆ. ವೇದಿಕೆಯಲ್ಲಿ ನೃತ್ಯ ಇತ್ಯಾದಿ ಕಾರ್ಯಕ್ರಮ ನಡೆಸಲು ಕಟ್ಟಿಗೆಯ ನೆಲಹಾಸು ಒದಗಿಸಲಾಗಿದೆ. ವೇದಿಕೆಗೆ ಹೊಂದಿಕೊಂಡಂತೆ ಅನುಭವಿ ಹಾಗೂ ಖ್ಯಾತ ರಂಗಕರ್ಮಿಗಳ ಹಾಗೂ ತಂತ್ರಜ್ಞರ ಮಾರ್ಗದರ್ಶನದಲ್ಲಿ ನಿರ್ಮಿಸಲಾದ ಬೆಳಕು, ಧ್ವನಿ ವ್ಯವಸ್ಥೆ ಇದೆ. ಇಲ್ಲಿ ಕಲಾವಿದರಿಗೆ ವಸತಿ ಸೌಕರ್ಯವಿದೆ. ಅತಿ ಗಣ್ಯರಿಗೆ ವಿಶೇಷ ಪ್ರವೇಶದ್ವಾರವಿದೆ. ಪ್ರೇಕ್ಷಕ ಯಾವ ಆಸನದಿಂದ ವೀಕ್ಷಿಸಿದರೂ ನೇರನೋಟ ಲಭ್ಯವಿದೆ.

      ಸಭಾ ಭವನದ ಒಳವ್ಯಾಸ ಎರಡುನೂರಐದು ಅಡಿಗಳಿದ್ದು ಹೊರವ್ಯಾಸ ಎರಡುನೂರಾಇಪ್ಪತ್ತಾರು ಅಡಿಗಳದ್ದಾಗಿದೆ. ಮದ್ಯಭಾಗದಲ್ಲಿ ಗುಮ್ಮಟದ ಎತ್ತರ ಒಂದು ನೂರು ಅಡಿ ಇದೆ. ಗುಮ್ಮಟದ ಮೇಲಿನ ಕಳಸದ ಎತ್ತರವೇ 15 ಅಡಿ ಇದೆ. ಇದರ ನಿರ್ಮಾಣಕ್ಕೆ 8 ಕೋಟಿ 60 ಲಕ್ಷ ರೂಪಾಯಿ ವಿನಿಯೋಗಿಸಲಾಗಿದೆ.

7.            ಶರಣ ಸಾಹಿತ್ಯ ಭಂಡಾರ ಮತ್ತು ಸಂಶೋಧನಾ ಕೇಂದ್ರkudalsangam Sabha Bhavan Interior

ಬಸವ ನೆನಹಿನ ಈ ತಾಣ, ಸೃಷ್ಟಿ ಸಿರಿಯ ಪರಿಸರದ ಮಧ್ಯದಲ್ಲಿ ನೆಲೆಸಿದೆ. ಈ ಗ್ರಂಥಾಲಯದಲ್ಲಿ ವಿವಿಧ ಭಾಷೆಯ ಹೊತ್ತಿಗೆಗಳು, ಅತ್ಯಮೂಲ್ಯ ವಿಶ್ವಕೋಶಗಳು ಜ್ಞಾನಪಿಪಾಸುಗಳಿಗಿದು ತೀರ್ಥ. ಸಂಶೋಧಕರಿಗಿದು ಛತ್ರ ಎಂದು ಬಿಜಾಪುರ ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಸುಕ್ಷೇತ್ರ ಕೂಡಲಸಂಗಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಗ್ರಂಥಾಲಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವುದು ವಾಸ್ತವ ಸತ್ಯ.

       ಕೂಡಲಸಂಗಮ ಚಾರಿತ್ರಿಕವಾಗಿ ಒಂದು ಶ್ಯೆಕ್ಷಣಿಕ ಕೇಂದ್ರ. ವಚನ ಸಾಹಿತ್ಯದ ಹೃದಯಭಾಗ. ಕನ್ನಡ ಭಾಷೆಯ ಬೆಳವಣಿಗೆಗೆ ಇದರ ಕೊಡುಗೆ ಅಪಾರ. ನವೀಕರಣಗೊಂಡ ಕೂಡಲಸಂಗಮ ಕ್ಷೇತ್ರದಲ್ಲಿ ಸುಸಜ್ಜಿತ ಶರಣ ಸಾಹಿತ್ಯ ಭಂಡಾರ ಹಾಗೂ ಸಂಶೋಧನಾ ಕೇಂದ್ರ ಜ್ಞಾನ ದಾಸೋಹದ ಮೂಲ ಸೆಲೆಯಾಗಿ ರೂಪಗೊಂಡಿದೆ.

      2001ರ ನವ್ಹೆಂಬರ್ 1 ರಿಂದ ಕಾರ್ಯ ಆರಂಭಿಸಿರುವ ಈ ಗ್ರಂಥಾಲಯ ಸಾಮಾನ್ಯ ಸಾರ್ವಜನಿಕ  ಗ್ರಂಥಾಲಯವಾಗಿಲ್ಲ. ಶರಣ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿಶೇಷವಾದ ಉತ್ಕಷ್ಠ ಗ್ರಂಥ ಭಂಡಾರ ಇಲ್ಲಿದೆ. ಶರಣ ಸಾಹಿತ್ಯ ಹಾಗೂ ಶರಣ ಜೀವನ ಚರಿತ್ರೆಗಳು, ವಚನಗಳ ತುಲನಾತ್ಮಕ ಹಾಗೂ ಧಾರ್ಮಿಕ ಅಧ್ಯಯನ, ಸಂಬಂಧಿಸಿದ ಗ್ರಂಥಗಳು ಹಾಗೂ ನಿಯತಕಾಲಿಕೆಗಳು ಇಲ್ಲಿ ಲಭ್ಯ.

