ಸಹಕಾರಿ ರಂಗದ ಸಾಧಕಿ ಶ್ರೀಮತಿ ದೊಡ್ಡಮ್ಮ ಹವಾಲದಾರ

ವಿಶ್ವಗುರು ಬಸವಣ್ಣನವರ ಜನ್ಮಭೂಮಿ ಇಂದಿನ ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಶರಣದಂಪತಿ ಯಜಮಾನ ಶ್ರೀವೀರಪ್ಪನವರು ಹಾಗೂ ಶ್ರೀಮತಿ Doddamma Havaladarಗುರುಸಂಗಮ್ಮನವರು ರ್ಯಾಕಿ ಇವರ ಉದರದಲ್ಲಿ 1937ರಲ್ಲಿ ಜನಿಸಿದ ಶರಣ ಚೇತನವೇ ದೊಡ್ಡಮ್ಮನವರು ಹವಾಲದಾರ.

ಇವರು ಬಾಲ್ಯದಲ್ಲಿ ಎಲ್ಲರ ಪ್ರೀತಿಯ ಮಗುವಾಗಿ ಬೆಳೆದರು 1950ರಲ್ಲಿ ಆಗಿನ ಮುಲ್ಕಿ ಪರಿಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಪಾಸಾದರು. ವಿದ್ಯಾರ್ಥಿ ದೆಸೆಯಲ್ಲಿಯೇ ದೊಡ್ಡಮ್ಮನವರು ಶಾಲೆಯಲ್ಲಿ ಏರ್ಪಡಿಸುತ್ತಿದ್ದ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಥಮ ದ್ಪೀತಿಯ ಬಹುಮಾನವನ್ನು ಗಳಿಸುತ್ತಿದ್ದರು. ಏಳನೆಯ ವರ್ಗದಲ್ಲಿರುವಾಗ ವಿದ್ಯಾರ್ಥಿಗಳಿಂದ ಬರೆಯಲ್ಪಟ್ಟ “ಮಕ್ಕಳ ಮುತ್ತು” ಎಂಬ ಪುಸ್ತಕದಲ್ಲಿ ದೊಡ್ಡಮ್ಮಳು “ಸ್ತ್ರೀಶಿಕ್ಷಣ, ಮುತ್ತಿಗಿಂತಲೂ ಹೊತ್ತು ಉತ್ತಮ” ಎಂಬ ಎರಡು ಲೇಖನಗಳನ್ನು ಬರೆದು ಅಪಾರ ಮನ್ನಣೆ ಗಳಿಸಿದರು.

1950ರಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದಾಗ ಶಿಕ್ಷಕಿ,, ಹುದ್ದೆಯು ಮನೆಬಾಗಿಲು ತಟ್ಟಿದಾಗ ತಂದೆÀ ಹಾಗೂ ಸೋದರತ್ತೆಯವರ ಮನಸ್ಸಿನಂತೆ’ ಶಿಕ್ಷಕಿ,, ಸೇವೆಯ ಅವಕಾಶವನ್ನು ತಿರಸ್ಕರಿಸಿದರು. 1951ರಲ್ಲಿ ಸೋದರತ್ತೆಯ ಪುತ್ರ ಶ್ರೀ ಶರಣಪ್ಪನವರು ಹವಾಲದಾರ ಅವರೊಂದಿಗೆ ಕಲ್ಯಾಣ ಮಹೋತ್ಸವ ಜರುಗಿತು. ತವರು ಮನೆಯೇ ಗಂಡನ ಮನೆಯಾಗಿ ಪರಿವರ್ತನೆಯಾಯಿತು. ಬಿಡುವಿನ ವೇಳೆಯಲ್ಲಿ ಸಾಹಿತ್ಯಾಭಿರುಚಿಯೊಂದಿಗೆ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಒಲವುಗಳತ್ತÀ ಗಮನ ಹರಿಸಿದರು.

