ಗುರುಬಸವಾರ್ಯ ಮಠಮಾಸ್ತರರು

Math Gurujiಹುನಗುಂದದ ವಿಜಯ ಮಹಾಂತೇಶ ಹೈಸ್ಕೂಲಿನಲ್ಲಿ ಒಮ್ಮೆ ವಿದ್ಯಾರ್ಥಿಗಳ, ಶಿಕ್ಷಕರ ಸಾಮೂಹಿಕ ಪ್ರಾರ್ಥನೆ ನಡೆದಿತ್ತು. ಶಾಲೆಯ ಮುಖ್ಯದ್ವಾರದಲ್ಲಿ ಒಂದು ಪೋಲೀಸ್ ಜೀಪು ಬಂದು ನಿಂತಿತು. ಅದರೊಳಗಿನ ಒಬ್ಬ ಪೋಲಿಸ್ ಅಧಿಕಾರಿ ಕೆಳಗಿಳಿದರು. ಪ್ರಾರ್ಥನೆಗೆ ಭಂಗಬರಬಾರದೆಂದು ಅಲ್ಲಿಯೇ ನಿಂತರು. ಪ್ರಾರ್ಥನೆ ಮುಗಿಯುತ್ತಲೇ ಆ ಪೊಲೀಸ ಅಧಿಕಾರಿ ವೇದಿಕೆಯ ಕಡೆಗೆ ಬಂದರು. ಅಲ್ಲಿ ಕುಳಿತಿದ್ದ ಹಿರಿಯ ರೋರ್ವರನ್ನು ಪಾದಮುಟ್ಟಿ ನಮಸ್ಕರಿಸಿದರು. ಅವರು ಭಾವಾವೇಶಕ್ಕೊಳಗಾಗಿದ್ದರು. ಅವರ ಕಣ್ಣುಗಳಲ್ಲಿ ಆನಂದಭಾಷ್ಪಗಳು ಕಾಣುತ್ತಿದ್ದವು. ಅವರು ಹುನಗುಂದ ಹೈಸ್ಕೂಲದ ಹಿಂದಿನ ವಿದ್ಯಾರ್ಥಿ, ಈಗ ಮಹಾರಾಷ್ಟ್ರದಲ್ಲಿ ಪೊಲೀಸ ಅಧಿಕಾರಿ, ತಾವು ಕಲಿಯುತ್ತಿದ್ದ ಹೈಸ್ಕೂಲಿನ ಜಿನ್ನಿಂಗ್ ಫ್ಯಾಕ್ಟರಿಯ ಹಳೆಯ ಕಟ್ಟಡವನ್ನು ನೆನಪಿಸಿಕೊಂಡರು. ಈ ಸುಂದರವಾದ ಹೊಸಕಟ್ಟಡ ಕಂಡು ಅಭಿಮಾನಪಟ್ಟರು.

ಅವರು ನಮಸ್ಕರಿಸಿದ್ದು ಬೇರೆ ಯಾರನ್ನೂ ಆಗಿರದೆ ಇದೇ ಶಾಲೆಯಲ್ಲಿ ತಮಗೆ ಕಲಿಸಿದ ಗುರುಗಳನ್ನು ಅವರೇ ‘ಪೂಜ್ಯ ಮಠ ಮಾಸ್ತರರು’. ಇಂಥ ಘಟನೆಗಳು ಆಗಾಗ ಜರುಗುತ್ತಿದ್ದವು. ದುಂಡಗಿನ ಮೈಕಟ್ಟಿನ, ಸ್ವಲ್ಪ ಕುಳ್ಳಗಿನ ನಿಲುವಿನ, ಬಾಗಿದ ಬೆನ್ನಿನ, ಕಪ್ಪು ಮೈಬಣ್ಣದ, ಬಾಲಬ್ರಹ್ಮಚಾರಿಗಳಾದ, ಖಾದಿಧೋತರ ಉಟ್ಟು, ಖಾದಿ ಬಗಲಗಸಿ ಅಂಗಿ ತೊಟ್ಟು ತಲೆಗೆ ಖಾದಿರುಮಾಲು ಸುತ್ತಿದ, ಹಣೆಯ ಮೇಲೆ ಸದಾ  ವಿಭೂತಿಧರಿಸಿದ, ನೋಡಿದೊಡನೆ ಗೌರವ ಭಕ್ತಿಭಾವ ಮೂಡಿಸುವ ಅಪರೂಪದ ವ್ಯಕ್ತಿತ್ವ ಪೂಜ್ಯ ಶ್ರೀ ಗುರುಬಸವಾರ್ಯ ಮಠ ಮಾಸ್ತರದಾಗಿತ್ತು.

