ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಹುನಗುಂದ

Vijaya Mahantesh School Hungund

ವಿದ್ಯೆ ಅಭಿವೃದ್ಧಿಗೆ ಪೂರಕ. ಅಂತೆಯೆ ಹುನಗುಂದದಲ್ಲಿ 20ನೇ ಶತಮಾನದ ಪ್ರಾರಂಭದ ಅವಧಿಯಲ್ಲಿ ವಿದ್ಯಾ ಪ್ರೇಮಿಗಳು ಕಾರ್ಯೋನ್ಮುಖರಾಗಿ ಶಿಕ್ಷಣ ಸಂಸ್ಥೆಯೊಂದರ ಸ್ಥಾಪನೆಗೆ ಮುಂದಾದರು. ಈ ಕಾರ್ಯದಲ್ಲಿ
ಲಿಂ.ಶ್ರೀ ಸಂಗಪ್ಪನವರು ಸರದೇಸಾಯಿ ಸಾ. ರಕ್ಕಸಗಿ
ಲಿಂ.ಶ್ರೀ ದೊಡ್ಡಪ್ಪನವರು ನಾಗರಾಳ ಸಾ. ಹುನಗುಂದ
ಲಿಂ.ಶ್ರೀ ತಿಮ್ಮನಗೌಡರು ಇಂಗಳಗೇರಿ ಸಾ. ಹುನಗುಂದ
ದಿ. ಶ್ರೀ ಕೃಷ್ಣರಾವ್ ದೇಶಪಾಂಡೆ ಸಾ. ಹುನಗುಂದ
ದಿ. ಶ್ರೀ ರಂಗಪ್ಪನವರು ಜನಾದ್ರಿ ಸಾ. ಹುನಗುಂದ
ಲಿಂ.ಶ್ರೀ ಗುರುಬಸಯ್ಯನವರು ಕಂಬಾಳಿಮಠ ಸಾ.ಹುನಗುಂದ
ಲಿಂ.ಶ್ರೀ ಲಿಂಗಪ್ಪನವರು ತ್ಯಾಪಿ ಸಾ. ಹುನಗುಂದ
ದಿ. ಶ್ರೀ ನರಹರÀರಾವ್ ಬಾಗಲಕೋಟ ಸಾ.ಹುನಗುಂದ
ದಿ. ಶ್ರೀ ರಾಘವೇಂದ್ರರಾವ್ ದೇಸಾಯಿ ವಕೀಲರು ಸಾ.ಹುನಗುಂದ
ಮುಂತಾದವರು ಪ್ರಮುಖ ಪ್ರಾತವಹಿಸಿದರು.
ಈ ಮಹನೀಯರು ಸಕಾರಾತ್ಮಕವಾಗಿ ಆಲೋಚಿಸಿ ಈ ರೈತರ ಬೀಡಿನಲ್ಲೊಂದು ಶಿಕ್ಷಣದ ಬೀಜ ಬಿತ್ತಿದ್ದರು. ಆಗ ತಾಲೂಕಾ ಶಿಕ್ಷಣ ಸಮಿತಿ ಎಂಬ ಸಂಘ ಅಂಕುರಿಸಿತು. ಸನ್ 1915 ಅಗಷ್ಟ 15ರಂದು ಶ್ರೀ ವಿಜಯ ಮಹಾಂತೇಶ ಮಠದ ಪವಿತ್ರ ಜಾಗೆಯಲ್ಲಿ ನೂರು ವರ್ಷಗಳ ಹಿಂದೆ ‘ಆ್ಯಂಗ್ಲೋ ವನ್ರ್ಯಾಕ್ಯುಲರ್’ ಸ್ಕೂಲ್ ಎಂಬ ಇಂಗ್ಲೀಷ ಶಾಲೆ ಪ್ರಾರಂಭವಾಯಿತು. ದಿ. ಶ್ರೀ ತಮ್ಮಣ್ಣರಾವ್ (ನರಹರರಾವ್) ಬಾಗಲಕೋಟ ಅವರು ಈ ಶಾಲೆಯ ಪ್ರಥಮ ಮುಖ್ಯಾಧ್ಯಾಪಕರು.