Doddamma Havaladar 01ಚಿತ್ತರಗಿ ಸಂಸ್ಥಾನಮಠದ ಶ್ರೀವಿಜಯ ಮಹಾಂತೇಶ ಮಠ ಹುನಗುಂದದ ಶ್ರೀಮಠದ ಧಾರ್ಮಿಕ ಪರಿಸರದಲ್ಲಿ ಪುರಾಣ ಪ್ರವಚನ ಕೇಳಿ ಅದನ್ನು ತಮ್ಮದೆ ಆದ ಸರಳಸುಂದರ ಶೈಲಿಯಲ್ಲಿ ಚರಿತ್ರೆ ಬರೆಯಲಾರಂಭಿಸಿದರು. ವಿಜಯ ಮಹಾಂತೇಶ ಶಿವಯೋಗಿಗಳ ಪುರಾಣ ಪ್ರವಚನ ಕೇಳಿ ವಿಜಯ ಮಹಾಂತೇಶ ಚರಿತ್ರೆಯನ್ನು ಬರೆದು ಪರಮಪೂಜ್ಯ ಮಠಗುರುಗಳ ಸನ್ನಿಧಿಗೆ ಆರ್ಪಿಸಿದರು. ಹುನಗುಂದ ನಗರದ ಪ್ರಮುಖ ಹಿರಿಯರಾಗಿದ್ದ ಯಜಮಾನ ನಾಗರಾಳ ದೊಡ್ಡಪ್ಪನವರು ಶ್ರೀಸಂಗಪ್ಪನವರು ನಾಗರಾಳ ಯಜಮಾನ ಶ್ರೀಸಿದ್ದಪ್ಪನವರು ಕಡಪಟ್ಟಿ, ಶ್ರೀಕಲ್ಯಾಣಪ್ಪನವರು ಬ್ಯಾಳಿ, ಶ್ರೀಗುಂಡಪ್ಪನವರು ಬ್ಯಾಳಿ, ಶ್ರೀಬಸಟ್ಟೆಪ್ಪನವರು ಬಳೊಟಗಿ ನಿಂಗಪ್ಪನವರು ತೆನಿಹಳ್ಳಿ ಇವರುಗಳಿಂದ ಮೆಚ್ಚುಗೆ. ಹುನಗುಂದ ಮಹಿಳೆಯೊಬ್ಬಳಿಂದ ಪ್ರಪಥಮ ಲೇಖನ ವಿಮರ್ಶೆ. ಹರ್ಷ ಮೆಚ್ಚುಗೆಯೊಂದಿಗೆ ಪಟ್ಟಣದಲ್ಲಿ ಅಕ್ಕನಬಳಗ ಸ್ಥಾಪನೆಗಾಗಿ ಪ್ರೇರಪಿತಗೊಂಡು 1952ರಲ್ಲಿ ಪರಮಪೂಜ್ಯ ಕೊಪ್ಪದ ಮಹಾಂತಪ್ಪಗಳವರ ಅಮೃತ ಹಸ್ತದಿಂದ ಬಾಗಲಕೋಟಯ ಅಕ್ಕನಬಳಗದ ಅಧ್ಯಕ್ಷರಾಗಿ ಪ್ರಮುಖರಾಗಿ ಇವರ ಅತಿಥಿಯ ಹಾಗೂ ಊರ ಹಿರಿಯರ ಸಮ್ಮುಖದಲ್ಲಿ ಅಕ್ಕನಬಳಗ ಸ್ಥಾಪನೆಯಾಯಿತು. ಊರಿನ ಮಹಿಳೆಯರಲ್ಲಿ ಗಣ್ಯ ವ್ಯಕ್ತಿತ್ವ ಹೊಂದಿದ ಶ್ರೀಮತಿ ಮಹಾಲಿಂಗಮ್ಮನವರ ಅಧ್ಯಕ್ಷರೆಂದು ನೇಮಿಸಲ್ಪಟ್ಟರು. ಶರಣೆ ದೊಡ್ಡಮ್ಮನವರು ಗೌರವಕಾರ್ಯದರ್ಶಿಯಾಗಿ ಕ್ರಿಯಾಶೀಲ ಚಟುವಟಿಕೆಗಳನ್ನು ಪ್ರಾರಂಭಿಸಿದರು.Neelambika Bank Hungund

ಪೂಜ್ಯ ಮಠ ಗುರುಗಳ ಮಾರ್ಗದರ್ಶನದಲ್ಲಿ ಪ್ರಾರಂಭಗೊಂಡ ಅಕ್ಕನಬಳಗದ ಧ್ಯೇಯೋದ್ದೇಶಗಳ ಸಾಕಾರಕ್ಕಾಗಿ ಪ್ರತಿ ಸೋಮವಾರ ಮಹಿಳೆಯರೆಲ್ಲರೂ ಕೂಡಿ ಶಿವಾನುಬವ ಮಾಡುತ್ತಿದ್ದರು. ದೊಡ್ಡಮ್ಮನವರು ಬಸವಾದಿ ಶಿವಶರಣರ ಚರಿತ್ರೆಗಳನ್ನು ಮತ್ತು ವಚನಗಳ ಸಾರವನ್ನು ತಿಳಿಸುತ್ತಿದ್ದರು. ತಮ್ಮದೇ ಆದ ದಾಟಿಯಲ್ಲಿ ಭಕ್ತಿಗೀತೆಗಳನ್ನು ತತ್ವಪದಗಳನ್ನು ಹಾಡಿ ಪೂಜ್ಯ ಮಠಗುರುಗಳ ಹರ್ಷಕ್ಕೆ ಪಾತ್ರಗರಾಗುತ್ತಿದ್ದರು.