      ಪ್ರತಿವರ್ಷ ಈ ಗ್ರಂಥಾಲಯಕ್ಕೆ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಹೊಸ ಪುಸ್ತಕಗಳನ್ನು ಹಾಗೂ ಸಂಬಂಧಿಸಿದ ನಿಯತಕಾಲಿಕಗಳನ್ನು ಖರೀದಿಸಲಾಗುತ್ತಿದೆ. ಹೀಗಾಗಿ ಪ್ರತಿನಿತ್ಯ 200 ರಿಂದ 250ರವರೆಗೆ ಸಹೃದಯ ಓದುಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

      ಗ್ರಂಥಾಲಯದಲ್ಲಿ ಈಗ ಸುಮಾರು 6 ಸಾವಿರ ಗ್ರಂಥಗಳ ಸಂಗ್ರಹವಿದ್ದು, ಅವುಗಳ ಮೌಲ್ಯ ಸುಮಾರು 20 ಲಕ್ಷವಾಗಬಹುದು. ಆಕರ ಗ್ರಂಥಗಳಾದ ಎನ್‍ಸೈಕ್ಲೋಪೀಡಿಯಾ 250ಕ್ಕೂ ಮೇಲ್ಪಾಟ್ಟಿವೆ. ಅತಿ ಹಳೆಯದಾದ ಅಪರೊಪದ ಗ್ರಂಥಗಳಾದ ಪಾಲ್ಕುರುಕೆ ಸೋಮನಾಥನ ಬಸವ ಪುರಾಣ (ತೆಲಗು) ಗೊಳೂರ ಸಿದ್ದವೀರಣ್ಯೊಡೆಯರ ಶೂನ್ಯ ಸಂಪಾದನೆ. ಸ್ಪೇನ್ ದೇಶದ ರೋವೆನಾ ಹಿಲ್ ಎಂಬ ಮಹಿಳೆ Noming the Nomeless 101 Vachana ಗಳನ್ನು ಸ್ಪ್ಯಾನಿಷ್ ಭಾಷೆಗೆ ಅಳವಡಿಸಿದ್ದ ಗ್ರಂಥವನ್ನು ಈ ಗ್ರಂಥಾಲಯಕ್ಕೆ ಕೊಟ್ಟು ಕಳಿಸಿದ್ದಾರೆ.

      ಇಲ್ಲಿ ವಿಶ್ವದ ಎಲ್ಲ ಧರ್ಮಗಳ ಅಧ್ಯಯನಕ್ಕೆ ಅವಕಾಶವುಂಟು. ವಿಶೇಷವಾಗಿ ವಚನ ಸಾಹಿತ್ಯ ಹಾಗೂ ಶರಣ ಸಾಹಿತ್ಯದ ಅಧ್ಯಯನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಸಂಶೋಧಕರಿಗಾಗಿ ದೃಶ್ಯ ಹಾಗೂ ಶ್ರವಣ ಮಾಧ್ಯಮದ ಸೌಲಭ್ಯಗಳಿವೆ. ಗ್ರಂಥಾಲಯ ವರ್ಷವಿಡೀ ತೆರೆದಿರುತ್ತಿದೆ.

       ಈ ಕಟ್ಟಡ ಯುರೋಪಿಯನ್ ಗೋಥಿಕ್ ವಾಸ್ತು ಶಿಲ್ಪ ಶೈಲಿಯಲ್ಲಿ ನಿರ್ಮಾಣವಾಗಿದೆ. ಕಮಾನುಗಳ ಮಾದರಿಯಲ್ಲಿ ರೂಪಗೊಂಡ ಈ ಕಟ್ಟಡ 35,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಕಟ್ಟಡದ ಸುತ್ತಲೂ ಇರುವ ವೃಕ್ಷರಾಜ ಹಾಗೂ ಮುಂಭಾಗದ ಹಸಿರು ಹುಲ್ಲಿನ ನೆಲಹಾಸು ನಯನ ಮನೋಹರವಾಗಿದೆ. ಈ ಕಟ್ಟಡಕ್ಕೆ 88 ಲಕ್ಷ ರೂಪಾಯಿ ವೆಚ್ಚವಾಗಿವೆ. ಇದೆ ಭವ್ಯ ಕಟ್ಟಡದಲ್ಲಿ ಕೂಡಲಸಂಗಮ ಅಭಿವೃದ್ದಿ ಮಂಡಳಿಯ ಆಯುಕ್ತರ ಕಛೇರಿ ಮತ್ತು ಸುಸಜ್ಜಿತವಾದ ಮೀಟಿಂಗ್ ಹಾಲ್ ಇದೆ.

8.            ದಾಸೋಹ ಭವನkudalsangam Dasoha Bhavan

        ಇಡೀ ವಿಶ್ವವೇ ಅಂಧಕಾರದಲ್ಲಿರುವಾಗ ಹಲವು ರೀತಿಯ ಹೊಸ ವಿಚಾರಗಳನ್ನು ಹರಿವಿಡುವ ಮೂಲಕ ಬೆಳಕು ತೋರಿದ ಶ್ರೇಯಸ್ಸು 12ನೇ ಶತಮಾನದ ವಚನಕಾರರಿಗೆ ಸಲ್ಲಬೇಕು. ಕಾಯಕ ಹಾಗೂ ದಾಸೋಹಕ್ಕೆ ಹೊಸ ಅರ್ಥ ಕಲ್ಪಿಸುವ ಮೂಲಕ ಪ್ರಜಾಪ್ರಭುತ್ವ ಸಮಾನತೆ, ತತ್ವಕ್ಕೆ ಅಡಿಪಾಯ ಹಾಕಿದರೆ ಕೀರ್ತಿ ಇವರದೇ ಎಂದರೂ ತಪ್ಪಾಗಲಾರದು. ಕಾಯಕ ಜೀವಿಗಳ ಚಳುವಳಿ ನಾಯಕತ್ವ ನೀಡಿದ್ದ ವಿಶ್ವಗುರು ಬಸಣ್ಣನವರ ಆತ್ಮಲಿಂಗಕ್ಕೆ ಮಡಿಲು ನೀಡಿದ ಪುಣ್ಯಭೂಮಿ ಕೂಡಲಸಂಗಮವಾಗಿದೆ.