ಶಿಕ್ಷಕರಾಗಿ

ಅಂದಿನ ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಪಾಸಾಗಿ ಸರಕಾರಿ ನೌಕರಿಗಾಗಿ ಆಸೆಪಡದೆ ಸ್ಥಳೀಯ ಎ.ವಿ. ಸ್ಕೂಲ ಮುಂದೆ ವಿ.ಎಮ್. ಹೈಸ್ಕೂಲ ಆಗಿ ಮೇಲ್ದರ್ಜೆ ಪಡೆದ ಶಾಲೆಯಲ್ಲಿ ಶಿಕ್ಷಕರಾದರು. ತಾವು ನಿವೃತ್ತರಾಗುವವರೆಗೆ ಅಲ್ಲಿಯೇ ಸೇವೆಸಲ್ಲಿಸಿದರು.

ಅವರು ಬೋಧಿಸುವ ವಿಷಯ ಇಂಗ್ಲೀಷ. ನೆಸ್‍ಫೀಲ್ಡ ವ್ಯಾಕರಣ ಇಂಗ್ಲೀಷನಲ್ಲಿ ಪ್ರಸಿದ್ಧ ಹಾಗೂ ಪ್ರಮಾಣಿಕ ಪುಸ್ತಕ. ಅದನ್ನು ಅವರು ಚೆನ್ನಾಗಿ ಓದಿಕೊಂಡು ಇಂಗ್ಲೀಷ ವ್ಯಾಕರಣದ ವಿವಿಧ ಅಂಶಗಳಲ್ಲಿ ಪರಿಣತಿ ಸಾಧಿಸಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲೀಷ ವ್ಯಾಕರಣ ಬೋಧಿಸಿ ಗಟ್ಟಿತಳಹದಿ ಹಾಕುತ್ತಿದ್ದರು.

ಪೂಜ್ಯ ಮಠ ಮಾಸ್ತರರು ತಾವು ನಿವೃತ್ತರಾಗುವವರೆಗೂ ಮೂರಕ್ಕಿಂತಲೂ ಹೆಚ್ಚು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಹೀಗಾಗಿ ಅವರ ಶಿಷ್ಯರು ನೂರಲ್ಲ, ನೂರಾರಲ್ಲ, ಸಾವಿರಾರು ಅಪಾರ ಶಿಷ್ಯಕೋಟಿ. ಅವರಲ್ಲಿ ಕೆಲವರಂತೂ ತಾವೂ ಎಲ್ಲೇ ಇದ್ದರೂ, ವರ್ಷದಲ್ಲಿ ಒಮ್ಮೆಯಾದರೂ ಬಂದು ಪೂಜ್ಯ ಗುರುಗಳನ್ನು ಕಂಡು ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ರು. ಬಿ.ಎಸ್. ಗಣಾಚಾರಿ, ಬಿ.ಎಸ್. ಯಾಳವಾರ, ಬೆಳ್ಳಾಳ, ಡಾ. ಬಲಕುಂದಿ ಹೀಗೆ ಹಲವರು. ಅಂಥವರ ಹೆಸರಿನ ಯಾದಿ ಬಹುದೀರ್ಘವಾಗಿತ್ತು.

ಉಚಿತ ಪ್ರಸಾದನಿಲಯದ ಮೇಲುಸ್ತುವಾರಿ

ಸೇವೆಯಲ್ಲಿದ್ದಾಗಲೇ ಉಚಿತ ಪ್ರಸಾದನಿಲಯದ ಮೇಲುಸ್ತುವಾರಿ ಅವರದೇ ಆಗಿತ್ತು. ನಿವೃತ್ತರಾದ ಬಳಿಕ ಲಿಂಗೈಕ್ಯರಾಗುವ ವರೆಗೆ ಉಚಿತ ಪ್ರಸಾದನಿಲಯದ, ಅಲ್ಲಿಯ ವಿದ್ಯಾರ್ಥಿಗಳ ಕಲ್ಯಾಣದ ಸಂಪೂರ್ಣ ಹೊಣೆಗಾರಿಕೆಯನ್ನು ಸಂಸ್ಥೆಯವರು ಅವರಿಗೆ ವಿದ್ಯಾರ್ಥಿಗಳ, ಶಿಕ್ಷಕರ ವರ್ತನೆಯನ್ನು ಗಮನಿಸುವದು, ಅವಶ್ಯವೆನಿಸಿದಲ್ಲಿ ಸೂಕ್ತ ಸಲಹೆ ಸೂಚನೆಯನ್ನೀಯುವದು ಅವರ ನಿತ್ಯದ ಪರಿಪಾಠವಾಗಿತ್ತು. ಹೈಸ್ಕೂಲು ಹಾಗೂ ಪ್ರಸಾದನಿಲಯಗಳ ಬಗೆಗೆ ವಿಶೇಷ ಕಾಳಜಿ ವಹಿಸಿದರು. ಅಲ್ಲಿ ಒಳ್ಳೆಯ ವಾತಾವರಣ ಬೆಳೆದು ವಿದ್ಯಾರ್ಥಿಗಳು ಆದರ್ಶ ಗುಣಗಳನ್ನಳವಡಿಸಿಕೊಳ್ಳಬೇಕೆಂದು ಬಯಸಿದರು. ಶಾಲೆಗೂ ಪ್ರಸಾದನಿಲಯಕ್ಕೂ ಆಧಾರಸ್ತಂಭರೆನಿಸಿದ ಪೂಜ್ಯ ಮಠ ಮಾಸ್ತರರನ್ನು ಕುರಿತು.