ಜಾನಪದ ಹಾಗೂ ಸ್ವರಚಿತ ಹಾಗೂ ಇತರರಿಂದ ರಚಿತವಾದ ಭಕ್ತಿಗೀತೆಗಳನ್ನು ತಮ್ಮ ಉತ್ತಮ ಕಂಠದಿಂದ ಹಾಡುತ್ತಿದ್ದರು. ಧಾರವಾಡದಲ್ಲಿರುವ ತಮ್ಮ ತಂಗಿ ಗಿರಿಜಾ ಎಸ್ ಪಾಟೀಲರ ಹತ್ತಿರ ಬಂದಾಗ ಓಂ ಮಠದ ಯೋಗಿಶ್ವರರು ಹಾಗೂ ತಪೋವನದ ಶ್ರೀ ಕುಮಾರ ಸ್ವಾಮಿಜಿಯವರು ದರ್ಶನ ಹಾಗೂ ತಮ್ಮ ಶುಶ್ರಾವ್ಯ ಹಾಡುಗಳಿಂದ ಶ್ರೀಗಳೀರ್ವರ ಮೆಚ್ಚುಗೆ ಪಡೆಯುತ್ತಿದ್ದರು.

Doddamma Hawaldarಸಾಮಾಜಿಕ ಹಾಗೂ ಸಾಂಸ್ಕøತಿಕ ಜೀವನವನ್ನು ಸಾಕಾರಗೊಳಿಸುತ್ತ ಶಾಲಾ ಕಾಲೇಜುಗಳ ಸಭೆ ಸಮಾರಂಭ ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಜಾತ್ರೆ ಶಿವಾನುಭವಗಳಲ್ಲಿ ಇತ್ತಿಚಿನ ಬಾಗಲಕೋಟೆಯ ಸಾಕ್ಷರತಾಕೋಟೆಯ ಕಾರ್ಯಕ್ರಮಗಳನ್ನೊಳಗೊಂಡಂತೆ ವಿವಿಧ ಕಾರ್ಯಗಳಲ್ಲಿ ತನ್ನನ್ನೇ ತೊಡಗಿಸಿಕೊಂಡು ಕೈಲಾದಮಟ್ಟಿಗೆ ಸಮಾಜಸೇವೆ ಮಾಡುತ್ತಿದ್ದರು.

ಅಕ್ಕನ ಬಳಗದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಹಂಬಲಿಸಿ ಚಿತ್ತರಗಿಪೀಠದ ಪೂಜ್ಯಕೊಪ್ಪದ ಮಹಾಂತಪ್ಪಗಳ ಜಾಗೆಯನ್ನು ಊರ ಎಲ್ಲೆಡೆಗೂ ಅಡ್ವಾಡಿ ದೇಣಿಗೆ ಸಂಗ್ರಹಿಸಿ ಕಟ್ಟಡ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದರು. ಕಟ್ಟಡ ನಿರ್ಮಾಣವೂ ಆಯಿತು. ಪರಮಪೂಜ್ಯಕೊಪ್ಪದ ಮಹಾಂತಪ್ಪಗಳು, ಪರಮಪೂಜ್ಯ ಬಂಥನಾಳ ಸ್ವಾಮಿಗಳು, ಹಾಳಕೇರಿಯ ಅನ್ನದಾನ ಮಹಾಸ್ವಾಮಿಗಳು ಗುರುಬಸವಾರ್ಯ ಮಠಗುರುಗಳು ಇವರೆಲ್ಲರ ಕೃಪಾಕಟಾಕ್ಷದಲ್ಲಿ ಅಕ್ಕನ ಮಂದಿರ ಉದ್ಘಾಟನೆಯಾಯಿತು. ಕೂಡಲಸಂಗಮದಲ್ಲಿ ಜರುಗಿದ ಜಗÀಜ್ಯೋತಿ ಬಸವಣ್ಣನವರ ಅಷ್ಟಶತಮಾನೋತ್ಸವ ಕಾರ್ಯಕ್ರಮದಲ್ಲಿ ಅನೇಕ ರೀತಿಯ ಕೊಡುಗೆಗಳನ್ನು ಅರ್ಪಿಸಿದರು.

1962ರಲ್ಲಿ ಬಿ.ಡಿ.ಓ ಆಫೀಸಿನಿಂದ ಸಿಗುವ ಮಹಿಳೆಯರ ಸೌಲಭ್ಯಗಳನ್ನು ಪಡೆಯುವ ಆಕಾಂಕ್ಷೆಯಿಂದ ಅಕ್ಕಮಹಾದೇವಿ ಮಹಿಳಾ ಮಂಡಳವನ್ನು ಸ್ಥಾಪಿಸಿ ಕಾರ್ಯದರ್ಶಿಯಾಗಿ ಅದರ ಮುಖಾಂತರ ನೂರಾರು ಜನ ಮಹಿಳೆಯರಿಗೆ ಪೇಂಟಿಂಗ್, ಹೊಲಿಗೆ ತರಬೇತಿ ಹೊಂದಿದ ಮಹಿಳೆಯರಿಗೆ ಅರ್ಧ ಬೆಲೆಯಲ್ಲಿ ಹೊಲಿಗೆ ಮಿಷನ್ ಕೊಡಿಸಿದರು. ಬಡತನ ರೇಖೆಗಿಂತ ಕೆಳಗಿದ್ದ ಹಳ್ಳಿಯ ಮಹಿಳೆಯರಿಗೆ ತಿಂಗಳಿಗೆ ಎರಡು ನೂರು ರೂಪಾಯಿ ಸ್ಟಾಯಫಂಡ ಕೊಟ್ಟು ಹೊಲಿಗೆ ತರಬೇತಿ ನೀಡುವದಲ್ಲದೇ ಪುಕಟೆಯಾಗಿ ಹೊಲಿಗೆ ಮಶೀನು ಕೊಡಿಸಲಾಯಿತು.