           ಉತ್ತರ ಕರ್ನಾಟಕದ ಬಹುತೇಕ ಜನರಿಗೆ ಕೂಡಲಸಂಗಮವೆಂದರೆ ಅನನ್ಯಭಕ್ತಿ. ಇಂಥ ಭಕ್ತಿ ಕೇಂದ್ರಕ್ಕೆ ದಿನಾಲು ರಾಜ್ಯ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ನೂರಾರು ಪ್ರವಾಸಿಗರು, ಭಕ್ತರು ಬಂದು ತಂಗಿಹೋಗುತ್ತಾರೆ. ಬಯಸಿ ಬಂದವರಿಗೆ ಜ್ಞಾನ ಹಾಗೂ ಹೊಟ್ಟೆಯ ಹಸಿವನ್ನು ನೀಗಿಸಿದ್ದ ವಚನಕಾರರ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಕೂಡಲಸಂಗಮ ಪ್ರಾಧಿಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಅದರ ಪ್ರತೀಕವಾಗಿ ಇದೀಗ ಬಸವಣ್ಣನವರ ಐಕ್ಯ ಸ್ಥಳದಲ್ಲಿ ವಿಶಾಲವಾದ ಅನ್ನದಾಸೋಹ ಮಂಟಪ ಆರಂಭಗೊಂಡು ಹಸಿದು ಬಂದ ನೂರಾರು ಭಕ್ತರಿಗೆ ಪ್ರಸಾದ ನೀಡತೊಡಗಿದೆ.

        ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಅಭಿವೃದ್ದಿ ಹೊಂದುತ್ತಿರುವ ಕೂಡಲಸಂಗಮದಲ್ಲಿ ಅನ್ನದಾಸೋಹ ಪ್ರಾರಂಭವಾಗಿರುವುದರಿಂದ ಪ್ರವಾಸಿಗರಿಗೆ, ಭಕ್ತರಿಗೆ ಅನುಕೂಲವಾಗಿದೆ. 2005 ಸೆಪ್ಟೆಂಬರ 25 ರಿಂದ ವಿಶಾಲವಾದ ದಾಸೋಹ ಭವನವು ಭಕ್ತರ ಸೇವೆಯಲ್ಲಿ ತೊಡಗಿದೆ. ದಾಸೋಹ ಭವನಕ್ಕೆ 1.50 ಕೋಟಿ ರೂ. ವೆಚ್ಚವಾಗಿದೆ. ಇದು 4 ಕಂಬಗಳ ಮೇಲೆ ನಿಂತ ಪಿರ್ಯಾಮಿಡ್ ಮಾದರಿಯ ಕಟ್ಟಡವಾಗಿದೆ. ಇದರ ಒಳಗಡೆ ಕಾಲಿಡುತ್ತಿದ್ದಂತೆ ಶರಣರ ವಚನಗಳು ಕಣ್ಣಿಗೆ ಬೀಳುತ್ತವೆ. ನಾಲಿಗೆ ತನ್ನ ಅರಿವಿಲ್ಲದೆ ಶರಣರ ವಚನಗಳನ್ನು ನುಡಿಯಲು ಮುಂದಾಗುತ್ತಾರೆ. ಮನಸ್ಸು ಭಕ್ತಿ ಪರವಶವಾಗುತ್ತದೆ. ಭವನದ ಸುತ್ತಲೂ  ಹುಲ್ಲುಹಾಸು ಮತ್ತು ಗಿಡ, ಮರಗಳಿಂದ ಕೂಡಿದ ಸುಂದರ ಪರಿಸರ ನಿರ್ಮಾಣಗೊಂಡಿದೆ.

ಏಕಕಾಲಕ್ಕೆ 500 ಜನರು ಊಟ ಮಾಡಹುದಾದಷ್ಟು ಭವನ ವಿಶಾಲವಾಗಿದೆ. ಪ್ರತಿನಿತ್ಯ ದಾಸೋಹ ಬೆಳಿಗ್ಗೆ 10 ರಿಂದ 2-30ರವರೆಗೆ ಮತ್ತು ರಾತ್ರಿ 7-30 ರಿಂದ 9-30ರವರೆಗೆ ನಡೆಯುತ್ತದೆ. ಪ್ರತಿದಿನ ಸಾವಿರಾರು ಭಕ್ತರು ವಚನ ಸಂಗೀತದೊಂದಿಗೆ ಪ್ರಸಾದ ಸ್ವೀಕರಿಸುತ್ತಾರೆ.

9. ಯಾತ್ರಿ ನಿವಾಸkudalsangam Yatri Nivas

ಕೂಡಲಸಂಗಮ ಕ್ಷೇತ್ರವು ದಶದಿಕ್ಕುಗಳಿಂದ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಚಾಲುಕ್ಯರ ಆಡುಂಬೊಲವಾದ ಈ ನಾಡು ವಾಸ್ತುಶಿಲ್ಪಕ್ಕೆ ಖ್ಯಾತಿ ಪಡೆದಿದೆ. ಇತ್ತೀಚೆಗೆ ಆಲಮಟ್ಟಿ ಹಾಗೂ ಕೂಡಲಸಂಗಮ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಪ್ರವಾಸಿಗರ ಆಕರ್ಷಿಣೀಯ ಕೇಂದ್ರಗಳಾಗಿ ರೂಪುಗೊಂಡಿದೆ. ಇಲ್ಲಿಗೆ ಬರುವ ಅಸಂಖ್ಯಾತ ಯಾತ್ರಾರ್ಥಿಗಳ ವಸತಿ ಸೌಲಭ್ಯಕ್ಕಾಗಿ ಯಾತ್ರಿ ನಿವಾಸ ಸಿದ್ದವಾಗಿದೆ. ಇಲ್ಲಿ ಎಲ್ಲಾ ಜನತೆಗೆ ಸಮಾನ ಅವಕಾಶ ಕಲ್ಪಿಸುವ ವಸತಿ ಸೌಲಭ್ಯ ಒದಗಿಸುವಂತೆ ಕಟ್ಟಡ ನಿರ್ಮಾಣಗೊಂಡಿದೆ. ಒಟ್ಟು ಕಟ್ಟಡ 41.500 ಚ.ಅ. ವಿಸ್ತೀರ್ಣ ಹೊಂದಿದ ಘಟಪ್ರಭಾ ಮತ್ತು ಮಲ್ಲಪ್ರಭಾ ನದಿಗಳು ಕೃಷ್ಣಾ ನದಿಯೊಂದಿಗೆ ಸಂಗಮವಾಗಿವೆ. ಇದರ ಸಂಕೇತವಾಗಿ ಸಮುಚ್ಚಯದಲ್ಲಿ ಮಲ್ಲಪ್ರಭಾ, ಘಟಪ್ರಭಾ ಮತ್ತು ಕೃಷ್ಣಾ ಎಂದು ಮೂರು ಭಾಗಗಳನ್ನು ಹೆಸರಿಸಲಾಗಿದೆ.