ಮನದಲಿ ನೆನೆಯುವ ಮಠ ಮಾಸ್ತರರ,

ಕರ್ಮಯೋಗಿ ಶ್ರೀಗುರುಬಸವಾರ್ಯರ

ಪ್ರಸಾದನಿಲಯಕೆ ಅವರುಸಿರ

ತ್ಯಾಗಭಕ್ತಿ ಸಂಯಮವೀರ

ನಮ್ಮೀ ಶಾಲೆಗೆ ಆಧಾರ |

ಎಂದು ಆ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಹುಟ್ಟುಹಬ್ಬದಂದು ಹಾಡುತ್ತಿದ್ದರು.

ಮಠಮಾಸ್ತರರ ಜೋಳಿಗೆ

ಪ್ರತಿವರ್ಷ ಶಾಲೆಯ ವರ್ಗಗಳು ಪ್ರಾರಂಭವಾಗುವ ಮೊದಲು ಜೂನ್ ತಿಂಗಳಲ್ಲಿ ಒಂದು ದಿನ ಪ್ರಾರ್ಥನೆಯ ಸಮಯದಲ್ಲಿ ಪೂಜ್ಯ ಮಠ ಮಾಸ್ತರರು ಶಾಲೆಗೆ ಬರುತ್ತಿದ್ದರು. ಬರುವಾಗ ಒಂದು ಜೋಳಿಗೆ ತರುತ್ತಿದ್ದರು. ಪ್ರಾರ್ಥನೆಯ ತರುವಾಯ ಅವರು ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ದುಶ್ಚಟಗಳನ್ನು ಕುರಿತು ಬರೆದ ಚೀಟಿಗಳನ್ನು ಜೋಳಿಗೆಯಲ್ಲಿ ಹಾಕಲೂ ಕೇಳಿಕೊಳ್ಳುತ್ತಿದ್ದರು. ಈ ಸೂಚನೆಯನ್ನು ಒಂದೆರಡು ದಿನ ಮೊದಲೇ ಕೊಟ್ಟಿರುತ್ತಿದ್ದರು. ಆದ್ದರಿಂದ ವಿದ್ಯಾರ್ಥಿಗಳು ತಾವು ಬರೆದುಕೊಂಡು ಬಂದ ಚೀಟಿಗಳನ್ನು ಮಠಮಾಸ್ತರರ ಜೋಳಿಗೆಯಲ್ಲಿ ಹಾಕುತ್ತಿದ್ದರು. ಅವುಗಳನ್ನು ತಗೆದು ಕೊಂಡು ಹೋಗಿ ವಿಂಗಡಿಸಿ ಪಾಳಿಯ ಪ್ರಕಾರ ಪ್ರತಿನಿತ್ಯ ಕೆಲವು ವಿದ್ಯಾರ್ಥಿಗಳನ್ನು ಕರೆದು ವಿಚಾರಿಸುತ್ತಿದ್ದರು. ಸಮಸ್ಯೆಯನ್ನರಿತುಕೊಂಡು ಸಹಾನುಭೂತಿ ಹಾಗೂ ವಿಶ್ವಾಸದಿಂದ ಪರಿಹಾರ ಸೂಚಿಸುತ್ತಿದ್ದರು. ಈ ವಿಷಯ ಸಂಬಂಧಿಸಿದ ವಿದ್ಯಾರ್ಥಿಗಳೂ ಹಾಗೂ ಮಠಮಾಸ್ತರರಿಗೂ ಮಾತ್ರ ತಿಳಿದಿರುತ್ತಿತ್ತು. ವಿದ್ಯಾರ್ಥಿಗಳನ್ನು ದುಶ್ಚಟಗಳಿಂದ ವಿಮುಕ್ತಗೊಳಿಸಿ, ಅವರು ಸನ್ಮಾರ್ಗದತ್ತ ಬರುವಂತೆ ಸೂಕ್ತಮಾರ್ಗದರ್ಶನ ಮಾಡುತ್ತಿದ್ದರು. ಇದೊಂದು ಅತಿ ಮಹತ್ವದ ಹಾಗೂ ಅಪರೂಪದ ಪುಣ್ಯದ ಕಾರ್ಯವಾಗಿತ್ತು. ದಾರಿತಪ್ಪುವ ಇಲ್ಲವೆ ಅನಾರೋಗ್ಯಕ್ಕೆ ಗುರಿಯಾಗಬಹುದಾಗಿದ್ದ ಮಕ್ಕಳ ಉದ್ಧಾರದ ನೈತಿಕ ಕಾರ್ಯವಿದಾಗಿತ್ತು. ಮಠಮಾಸ್ತರರ ಈ ಜೋಳಿಗೆ ಇಂದು ಪೂಜ್ಯ ಶ್ರೀ ಮ.ನಿ.ಪ್ರ. ಮಾಹಾಂತಜ್ಜನವರ ‘ಮಹಾಂತಜೋಳಿಗೆ’ಯ ಹಾಗೂ ಹಿಂದೆ ಆಗಿಹೋದ ‘ಬೀಡಿ ಬಿಡಿಸುವ ಸಾಹೇಬ’ ರೆಂದೇ ಪ್ರಸಿದ್ಧಿಪಡೆದಿದ್ದ ಶರಣ ಹರ್ಡೇಕರ ಮಂಜಪ್ಪನವರ ದುಶ್ಚಟ ವಿಮುಕ್ತಿ ಸತ್ರದ ನೆನಪು ತರುತ್ತದೆ. ವಿದ್ಯಾರ್ಥಿಗಳ ಮೇಲೆ ಪೂಜ್ಯ ಮಠ ಮಾಸ್ತರರ ವಿಶ್ವಾಸವಿತ್ತು, ವಿದ್ಯಾರ್ಥಿಗಳಲ್ಲಿ ಮಠಮಾಸ್ತರರ ಬಗೆಗೆ ಎಲ್ಲಿಲ್ಲದ ಗೌರವವಿತ್ತು.