ಅಕ್ಕನ ಬಳಗದ ತಾಯಂದಿರಿಗೆ ಬಾಗಲಕೋಟ ಅಕ್ಕನ ಬಳಗದ ಸದಸ್ಯೆ ಕಸೂತಿ ಪರಿಣತಿ ಹೊಂದಿದ ಮಾತೆಯನ್ನು ಕರೆಸಿ ಅಕ್ಕನಬಳಗದಲ್ಲಿ ಕಸೂತಿ ಕ್ಲಾಸು ನಡೆಸಿದರು. ಇವೆಲ್ಲವುಗಳು ದೊಡ್ಡಮ್ಮನವರು ಮಹಿಳೆಯರ ಉನ್ನತಿಗಾಗಿ ಮಾಡಿದ ಸಮಾಜ ಸೇವೆಗಾಗಿ ದುಡಿದವುಗಳು ಇವರ ಆದರ್ಶ ಜೀವನಕ್ಕೆ ನಾಂದಿಯಾಗಿದೆ.

ಆಹೊತ್ತಿಗೆ ಅಕ್ಕನ ಬಳಗಕ್ಕೆ ಮೂಲ ಕರ್ತರುವಾಗಿರತಕ್ಕಂಥ ಗುರುಬಸವಾರ್ಯಮಠ ಗುರುಗಳು ಲಿಂಗೈಕ್ಯರಾಗಿದ್ದು ಅವರ ಹೆಸರಿನಿಂದ ಬಾಲವಾಡಿ ತೆರೆದು ದೊಡ್ಡಮ್ಮನವರು ಹನ್ನೆರಡು ವರ್ಷಕಾಲ ಉಸ್ತುವಾರಿ ಮಾಡಿದರು. ಆ ನಂತರದಿಂದ ಸರಕಾರದಿಂದ ಅಂಗನವಾಡಿಗಳು ಪ್ರಾರಂಭವಾದವು.

ಹುನಗುಂದ ತಾಲೂಕಿನ ಶಿದ್ದನಕೊಳ್ಳದಲ್ಲಿ ಜಾತ್ರೆ ಜರುಗುತ್ತಿದ್ದು ಜಾತ್ರೆಯ ಉತ್ಸವದಲ್ಲಿ ಅಕ್ಕನ ಬಳಗದ ಮಹಿಳಾ ಮಂಡಳದ ತಾಯಂದಿರನ್ನು ಅಲ್ಲದೇ ಬಾಲವಾಡಿಯ ಪುಠಾಣಿಗಳನ್ನು ಭಾಗವಹಿಸುವಂತೆ ಪ್ರೆರೇಪಿಸಿ ಬಹುಮಾನಗಳನ್ನು ಗಿಟ್ಟಿಸುವಂತೆ ಮಾಡಿದರು.

