ಕೂಡಲಸಂಗಮ

1.            ಸಂಗಮೇಶ್ವರ ದೇವಸ್ಥಾನ-ಒಂದು ಇತಿಹಾಸಿಕ ಹಿನ್ನೆಲೆ.      ಸಂಗಮೇಶ್ವರ ದೇವಾಲಯವನ್ನು ಕಲ್ಯಾಣಿ ಕಲಚೂರಿಗಳ ಅರಸರು ನಿರ್ಮಿಸಿರುವರು ಎಂದು ಶಾಸನಗಳಿಂದ ತಿಳಿದು ಬರುತ್ತದೆ. ಈ ದೇವಾಲಯವನ್ನು ಸುಮಾರು 11 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ದೇವಾಲಯದ ಹೊರಮೈ ಗ್ರ್ರ್ಯೆನೈಟ ಮತ್ತು ಮರಳುಗಲ್ಲಿನಿಂದ ನಿರ್ಮಿತವಾಗಿದೆ. ಅಲ್ಲಲ್ಲಿ ಕುಸುರಿ ಕೆಲಸ ಮಾಡಲಾಗಿದೆ. ಮಲಪ್ರಭೆಯ ಸಂಗಮ ಸ್ಥಾನದಲ್ಲಿರುವ ಐಕ್ಯ ಮಂಟಪದ ಎದುರಿಗೆ ಪೂರ್ವಾಭಿಮುಖವಾಗಿ ಸಂಗಮೇಶ್ವರ ದೇವಾಲಯ ಇದೆ.       ಪ್ರವೇಶದ್ವಾರದ ಎಡಬಲಕ್ಕೆ ಕಟ್ಟೆಗಳಿವೆ. ಈ ದೇವಾಲಯದ ಅತ್ಯಂತ ಸುಂದರ ಭಾಗ […]

ಮುಂದೆ ಓದಿ...

ಹುನಗುಂದ ಪರಿಸರದ ಚಿಕ್ಕ ಜಲಪಾತಗಳು

ಕನ್ನಡ ನಾಡಿನಲ್ಲಿ ಅನೇಕ ಸುಪ್ರಸಿದ್ಧ ಜಲಪಾತಗಳು ಇಂದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೂ ಬಹು ಜನರ ಕಣ್ಣಿಗೆ ಬೀಳದ ಸ್ಥಳೀಯರಿಗೆ ಹಿತ್ತಲ ಗಿಡ ಏನಿಸಿದ ಅತ್ಯಂತ ಚಿಕ್ಕ ಜಲಪಾತಗಳು 4 ಇವೆ. ಈ ಜಲಪಾತಗಳು ತಮ್ಮ ಅಸ್ತಿತ್ವವನ್ನು ತೋರ್ಪಡಿಸುವುದು ಮಳೆಗಾಲದಲ್ಲಿ ಮಾತ್ರ. ಮಳೆ ಹೆಚ್ಚು ಬಿದ್ದಾಗ 6-7 ತಿಂಗಳಗಳವರೆಗೂ ನೀರು ಧುಮಕುತ್ತದೆ. ಇಲ್ಲದಿದ್ದರೆ ಕೆಲವೇÉ ತಿಂಗಳಲ್ಲಿ ಮಾಯವಾಗಿ ಬಿಡುತ್ತವೆ. ಕಾರಣ ಹಿಂದಿನ ದಿನಮಾನಗಳಲ್ಲಿ ಮಳೆ ಚೆನ್ನಾಗಿ ಆಗುತ್ತಿದ್ದ ಸಂದರ್ಭದಲ್ಲಿ ಇವು ಸುತ್ತಲಿನ ಪ್ರದೇಶದ ಜನರಿಗೆ ಪ್ರಸಿದ್ಧವಾಗಿದ್ದಿರಬಹುದು. ಇತ್ತೀಚಿಗೆ ಮಳೆ ಬೀಳುವ […]

ಮುಂದೆ ಓದಿ...

ಐಹೊಳೆ – ವಾಸ್ತುಶಿಲ್ಪದ ತೊಟ್ಟಿಲು

ಐಹೊಳೆ – ವಾಸ್ತುಶಿಲ್ಪದ ತೊಟ್ಟಿಲು  ಚಾಲುಕ್ಯ ವಂಶದ ಉಗಮ ಚಾಲುಕ್ಯರ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ಇನ್ನೂ ಭಿನ್ನಾಭಿಪ್ರಾಯವಿದೆ. ಒಂದು ಪೌರಾಣಿಕ ಕಥೆಯ ಪ್ರಕಾರ ಇಂದ್ರನ ವಿನಂತಿಯ ಮೇರೆಗೆ ಧರ್ಮ ಸ್ಥಾಪನೆಗಾಗಿ ಬ್ರಹ್ಮನು ತನ್ನ ಬೊಗಸೆ (ಚುಲಕ)ಯಿಂದ ವೀರಯೋಧ ನನ್ನು ಹುಟ್ಟಿಸಿದನಂತೆ, ಈ ವೀರಯೋಧನ ವಂಶವೇ ಮುಂದೆ ಸಾಮ್ರಾಜ್ಯವಾಗಿ ರೂಪಗೊಂಡಿತು. ರಾಜ ಲಾಂಛನ ಬಾದಾಮಿ ಚಾಲುಕ್ಯರ ರಾಜ ಲಾಂಛನ ಅಥವಾ ರಾಜ ಚಿನ್ಹೆ ವರಾಹ, ಶಂಖ, ಚಕ್ರ ದರ್ಪಣವಾದರೆ ವರಾಹ, ಸೂರ್ಯ, ಚಂದ್ರ, ಖಡ್ಗ ವಿಜಯನಗರ ಸಾಮ್ರಾಜ್ಯದ ರಾಜಮುದ್ರೆಯಾಗಿದೆ. […]

ಮುಂದೆ ಓದಿ...