ಪ್ರಸಾದನಿಲಯಕ್ಕೆ ಧನ-ಧಾನ್ಯ

ಪೂಜ್ಯ ಮಠ ಮಾಸ್ತರರಿಗೆ ಶ್ರೀ ವಿಜಯಮಹಾಂತೇಶ ನಾಮಸ್ಮರಣೆ ಪಂಚಪ್ರಾಣವಾಗಿತ್ತು. ಕುಳಿತಾಗ, ನಿಂತಾಗ ಸದಾ ಶ್ರೀ ವಿಜಯಮಹಾಂತೇಶಾ, ವಿಜಯ ಮಹಾಂತೇಶಾ ಎಂದು ಸ್ಮರಿಸುತ್ತಿದ್ದರು. ಅವರ ಉಸಿರು ವಿಜಯ ಮಹಾಂತೇಶವಾಗಿತ್ತು. ಅವರ ಜೀವನಾಡಿ ಆ ದಿವ್ಯಾನಾಮದಿಂದ ಮಿಡಿಯುತ್ತಿತ್ತು. ಪ್ರಸಾದನಿಲಯದ ಆವರಣವು ಆ ಪುಣ್ಯನಾಮ ತರಂಗಗಳಿಂದ ಆವೃತವಾಗಿತ್ತು.

ಉಚಿತ ಪ್ರಸಾದನಿಲಯದ ವಿದ್ಯಾರ್ಥಿಗಳ ಸಂಖ್ಯೆ ಮರುವರುಷ ಹೆಚ್ಚಾಗುತ್ತ ಹೋಯಿತು. ಇಲ್ಲಿಯ ವ್ಯವಸ್ಥೆಯನ್ನರಿತ ಸಿರಿವಂತರೂ ತಮ್ಮ ಮಕ್ಕಳು ಪ್ರಸಾದನಿಲಯದಲ್ಲಿಯೇ ಇರಲೆಂದು ಬಯಸಿದರು. ಪಾಲಕರಿಂದ, ಹುನಗುಂದ ತಾಲೂಕಿನ ವಿದ್ಯಾಪ್ರೇಮಿಗಳಿಂದ ಧನ – ಧಾನ್ಯ ರೂಪದಲ್ಲಿ ದೇಣಿಗೆ ಹರಿದು ಬರಹತ್ತಿತು. ಮಠಮಾಸ್ತರರಾಗಲಿ, ಸಂಘದ ಅಥವಾ ಪ್ರಸಾದನಿಲಯದ ಪ್ರತಿನಿಧಿಯಾಗಲಿ ಹಳ್ಳಿಗಳಿಗೆ ಹೋಗಿ, ಅಲ್ಲಿಯ ಜನರೇ ಸ್ವಯಂಸ್ಪೂರ್ತಿಯಿಂದ ಹುನಗುಂದದ ಬೋರ್ಡಿಂಗಕ್ಕಾಗಿ ಸಂಗ್ರಹಿಸಿಟ್ಟ ಧಾನ್ಯವನ್ನು, ಅವರೇ ಕೊಟ್ಟು ಚಕ್ಕಡಿಯಲ್ಲಿ ಹೇರಿಕೊಂಡು ಬರುತ್ತಿದ್ದರು. ಹೀಗೆ ಸಂಗ್ರಹಿತ ಧಾನ್ಯ ಇಡೀವರ್ಷ ಬೇಕಾದುದಕ್ಕಿಂತಲೂ ಹೆಚ್ಚಾಗಿ ಉಳಿಯುತ್ತಿತ್ತು. ಅದನ್ನು ಮಾರಿಬಂದ ಹಣವನ್ನು ವಿದ್ಯಾರ್ಥಿಗಳ ಸೌಕರ್ಯಗಳಿಗಾಗಿ ಬಳಸಲಾಗುತ್ತಿತ್ತು.

