ಸಜ್ಜಕ ತಿನ್ನೋ ಆಸೆ ರಾಜ್ಯ ಪ್ರಶಸ್ತಿ ಗಳಿಸಿತು

40 ವರ್ಷದ ಹಿಂದೆ ಕರಡಿ ಮಜಲು ಅಂದ್ರ ಗೊತ್ತಿರಲಿಲ್ಲ. ಹಳೆಯ ಮೇಳ ಇದ್ದವು. ಲಗ್ನದಾಗ ಬಾರಿಸುವ ಕರಡಿಮಜಲಿನವರಿಗೆ ಕೊಡುವ ಗೌರವ, ಅವರಿಗೆ ಹಾಕಿಸೋ ಸಜ್ಜಕದ ಊಟ ನೋಡಿ ನಮ್ಮ ಬಾಯಾಗ ನೀರು ಬರ್ತಿದ್ವು. ಅವಾಗ ನಾವು ಸಣ್ಣವರಿದ್ವಿ. ನಮ್ಮನ್ನು ಬೈದು ಹೊರಗ ಕಳಸ್ತಿದ್ದರು. ನಾವೂ ಹಿಂಗ ಕಲಿತ್ರ ನಮ್ಮನ್ನೂ ಹೀಗೆ ಕರೆದು ಊಟಾ ಮಾಡಿಸ್ತಾರ ಅಂತ ಮನಸ್ಸು ಅಂದೇ ಮಾಡಿದೆ. ನಾವೆಲ್ಲ ಅವಾಗ ಮಾಳಿಗೆಯ ಮೇಲೆ ಮಲಗುತ್ತಿದ್ದೆವು. ನನ್ನ ಜೊತೆಗಿದ್ದ  ಹಿರಿಯರೊಂದಿಗೆ ನಾವು ಕರಡಿಮಜಲು ಭಜಂತ್ರಿಯವರಿಂದ ಕಲಿಬೇಕಂತ […]

ಮುಂದೆ ಓದಿ...

ಜನಪದ ಜಲ ಶಿಲ್ಪಿಗಳು / ಜಲದಕಣ್ಣು ತೋರಿದವರು

ಪೀಠಿಕೆ:       ಡಾ. ಹಾ.ಮಾ. ನಾಯಕರ ಪ್ರಕಾರ “ಜನಪದ ಎನ್ನುವುದು ಬಿಡಿಬಿಡಿಯಾದ ಅಂಶಗಳಿಗೂ; ಜಾನಪದ ಎಂಬುದು ಇವೆಲ್ಲವುಗಳ ಇಡಿಯಾದ ವಿಭಾಗಕ್ಕೂ ಅನ್ವಯಿಸುತ್ತದೆ. ಉದಾಹರಣೆಗೆ: ಜನಪದ ಗೀತೆ, ಜನಪದ ಸಾಹಿತ್ಯ, ಜನಪದ ಕಲೆ, ಆಟ, ಹಬ್ಬ, ಆಚರಣೆ, ವೈದ್ಯ, ಸಂಸ್ಕøತಿ ಹೀಗೆ. ಬಿಡಿಬಿಡಿ ಅಂಶಗಳು ಜನಪದ ಪ್ರಕಾರಗಳೆನಿಸಿದರೆ; ಈ ಜನಪದ ಎಲ್ಲವನ್ನು ಒಳಗೊಂಡ ಸಮಗ್ರ ಘಟಕವೇ ಜಾನಪದ ಎನಿಸಿಕೊಳ್ಳುತ್ತದೆ.      ಕ್ರಿ.ಶ. 9ನೇ ಶತಮಾನದ ಶ್ರೀವಿಜಯನು ತನ್ನ ಕೃತಿ ‘ಕವಿರಾಜಮಾರ್ಗ’ ದಲ್ಲಿ ಕನ್ನಡ ನಾಡಿನ ಜನಪದವನ್ನು ಕುರಿತು:-        […]

ಮುಂದೆ ಓದಿ...