ಘಟಪ್ರಭಾ ಭಾಗದಲ್ಲಿ 15 ವಿಶಾಲವಾದ ಕೋಣೆಗಳಿವೆ, ಪ್ರತಿ ಕೋಣೆಯಲ್ಲ 20 ಜನ ತಂಗಲು ಅವಕಾಶವಿದೆ. ಇಲ್ಲಿ ಸಾಮೂಹಿಕ ಸ್ನಾನಗೃಹ ಹಾಗೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸಾಮಾನ್ಯ ಜನರಿಗೆ, ಪ್ರವಾಸಿ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ.

ಮಲ್ಲಪ್ರಭಾ ಭಾಗದಲ್ಲಿ 25 ಕೋಣೆಗಳಿವೆ ಎಲ್ಲ ಕೋಣೆಗಳಿಗೆ ಪ್ರತ್ಯೇಕ ಸ್ನಾನಗೃಹ ಹಾಗೂ ಶೌಚಾಲಯಗಳಿವೆ. ಪ್ರತಿ ಕೋಣೆಗೆ ಮಂಚ, ಗಾದಿ ಮುಂತಾದ ಸೌಲಭ್ಯಗಳಿವೆ. ಮಧ್ಯಮವರ್ಗದ ಪ್ರವಾಸಿಗರಿಗೆ ಮಲ್ಲಪ್ರಭಾ ಭಾಗ ಹೆಚ್ಚು ಸೂಕ್ತವಾಗಿದೆ.

ಕೃಷ್ಣಾ ಭಾಗದಲ್ಲಿ 35 ಕೋಣೆಗಳಿವೆ ಇದನ್ನು ಉತ್ತಮವಾದ ಪರಿಕರಗಳೊಂದಿಗೆ ಸಿದ್ದಪಡಿಸಲಾಗಿದೆ. ಮೇಲ್ವರ್ಗದ ಯಾತ್ರಾರ್ಥಿಗಳಿಗೆ ಹವಾನಿಯಂತ್ರಿತ ಕೊಠಡಿಗಳು, ದೂರದರ್ಶನ ಮುಂತಾದ ಸೌಲಭ್ಯಗಳಿವೆ. ಒಟ್ಟು 500 ಜನರಿಗೆ ತಂಗುವ ವ್ಯವಸ್ಥೆ ಈ ಕಟ್ಟಡದಲ್ಲಿದೆ. ಇಡೀ ಕಟ್ಟಡಕ್ಕೆ ಸೂರ್ಯ ಶಾಖದಿಂದ ಬಿಸಿ ನೀರನ್ನು ಒದಗಿಸುವ ವ್ಯವಸ್ಥೆ ಇದೆ. ಇದನ್ನು ನಿರ್ಮಿಸಲು 4 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಯಾತ್ರಿ ನಿವಾಸದಲ್ಲಿ ಉಪಹಾರ ಗೃಹವಿದ್ದು ಶುದ್ಧ ಸಸ್ಯಾಹಾರಿಯಾಗಿದೆ. ಇಲ್ಲಿ ಎಲ್ಲ ತರಹದ ಊಟ, ಉಪಹಾರ ಯೋಗ್ಯ ಬೆಲೆಯಲ್ಲಿ ದೊರೆಯುತ್ತದೆ.

ಇಡೀ ವಸತಿ ಸಮುಚ್ಚಯಕ್ಕೆ ಒಂದೇ ಪ್ರವೇಶ ದ್ವಾರವಿದೆ. ಬಸವ ತತ್ವದ ಮೇಲೆ ಈ ಕಟ್ಟಡ ರೂಪಗೊಂಡಿದ್ದು ಎಲ್ಲ ವರ್ಗದ ಜನ ಒಂದೇ ಕಡೆ ಸಂಗಮಿಸುವ ಸಂಕೇತವಾಗಿದೆ.

10 ಉಪಹಾರ ಗೃಹ

        ಸುಕ್ಷೇತ್ರ ಕೂಡಲಸಂಗಮಕ್ಕೆ ಯಾತ್ರಾರ್ಥಿಗಳು ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಜಪಾನ್ ಶೈಲಿಯ ಸುಸಜ್ಜಿತ ಶುದ್ಧ ಶಾಖಾಹಾರಿ ಉಪಹಾರ ಗೃಹವಿದೆ. ಒಂದೇ ಕಂಬದ ಮೇಲೆ ನಿಂತಿರುವ ಈ ಕಟ್ಟಡದ ಮೇಲ್ಛಾವಣಿಯು ಹೊರಗಿನಿಂದ ನೋಡಿದಾಗ ಹೂ ಅರಳಿ ನಿಂತಂತೆ ಚಿತ್ತಾಕರ್ಷಕವಾಗಿ ಕಾಣಿಸುತ್ತದೆ.  ಇದರ ಮೇಲ್ತುದಿಯಲ್ಲಿ ಮನೋಹರವಾದ ಕಳಸವಿದೆ. ಈ ಕಟ್ಟಡದ ಸುತ್ತಲಿನ ಹಸಿರು ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಉಪಹಾರ ಗೃಹದ ಒಳಾವರಣದ ನೋಟ ಹಾಗೂ ಆಧುನಿಕ ಪೀಠೋಪಕರಣಗಳು ಅತ್ಯಂತ ಆಧುನಿಕವಾಗಿದ್ದು ಪ್ರವಾಸಿಗರ ಮೆಚ್ಚುಗೆ ಪಡೆದಿದೆ. ಈ ಕಟ್ಟಡದ ಒಟ್ಟು ವೆಚ್ಚ 38.5 ಲಕ್ಷ ರೂಪಾಯಿಗಳು. ಇದನ್ನು ನಿರ್ವಹಣೆ ಮಾಡಲು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ಕೊಡಲಾಗಿದೆ.

