ಸಾಂಸ್ಕøತಿಕ ಗ್ರಾಮವಾಗಿ ಕರಂಡಿಪುರ (ಕರಡಿ)

ಪ್ರಸ್ತಾವನೆ : ಶಾಸನೋಕ್ತ ಕರವಿಡಿ-30 ಎಂದೇ ಹೆಸರಾದ ಇಂದಿನ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕರಡಿಗ್ರಾಮ ಪ್ರಾಚೀನ ಇತಿಹಾಸ ಹೊಂದಿರುವ ಈ ಗ್ರಾಮ ತನ್ನದೇಯಾದ ವಿಶೇಷತೆಯನ್ನು ಪಡೆದುಕೊಂಡ. ನೊಳಂಬ ದೊರೆಗಳ ಶಾಸನಗಳಲ್ಲಿ ಅವರ ಅಧಿಕಾರದ ವ್ಯಾಪ್ತಿಯನ್ನು ಗುರುತಿಸುವಾಗ ನೊಳಂಬವಾಡಿ-32000, ಬಲ್ಲಕುಂದೆ-300, ಕೋಗಳೆ-500, ಕದಂಬಳಿಕೆ-1000, ಕರವಿಡಿ-30 ಮೊದಲಾದ ನಾಡುಗಳ ಉಲ್ಲೇಖಗಳಿವೆ. ಕರಡಿ ಭೌಗೋಳಿಕ ಹಾಗೂ ಐತಿಹಾಸಿಕ ಹಿನ್ನೆಲೆ : ಕರಡಿಗ್ರಾಮ ತಾಲೂಕಾ ಕೇಂದ್ರವಾದ ಹುನಗುಂದದಿಂದ 25 ಕಿ.ಮಿ. ಅಂತರದಲ್ಲಿದೆ. ಭೌಗೋಳಿಕವಾಗಿ ಕಪ್ಪುಮಣ್ಣಿನಿಂದ ಕೂಡಿದ ಪಲವತ್ತಾದ ಭೂಮಿಯನ್ನು ಹೊಂದಿದೆ. ಜೋಳ, […]

ಮುಂದೆ ಓದಿ...

ಹುನಗುಂದ ತಾಲೂಕು : ಜಾನಪದ

ಹುನಗುಂದ ತಾಲೂಕು : ಜಾನಪದ – ಡಾ|| ಪ್ರಕಾಶ ಗ. ಖಾಡೆ ಕೂಡಲ ಸಂಗಯ್ಯ ಹೊಳಿಯಾಗ ಹ್ಯಾಂಗಿದ್ದಿ ಹಳ್ಳೋತ್ತಿ ಸಣ್ಣ ಮಳಲೊತ್ತಿ ಗಂಗೀಯ ನೀರೊತ್ತಿ ಲಿಂಗ ನೆನೆದಾವ. ಕೃಷ್ಣೆ-ಮಲಪ್ರಭೆಯರ ಕೂಡಲ ಸಂಗಮದಲ್ಲಿನ ಹೊಳೆಯಂಚಿನಲ್ಲಿ ನೆಲೆಸಿರುವ ಸಂಗಯ್ಯನ ಬಗೆಗಿರುವ ಜನಪದರ ಮುಗ್ಧ ಭಕ್ತಿಗೆ ಸಾಕ್ಷಿಯಂತಿರುವ ಈ ತ್ರಿಪದಿ ಜನಸಾಮಾನ್ಯರು ಕಟ್ಟಿಕೊಟ್ಟ ಒಂದು ಅಪೂರ್ವವಾದ ಸಾಹಿತ್ಯದ ರಸಗಟ್ಟಿ. ಹೌದು, ಜಾನಪದ ಎನ್ನುವುದು ಹಳ್ಳಿಯ ಅದರಲ್ಲೂ ಅನಕ್ಷರಸ್ಥ ಸಮುದಾಯದ ಒಡಲೊಳಗಿಂದ ಬಯಲುಗೊಂಡ ಅಪೂರ್ವ ನಿಧಿ. ಹಾಗಾಗಿ ಅಲ್ಲಿ ಮುಗ್ಧತೆ, ಕನಿಕರ, ಅನುಕಂಪ, […]

ಮುಂದೆ ಓದಿ...

ತಾಲೂಕಿನ ಸಂಗೀತ ಪರಂಪರೆ

ತಾಲೂಕಿನ ಸಂಗೀತ ಪರಂಪರೆ -ಅಖಂಡೇಶ್ವರ ಎಂ. ಪತ್ತಾರ ಭಾರತೀಯ ಸಂಗೀತ ಪರಂಪರೆಯಲ್ಲಿ ಪ್ರಮುಖವಾಗಿ ಎರಡು ಸಂಪ್ರದಾಯಗಳಾಗಿವೆ. ಕರ್ನಾಟಕ  ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತ. ಇವೆರಡು ಸಂಗೀತ ಪದ್ಧತಿಗಳು  ಅನುಸರಿಸುವ ಕ್ರಮಗಳೂ ಬೇರೆಯಾಗಿದ್ದರೂ ಅವುಗಳ ಮೂಲಭೂತ ತತ್ವಗಳು ಒಂದೇ ಆಗಿವೆ ಎಂಬುದನ್ನು ಮರೆಯುವಂತಿಲ್ಲ. ದೇಶದ ಅನೇಕ ಸಂಗೀತಗಾರರಲ್ಲಿ ಹೆಸರು ಗಳಿಸಿದ ಕಲಾವಿದರು ಕರ್ನಾಟಕದವರಾಗಿದ್ದರೂ ಅದರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ಕಲಾವಿದರೆ ಹೆಚ್ಚಿದ್ದಾರೆ. ಹಿಂದುಸ್ತಾನಿ ಸಂಗೀತ ತೇರು ಎಳೆದದ್ದು ಮೈಸೂರು ಭಾಗವಾಗಿದ್ದರು ಅದು ನಡೆದಾಡಿದ್ದು ಉತ್ತರ ಕರ್ನಾಟಕದಲ್ಲಿ. ಹೀಗಾಗಿ ಸಾಂಸ್ಕøತಿಕ […]

ಮುಂದೆ ಓದಿ...