ನೈತಿಕತೆಗೆ ಗಮನ

ಮಠ ಮಾಸ್ತರರು ಪ್ರಸಾದನಿಲಯದಲ್ಲಿಯ ವಿದ್ಯಾರ್ಥಿಗಳು ನೀತಿವಂತರಾಗಿಬೇಕೆಂದು ಬಯಸಿದರು. ಪ್ರಸಾದ ಸ್ವೀಕರಿಸುವ ಮೊದಲು ಪ್ರಾರ್ಥನೆ, ಅನಂತರ ಪ್ರತಿಯೊಬ್ಬರೂ ಒಂದೊಂದು ಶರಣರ ವಚನವನ್ನು ಬಾಯಿಪಾಠಹೇಳಿ ಅರ್ಥವನ್ನು ವಿವರಿಸಬೇಕೆಂದು ಕಡ್ಡಾಯಗೊಳಿಸಿದ್ದರು. ಹೀಗಾಗಿ ವಿದ್ಯಾರ್ಥಿಗಳು ವಚನಗಳನ್ನು ಕಂಠಪಾಠ ಮಾಡುವದರ ಜೊತೆಗೆ ನೈತಿಕ, ಸಾಹಿತ್ಯಿಕ ಹಾಗೂ ಧಾರ್ಮಿಕ ವಿಚಾರಗಳನ್ನರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ವಿಜಯಮಹಾಂತೇಶ ಉಚಿತ ಪ್ರಸಾದನಿಲಯದಲ್ಲಿದ್ದು ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಅಲ್ಲಿಯ ಹೈಸ್ಕೂಲ ಶಿಕ್ಷಣ ಮುಗಿಸಿ ಹೋಗುವಾಗ ಪ್ರತಿಯೊಬ್ಬನೂ ನೂರಾರು ವಚನಗಳನ್ನು ಬಾಯಿಪಾಠಹೇಳಲು ಸಮರ್ಥನಾಗುತ್ತಿದ್ದನು.

ಶಾಲೆಯಲ್ಲಿ ಪ್ರಾರ್ಥನೆ, ಪ್ರಸಾದನಿಲಯದಲ್ಲಿ ಪ್ರಾರ್ಥನೆ – ವಚನಗಳ ಪಠಣ ಹೀಗಾಗಿ ಅಲ್ಲಿಯ ವಾತಾವರಣವೇ ಹಿತಕರವೂ ಪ್ರಶಾಂತ ಹಾಗೂ ಪವಿತ್ರವೂ ಆಗಿರುತ್ತಿತ್ತು. ನೀತಿವಂತರೂ ವಿನಯಶೀಲರೂ ವಿಧೇಯರೂ ಆದ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ನಾವು ಕಲಿಸುವದಕ್ಕಿಂತಲೂ ಅವರಿಂದ ಕಲಿಯುವುದೇ ಬಹಳಿತ್ತು.

ಹುನಗುಂದದ ಬೋರ್ಡಿಂಗದಲ್ಲಿದ್ದು ಕಲಿತ ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸಕ್ಕಾಗಿ ಧಾರವಾಡಕ್ಕೆ ಹೋಗುತ್ತಿದ್ದರು. ಆಗ ಮಠ ಮಾಸ್ತರರು ಒಂದು ಪತ್ರಕೊಟ್ಟರೆ ಸಾಕು ಆ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ ಧಾರವಾಡದ ಶ್ರೀ ಮುರುಘಾಮಠದ ಉಚಿತ ಪ್ರಸಾದನಿಲಯದಲ್ಲಿ ಪ್ರವೇಶ ದೊರೆಯುತ್ತಿತ್ತು. ಅಲ್ಲಿಯೂ ಮಠ ಮಾಸ್ತರರ ಬಗ್ಗೆ ಹೆಚ್ಚಿನ ಗೌರವ ; ಇಲ್ಲಿಯ ವಿದ್ಯಾರ್ಥಿಗಳ ನೀತಿಮತ್ತೆಯಲ್ಲಿ ವಿಶ್ವಾಸ.