ಸಹಕಾರಿ ರಂಗದ ಸಾಧಕಿ ಶ್ರೀಮತಿ ದೊಡ್ಡಮ್ಮ ಹವಾಲದಾರ

ವಿಶ್ವಗುರು ಬಸವಣ್ಣನವರ ಜನ್ಮಭೂಮಿ ಇಂದಿನ ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಶರಣದಂಪತಿ ಯಜಮಾನ ಶ್ರೀವೀರಪ್ಪನವರು ಹಾಗೂ ಶ್ರೀಮತಿ ಗುರುಸಂಗಮ್ಮನವರು ರ್ಯಾಕಿ ಇವರ ಉದರದಲ್ಲಿ 1937ರಲ್ಲಿ ಜನಿಸಿದ ಶರಣ ಚೇತನವೇ ದೊಡ್ಡಮ್ಮನವರು ಹವಾಲದಾರ. ಇವರು ಬಾಲ್ಯದಲ್ಲಿ ಎಲ್ಲರ ಪ್ರೀತಿಯ ಮಗುವಾಗಿ ಬೆಳೆದರು 1950ರಲ್ಲಿ ಆಗಿನ ಮುಲ್ಕಿ ಪರಿಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಪಾಸಾದರು. ವಿದ್ಯಾರ್ಥಿ ದೆಸೆಯಲ್ಲಿಯೇ ದೊಡ್ಡಮ್ಮನವರು ಶಾಲೆಯಲ್ಲಿ ಏರ್ಪಡಿಸುತ್ತಿದ್ದ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಥಮ ದ್ಪೀತಿಯ ಬಹುಮಾನವನ್ನು ಗಳಿಸುತ್ತಿದ್ದರು. ಏಳನೆಯ ವರ್ಗದಲ್ಲಿರುವಾಗ ವಿದ್ಯಾರ್ಥಿಗಳಿಂದ ಬರೆಯಲ್ಪಟ್ಟ “ಮಕ್ಕಳ ಮುತ್ತು” ಎಂಬ ಪುಸ್ತಕದಲ್ಲಿ […]

ಮುಂದೆ ಓದಿ...

ಔದಾರ್ಯದ ನಿಧಿ ಶ್ರೀ ಬಿ. ಆರ್. ಅರಿಷಿಣಗೋಡಿ

ಚೌಷಷ್ಟಿ (ಅರವತ್ತ್ನಾಲ್ಕು) ಕಲೆಗಳಲ್ಲಿ ‘ನಾಟಕ’ವೂ ಒಂದು. ಸಾಹಿತ್ಯದ ಜನಪ್ರಿಯ ಪ್ರÀ್ರಕಾರವಾದ ನಾಟಕ ಇತರ ಸಾಹಿತ್ಯ ರೂಪಗಳಿಗಿಂತ ಹಾಗೂ ಇನ್ನಿತರ ಕಲೆಗಳಿಗಿಂತ ಭಿನ್ನವೂ ಮತ್ತು ವಿಶಿಷ್ಟವೂ ಆಗಿದೆ. ಅಭಿನಯ, ಸಂಭಾಷಣೆ, ನೃತ್ಯ, ಸಂಗೀತ, ಸಾಹಿತ್ಯ, ದೃಶ್ಯ, ಹಾಗೂ ಹಾಸ್ಯ ಮೊದಲಾದವುಗಳನ್ನೊಳಗೊಂಡ ನಾಟಕವು ಒಂದು ಸಂಕೀರ್ಣ ಕಲೆ ಎನಿಸಿದೆ, ಜೀವಂತ ಕಲೆಯಾದ ನಾಟಕವು ಪ್ರೇಕ್ಷಕರನ್ನು, ನೃತ್ಯಪ್ರಿಯರನ್ನು, ಸಂಗೀತಾಸಕ್ತರನ್ನು, ಸಾಹಿತ್ಯಪ್ರೇಮಿಗಳನ್ನು, ಕಲಾರಸಿಕರನ್ನು, ರಂಗಾಭಿಮನಿಗಳನ್ನು ಆಕರ್ಷಿಸುವ ಪ್ರಭಾವಶಾಲಿ ಮಾಧ್ಯಮ. ಬೇರೇ-ಬೇರೇ ಅಭಿರುಚಿಯನ್ನುಳ್ಳ ಕಲಾರಸಿಕರನ್ನು ಏಕಕಾಲದಲ್ಲಿ ಸಮ್ಮೋಹನಗೊಳಿಸಿ, ಅವರ ಮನೋಧರ್ಮಕ್ಕನುಸಾರವಾದ ಆನಂದವನ್ನುಂಟು ಮಾಡುವುದಾಗಿದೆ, ಅದಕ್ಕಾಗಿಯೇ […]

ಮುಂದೆ ಓದಿ...