ಶ್ರೀ ಮಠದಲ್ಲಿ ಪ್ರಾರಂಭವಾದ ಶಾಲೆ ಬಳಿಕ ಅಂದು ಸಂಸ್ಕøತ ಪಾಠಶಾಲೆಗಾಗಿ ನಿರ್ಮಾಣಗೊಂಡ ಇಂದು ಅಕ್ಕಮಹಾದೇವಿ ಮಂದಿರವಾಗಿರುವ ಮಠದ ಪಕ್ಕದ ಕಟ್ಟಡದಲ್ಲಿ ವರ್ಗಗಳು ನಡೆದವು. ಸನ್ 1920ರಲ್ಲಿ ಗಾಂಧೀಜಿಯ ಕರೆಯ ಮೇರೆಗೆ ಅಸಹಕಾರ ಚಳುವಳಿ ಪ್ರಾರಂಭವಾಗಲು ಬ್ರಿಟಿಷ್ ಸರಕಾರದಿಂದ ಅನುದಾನ ಅಪೇಕ್ಷೆ ಮಾಡದೆ ಇರುವಾಗ ಶಾಲೆಗೆ ಸಂಕಟ ಎದುರಾಯಿತು. ನಿರಹಂಭಾವಿ ಸ್ವಾತಂತ್ರ್ಯಯೋಧ ಲಿಂ. ಶ್ರೀ ಬಸವಶೆಟ್ಟೆಪ್ಪ ಬಳೂಟಗಿಯವರು ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದರು.
ಸಚ್ಯಾರಿತ್ರ್ಯ ಸಂಪನ್ನ ಸರಳತೆಯ ಸಾಕಾರಮೂರ್ತಿ ಶ್ರೀ ಗುರುಬಸವಾರ್ಯ ಮಠ ಗುರುಗಳು ಸನ್ 1921 ರಲ್ಲಿ ಮೆಟ್ರಿಕ್ ಪರೀಕ್ಷೆ ಮುಗಿಸಿ ಬರಲು ಹಿರಿಯರ ಅಪೇಕ್ಷೆಯಂತೆ ಶಾಲೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡರು. ಸನ್ 1921-1924 ರ ವರೆಗೆ ಮುಖ್ಯಾಧ್ಯಾಪಕರಾಗಿ ಸೇವೆಗೈದರು. ಶಾಲೆಯಲ್ಲಿ ನಾಲ್ಕನೆಯ ಇಯತ್ತೆಯನ್ನು ಪ್ರಾರಂಭಿಸಬೇಕಾದ ಸಮಯ. ಆದರೆ ಅದಕ್ಕೆ ಪದವೀಧರÀ ಶಿಕ್ಷಕರು ಇರಬೇಕೆಂದು ನಿಯಮವಿತ್ತು. ಆಗ ಬಿ.ಎ. ಪದವೀಧರರಾಗಿದ್ದ ಶಿರೂರ ಗ್ರಾಮದ ಶ್ರೀ ಶಂಕರಗೌಡ ಪಾಟೀಲರು ಶಿಕ್ಷಕರಾಗಿ ಸೇವೆಗೆ ನಿಲ್ಲಲು ನಾಲ್ಕನೆಯ ಇಯತ್ತೆ ಪ್ರಾರಂಭವಾಯಿತು.