ಹುನಗುಂದದ ವಿಜಯಮಹಾಂತೇಶ ಹೈಸ್ಕೂಲು ಅಖಂಡ ವಿಜಾಪುರ ಜಿಲ್ಲೆಯಲ್ಲಿ ತೀರ ಹಳೆಯ ಹೈಸ್ಕೂಲುಗಳಲ್ಲಿ ಒಂದು. ಅದರ ಸ್ಥಾಪನೆಯಾದುದು 1915ರಲ್ಲಿ ಜೊತೆಜೊತೆಗೆ ಬಡವಿದ್ಯಾರ್ಥಿಗಳಿಗೆ ವಾರದಮನೆಗಳಲ್ಲಿ. ಉಚಿತ ಪ್ರಸಾದನಿಲಯದಲ್ಲಿ ಊಟದ ವ್ಯವಸ್ಥೆ. ಹುನಗುಂದ ತಾಲೂಕಿನ ಜನತೆಯ ಉದ್ಧಾರ ಮಾಡಿದ್ದು ಈ ಶಾಲೆ ಹಾಗೂ ಉಚಿತ ಪ್ರಸಾದನಿಲಯವೆಂದು ಜನ ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು.

 63ನೇ ಐತಿಹಾಸಿಕ ವರ್ಧಂತ್ಯುತ್ಸವ

ವಿಜಯ ಮಹಾಂತೇಶ ಹೈಸ್ಕೂಲ ಹಾಗೂ ಉಚಿತ ಪ್ರಸಾದನಿಲಯಗಳ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ಪೂಜ್ಯ ಮಠ ಮಾಸ್ತರರ ಷಷ್ಟ್ಯಬ್ದವನ್ನಾಚರಿಸಲು ಸಂಸ್ಥೆಯವರು ನಿರ್ಧರಿಸಿದರು. ಅದಕ್ಕಾಗಿ ಧನಸಂಗ್ರಹ ಕಾರ್ಯವು ನಡೆಯಿತು. ಮನೆತನವನ್ನು,ತಮ್ಮ ಊರನ್ನು ಉದ್ಧಾರ ಮಾಡಿದವರು ಮಠ ಮಾಸ್ತರರು ಎಂದು ವರ್ಧಂತ್ಯುತ್ಸವ ನಿಧಿಗಾಗಿ ಹಾರ್ದಿಕವಾಗಿ ದೇಣಿಗೆಯನ್ನಿತ್ತರು ಹುನಗುಂದ ತಾಲೂಕಿನ ಜನ.

ಮಠಮಾಸ್ತರರ ಶಿಷ್ಯರನೇಕರು ತಮ್ಮ ಭಕ್ತಿ, ಪ್ರೀತಿ, ಗೌರವ ಹಾಗೂ ಅಭಿಮಾನಕ್ಕನುಗುಣವಾಗಿ ಕಾಣಿಕೆ ಸಲ್ಲಿಸಿ ಕೃತಜ್ಞತೆ ಮೆರೆದರು.

ಮಠಮಾಸ್ತರರ 60ನೇ ಹುಟ್ಟುಹಬ್ಬ ತಡವಾಗಿ ಅವರ 63ನೇ ವರ್ಧಂತ್ಯುತ್ಸವವಾಗಿ ಫೆಬ್ರುವರಿ 1957ರಂದು ನೆರವೇರಿತು. ತಾಲೂಕಿನ ಜನರ ಸಹಕಾರದೊಂದಿಗೆ ಬಹಳ ಅದ್ದೂರಿಯಿಂದ ಸಮಾರಂಭ ಜರುಗಿತು. ಪೂಜ್ಯ ಶ್ರೀ ಬಂಥನಾಳ ಸಂಗನಬಸವ ಶಿವಯೋಗಿಗಳು ಘನ ಅಧ್ಯಕ್ಷತೆವಹಿಸಿದ್ದರು. ನವಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ, ಜನನಾಯಕ ಮಾನ್ಯ ಶ್ರೀ ಎಸ್. ನಿಜಲಿಂಗಪ್ಪನವರು ಆ ಐತಿಹಾಸಿಕ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಹೆಚ್ಚಿನ ಶೋಭೆಯನ್ನುಂಟು ಮಾಡಿದರು. ಈ ಸಂದರ್ಭದಲ್ಲಿ ಪೂಜ್ಯ ಮಠಮಾಸ್ತರರ ಅನುಪಮ ಸೇವೆಗಾಗಿ ಅವರಿಗೆ ಅರ್ಪಿಸಿದ ಹಮ್ಮಿಣಿಯನ್ನು ಅವರು ಸಂಘಕ್ಕೆ ಅದರ ಅಭಿವೃದ್ದಿಗಾಗಿ ಬಳಸಲು ಮರಳಿಸಿದರು. ಅವರ ಸೇವೆ ಈ ತ್ಯಾಗಬಲದಿಂದ ಮತ್ತಷ್ಟು ಮಹತ್ವ ಪಡೆಯಿತು.