1969 ರಲ್ಲಿ ಪತಿಯ ವೀಯೋಗವಾಗಿದ್ದರಿಂದ ಕೌಟಂಬಿಕ ವ್ಯವಹಾರ ಕಷ್ಟಕಾರ್ಪಣ್ಯಗಳ ಅನುಭವದೊಂದಿಗೆ ಸಾರ್ಥಕ ಜೀವನ ಸಾಧಿಸುವ ಸ್ಪಷ್ಟ ನಿಲುವಿನ ದಿಟ್ಟ ಹೆಜ್ಜೆ ಇಟ್ಟರು. ನೈತಿಕ ಬೆಂಬಲದೊಂದಿಗೆ ಮಕ್ಕಳೆಲ್ಲರಿಗೂ ಮೌಲ್ಯಾಧಾರಿತ ವಿದ್ಯಾರ್ಜನೆ ಮಾಡಿಸುವ ನಿರ್ಧಾರ ಕೈಗೊಂಡರು. ಇವರ ತ್ಯಾಗ ಮತ್ತು ಸೇವೆಯ ಫಲವೇ ಇಂದು ಹೆಣ್ಣುಮಕ್ಕಳಿಬ್ಬರು ಸ್ನಾತಕೋತ್ತರ ಪದವೀಧರರಾಗಿದ್ದು ಉಪನ್ಯಾಸಕರೊಬ್ಬರು ಗ್ರಂಥಪಾಲಕಿಯೊಬ್ಬರು ಪುತ್ರರಿರ್ವರು ತಾಂತ್ರಿಕ ಹಾಗೂ ವೈದ್ಯಕೀಯ ಪದವೀಧರರಾಗಿದ್ದು ಕರ್ನಾಟಕ ಸರಕಾರ ಅ ಮತ್ತು ಬ ವರ್ಗದ ಅಧಿಕಾರಿಗಳಾಗಿದ್ದಾರೆ. ಇವರೀರ್ವರಲ್ಲಿ ಒಬ್ಬರಾದ ಡಾ| ವೀರಣ್ಣ ಎಸ್,ಎಚ್ ಇವರು ಪಿ.ಎಚ್.ಡಿ ಪದವಿ ಪಡೆದಿದ್ದಾರೆ ಧಾರವಾಡದಲ್ಲಿ ಈಗ ಕೈಗಾರಿಕೆ ಇಲಾಖೆಯಲ್ಲಿ ಜಾಯಿಂಟ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವದಾದರೆ ದೊಡ್ಡಮ್ಮನವರು ಧಾರ್ಮಿಕ ಸಾಮಾಜಿಕ ರಂಗಗಳಲ್ಲಿ ಸೇವೆ ಮಾಡುತ್ತಲೇ ಕೌಟುಂಬಿಕ ಬದುಕನ್ನು ಸುಸಂಸ್ಕøತ ಶರಣ ಜೀವನವಾಗಿ ರೂಪಿಸಿಕೊಂಡರು.

1972ರಲ್ಲಿ ಶ್ರೀ ಮ.ನಿ.ಪ.್ರ ವಿಜಯಹಾಂತ ಶಿವಯೋಗಿಗಳವರ ಅರವತ್ಮೂರನೆಯ ಪುಣ್ಯಸ್ಮರಣೆ ಸಮಾರಂಭದಲ್ಲಿ ಹುನಗುಂದ ತಾಲೂಕಿನ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಗೌರವಸತ್ಕಾರ ಪಡೆದ ಏಕೈಕ ಮಹಿಳೆ ಶರಣೆ ದೊಡ್ಡಮ್ಮ ಹವಾಲದಾರರು.

ಹುನಗುಂದ ತಾಲೂಕಿನಲ್ಲಿರುವ ಎಲ್ಲ ಮಹಿಳಾ ಮಂಡಳಗಳನ್ನೊಳಗೊಂಡ ಒಕ್ಕೂಟ ಮಹಿಳಾ ಮಂಡಳ ಸ್ಥಾಪನೆಗಾಗಿ ಕಂಡ ಕನಸನ್ನು 1992ನೇ ಇಸ್ವಿಯಲ್ಲಿ ಹುನಗುಂದ ತಾಲೂಕ ನೀಲಾಂಬಿಕಾ ಮಹಿಳಾ ಒಕ್ಕೂಟ ಸ್ಥಾಪನೆಯೊಂದಿಗೆ ನನಸಾಗಿಸಿಕೊಂಡು ಈ ಒಕ್ಕೂಟದ ಗೌರವಾಧ್ಯಕ್ಷರಾಗಿ ಒಕ್ಕೂಟ ಪರವಾಗಿ ವರ್ಷಕ್ಕೊಮ್ಮೆ ಎಲ್ಲ ಮಹಿಳಾ ಮಂಡಲಗಳ ಪಧಾದಿಕಾರಿಗಳಿಗೆ ಮೂರು ದಿನ ತರಬೇತಿ ಕಾರ್ಯಕ್ರಮದೊಂದಿಗೆ ಹತ್ತು ಹಲವಾರು ಮಹಿಳೆ ಜಾಗ್ರತೆ ಶಿಬಿರಗಳನ್ನು ಮಹಿಳಾ ದಿನಾಚರಣೆಗಳನ್ನು ಉಚಿತ ರಕ್ತ ತಪಾಸಣಾ ಶಿಬಿರಗಳನ್ನು ಹಾಗೂ ಸರ್ವಧರ್ಮ ಪ್ರವಚನಗಳ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. 1969ರಿಂದ ಅಕ್ಕನಬಳಗದ ಸ್ಥಾಯಿ ಅಧ್ಯಕ್ಷರಾಗಿ ನೇಮಕಗೊಂಡು ಬಳಗದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ. ಶ್ರೀ ವಿಜಯಮಹಾಂತೇಶ ಹೊಸಮಠದ ಕಾರ್ಯ ನಿರ್ಮಾಣಕ್ಕಾಗಿ ಅಕ್ಕನ ಬಳಗದಿಂದ ದೇಣಿಗೆ ಕೂಡಿಸಿ 15 ಸಾವಿರ ರೂಪಾಯಿಗಳನ್ನು ಶ್ರೀಮತಿ ಮಹಲಿಂಗಮ್ಮ ತ್ಯಾಪಿ ಅಕ್ಕನ ಬಳಗದ ಮೊದಲಿನ ಅಧ್ಯಕ್ಷರ ಹೆಸರಿನಿಂದ ದಾಸೋಹ ಭಾವದಿಂದ ಅರ್ಪಿಸಿದ್ದಾರೆ.