ಸನ್ 1925ರಲ್ಲಿ ಶಾಲೆಯು ಫಸ್ಟ್‍ಗ್ರೇಡ್ ‘ಆ್ಯಂಗ್ಲೋ ವನ್ರ್ಯಾಕ್ಯುಲರ್’ ಸ್ಕೂಲಾಗಿ ಬೆಳೆಯಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಯಿತು. ವರ್ಗ ಕೋಣೆಗಳ ಕೊರತೆ ಉಂಟಾದಾಗ ಊರಜನರ ಮನೆಗಳಲ್ಲೂ, ವಖಾರಗಳಲ್ಲೂ ವರ್ಗಗಳು ನಡೆದವು, ಬಳಿಕ ಶ್ರೀ ಮಠದ ಪಕ್ಕದ ಶ್ರೀ ರಾಮದಾಸ ದರ್ಬಾರ ಬಾಗಲಕೋಟ ಅವರ ಫ್ಯಾಕ್ಟರಿ ಸ್ಥಳಕ್ಕೆ ಎಲ್ಲಾ ವರ್ಗಗಳನ್ನು ಸ್ಥಳಾಂತರಿಸಲಾಯಿತು. ಸನ್ 1939 ರಲ್ಲಿ ಶಾಲೆ ಸೆಕೆಂಡರಿ ಮಿಡ್ಲ್ ಸ್ಕೂಲ್ ಹಂತ ತಲುಪಿತು. ಮರು ವರ್ಷ ಶ್ರೀಮಂತ ಬಾಬಾಸಾಹೇಬ ರಕ್ಕಸಗಿ ಅವರ ಘನ ಅಧ್ಯಕ್ಷತೆಯಲ್ಲಿ ಸಂಸ್ಥೆ ಬೆಳ್ಳಿಹಬ್ಬ ಆಚರಿಸಿತು.
ಸನ್ 1944 ರಲ್ಲಿ ವಿದ್ಯಾಪ್ರಸಾರದ ಪ್ರಮುಖ ಧ್ಯೇಯವನ್ನಿಟ್ಟುಕೊಂಡು ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ಅಸ್ತಿತ್ವಕ್ಕೆ ಬಂದಿತು. ಆಗ ಶಾಲೆಯು ಅದರಡಿಯಲ್ಲಿ ‘ವಿಜಯ ಮಹಾಂತೇಶ ಮಾಧ್ಯಮಿಕ ಶಾಲೆ’ ಎಂದು ಮರುನಾಮ ಪಡೆದು ಬೆಳೆಯಿತು. ಹೀಗೆ ಬೆಳೆದು ಬಂದ ಶಾಲೆಗೆ ಸ್ವಂತ ಕಟ್ಟಡ ಹೊಂದುವ ನಿರ್ಧಾರಕ್ಕೆ ಬಂದು ಲಿಂ. ಶ್ರೀ.ಮ.ನಿ.ಪ್ರ.ಮಹಾಂತ ಸ್ವಾಮಿಗಳು ಕೊಪ್ಪ ಅವರು ಶ್ರೀ ಮಠಕ್ಕೆ ಸೇರಿದ 8 ಎಕರೆ ತೋಟದ ಜಾಗೆಯನ್ನು ಶಾಲಾ ಕಟ್ಟಡಕ್ಕಾಗಿ ಬಿಟ್ಟುಕೊಟ್ಟರು. ಈ ಕಟ್ಟಡ ರಚಿಸಲು ಹಣದ ಅವಶ್ಯಕತೆ ಉಂಟಾಗಲು ಪರಮದಾಸೋಹಿ ಶ್ರೀ ಮ.ನಿ.ಪ್ರ ಸಂಗನಬಸವ ಶಿವಯೋಗಿಗಳು ಬಂಥನಾಳ ಅವರನ್ನು ಆವ್ಹಾನಿಸಿ ಹುನಗುಂದದಲ್ಲಿ ಪ್ರವಚನ ಆಯೋಜಿಸಲಾಯಿತು. ಶ್ರೀಗಳ ಮಾತಿನ ಮೋಡಿಗೆ ಮನಸೋತ ಜನ ಅವರ ಇಚ್ಛೆಗೆ ಅನುಗುಣವಾಗಿ ಶಾಲಾಕಟ್ಟಡಕ್ಕಾಗಿ ದೇಣಿಗೆ ಇತ್ತರು. ಲಿಂ.ಶ್ರೀ.ಮ.ನಿ.ಪ್ರ.ಹಾಲಕೆÀರೆ ಅನ್ನದಾನ ಮಹಾಸ್ವಾಮಿಗಳು ಕಟ್ಟಡಕ್ಕೆ ಅಡಿಗಲ್ಲು ಇರಿಸಿದರು. ಅಂದು ಕಟ್ಟಡ ರಚನೆಯಲ್ಲಿ ಹೆಸರು ಮಾಡಿದ ಲಿಂ.ಶ್ರೀ ನಿಂಗಪ್ಪನವರು ಹೂಗಾರ ಕಟ್ಟಡದ ನಕ್ಷೆ ಬರೆದು ಭವ್ಯ ಕಟ್ಟಡ ರೂಪಿಸಿದರು.