ಅಪೂರ್ವ ಗೌರವ

ಶಿಕ್ಷಕರು ಸಮರ್ಪಣಭಾವದಿಂದ, ವಿದ್ಯಾರ್ಥಿಗಳ ಬಗೆಗೆ ಕಳಕಳಿಯಿಂದ ದುಡಿದರೆ ಸಮಾಜ ಅಂಥವರನ್ನು ಬಹಳ ಗೌರವದಿಂದ ಕಾಣುತ್ತದೆ. ಕೃತಜ್ಞಾತಾಭಾವದಿಂದ ನಮಿಸುತ್ತದೆ. ಅದಕ್ಕೆ ಮಠ ಮಾಸ್ತರರಿಗೆ ಸಂದ ಗೌರವವೇ ಸಾಕ್ಷಿ. ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ, ಪ್ರಸಾದ ನಿಲಯದ ಪಿತಾಮಹರಾಗಿ ಹಾಗೂ ಕೊನೆಗೆ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ, ಬಡವಿದ್ಯಾರ್ಥಿಗಳ ಸಲುವಾಗಿ ತಮ್ಮ ಆಯುಷ್ಯವನ್ನೇ ಮೀಸಲಾಗಿರಿಸಿ ದುಡಿದು ಅವರು, ಲಿಂಗೈಕ್ಯರಾದ ಮೇಲೆ ಅವರ ಸಮಾಧಿಯನ್ನು ವಿಜಯ ಮಹಾಂತೇಶ ಉಚಿತ ಪ್ರಸಾದನಿಲಯದ ವಿದ್ಯಾರ್ಥಿಗಳ ಪ್ರಸಾದಭವನದಲ್ಲಿ ಮಾಡಲಾಯಿತು. ಪ್ರಸಾದ ಸ್ವೀಕರಿಸುವ ಮುನ್ನ ಪ್ರತಿಸಲವೂ ವಿದ್ಯಾರ್ಥಿಗಳು ಪೂಜ್ಯ ಗುರುಗಳ ಸೇವೆಯನ್ನು ಅವರು ಬಯಸಿದ ಆದರ್ಶಗಳನ್ನು ಸ್ಮರಿಸಲಿ ಎಂದು ಆಶಿಸಲಾಗಿದೆ. ಇದಕ್ಕಿಂತಲೂ ಹೆಚ್ಚಿನ ಗೌರವವಾವುದು ಶಿಕ್ಷಕರಿಗೆ ?

ಮರೆಯಲಾಗದ ಮಮತೆ

ಇಂಗ್ಲೀಷನಲ್ಲಿ ಎಚಿmes ಊiಟಣoಟಿ ಬರೆದ ಉooಜ ಃಥಿe ಒಡಿ. ಅhiಠಿs ಎಂಬ ನೀಳ್ಗತೆಯುಂಟು. ಶಿಕ್ಷಕನೋರ್ವನ ಜೀವನಕ್ಕೆ ಸಂಬಂದಿಸಿದ ಕತೆ ಅದು. ಃಡಿooಞಜಿieಟಜ ಶಾಲೆಯಟಜಿಟi 40 ವರ್ಷಕ್ಕಿಂತ ಹೆಚ್ಚು  ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಮೇಲೂ ಚಿಪ್ಟೀಂಗ್‍ನು ಬೇರೆ ಕಡೆ ಹೋಗುವುದಿಲ್ಲ. ಆ ಶಾಲೆಯಿಂದ ಅಲ್ಲಿಯ ವಿದ್ಯಾರ್ಥಿಗಳ ಮೇಲಿನ ಮಮತೆಯಿಂದ ದೂರಾಗಬಯಸುವುದಿಲ್ಲ. ಆ ಶಾಲೆಯ ಎದುರಿನ ಮನೆಯೊಂದರಲ್ಲಿ ಕೊನೆಯವರೆಗೂ ವಾಸಿಸಿ ಸಂತಸಪಡುತ್ತಾನೆ. ಇಳಿವಯಸ್ಸಾದಾಗ ತೀವ್ರ ಅಜಾರಿಯಾಗುತ್ತದೆ. ಈ ಸುದ್ದಿ ಹರಡಿದಾಗ ಇಂಗ್ಲೆಂಡದ ತುಂಬ ಇದ್ದ ಆತನ ಹಳೆಯ ವಿದ್ಯಾರ್ಥಿಗಳು ದರ್ಶನಕ್ಕಾಗಿ ನಾನಾ ದಿಕ್ಕುಗಳಿಂದ ದೌಡಾಯಿಸಿ ಬರುತ್ತಾರೆ. ಡಾಕ್ಟರರಿಬ್ಬರು ಚಿಪ್ಟಿಂಗ್‍ನ ಆರೋಗ್ಯ ಪರೀಕ್ಷಿಸುವಾಗ, ಅವರ ಕೊನೆ ಸಮೀಪಿಸಿತೆಂದು ತಿಳಿದು ತಮ್ಮ ತಮ್ಮೊಳಗೆ ಮೆಲುಧ್ವನಿಯಲ್ಲಿ – “Piಣಥಿ ! Piಣಥಿ! ಊe ಊಚಿs ಟಿo ಛಿhiಟಜಡಿeಟಿ” ಎಂದು ಮಾತಾಡುತ್ತಾರೆ.