ಮಾತೆ ಮಹಾದೇವಿಯವರಿಂದ ಕೂಡಲಸಂಗಮದಲ್ಲಿ ಜರುಗಿದ ಪ್ರಪಥಮ ಶರಣಮೇಳಕ್ಕೆ ಅಕ್ಕನ ಬಳಗದ ಸದಸ್ಯರಿಂದ ಒಂದು ಟ್ಯಾಕ್ಟರ ತುಂಬಿದ ಜೋಳದ ರೊಟ್ಟಿ ಹಾಗೂ ಹತ್ತುಸಾವಿರ ರೂಪಾಯಿಗಳನ್ನು ದಾಸೋಹ ಭಾವದಿಂದ ಅರ್ಪಿಪಿಸಿದ್ದಾರೆ.

ಅಕ್ಕನ ಬಳಗದ ಅಧ್ಯಕ್ಷರಾಗಿ ಶಿಥಿಲಗೊಂಡಿದ್ದ ಅಕ್ಕನ ಮಂದಿರವನ್ನು ಹುನಗುಂದದ ಸಾರ್ವಜನಿಕರಿಂದ ಹಾಗೂ ಪರಮಪೂಜ್ಯ ವಿಜಯಮಹಾಂತಪ್ಪಗಳವರ ಆರ್ಶೀವಾದ ಆರ್ಥಿಕ ನೆರವಿನಿಂದ ಮತ್ತು ಬಾಗಲಕೋಟೆಯ ಬಸವೇಶ್ವರ ಸಂಸ್ಥೆಯಿಂದ ಹುನಗುಂದದ ವಿಜಯಮಹಾಂತೇಶ ವಿದ್ಯಾವರ್ಧಕ ಸಂಸ್ಥೆಯಿಂದ ದೇಣಿಗೆ ಪಡೆದು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಅಕ್ಕನ ಮಂದಿರ ನಿರ್ಮಾಣದೊಂದಿಗೆ ವಿಜಯಮಹಾಂತೇಶ ಸಂಸ್ಥೆಯ ಅಕ್ಕನಬಳಗವೆಂದು ಮರು ನಾಮಕರಣ ಮಾಡಿದರು.

1996 ರಲ್ಲಿ ಐದುನೂರು ಜನ ಶೇರುದಾರರನ್ನು ಹೊಂದಿದ ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರಿ ಸಂಘ ನೋಂದಾಯಿಸಿ ಮುಖ್ಯ ಪ್ರವರ್ತಕರಾಗಿ ಹಗಲಿರುಳು ಶ್ರಮಿಸಿ ಸಂಘವನ್ನು ಸ್ಥಾಪಿಸಿ ಅಧ್ಯಕ್ಷರಾಗಿ ನಿರ್ದೇಶಕರಾಗಿ ಸಂಘವನ್ನು ಲಾಭದಾಯಕವಾಗಿ ಮುನ್ನಡೆಯುವಂತೆ ಸತತ ಪ್ರಯತ್ನ ಮಾಡುತ್ತಿದ್ದಾರೆ. ಈಗ ಸದ್ಯ 2013ನೆ ಇಸ್ವಿಗೆ ಒಂದೂವರೆ ಕೋಟಿಯಿಂದ ಎರಡು ಕೋಟಿಯವರೆಗೆ ವ್ಯವಹಾರ ಇರುವದಲ್ಲದೇ ಇಪ್ಪತ್ತು ಲಕ್ಷದ ಸ್ವಂತ ಬಿಲ್ಡಿಂಗ ತಯಾರಾಗಿದೆ. ದೊಡ್ಡಮ್ಮನವರು ಧಾರ್ಮಿಕ ಸಾಮಾಜಿಕ ಸಹಕಾರಿ ರಂಗಗಳಲ್ಲದೇ ಸಾಹಿತ್ಯರಂಗಕ್ಕೂ ಕೊಡುಗೆಯನ್ನು ಸಲ್ಲಿಸಿದ್ದಾರೆ ಅವರು ರಚಿಸಿದ ಸಾಹಿತ್ಯ ಕೃತಿಗಳು ಇಂತಿವೆ.