ಸನ್ 1957 ರಲ್ಲಿ ಕಾಯಕಯೋಗಿ ಲಿಂ ಶ್ರೀ ಗುರುಬಸವಾರ್ಯ ಮಠ ಗುರುಗಳಿಗೆ 63 ವರ್ಷ ತುಂಬಲು ಹುನಗುಂದದಲ್ಲಿ ಷಷ್ಠಬ್ದ ಸಮಾರಂಭವನ್ನು ಹಮ್ಮಿಕೊಳ್ಳಲಾಗಿ ಆ ಸಂದರ್ಭದಲ್ಲಿ ಭಕ್ತಜನ ಹಾಗೂ ಶಿಷ್ಯ ಬಳಗ ತಮಗೆ ಸಮರ್ಪಿಸಿದ ಕಾಣಿಕೆಯನ್ನು ಶಾಲಾ ಕಟ್ಟಡಕ್ಕಾಗಿ ದಾನವಿತ್ತರು. ಆ ಹಣದ ಫಲವಾಗಿ ಇಂದು ಔಷಧ ವಿಜ್ಞಾನ ವಿದ್ಯಾಲಯವಾಗಿರುವ ‘ಸರಸ್ವತಿ ಮಂದಿರ’ ಕಟ್ಟಡ ನಿರ್ಮಾಣವಾಯಿತು. ಸನ್ 1966 ರಲ್ಲಿ ಶಾಲೆ ಸುವರ್ಣ ಮಹೋತ್ಸವವನ್ನು ಆಚರಿಸಿತು.
ವಿದ್ಯಾಸಂಸ್ಥೆ ಹುಟ್ಟಿಕೊಂಡು 100 ವರ್ಷ ಕಳೆದವು. ಈ ನಡುವೆ ಅನೇಕ ಶಾಲೆ-ಕಾಲೇಜುಗಳು ತೆಲೆ ಎತ್ತಿವೆ. ಪ್ರಸ್ತುತ 1 ಪೂರ್ವ ಪ್ರಾಥಮಿಕ, 5 ಪ್ರಾಥಮಿಕ ಶಾಲೆಗಳು, 5 ಪ್ರೌಢ ಶಾಲೆಗಳು, 1 ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, 1 ಪದವಿ ಪೂರ್ವ ಕಾಲೇಜು, 1 ಪಾಲಿಟೆಕ್ನಿಕ್, 1 ಔಷಧ ವಿಜ್ಞಾನ ವಿದ್ಯಾಲಯ, 1 ಸಂಗೀತ ಶಾಲೆ, 2 ಉಚಿತ ಪ್ರಸಾದ ನಿಲಯಗಳು, 1 ಉದ್ಯೋಗ್ಯಸ್ಥ ಮಹಿಳೆಯರ ವಸತಿ ಗೃಹ, 1 ಪಾಲಿಟೆಕ್ನಿಕ್ ಹಾಸ್ಟೆಲ್, ಮತ್ತು 2 ಮೆಟ್ರಕ್ ನಂತರದ ವಸತಿ ನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಈ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಒಟ್ಟ ಸಂಖ್ಯೆ 4,836. ಅದರಲ್ಲಿ 2,972 ಬಾಲಕರು ಮತ್ತು 1,864 ಬಾಲಕಿಯರು. 194 ಜನ ಬೋಧಕ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದು ಅದರಲ್ಲಿ 133 ಜನ ಪುರುಷರು ಮತ್ತು 61 ಜನ ಮಹಿಳೆಯರು. ಅದರಂತೆ 69 ಜನ ಪುರುಷರು ಮತ್ತು 18 ಜನ ಮಹಿಳೆಯರನ್ನೊಳಗೊಂಡ 87 ಜನ ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದೆ.