ಇದನ್ನು ಚಿಪ್ಪಿಂಗ್ ತನ್ನ ಶಕ್ತಿಯನ್ನೆಲ್ಲ ಸಾವರಿಸಿಕೊಂಡು ಹಾಸಿಗೆಯಲ್ಲಿ ಎದ್ದು ಕುಳಿತು ಕೇಳುತ್ತಾನೆ : “Wಚಿಣ ತಿeಡಿe ಥಿou sಚಿಥಿiಟಿg ಚಿbouಣ me? hಚಿve I ಟಿo ಛಿhiಟಜಡಿeಟಿ ? Whಥಿ, I ಚಿve, I hಚಿve ಣhousಚಿಟಿಜs ಚಿಟಿಜ ಣhousಚಿಟಿಜs oಜಿ ಣhem, ಣheಥಿ ಚಿಡಿe ಚಿಟಟ boಥಿs” ಎಂಬ ತನ್ನ ಸಾವಿರಾರು ವಿದ್ಯಾರ್ಥಿಗಳನ್ನು ನೆನಪಿಸಿ ಹೇಳಿ ಉದ್ಗಾರ ತೆಗೆಯುತ್ತಾನೆ. ಹಾಗೆಯೇ ಹಾಸಿಗೆಯಲ್ಲಿ ಒರಗುತ್ತಿದ್ದಂತೆ ಆತನ ಪ್ರಾಣಪಕ್ಷಿ ಹಾರಿಹೋಗುತ್ತದೆ! ಹಾಸಿಗೆಯ ಸುತ್ತಲಿದ್ದ ಹಲವಾರು ಹಿಂದಿನ ವಿದ್ಯಾರ್ಥಿಗಳು ದುಃಖಿಸುತ್ತಾರೆ.

ಮರುದಿನ ಶಾಲೆಯಲ್ಲಿ ಶ್ರದ್ಧಾಂಜಲಿಯನ್ನರ್ಪಿಸಲು ಸಭೆ ಜರುಗುತ್ತದೆ. ಮುಖ್ಯಾಧ್ಯಾಪಕರು ಕೊನೆಗೆ ಹೇಳುತ್ತಾರೆ : “ಒಡಿ. ಅhiಠಿಠಿiಟಿg, ಣhe ಃಡಿooಞಜಿieಟಜ ಟಿeveಡಿ ಜಿoಡಿgeಣ ಥಿouಡಿ ಟovಚಿbಟeಟಿess” –  “ಬ್ರುಕ್‍ಫೀಲ್ಡ್ ಶಾಲೆ ಚಿಪ್ಪಿಂಗ್ ಶಿಕ್ಷಕನ ಪ್ರೀತಿಯನ್ನು ಎಂದೂ ಮರೆಯುವುದಿಲ್ಲ” ಎಂದು.

ವಿ. ಎಂ. ಹೈಸ್ಕೂಲ, ಪ್ರಸಾದನಿಲಯಗಳ ಮೇಲಿದ್ದ ಪೂಜ್ಯ ಮಠಮಾಸ್ತರರ ಪ್ರೀತಿಯನ್ನು ಆ ಸಂಸ್ಥೆಗಳು, ವಿದ್ಯಾರ್ಥಿಗಳು ಅಲ್ಲಿಯ ಜನರು ಎಂದಾದರೂ ಮರೆಯಲು ಸಾಧ್ಯವೆ ?

ಪ್ರೊ ಎನ್.ಜಿ. ಕರೂರ

Leave A Comment