ಬಸವ ಮಹಾನುಭಾವರ ಚರ್ರಿತ್ರೆ, ವಿಜಯ ಮಹಾಂತೇಶ ಚರಿತ್ರೆ, ಹಾಳಕೇರಿ ಅನ್ನದಾನ ಸ್ವಾಮಿಗಳ ಚರಿತ್ರೆ, ಎಡೆಯೂರ ಸಿದ್ದಲಿಂಗೇಶ್ವರ ಚರಿತ್ರೆ, ಸ್ತ್ರೀನೀತಿ ಹಾಗೂ ವೀರಶೈವ ಧರ್ಮದ ಸಂಭಾಷಣೆ, ಸಂಪಾದನೆಯ ಸೊಂಪು ಮಧ್ಯಭಾಗ ಹಾಗೂ ಕರ್ಮಯೋಗಿ ಸಿದ್ದರಾಮ, ಅಲ್ಲದೇ ಅಲ್ಲಮಪ್ರಭುವಿನ ಬಗೆಗೆ, ಪ್ರವಚನ ಸಂಗ್ರಹ ಇವಲ್ಲದೇ ಮುಗ್ದಸಂಗಯ್ಯನ ಚರಿತ್ರೆ, ಮಾಚಿದೇವರ ಚರಿತ್ರೆ, ಮಾಚಿದೇವ ಬಸವೇಶ್ವರ ಸಂವಾದ, ಶಂಕರ ದಾಸಿಮಯ್ಯ ಚರಿತ್ರೆ, ಕಿನ್ನರಿ ಬ್ರಹ್ಮಯ್ಯನ ಚರಿತ್ರೆ, ಮೋಳಿಗೆ ಮಾರಯ್ಯನ ಚರಿತ್ರೆ, ಸುರಗಿ ಚೌಡಯ್ಯನ ಚರಿತ್ರೆ, ಕಿನ್ನರಿ ಬ್ರಹ್ಮಯ್ಯನ ಚರಿತ್ರೆ, ಮೇದಾರ ಕಾತಯ್ಯನ ಚರಿತ್ರೆ, ಏಕಾಂತ ರಾಮಯ್ಯನ ಚರಿತ್ರೆಗಳನ್ನು ರಚಿಸಿರುವುದಲ್ಲದೆ. ಈಗ ವಿಜಯಮಹಾಂತೇಶ ಮಠ ಇಲಕಲ್ಲದಿಂದ ಹೊರಡುವ ಬಸವ ಬೆಳಗು ತ್ರೈಮಾಸಿಕ ಪತ್ರಿಕೆಗೆ ಲೇಖನಗಳನ್ನು ಬರೆದುಕೊಡುತ್ತಿದ್ದಾರೆ.

1) ಅಕ್ಕನ ಬಳಗ ಅಧ್ಯಕ್ಷರು ಹುನಗುಂದ

2) ಅಕ್ಕಮಹಾದೇವಿ ಮಹಿಳಾಮಂಡಳ ಗೌರವಕಾರ್ಯದರ್ಶಿನಿ ಹುನಗುಂದ

3) ತಾಲೂಕಾ ಒಕ್ಕೂಟ ನೀಲಾಂಬಿಕಾ ಮಹಿಳಾ ಮಂಡಳ ಉಪಾಧ್ಯಕ್ಷರು ಹುನಗುಂದ

4) ಬಸವಕೇಂದ್ರ ಹುನಗುಂದ ಕಾರ್ಯಕಾರಿ ಸಮಿತಿ ಸದಸ್ಯರು

5) ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರಿ ಸಂಘ ನಿರ್ದೇಶಕರು ಹುನಗುಂದ

6) ಆಖಿಲಭಾರತ ವೀರಶೈವ ಮಹಾಸಭಾ ಬಾಗಲಕೋಟ ಜಿಲ್ಲಾ ಹುನಗುಂದ ತಾಲೂಕಿನ ಮಹಿಳಾ ಘಟಕದ ಅಧ್ಯಕ್ಷರಾಗಿ ಎಪ್ಪತೈದು ಜನ ಮಹಿಳಾ ಸದಸ್ಯರನ್ನು ಅಲ್ಲದೇ ಇಲಕಲ್ಲದ ನೂರಾರು ಮಹಿಳಾ ಸದಸ್ಯರನ್ನು ಒಟ್ಟು ಹುನಗುಂದ ತಾಲೂಕಿನ ಮಹಿಳಾ ಘಟಕದ ಒಟ್ಟು ಒಂದು ನೂರಾ ಎಪ್ಪತೈದು ಮಹಿಳಾ ಸದಸ್ಯರನ್ನು ಮಾಡುವುದಲ್ಲದೇ ಹುನಗುಂದ ಮಾತ್ರೋಶ್ರಿ ಗೌರಮ್ಮನವರು ಚರಂತಿಮಠ ಹತ್ತುಸಾವಿರ ಶ್ರೀಮತಿ ದೊಡ್ಡಮ್ಮ ಶ. ಹವಾಲದಾರ ಹತ್ತುಸಾವಿರ ಶ್ರೀಮತಿ ಗಂಗಮ್ಮ ಕಡಪಟ್ಟಿ ಒಂದುಸಾವಿರ ಶ್ರೀಮತಿ ಅಂದಾನೆಮ್ಮ ನಾಗೂರ ಒಂದು ಸಾವಿರ, ಶ್ರೀಮತಿ ಅನ್ನಪೂರ್ಣ ಉಪ್ಪಿನ ಒಂದು ಸಾವಿರ ಹೀಗೆ ಇಪ್ಪತ್ತು ಮೂರು ಸಾವಿರ ದೇಣಿಗೆ ಕೂಡಿಸಿ ಕೊಟ್ಟಿದ್ದಾರೆ. ಈಗ ಸದ್ಯ ಜಿಲ್ಲಾ ಘಟಕದ ನಿರ್ದೇಶಕರಾಗಿದ್ದಾರೆ.