11.    ಬಸವ  ಧರ್ಮಪೀಠkudalsangam Basava Dharma maha matha

       1987ರಲ್ಲಿ ಬಾಗಲಕೋಟೆಯಲ್ಲಿ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳ ಪ್ರವಚನ 50 ದಿನಗಳವರೆಗೆ ನಡೆಯಿತು. ಅದರ ಮುಕ್ತಾಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಾತೆಮಹಾದೇವಿಯವರು ಆಗಮಿಸಿ ನಂತರ ಸಂಗಮಕ್ಕೆ ಭೇಟಿ ನೀಡಿ. ವಿಶ್ವಗುರು ಬಸವಣ್ಣನ ತತ್ವವನ್ನು ಜಗತ್ತಿನ ಮೂಲೆಮೂಲೆಗೆ ಪಸರಿಸಲು ಪಣತೊಟ್ಟ ಮಾತೆಮಹಾದೇವಿಯವರು 1987ರಲ್ಲಿ ಬಸವಧರ್ಮಪೀಠ ಎಂಬ ಪೀಠ ಸ್ಥಾಪಿಸಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿರುವರು.

       13-1-1992 ರಂದು ಬಸವಧರ್ಮದ ಮಹಾಜಗದ್ಗುರು ಪೀಠ ಸ್ಥಾಪನೆಯಾಯಿತು. ಅಪೂರ್ವ ವಾಗ್ಮಿಗಳು, ಪ್ರವಚನ ಪಿತಾಮಹರೂ ಆದ ಲಿಂಗಾನಂದ ಸ್ವಾಮಿಗಳು ಪ್ರಥಮ ಜಗದ್ಗುರುವಾಗಿ ಪೀಠಾರೋಹಣ ಮಾಡಿದರು. ಲಿಂಗಾನಂದಸ್ವಾಮೀಜಿ ಮತ್ತು ಮಾತೆಮಹಾದೇವಿಯವರು ದೇಶದ ವಿವಿಧ ಮೂಲೆಗಳಿಗೆ ಸಂಚರಿಸಿ ಬಸವತತ್ವ ಪ್ರಚಾರ ಮಾಡಿದರು. ಆದರೆ 1995 ಜೂನ್ 30 ರಂದು ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು ದೈವಾಧೀನರಾದರು. ಅವರ ಲಿಂಗೈಕ್ಯ ಗದ್ದುಗೆ ಬಸವ ಧರ್ಮಪೀಠದ ಆವರಣದಲ್ಲಿದೆ.kudalsangam Basava Dharma maha matha view

       ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿಗಳ ಸದಿಚ್ಛೆಯಂತೆ ಪ್ರಥಮ ಮಹಿಳಾ ಜಗದ್ಗುರು ಪೂಜ್ಯ ಶ್ರೀ ಮಾತೆಮಹಾದೇವಿಯವರು 13-1-1996ರಂದು ಕೂಡಲಸಂಗಮದಲ್ಲಿ ಪೀಠಾರೋಹಣ ಮಾಡಿದರು.

        ಬಸವತತ್ವ ಪ್ರಚಾರವನ್ನು ಮಾಡುತ್ತಿರುವ ಮಾತೆ ಮಹಾದೇವಿಯವರು 1988 ರಿಂದ ಇಂದಿನವರೆಗೆ ಪ್ರತಿವರ್ಷ ಜನೀವರಿ 11 ರಿಂದ 15ರ ವರೆಗೆ ಶರಣ ಮೇಳವನ್ನು ಮಾಡುತ್ತಿರುವರು. ಈ ಕಾರ್ಯಕ್ರಮದಲ್ಲಿ ರಾಜ್ಯದ, ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಬಸವ ಭಕ್ತರು ಬರುವರು.

       ಪೂಜ್ಯ ಮಾತೆಮಹಾದೇವಿಯವರು ಕೂಡಲಸಂಗಮದ ಬಸವ ಧರ್ಮಪೀಠದಲ್ಲಿ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಸರ್ವಜÐ ಶರಣಧಾಮ, ಅಕ್ಕಮಹಾದೇವಿ ಶರಣಧಾಮ ಎಂಬ ಪ್ರವಾಸಿಗರ ವಿಶ್ರಾಂತಿ ತಾಣ ನಿರ್ಮಿಸಿರುವರು.

         12ನೇ ಶತಮಾನದ ಶಿವಶರಣರ ಮೂರ್ತಿಗಳನ್ನು ನಿರ್ಮಿಸಿ, ಅವರ ವಚನ ಹಾಗೂ ಸಾಧನೆಯನ್ನು ಬಂದ ಭಕ್ತರಿಗೆ ಪರಿಚಯ ಮಾಡುವ ಕಾರ್ಯ ನಡೆದಿದೆ. ಅದೇ ರೀತಿ ಇಲ್ಲಿಯ ಪರಿಸರ ಹುಲ್ಲು ಹಾಸಿಗೆಯ ಪ್ರದೇಶ ಬಂದ ಭಕ್ತರಿಗೆ ಕಾಮಧೇನುವಾಗಿದೆ.