ಶತಮಾನದ ಹಿಂದೆ ಹುಟ್ಟಿ, ಹಲವು ವಿದ್ಯಾಸಂಸ್ಥೆಗಳಿಗೆ ಜನ್ಮ ನೀಡಿ ಸಂಘವು ಗಟ್ಟಿ ತಳಹದಿಯ ಮೇಲೆ ನಿಲ್ಲಲು ಕಾರಣ, ಅದರ ಹಿಂದಿನ ದಿವ್ಯಶಕ್ತಿ, ಮಹಾತಪಸ್ವಿ ಶ್ರೀ ವಿಜಯ ಮಹಾಂತ ಶಿವಯೋಗಿಗಳು. ಅದರಂತೆ ಲಿಂ. ಶ್ರೀ ಮ.ನಿ.ಪ್ರ. ಮಹಾಂತ ಸ್ವಾಮಿಗಳು ಕೊಪ್ಪ, ಲಿ.ಶ್ರೀ.ಮ.ನಿ.ಪ್ರ. ಸಂಗನಬಸವ ಶಿವಯೋಗಿಗಳು ಬಂಥನಾಳ, ಲಿಂ.ಶ್ರೀ. ಅನ್ನದಾನ ಮಹಾಸ್ವಾಮಿಗಳು ಹಾಲಕೆರೆ ಮುಂತಾದ ಶ್ರೀಗಳು ಮಾರ್ಗದರ್ಶಕರಾಗಿ ಆಶೀರ್ವದಿಸಿ ಸಂಘವನ್ನು ಕಟ್ಟಿ ಬೆಳಿಸಿದರು. ಜ್ಞಾನ ದಾಸೋಹಿ, ನಿರ್ಮೋಹಿ, ಕರುಣಾಮೂರ್ತಿ ಲಿಂ. ಶ್ರೀ ಗುರುಬಸವಾರ್ಯ ಮಠ ಗುರೂಜಿ, ಲಿಂ. ಶ್ರೀ ಬಸವಶೆಟ್ಟೆಪ್ಪ ಬಳೂಟಗಿ, ಹಾಗೆಯೆ ಲಿಂ.ಶ್ರೀ ಸಿದ್ದಪ್ಪ ಮಾಸ್ತರರು ಕಡಪಟ್ಟಿ, , ಲಿಂ. ಶ್ರೀ ಸಂಗ್ಯಯ್ಯನವರು ವಸ್ತ್ರದ ಲಿಂ. ಶ್ರೀ ಶಿವಸಂಗಪ್ಪನವರು ಕಡಪಟ್ಟಿ, ಲಿಂ. ಶ್ರೀ ಸಂಗಪ್ಪನವರು ನಾಗರಾಳ ಮುಂತಾದ ಹಿರಿಯರು ತಮ್ಮ ತನು ಮನ ಧನದಿಂದ ಸಂಘದ ಏಳ್ಗೆಗಾಗಿ ಶ್ರಮಿಸಿ ಮರೆಯಾದ ಪುಣ್ಯಜೀವಿಗಳಾಗಿದ್ದಾರೆ.