7) ಅಖಿಲ ಭಾರತ ವೀರಶೈವ ಮಹಾಸಭಾ ಬಾಗಲಕೋಟ ಜಿಲ್ಲಾ ಘಟಕದ ನಿರ್ದೇಶಕರು. ದೊಡ್ಡಮ್ಮನವರಿಗೆ 2005ನೆ ಇಸ್ವಿಯಲ್ಲಿ ದಾರವಾಡದ ಲಕ್ಷ್ಮಿ ಮಹಿಳಾ ಹಾಗೂ ಗ್ರಾಮೀಣ ಅಭಿವೃಧ್ದಿ ಸಂಸ್ಥೆ ಇವರು ರಾಷ್ಟ್ರೀಯ ಸ್ತ್ರೀ ರತ್ನಪ್ರಶಸ್ತಿ ಪ್ರಧಾನ ಮಾಡಿದ್ದಾರೆ. 2006ನೇ ಇಸ್ವಿ ಬಾಗಲಕೋಟ ಜಿಲ್ಲಾ ಕನ್ನಡ ರಾಜ್ಯೋತ್ಸವದ ಸನ್ಮಾನ ಪತ್ರ ಕೊಟ್ಟು ಗೌರವಿಸಿದ್ದಾರೆ.

ದೊಡ್ಡಮ್ಮನವರನ್ನು 2013ನೇ ಇಸ್ವಿ ಫೆಬ್ರವರಿ ತಿಂಗಳಲ್ಲಿ ನೀಲಾಂಬಿಕಾ ವಿವಿದೋದ್ದೇಶಗಳ ಸಹಕಾರಿ ಸಂಘವನ್ನು ನೋಂದಾಯಿಸಿ ಮುಖ್ಯ ಪ್ರವರ್ತಕರಾಗಿ ಒಂದೂವರೆ ನೂರು ಜನ ಶೇರದಾರರನ್ನು ಮಾಡಿಕೊಂಡು ಪರಮಪೂಜ್ಯ ಡಾII ಮಹಾಂತಪ್ಪಗಳ ಹಾಗೂ ಪರಮಪೂಜ್ಯ ಗುರುಮಹಾಂತಪ್ಪಗಳ ಅಮೃತಹಸ್ತದಿಂದ ಪ್ರಾರಂಭಿಸಿ ಸಂಘದ ಅಧ್ಕಕ್ಷರಾಗಿ ಮುನ್ನಡೆಸುತ್ತಿದ್ದಾರೆ.

8) ಶ್ರೀ ನೀಲಾಂಬಿಕಾ ವಿವಿದೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ.

ಇಂದಿಗೆ ಶರಣೆ ದೊಡ್ಡಮ್ಮನವರು ತಮ್ಮಬಾಳಿನ ಎಪ್ಪತ್ನಾಲ್ಕು ವರ್ಷಗಳಲ್ಲಿ ಅಖಂಡ ಅರವತ್ತು ವರ್ಷಗಳನ್ನು ಸಮಾಜ ಜೀವನದ ವಿವಿಧ ರಂಗಗಳಲ್ಲಿ ಸೇವೆಗೆ ತೊಡಗಿಸಿಕೊಂಡು ದುಡಿದಿದ್ದಾರೆ ಇನ್ನು ದುಡಿಯುತ್ತಿದ್ದಾರೆ. ಬಸವ ನಿಷ್ಠೆಯನ್ನು ಮೈಗೂಡಿಸಿಕೊಂಡು ಸತ್ಯ ಶುದ್ದ ಕಾಯಕ ನಿತ್ಯ ಲಿಂಗಾರ್ಚನೆ ಪ್ರಸಾದ ದಾಸೋಹ ಜೀವನ ಸಾಗಿಸುತ್ತ ಶರಣ ಜೀವನ ಬಾಳುತ್ತಿರುವ ಇವರು ನಾಡಿನ ಮಹಿಳಾ ಸಂಕುಲಕ್ಕೆ ಆದರ್ಶರಾಗಿದ್ದಾರೆ.

Leave A Comment