12. ಅತಿಥಿ ಗೃಹ

          ಅತಿಥಿ ದೇವೋಭವ ಎನ್ನುವಂತೆ ಕೂಡಲಸಂಗಮಕ್ಕೆ ದಿನಾಲು ಬರುವ ಭಕ್ತರನ್ನು ಸ್ವಾಗತಿಸುತ್ತಾ ಇರುವುದು ಸತ್ಯ ಆ ಭಕ್ತರು ಮತ್ತು ವಿಶೇಷ ಆಹ್ವಾನಿತರೂ ವಿಶ್ರಾಂತಿ ಪಡೆಯಲು ಅತಿಥಿ ಗೃಹವನ್ನು 30ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

13. ಸರಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ

       ಇಂದಿನ 21 ನೇ ಶತಮಾನಕ್ಕೆ ನಾವು ಸಮರ್ಥರಾಗಲು ಬೇಕಾಗುವ ತೀವ್ರವಾದ ಜಾÐನ ಮತ್ತು ಕೌಶಲ್ಯಗಳನ್ನು ವೃದ್ದಿಸಿಕೊಳ್ಳಲು ಇಂತಹ ತರಬೇತಿ ಕೇಂದ್ರಗಳು ಅವಶ್ಯ ಮತ್ತು ಅನಿವಾರ್ಯ.

ದಿ. ಶ್ರೀ ಜೆ.ಎಚ್. ಪಟೇಲ್ ಮಾನ್ಯ ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ

ಭಾರತದಲ್ಲಿಯ ಯುವ ಶಕ್ತಿಯಲ್ಲಿ ಉದ್ದೇಶಿತ ತಂತ್ರಜಾÐನ ಮತ್ತು ಕೌಶಲ್ಯಗಳ ವರ್ಧನೆಗೆ 1972 ರಲ್ಲಿ ಡೆನ್ಮಾರ್ಕ್ ಸರ್ಕಾರದ ಸಹಯೋಗದೊಂದಿಗೆ ಜಿ.ಟಿ.ಟಿ.ಸಿಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ದೇಶದ ಭೌತಿಕ ಸಂಪನ್ಮೂಲಗಳ ಸದುಪÀಯೋಕ್ಕಾಗಿ ಮತ್ತು ಸದ್ಬಳಿಕೆಗಾಗಿ ಇಂದು ಮೈಸೂರು, ಹಾಸನ, ಗುಲ್ಬರ್ಗಾ, ಬೆಳಗಾಂವ, ದಾಂಡೇಲಿ, ಹೊಸಪೇಟೆ, ಹರಿಹರ, ಮದ್ದೂರು ಹಾಗೂ ಕೂಡಲಸಂಗಮದಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಕೂಡಲಸಂಗಮದಲ್ಲಿ ಕೇಂದ್ರವು 1999 ರಲ್ಲಿ ಪ್ರಾರಂಭವಾಗಿ ಈ ಭಾಗದ ನಿರುದ್ಯೋಗಿ ಯುವಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಆಶಾಕಿರಣವನ್ನು ಮೂಡಿಸಿವೆ.

 14. ಬಸವ ಅಂತಾರಾಷ್ಠ್ರೀಯ ಕೇಂದ್ರkudalsangam Basava International Centre

           ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರ ತಾತ್ವಿಕ ವಿಚಾರಗಳನ್ನು ನಿರೂಪಿಸುವ ಉನ್ನತ ಮಟ್ಟದ ಕೇಂದ್ರ ಇದಾಗಿದೆ. ವಿಶ್ವದ ಪ್ರಥಮ ಸಮಾಜವಾದಿ ಚಿಂತಕ ಬಸವಣ್ಣನ ಕನಸಿನ ಸಮಾಜದ ತಾತ್ವಿಕ ಆಶಯಗಳನ್ನು ಆಚರಣೆ ತರುವ ಯತ್ನದ ದರ್ಶನ ಇಲ್ಲಿದೆ. ಇದರಲ್ಲಿ ಬಸವಣ್ಣ ಹಾಗೂ ಆತನ ಸಮಕಾಲೀನ ಶರಣರ ಬದುಕು ಮತ್ತು ಸಂದೇಶಗಳನ್ನು ಬಿಂಬಿಸುª ದೃಶ್ಯ. ಶ್ರವಣ ಮಾದ್ಯಮಗಳನ್ನು ಅಳವಡಿಸುವ ಯೋಜನೆ ಇದೆ. ಜೊತೆಗೆ 12ನೇ ಶತಮಾನದ ಕ್ರಾಂತಿಯಲ್ಲಿ ಬಸವಣ್ಣನೊಂದಿಗೆ ಕೈ ಜೋಡಿಸಿದ ಭಾರತದ ವಿವಿಧ ಭಾಗಗಳಿಂದ ಬಂದ ಶರಣರ ಮೂಲ ನೆಲೆಗಳನ್ನು ಸೂಚಿಸುವ ನಕಾಶೆಯನ್ನು ರೂಪಿಸುವ ಉದ್ದೇಶವಿದೆ. ಬಸವಣ್ಣನೇ ಪ್ರಮುಖ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಮಕಾಲೀನ ಎಲ್ಲಾ ವರ್ಗದ ಶರಣ-ಶರಣೆಯರ ಕಾಯಕ, ದಾಸೋಹ, ಅನುಭಾವ ಸಿದ್ದಾಂತ, ಶಿವಯೋಗದರ್ಶನ ಮುಂತಾದ ಪ್ರಮುಖ ವಿಷಯಗಳನ್ನಾಧರಿಸಿ ಜನಸಾಮಾನ್ಯರಿಂದ ಹಿಡಿದು ಎಲ್ಲಾ ವರ್ಗದ ಜನತೆಗೆ ವೇದ್ಯವಾಗುವಂತೆ ಮ್ಯೂಸಿಯಂನ್ನು ನಿರ್ಮಾಣ ಮಾಡುವ ಉದ್ದೇಶವಿದೆ. ಅಷ್ಟಾವರಣ, ಷಟ್‍ಸ್ಥಲಗಳನ್ನು, ಶಿಲ್ಪ ಹಾಗೂ ಚಿತ್ರಗಳನ್ನು ಪ್ರಾತ್ಯಕ್ಷಿತ ಕಲೆಯ ಮೂಲಕ ಬಿಂಬಿಸುವ ಯತ್ನ ಇಲ್ಲಿ ನಡೆಯುತ್ತದೆ.kudalsangam river