ಪ್ರಸ್ತುತ, ಸಂಘದ ಅಧ್ಯಕ್ಷರಾದ ಶ್ರೀ ಮ.ನಿ.ಪ್ರ. ಡಾ. ಮಹಾಂತ ಸ್ವಾಮಿಗಳು ಇಲಕಲ್ಲ, ಉಪಾಧ್ಯಕ್ಷರುಗಳಾದ ಶ್ರೀ ಮ.ನಿ.ಪ್ರ. ಅಭಿನವ ಅನ್ನದಾನ ಮಹಾಸ್ವಾಮಿಗಳು ವಿರಕ್ತಮಠ, ಹಾಲಕೆರೆ ಮತ್ತು ಶ್ರೀ. ಮ.ನಿ.ಪ್ರ. ಗುರುಮಹಾಂತ ಸ್ವಾಮಿಗಳು ಇಲಕಲ್ ಅವರುಗಳು ಸಂಘದ ಪ್ರೇರಣಾ ಶಕ್ತಿಯಾಗಿ ಇದನ್ನು ಮುನ್ನಡೆಸುತ್ತಿದ್ದಾರೆ.
ಶರಣು ಶರಣಾರ್ಥಿVM

ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಹುನಗುಂದ
ಅಧ್ಯಕ್ಷರು
ಶ್ರೀ ಮ.ನಿ.ಪ್ರ. ಡಾ|| ಮಹಾಂತ ಸ್ವಾಮಿಗಳು
ಚಿತ್ತ್ತರಗಿ ಸಂಸ್ಥಾನಮಠ, ಇಲಕಲ್ಲ

ಉಪಾಧ್ಯಕ್ಷರು
ಶ್ರೀ ಮ.ನಿ.ಪ್ರ. ಅಭಿನವ ಅನ್ನದಾನ ಮಹಾಸ್ವಾಮಿಗಳು
ವಿರಕ್ತಮಠ, ಹಾಲಕೆರೆ
ಶ್ರೀ ಮ.ನಿ.ಪ್ರ. ಗುರುಮಹಾಂತ ಸ್ವಾಮಿಗಳು
ಚಿತ್ತರಗಿ ಸಂಸ್ಥಾನಮಠ, ಇಲಕಲ್ಲ

ಕಾರ್ಯನಿರ್ವಾಹಕ ಮಂಡಳಿ

ಶ್ರೀ ವ್ಹಿ. ಸಿ. ಚರಂತಿಮಠ ಕಾರ್ಯಾಧ್ಯಕ್ಷರು
ಶ್ರೀ ಬಿ. ಎಂ. ಹೊಕ್ರಾಣಿ ಗೌರವ ಕಾರ್ಯದರ್ಶಿ
ಶ್ರೀ ಎಸ್. ಜಿ. ನಂಜಯ್ಯನಮಠ ಕಾ.ನಿ.ಮಂ. ಸದಸ್ಯರು
ಶ್ರೀ ಬಿ. ಎಸ್. ಕೆಂದೂರ ,,
ಶ್ರೀ ವ್ಹಿ. ಸಿ. ಚಟ್ಟೇರ ,,
ಶ್ರೀ ಜಿ. ಜಿ. ಪಾಟೀಲ ,,
ಶ್ರೀ ಎಂ. ಎಸ್. ಮಠ ,,
ಶ್ರೀ ವ್ಹಿ. ಪಿ. ಬಳೂಟಗಿ ,,
ಶ್ರೀ ಎಂ. ಆಯ್. ಕತ್ತಿ ,,
ಶ್ರೀ ಎಸ್. ಕೆ. ಗದ್ದಿ ,,
ಶ್ರೀ ಎಂ. ಎನ್. ತೆÀನಿಹಳ್ಳಿ ,,

Leave A Comment