       ಈ ಕಟ್ಟಡದ ಒಟ್ಟು ಎತ್ತರ 210 ಅಡಿಗಳು, ಗೋಪುರದ ಎತ್ತರ 75 ಅಡಿ. ನೆಲ ಅಂತಸ್ತಿನ ಒಟ್ಟು ವಿಸ್ತೀರ್ಣ 10.750 ಚ.ಅಡಿ. ಈ ಕಟ್ಟಡದ ಎಲ್ಲ ಅಂತಸ್ತುಗಳ ಒಟ್ಟು ವಿಸ್ತೀರ್ಣ 61.050 ಚ.ಅಡಿಗಳು. ಇಷ್ಟು ಸ್ಥಳ ಪ್ರದರ್ಶನಕ್ಕೆ ಲಭ್ಯವಿದೆ. ಈ ಕಟ್ಟಡದ ಎಲ್ಲ ಅಂತಸ್ತುಗಳ ಮೇಲೆ ಹೋದಂತೆ ಅಗಲದಲ್ಲಿ ಸುಮಾರು 8 ಅಡಿ ಪ್ರತಿಯೊಂದು ಅಂತಸ್ತಿನ ಸುತ್ತಳತೆಯಲ್ಲಿ ಕಡಿಮೆಯಾಗುತ್ತಾ ಹೋಗುತ್ತವೆ. ನೆಲ ಅಂತಸ್ತಿನ 4 ಭುಜಗಳಲ್ಲಿ ಒಂದು ಭುಜದ ಉದ್ದ 63 ಅಡಿ ಇದೆ. ಮೇಲಕ್ಕೆ ಹೋದಂತೆ ಭುಜಗಳ ಉದ್ದ ಕಡಿಮೆಯಾಗುತ್ತದೆ. ಆರು ಅಂತಸ್ತುಗಳ ಮೇಲಿನ ಗೋಪುರದಲ್ಲಿ ಪ್ರಶಾಂತ ವಾತಾವರಣದಲ್ಲಿ ಧ್ಯಾನಮಂದಿರ ನಿರ್ಮಿಸುವ ಯೋಜನೆ ಇದೆ. ಮೇಲೆ ಏರಲು ವೃತ್ತಾಕಾರದ ಜೋಡಿ ಮೆಟ್ಟಲುಗಳು ಹಾಗೂ ಕ್ಯಾಪ್ಸೊಲ್ ಮಾದರಿಯ ಎರಡು ಲಿಫ್ಟ್‍ಗಳನ್ನು ಅಳವಡಿಸಲಾಗಿದೆ. ಈ ಕಟ್ಟಡದ ಸುತ್ತಲೂ ಸುಂದರ ಉದ್ಯಾನವನವಿದೆ. ಇದರ ನಿರ್ಮಾಣಕ್ಕೆ 15 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.

15. ಪೂಜಾವನ

ಹರಿಹರನು ಬಸವರಾಜದೇವರ ರಗಳೆಯಲ್ಲಿ ಸಂಗಮನಾಥನ ಪೂಜೆಯ ವಿಧಾನವನ್ನು ವರ್ಣಿಸಿದ್ದಾನೆ. ಪೂಜೆಗೆ ಬೇಕಾಗುವ ವಿವಿಧ ಫಲಪುಷ್ಟಗಳ ತವರು ಪೂಜಾರವನ. ಇದು 30 ಎಕರೆ ಪ್ರದೇಶವನ್ನು ವ್ಯಾಪಿಸಿದೆ. ನಾನಾ ನಮೂನೆಯ ಪತ್ರಿ, ಹೂವಿನ ಗಿಡ ಬೆಳೆಸಲಾಗಿದೆ. ಜೊತೆಗೆ ಕದಳಿ, ದಾಳಿಂಬೆ, ಪಾರಿಜಾತ, ಕಾಮಕಸ್ತೂರಿ, ದವನ, ತುಳಸಿ, ದಾಸವಾಳ ಮಲ್ಲಿಗೆ, ಆಕಾಶ ಮಲ್ಲಿಗೆ, ರುದ್ರಾಕ್ಷಿ, ಗುಲಾಬಿ ಮುಂತಾದ ಹೂ ಗಿಡ ಬಳ್ಳಿಗಳಿವೆ. ಇದು ಪ್ರಕೃತಿ ಪ್ರಿಯರ ಮನಸ್ಸಿಗೆ ಮುದನೀಡುತ್ತದೆ. ಇಲ್ಲಿ ದೊಡ್ಡ ಪ್ರಮಾಣದ ನೀರಿನ ತೊಟ್ಟಿ ಇದೆ. ಹಾಗೂ ತೊಟ್ಟಿಯ ಮೇಲೆ ಪ್ಯಾದಾಗೋಲಾ ನಿರ್ಮಿಸಲಾಗಿದೆ. ತೊಟ್ಟಿಯ ನೀರು ಮೂರು ಕಡೆ ಬೀಳುವಾಗ ಸುಂದರ ಜಲಪಾತದ ಚಿತ್ರಣ ಕಟ್ಟಿಕೊಡುತ್ತದೆ. ಇದು ಸಾರ್ವಜನಿಕರಿಗೆ ಆಕರ್ಷಕ ವನಭೋಜನ ತಾಣವಾಗಿದೆ.

16. ಬಸ್ ನಿಲ್ದಾಣ

        ಅಂತಾರಾಷ್ಟ್ರೀಯ ತಾಣವಾದ ಕೂಡಲಸಂಗಮಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ಸರಕಾರ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಬಸ್ಸ್ ನಿಲ್ದಾಣ ನಿರ್ಮಿಸಿದ್ದಾರೆ.

17. ದೋಣಿ ವಿಹಾರkudalsangam holy river

ಕೃಷ್ಣ ಮಲಪ್ರಭೆಯರು ಸಮ್ಮಿಲನವಾದ ನಾಡಿನಲ್ಲಿ ದೋಣಿ ವಿಹಾರ ಮಾಡುವುದು ಭಾಗ್ಯವೇ ಸರಿ. ಬಂದ ಪ್ರವಾಸಿಗರು ವಿಶಾಲವಾದ ನದಿಯಲ್ಲಿ ದೋಣಿ ವಿಹಾರ ಮಾಡಿ ಆನಂದ ಪಡೆಯುವರು. ದೋಣಿ ವಿಹಾರದಲ್ಲಿ ಸಂಚರಿಸುವಾಗ ಐಕ್ಯ ಮಂಟಪವನ್ನು ನೋಡುವ ದೃಶ್ಯ ವಿಸ್ಮಯವನ್ನುಂಟು ಮಾಡುತ್ತದೆ.

18.  ಮಹಾದ್ವಾರ

   12ನೇ ಶತಮಾನದ ಶಿವಶರಣರ ಮತ್ತು ಅಣ್ಣನ ನಾಡಿಗೆ ಬರುವ ಭಕ್ತರನ್ನು ಸ್ವಾಗತಿಸಲು ಕೂಡಲಸಂಗಮ ಅಭಿವೃದ್ದಿ ಮಂಡಳಿಯವರು 1 ಕೋಟಿ ರೂ. ವೆಚ್ಚದಲ್ಲಿ ಮಹಾದ್ವಾರವನ್ನು ನಿರ್ಮಾಣ ಮಾಡಿರುವರು.

    ಕೂಡಲ ಸಂಗನ ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯಾ ಎಂಬ ಉಕ್ತಿಯೊಂದಿಗೆ ಸ್ವಾಗತಿಸುವ ಮಹಾದ್ವಾರ ಚಾಲುಕ್ಯ ವಾಸ್ತು ಶಿಲ್ಪ ಶೈಲಿಯನ್ನು ಹೊಂದಿದೆ. ಈ ಮಹಾದ್ವಾರಕ್ಕೆ 26 ಚಿತ್ತಾಕರ್ಷಕ ಕಂಬಗಳಿಂದ ಆವೃತವಾಗಿದೆ. ಮಹಾದ್ವಾರದ ಬೇಸ್‍ಮೆಂಟ್‍ನಲ್ಲಿ ಐದು ಸಾಲುಗಳ ಕೆತ್ತನೆ ಇದೆ. ಈ ಸಾಲುಗಳಲ್ಲಿ ಬಿಲ್ವಪತ್ರಿ ಸ್ವಸ್ತಿಕ, ಓಂ ಷಟಸ್ಥಲ್ ಹಾಗೂ ಶಿವಲಿಂಗಗಳಿವೆ. ಒಟ್ಟು 15 ಕಳಸಗಳ ಸುಂದರ ಮೇಲ್ಛಾವಣಿ ಇದೆ. ದಕ್ಷಿಣ ಹಾಗೂ ಉತ್ತರ ದಿಕ್ಕುಗಳಿಗೆ ಮುಖ ಮಾಡಿದ ಎರಡು ನಂದಿಗಳಿವೆ. 100 ಅಡಿ ಅಗಲದ ಈ ಮಹಾದ್ವಾರ 100 ಅಡಿ ಎತ್ತರ ಇದೆ. ಪೂರ್ವ-ಪಶ್ಚಿಮ ದಿಕ್ಕುಗಳಿಂದ ನೋಡಿದರೂ ಮಹಾದ್ವಾರ ನೋಟ ಒಂದೇ ರೀತಿಯಾಗಿದೆ. ಮಹಾದ್ವಾರದಿಂದ ದೇವಸ್ಥಾನದವರೆಗೆ ಜೋಡಿ ರಸ್ತೆ ಇದ್ದು ಎರಡು ಬದಿಯಲ್ಲಿಯ ಮರಗಳ ಸಾಲು ಬರುವ ಪ್ರವಾಸಿಗರಿಗೆ ಆನಂದವನ್ನು ಉಂಟುಮಾಡುತ್ತದೆ.kudalsangam Art gallery gate kudalsangam Sangameshwar Temple interoirkudalsangam Art gallery interior kudalsangam J H Patel Circle kudalsangam Art gallery kudalsangam Art gallery gate

ಸುಕ್ಷೇತ್ರ ಕೂಡಲಸಂಗಮದಿಂದ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ನಡುವಿನ ಅಂತರ

ಐಹೊಳೆ  – 35 ಕಿ.ಮೀ,  ಪಟ್ಟದಕಲ್ಲು (ದಕ್ಷಿಣ ಕಾಶಿ) – 50 ಕಿ.ಮೀ, ಶ್ರೀ ಯಲಗೂರೇಶ್ವರ ದೇವಸ್ಥಾನ        – 36 ಕಿ.ಮೀ,

ಆಲಮಟ್ಟಿ ಡ್ಯಾಮಸೈಟ್ – 30 ಕಿ.ಮೀ, ಬಾದಾಮಿ ಗುಹೆಗಳು – 65 ಕಿ.ಮೀ, ಬಾಗಲಕೋಟ        – 48 ಕಿ.ಮೀ, ವಿಜಾಪುರ – 80 ಕಿ.ಮೀ

ಸುಕ್ಷೇತ್ರ ಕೂಡಲಸಂಗಮಕ್ಕೆ ಬೆಂಗಳೂರು ಹಾಗೂ

kudalsangam Sangameshwar Temple Back view

ರಾಜ್ಯದ ಅನೇಕಸ್ಥಳಗಳಿಂದ ನೇರ ಬಸ್ ಸೌಲಭ್ಯ ಇರುವುದು. ಹುನಗುಂದ, ಬಾಗಲಕೋಟೆಯಿಂದ ಸಿಟಿ ಬಸ್‍ಗಳ ಸೌಲಭ್ಯವಿದೆ.

ಗ್ರಂಥ  ಋಣ :

ಅಂತಾರಾಷ್ಟ್ರೀಯ ಪ್ರವಾಸಿ ತಾಣ ಕೂಡಲಸಂಗಮ

Comments
2 Responses to “ಕೂಡಲಸಂಗಮ”
  1. admin says:

    test comment 2

  2. T M Hanamagoudra says:

    Explain also new projec of kudalasa gam like t axaradham model. Already lost budget projects sanction ed. DPR also made only tensor balance.

Leave A Comment